ವಿವೇಕ ಶಾನಭಾಗ ಅವರಿಂದ ಮತ್ತೊಂದು ಕಥಾಗುಚ್ಛ
ಬೆಂಗಳೂರು : ಕನ್ನಡದ ಖ್ಯಾತ ಕಥೆಗಾರಲ್ಲೊಬ್ಬರಾದ ವಿವೇಕ ಶಾನಭಾಗ ಅವರ ಹೊಸ ಕಥಾಸಂಕಲನ ‘ಮತ್ತೊಬ್ಬನ ಸಂಸಾರ’ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ.
ಈ ಕಥಾಸಂಕಲನವನ್ನು ಮತ್ತೋರ್ವ ಖ್ಯಾತ ಕಥೆಗಾರ ಜಯಂತ ಕಾಯ್ಕಿಣಿ ಅವರು ಬಿಡುಗಡೆ ಮಾಡುತ್ತಿದ್ದು, ಮುಖ್ಯ ಅತಿಥಿಯಾಗಿ ಇನ್ನೊಬ್ಬ ಕಥೆಗಾರ ಅಬ್ದುಲ್ ರಶೀದ್ ಅವರು ಭಾಗವಹಿಸಲಿದ್ದಾರೆ.
ಡಿಸೆಂಬರ್11ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಗಾಂಧಿ ಬಜಾರ್‌ನ ಅಂಕಿತ ಪುಸ್ತಕ ಮಳಿಗೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಾನಭಾಗರ ಕಥಾಜಗತ್ತಿನಲ್ಲಿ ಮೀಯಲು, ಕಾಯ್ಕಿಣಿಯಾಂದಿಗೆ ಆತ್ಮೀಯ ಮಾತುಗಳನ್ನು ಹಂಚಿಕೊಳ್ಳಲು ಕೊಂಡು ಓದುವ ಪುಸ್ತಕ ಪ್ರೇಮಿಗಳಿಗೆ ಸ್ವಾಗತ.
(ಇನ್ಫೋ ವಾರ್ತೆ)












Click it and Unblock the Notifications