ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುಪಮಾ, ಬಾನು ಮುಷ್ತಾಕ್‌ಗೆ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಡಾ.ನಿರುಪಮಾ, ಬಾನು ಮುಷ್ತಾಕ್‌ ಸೇರಿದಂತೆ ಐದು ಮಂದಿಯನ್ನು ಪ್ರಸಕ್ತ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ ಸುದ್ದಿಗೊಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಡಾ.ನಿರುಪಮಾ, ಡಾ.ಬುದ್ದಣ್ಣ ಹಿಂಗಮಿರೆ, ಪ್ರೊ.ಬಾಲಚಂದ್ರ ಶೆಟ್ಟಿ, ಕೆ.ಬಿ.ಸಿದ್ಧಯ್ಯ ಹಾಗೂ ಬಾನು ಮುಷ್ತಾಕ್‌ ಅವರು ಪ್ರಶಸ್ತಿ ಗೆ ಆಯ್ಕೆಗೊಂಡಿದ್ದಾರೆ ಎಂದರು.

ಈ ವರ್ಷ ಪ್ರಶಸ್ತಿಗಾಗಿ 60 ಮಂದಿಯ ಹೆಸರು ಪಟ್ಟಿಯಲ್ಲಿದ್ದವು. ಅಂತಿಮವಾಗಿ ಐವರನ್ನು ಗೌರವಿಸಲು ನಿರ್ಧರಿಸಲಾಯಿತು. ಹತ್ತು ಸಾವಿರ ರೂ. ನಗದನ್ನು ಪ್ರಶಸ್ತಿ ಒಳಗೊಂಡಿದ್ದು, ಅಕ್ಟೋಬರ್‌ ತಿಂಗಳಲ್ಲಿ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರಶಸ್ತಿ ವಿಜೇತರ ಕಿರು ಪರಿಚಯ :

  • ಡಾ. ನಿರುಪಮಾ : 82 ಕ್ಕೂ ಹೆಚ್ಚು ಕೃತಿಗಳ ಮೂಲಕ ಪರಿಚಿತರಾಗಿರುವ ನಿರುಪಮಾ, 20 ಭಾಷೆಗಳನ್ನು ಬಲ್ಲರು. ಇವರ ಸಾಹಿತ್ಯಕೃಷಿಗೆ ಅನೇಕ ಪ್ರಶಸ್ತಿಗಳು ಸಂದಿವೆ.
  • ಡಾ। ಬುದ್ದಣ್ಣ ಹಿಂಗಮಿರೆ : ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಪ್ರವಾಚಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, 20ಕ್ಕೂ ಅಧಿಕ ಕೃತಿಗಳನ್ನು ಬರೆದಿದ್ದಾರೆ
  • ಪ್ರೊ। ಬಾಲಚಂದ್ರ ಜಯಶೆಟ್ಟಿ : ಹೈದರಾಬಾದ್‌ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯವನ್ನು ಸಮರ್ಥವಾಗಿ ಕಟ್ಟಿದ ಹೆಗ್ಗಳಿಕೆ ಇವರದು.
  • ಕೆ. ಬಿ. ಸಿದ್ದಯ್ಯ : ವೃತ್ತಿಯಲ್ಲಿ ಆಂಗ್ಲ ಪ್ರಾಧ್ಯಾಪಕರಾದರೂ ಸಿದ್ದಯ್ಯ, ದಲಿತ ಸಾಹಿತ್ಯ ಮತ್ತು ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ.
  • ಬಾನು ಮುಷ್ತಾಕ್‌ : ಹಸೀನಾ ಚಿತ್ರದ ಕಥಾ ಲೇಖಕಿಯಾಗಿರುವ ಇವರ ಮಹಿಳಾಪರ ವಿಚಾರ ಮತ್ತು ಸಾಹಿತ್ಯ ಕೃಷಿ ಗಮನಾರ್ಹ.
