ಜೀವನ ಮಾಧುರ್ಯಕ್ಕಾಗಿ ‘ಗೀತಾ ಲಾವಣ್ಯ’

ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ಏಕೈಕ ಗ್ರಂಥ ‘ಭಗವದ್ಗೀತೆ’. ಗೀತಸಾರವನ್ನು ಕನ್ನಡದಲ್ಲಿ ಬಿಂಬಿಸುವ ‘ಗೀತಾ ಲಾವಣ್ಯ’ ಪುಸ್ತಕದ ಪ್ರಕಟಣೆಗೆ ಕನ್ನಡ ಓದುಗರ ನೆರವನ್ನು ಕೋರಲಾಗಿದೆ.

ಕಡೂರಿನಲ್ಲಿ ತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸುತಿರುವ ಡಾ. ಲಕ್ಷ್ಮೀನಾರಾಯಣಪ್ಪ ಅವರು ತಮ್ಮ ನಾಲ್ಕನೇ ಕೃತಿಯಾದ ‘ಭಗವದ್ಗೀತೆ’ಯ ಲಾವಣಿ ರೂಪ ‘ಗೀತಾ ಲಾವಣ್ಯ’ ವನ್ನು ಪ್ರಕಟಿಸಲು ಮುಂದಾಗಿದ್ದಾರೆ. ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಿ, ಸುಲಭ ದರಕ್ಕೆ(ರೂ.20) ಪುಸ್ತಕವನ್ನು ಓದುಗರ ಕೈಗಿಡುವ ಬಯಕೆ ಅವರದಾಗಿದೆ. ಆ ಮೂಲಕ ಗೀತೆಯ ಸಾರವನ್ನು ಪಸರಿಸುವ ಉದ್ದೇಶ ಅವರಲ್ಲಿದೆ.

An appeal to help for publishing Geeta Laavanya‘ಗೀತಾಲಾವಣ್ಯ’ ವು ಸರಳವಾದ ತಿಳಿ ಕನ್ನಡದಲ್ಲಿದ್ದು, ಜನಸಾಮಾನ್ಯರು ಓದಿ ತಿಳಿದುಕೊಳ್ಳಬಹುದಾದ ಸಶಕ್ತ ಕೃತಿ.

ಶತಾವದಾನಿ ಆರ್‌.ಗಣೇಶ್‌ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದು, ಬಿ.ಕೆ.ಎಸ್‌.ವರ್ಮ ಮುಖಪುಟ ರಚಿಸಿದ್ದಾರೆ.

ಈ ಕೃತಿಯ ಪ್ರಕಟಣೆಯ ಹಿಂದಿನ ಆಶಯವನ್ನು ಗಮನಿಸಿ, ಒಳನಾಡು ಮತ್ತು ಹೊರನಾಡಿನಲ್ಲಿರುವ ಸಹೃದಯ ಕನ್ನಡಿಗರು ಧನಸಹಾಯ ಮಾಡಬೇಕೆಂದು ಪ್ರಕಾಶಕರು ಕೋರಿದ್ದಾರೆ. 1000 ರೂ. ನೀಡಿದವರ ಹೆಸರನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಈ ಪುಸ್ತಕದಿಂದ ಬಂದ ಲಾಭಾಂಶವನ್ನು ಕಡೂರಿನಲ್ಲಿ ತೆರೆಯಲು ಉದ್ದೇಶಿಸಲಾಗಿರುವ ಅಂಧ ಮಕ್ಕಳ ವಸತಿ ಶಾಲೆ ಮತ್ತು ಕಣ್ಣಿನ ಆಸ್ಪತ್ರೆ ಘಟಕಕ್ಕೆ ಬಳಸಿಕೊಳ್ಳಲಾಗುವುದು. ಪುಸ್ತಕ ಪ್ರೇಮಿಗಳು ಮತ್ತು ದಾನಿಗಳು ಕೆಳಗಿನ ವಿಳಾಸಗಳನ್ನು ಸಂಪರ್ಕಿಸಬಹುದು. ಚೆಕ್‌ ಅಥವಾ ಡಿ. ಡಿ. ಮೂಲಕ ಧನಸಹಾಯ ಮಾಡಲು ಕೋರಲಾಗಿದೆ.

ಶ್ರೀ ರಘುಮಾನ್ಯ ತೀರ್ಥ ಸ್ವಾಮೀಜಿ
ಸಹಸ್ರಾಂಶು ಟ್ರಸ್ಟ್‌:(ರಿ) ಲಕ್ಷ್ಮೀ ಬಿಲ್ಡಿಂಗ್‌,
ಜೈನ್‌ ಟೆಂಪಲ್‌ ರೋಡ್‌, ಕಡೂರು : 577548.

ಸಹಸ್ರಾಂಶು ಟ್ರಸ್ಟ್‌ನ ಪ್ರಧಾನ ಟ್ರಸ್ಟ್‌
ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರ್‌, ಕಡೂರ್‌ ಶಾಖೆ,
ಸೇವಿಂಗ್ಸ್‌ ಬ್ಯಾಂಕ್‌ ಅಕೌಂಟ್‌ ನಂಬರ್‌: 0119001486900
(ಈ ವಿಳಾಸಕ್ಕೆ ನೇರವಾಗಿ ಹಣ ಕಳಿಸಬಹುದು)

ಡಾ: ಲಕ್ಷ್ಮೀನಾರಾಯಣಪ್ಪ:
ತಹಸೀಲ್ದಾರ್‌, ತಾಲ್ಲೂಕು ಕಚೇರಿ,
ಕಡೂರು-577548,
ಚಿಕ್ಕಮಗಳೂರು ಜಿಲ್ಲೆ.

ನಿಮ್ಮ ಗಮನಕ್ಕೆ :

ತೀರ್ಥಹಳ್ಳಿ ತಾಲ್ಲೂಕು ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದ ಶ್ರೀ ರಘುಮಾನ್ಯ ತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಸಹಸ್ರಾಂಶು ಟ್ರಸ್ಟ್‌ , ಸಮಾಜಸೇವೆ ಮತ್ತು ಕನ್ನಡ ಸಾಹಿತ್ಯ ಸೇವೆಗೆ ಮುನ್ನಡಿ ಇಡುತ್ತಿದೆ.

‘ಶೀಲನ’ ಎಂಬ ಕಾವ್ಯನಾಮದಿಂದ ಗುರ್ತಿಸಿಕೊಂಡಿರುವ ಡಾ. ಲಕ್ಷ್ಮೀನಾರಾಯಣಪ್ಪ ಕನ್ನಡದಲ್ಲಿ ಈವರೆಗೆ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳ ವಿವರ ;

  • ಗೀತಾವತರಣ - ಭಗವದ್ಗೀತೆಯ ಕನ್ನಡ ಅವತರಣ, ಪದ್ಯ ರೂಪದಲ್ಲಿ-700 ಶ್ಲೋಕಗಳ ಚೌಪದಿ ರೂಪ.
  • ಪುರುಷ ಸೂಕ್ತ - 32 ಪದ್ಯಗಳ ಚೌಪದಿ ರೂಪ.
  • ಶ್ರೀ ದುರ್ಗಾ ಸಪ್ತಶತಿ - 700 ಶ್ಲೊಕಗಳ ಕನ್ನಡ ಲಾವಣಿ ರೂಪ
  • ಗೀತಾಲಾವಣ್ಯ - 700 ಶ್ಲೊಕಗಳ ಕನ್ನಡ ಲಾವಣಿ ರೂಪ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+