ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪೇಟೆಯಲ್ಲಿ ಹರಿಹರೇಶ್ವರ ಅವರ ‘ಮಾತಿನ ಮಂಟಪ’

By Staff
|
Google Oneindia Kannada News

Maatina Mantapa collection of Essays by Shikaripura Harihareshwaraಪಿ.ಲಂಕೇಶರ ‘ಟೀಕೆ ಟಿಪ್ಪಣಿ’, ರವಿ ಬೆಳಗೆರೆಯ ‘ಖಾಸ್‌ಬಾತ್‌’, ವೈಯೆನ್ಕೆ ಅವರ ‘ವಂಡರ್‌ ಕಣ್ಣು’, ಸಂತೋಷ್‌ ಕುಮಾರ್‌ ಗುಲ್ವಾಡಿಯವರ ‘ಅಂತರಂಗ-ಬಹಿರಂಗ’, ಲಿಂಗದೇವರು ಹಳೇಮನೆ ಅವರ ‘ಸಂದರ್ಭ’- ಈ ಕೃತಿಗಳ ನಡುವಣ ಸಾಮ್ಯತೆಯನ್ನು ಬಲ್ಲಿರಾ?

ಮೇಲಿನ ಕೃತಿಗಳು ಪತ್ರಿಕೆ- ನಿಯತಕಾಲಿಕೆಗಳಲ್ಲಿ ಪ್ರಕಟಿತವಾದ ಆಯಾ ಲೇಖಕರ ಅಂಕಣ ಬರಹಗಳ ಸಂಕಲನಗಳು. ಕನ್ನಡದಲ್ಲಿ ಅಂಕಣ ಸಾಹಿತ್ಯ ಹುಲುಸಾಗಿದೆ ಎನ್ನುವುದಕ್ಕೂ ಈ ಪಟ್ಟಿ ಉದಾಹರಣೆ. ಹುಲುಸು ಸಂಖ್ಯೆಯಲ್ಲಿ ಮಾತ್ರವಲ್ಲ , ಗುಣಮಟ್ಟದಲ್ಲೂ ! ಭಾರತೀಯ ಭಾಷೆಗಳಲ್ಲಿ ಅಂಕಣ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಹೆಮ್ಮೆ ಕನ್ನಡದ್ದು . ಈ ಅಗ್ಗಳಿಕೆಗೆ ಕಾರಣರಾದ ಹಾ.ಮಾ.ನಾಯಕರು ಸಾಹಿತಿಯಾಗಿ ಸಹೃದಯರ ಮನ ಮುಟ್ಟಿದ್ದಕ್ಕಿಂಥ ಅಂಕಣ ಬರಹಗಾರರಾಗಿಯೇ ಹೆಚ್ಚು ಪ್ರಸಿದ್ಧರು. ಅವರ ಅಂಕಣ ‘ಸಾಂಪ್ರತ’ ಓದದವರ್ಯಾರು?

ಅಂಕಣ ಬರಹಗಳ ಕನ್ನಡ ಕೃತಿಗಳ ಸಾಲಿಗೆ ಈಗ ಹೊಸತೊಂದು ಮೌಲಿಕ ಕೃತಿ ಸೇರ್ಪಡೆಯಾಗಿದೆ. ಶಿಕಾರಿಪುರ ಹರಿಹರೇಶ್ವರ ಅವರ ‘ಮಾತಿನ ಮಂಟಪ’ ಈಗ ಪುಸ್ತಕ ಪೇಟೆಯಲ್ಲಿ ಲಭ್ಯ.

ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ‘ಸಪ್ನ’ ಪ್ರಕಟಿಸಿರುವ ‘ಮಾತಿನ ಮಂಟಪ’ ಕೃತಿಗೆ ಇತರ ಅಂಕಣ ಬರಹಗಳ ಕೃತಿಗಳಿಗೆ ಇಲ್ಲದಿರುವ ವಿಶೇಷತೆ, ಹೆಚ್ಚುಗಾರಿಕೆಯಾಂದಿದೆ. ಇತರ ಕೃತಿಗಳ ಅಂಕಣ ಬರಹಗಳು ಪತ್ರಿಕೆಗಳಲ್ಲಿ ಬೆಳಕುಕಂಡಿದ್ದರೆ, ‘ಮಾತಿನ ಮಂಟಪ’ ಕೃತಿಯ ಬರಹಗಳು ಪ್ರಕಟವಾಗಿರುವುದು ವೆಬ್‌ಸೈಟ್‌ನಲ್ಲಿ . ದಟ್ಸ್‌ಕನ್ನಡ.ಕಾಂನ ಹೆಮ್ಮೆಯ ಅಂಕಣ, ಎಸ್‌.ಕೆ.ಹರಿಹರೇಶ್ವರ ಅವರ ‘ಹೊಂಬೆಳಕ ಹೊನಲು’ವಿನಲ್ಲಿ ಪ್ರಕಟವಾದ ವಿದ್ವತ್‌ಪೂರ್ಣ ಪ್ರಬಂಧಗಳೀಗ ‘ಮಾತಿನ ಮಂಟಪ’ ಕೃತಿ ರೂಪದಲ್ಲಿ ಮೈ ತಳೆದಿವೆ. ಈ ಮೂಲಕ ದಟ್ಸ್‌ಕನ್ನಡ ಹಾಗೂ ಹರಿ ಅವರ ಮಾತಿನ ಮಂಟಪ ಕೃತಿ ಎರಡೂ ಪ್ರಥಮವೊಂದರ ಮನ್ನಣೆಗೆ ಪಾತ್ರವಾಗಿವೆ.

‘ಮಾತಿನ ಮಂಟಪ’ ವಿದ್ವತ್‌ಪೂರ್ಣ ಪ್ರಬಂಧಗಳ ಸಂಕಲನ. ಚಂದ್ರನಾಥ ಆಚಾರ್ಯ ಅವರ ಆಕರ್ಷಕ ಮುಖಪುಟ ಹೊಂದಿರುವ ಈ ಕೃತಿ ಕಸುಬ ಶ್ರೀನಿವಾಸನ್‌ ಅವರಿಗೆ ಅರ್ಪಣೆಯಾಗಿದೆ. ಸಾ.ಶಿ.ಮರುಳಯ್ಯನವರ ಮುನ್ನುಡಿ ಹಾಗೂ ಡಾ.ಎನ್‌.ಎಸ್‌.ಲಕ್ಷ್ಮಿನಾರಾಯಣಭಟ್ಟ ಅವರ ಬೆನ್ನುಡಿ ಪುಸ್ತಕದ ಸೊಬಗನ್ನು ಹೆಚ್ಚಿಸಿವೆ.

ಪುಸ್ತಕ : ಮಾತಿನ ಮಂಟಪ
ಲೇಖಕ : ಎಸ್‌.ಕೆ.ಹರಿಹರೇಶ್ವರ
ಪುಟ : 172 + 12
ಬೆಲೆ : 75 ರುಪಾಯಿ
ಪ್ರಕಟಣೆ : ಜೂನ್‌ 2002
ಪ್ರಕಾಶನ : ಸಪ್ನಾ ಪ್ರಕಾಶನ, ತುಂಗಾ ಕಾಂಪ್ಲೆಕ್ಸ್‌ ,
ಗಾಂಧಿ ನಗರ, ಬೆಂಗಳೂರು- 560 009
(ನಿರೀಕ್ಷಿಸಿ : ‘ಮಾತಿನ ಮಂಟಪ’ ಕೃತಿಯ ಬಗೆಗೆ ಒಳನೋಟಗಳನ್ನು ಬೀರುವ ವಿಮರ್ಶೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X