2003ನೇ ಸಾಲಿನಲ್ಲಿ ಅಕಾಡೆಮಿಯಿಂದ ತಮ್ಮ ಪುಸ್ತಕಗಳಿಗೆ ಪ್ರಶಸ್ತಿ ಪಡೆದಿರುವ ಸಾಹಿತ್ಯ ಕೃಷಿಕರು :
  1. ರಾಘವೇಂದ್ರ ಪಾಟೀಲ -‘ತೇರು’ (ಕಾದಂಬರಿ)
  2. ಶ್ರೀಧರ ಬಳಗಾರ - ‘ಇಳೆ ಎಂಬ ಕನಸು’ (ಸಣ್ಣಕತೆ)
  3. ಡಾ। ನಾ. ಮೊಗಸಾಲೆ - ‘ಇದಲ್ಲ ಇದಲ್ಲ’ (ಕಾವ್ಯ)
  4. ಆನಂದ್‌ ಋಗ್ವೇದಿ - ‘ಉರ್ವಿ’ (ನಾಟಕ)
  5. ಈರಪ್ಪ ಎಂ. ಕಂಬಳಿ - ‘ಹೀಗೊಂದು ಟಾಪ್‌ ಪ್ರಯಾಣ’ (ಲಲಿತ ಪ್ರಬಂಧ)
  6. ಮೀನಾ ಮೈಸೂರು - ‘ಎತ್ತಣಿಂದೆತ್ತ’ (ಪ್ರವಾಸ ಸಾಹಿತ್ಯ)
  7. ಟಿ.ಎಸ್‌. ಸತ್ಯನ್‌ - ‘ಕಾಲಕ್ಕೆ ಕನ್ನಡಿ’ (ಜೀವನ ಚರಿತ್ರೆ)
  8. ಡಾ। ರಾಜೇಂದ್ರ ಚೆನ್ನಿ - ‘ಅಮೂರ್ತತೆ ಮತ್ತು ಪರಿಸರ’ (ಸಾಹಿತ್ಯ ವಿಮರ್ಶೆ)
  9. ಡಾ। ಬಿ.ವಿ. ಶಿರೂರ - ‘ಭಕ್ತಿ ರಸಸೋನೆ’ (ಗ್ರಂಥ ಸಂಪಾದನೆ)
  10. ಗಣೇಶ ಪಿ. ನಾಡೋರ - ‘ಬೆಳ್ಳಕ್ಕಿ ಮತ್ತು ಬುಲ್‌ಬುಲ್‌’ (ಮಕ್ಕಳ ಸಾಹಿತ್ಯ)
  11. ಟಿ.ಆರ್‌. ಅನಂತರಾಮು - ‘ಕರ್ತಾರನಿಗೊಂದು ಕಿವಿಮಾತು’ (ವಿಜ್ಞಾನ ಸಾಹಿತ್ಯ)
  12. ಡಾ। ಕೆ.ಎಲ್‌. ಗೋಪಾಲಕೃಷ್ಣಯ್ಯ - ‘ಭಾಷೆಯ ಬೆಳಕು’ (ಮಾನವಿಕ)
  13. ಎಫ್‌.ಟಿ. ಹಳ್ಳೀಕೇರಿ - ‘ಕಂಠಪತ್ರ’ (ಸಂಶೋಧನೆ)
  14. ಬಿ. ಸುಜ್ಞಾನಮೂರ್ತಿ - ‘ಯಾರದೀ ಕಾಡು’ (ಅನುವಾದ-1)
  15. ಶಾರದಾ ಗೋಪಾಲ - ‘ಪರಿಸರ ನ್ಯಾಯದ ತಕ್ಕಡಿಯಲ್ಲಿ’ (ಅನು ವಾದ-2)
  16. ಮೃತ್ಯುಂಜಯ ರುಮಾಲೆ - ‘ವಚನ ನಿಘಂಟು’ (ಸಂಕೀರ್ಣ)
  17. ಸುಬ್ಬು ಹೊಲೆಯಾರ್‌ - ‘ಸೂಜಿಗಾತ್ರದ ಕೊಳವೆ ಯಿಂದ ಮನುಷ್ಯನೊಬ್ಬನ ಹಾಡು’ (ಲೇಖಕರ ಮೊದಲ ಕೃತಿ)
  18. ಡಾ। ಪ್ರಧಾನ ಗುರುದತ್ತ - ‘ಕ್ರಾಸಿಂಗ್‌ ವೋವರ್‌’ (ಕನ್ನಡದಿಂದ ಇಂಗ್ಲಿಷ್‌ ಭಾಷೆಗೆ ಅನುವಾದಿತ ಕೃತಿ)
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X