ಮೇ14ಕ್ಕೆ ಮೋಹನ್‌ರ ‘ಅಮೆರಿಕಾಯಣ’ ಬಿಡುಗಡೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ‘ನೆನಪುಗಳು’ ಖ್ಯಾತಿಯ ವೈ.ಆರ್.ಮೋಹನ್ (ಅಲಬಾಮಾ) ಮೂಸೆಯಿಂದ ಹೊಮ್ಮಿರುವ ಇನ್ನೊಂದು ಕೃತಿ ‘ಅಮೆರಿಕಾಯಣ’ವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಯು.ಆರ್.ಅನಂತಮೂರ್ತಿ ಮೇ 14ನೇ ತಾರೀಕು ಬೆಂಗಳೂರಿನ ಕನ್ನಡ ಭವನದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಸಂಚಲನೆ ಹುಟ್ಟಿಸಿರುವ ಬೆಂಗಳೂರಿನ ಉಪಾಸನಾ ಮತ್ತು ಲಾಸ್ ಏಂಜಲೀಸ್‌ನ ಅಂಜಲಿ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿವೆ. ಕುವೆಂಪು ಶಿಷ್ಯ ಡಾ. ಪ್ರಭುಶಂಕರ್ ಪುಸ್ತಕದ ತಿರುಳನ್ನು ಕುರಿತು ಮಾತಾಡಲಿದ್ದಾರೆ.
ಪುಸ್ತಕ ಪ್ರಿಯರು ಸೇರುವ ಈ ಸಂದರ್ಭದಲ್ಲಿ ‘ಹೊರದೇಶಗಳಲ್ಲಿ ಕನ್ನಡದ ಸ್ಥಿತಿಗತಿ’ ಎಂಬ ವಿಷಯ ಕುರಿತು ವಿಚಾರ ಸಂಕಿರಣವನ್ನೂ ಆಯೋಜಿಸಲಾಗಿದೆ. ಎದೆ ತುಂಬಿ ಕವನಗಳ ಬರೆದಿರುವ ಜಿ.ಎಸ್.ಶಿವರುದ್ರಪ್ಪ ಸಂಕಿರಣದ ಅಧ್ಯಕ್ಷ ಗಾದಿಯಲ್ಲಿ ಕೂರಲಿದ್ದಾರೆ. ಡಾ.ಯು.ಆರ್.ಅನಂತಮೂರ್ತಿ, ಸಾಹಿತಿ ಹಾಗೂ ವಿಮರ್ಶಕ ಡಾ.ಬಿ.ಸಿ.ರಾಮಚಂದ್ರ ಶರ್ಮ, ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಇಳಿ ವಯಸ್ಸಲ್ಲೂ ಬರೆಯುವ ಚಟ ಉಳಿಸಿಕೊಂಡಿರುವ ಲಾಸ್ ಏಂಜಲೀಸ್‌ನಲ್ಲಿರುವ ಲೇಖಕರ ಡಾ. ನಾಗ ಐತಾಳ್, ಸಾಹಿತಿ ಎಸ್.ಕೆ.ಹರಿಹರೇಶ್ವರ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.
ಪುಸ್ತಕ ಪ್ರೇಮಿಗಳು ಮೇ 14, ಬುಧವಾರ ಬೆಳಗ್ಗೆ 9.45 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣಕ್ಕೆ ಬಂದು ಸೇರಬೇಕು ಎಂಬುದು ಉಪಾಸನಾ ಅಧ್ಯಕ್ಷ ಜೆ.ಮೋಹನ್ ಅವರ ಮುಕ್ತ ಆಮಂತ್ರಣ.
(ಇನ್ಫೋ ವಾರ್ತೆ)
ಇದನ್ನೂ ಓದಿ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications