ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರು ನಿತ್ಯ ಕರ್ಮ, ಸಂಧ್ಯಾವಂದನೆ ಮಾಡುವುದು ಪಾಪ ಕೃತ್ಯವೆ?

By ಸೂರ್ಯನಾರಾಯಣನ್, ವಲಿಯಾಸಲೈ ಬಡಾವಣೆ
|
Google Oneindia Kannada News

ಈ ಲೇಖನ ಸಿಕ್ಕಿದ್ದು ಇಂಟರ್ ನೆಟ್ ನಲ್ಲಿ. ಇಂಗ್ಲಿಷಿನಲ್ಲಿದ್ದ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಈ ಲೇಖನದಲ್ಲಿನ ಅಭಿಪ್ರಾಯ, ವಿವರಗಳು ಲೇಖಕರ ಸ್ವಂತದ್ದು.

-ಸಂಪಾದಕ
*****

ನಮ್ಮಲ್ಲಿ ಹಲವರಿಗೆ ಗೊತ್ತಿದೆ, ಸಂಧ್ಯಾವಂದನೆ ತುಂಬ ಪರಿಣಾಮಕಾರಿಯಾದದ್ದು. ಸಂಧ್ಯಾವಂದನೆ ಮಾಡುವುದರಿಂದ ಹಲವು ಅನುಕೂಲಗಳಿವೆ. ಆದರೆ ಈ ಇಪ್ಪತ್ತೊಂದನೇ ಶತಮಾನದಲ್ಲಿ ನಮ್ಮ ನಿತ್ಯಕರ್ಮಗಳಿಂದ ಸಹ ಬದುಕು ಹಾಳಾಗುವ ಸಾಧ್ಯತೆಗಳಿವೆ. ಅದು ಹೇಗೆ ಅಂತೀರಾ? ಮುಂದೆ ಓದಿ...

ಮೈಸೂರಿನ ಅನಾಥ ಯುವತಿಯ ಕೈ ಹಿಡಿದ ಶೃಂಗೇರಿಯ ಬ್ರಾಹ್ಮಣ ಯುವಕಮೈಸೂರಿನ ಅನಾಥ ಯುವತಿಯ ಕೈ ಹಿಡಿದ ಶೃಂಗೇರಿಯ ಬ್ರಾಹ್ಮಣ ಯುವಕ

ಇದು ನಿಜ ಜೀವನದ ಘಟನೆ. ನಡೆದಿರುವುದು ಚೆನ್ನೈನಲ್ಲಿ. ಒಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬ ಮೂರು ವರ್ಷಗಳ ಕಾಲ ತಮ್ಮ ಮಗನಿಗಾಗಿ ವಧು ಆನ್ವೇಷಣೆ ನಡೆಸಿ, ಅಂತೂ ಒಂದು ಪ್ರಸ್ತಾವವನ್ನು ಒಪ್ಪಿಕೊಂಡರು. ಎರಡೂ ಕುಟುಂಬ ಹಲವು ವಿಷಯಗಳನ್ನು ನಿಷ್ಕರ್ಷೆ ಮಾಡಿದ ನಂತರಾ ಮದುವೆ ನಿಗದಿಯಾಯಿತು.

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...

ಅದ್ಧೂರಿಯಾದ ನಿಶ್ಚಿತಾರ್ಥ ಆಗಿ, ಮದುವೆಗೆ ಕಲ್ಯಾಣ ಮಂಟಪ ಕೂಡ ಗೊತ್ತು ಮಾಡಲಾಯಿತು. ಲಗ್ನ ಪತ್ರಿಕೆ ಸಿದ್ಧವಾಯಿತು. ವರನ ಪೋಷಕರು ತಮ್ಮ ಆಚಾರ್ಯರನ್ನು ಆಹ್ವಾನ ಮಾಡಿದರು ಮತ್ತು ಆಶೀರ್ವಾದ ಪಡೆದರು. ದಿನ ಕಳೆದಂತೆ ಎರಡೂ ಕುಟುಂಬದಲ್ಲಿನ ಸಂಭ್ರಮ ಹೆಚ್ಚುತ್ತಲೇ ಹೋಯಿತು.

ಸಂಜೆ ಕರೆ ಮಾಡಿದ ವಧು

ಸಂಜೆ ಕರೆ ಮಾಡಿದ ವಧು

ಒಂದು ಸಂಜೆ ಆರೂಮೂವತ್ತರ ಸಮಯಕ್ಕೆ ವಧು ಯಾವುದೋ ವಿಚಾರ ಮಾತನಾಡುವ ಸಲುವಾಗಿ ಹುಡುಗನಿಗೆ ಕರೆ ಮಾಡಿದ್ದಾಳೆ. ಆದರೆ ಆತ ಕರೆ ಸ್ವೀಕರಿಸಿಲ್ಲ. ಆತನ ಬದಲಿಗೆ ಪೋಷಕರು ಫೋನೆತ್ತಿಕೊಂಡು, ಆತ ಸಂಧ್ಯಾವಂದನೆ ಮಾಡುತ್ತಿದ್ದಾನೆ. ಹದಿನೈದು ನಿಮಿಷದ ನಂತರ ಕರೆ ಮಾಡಿದರೆ ಮಾತನಾಡಬಹುದು ಎಂದಿದ್ದಾರೆ.

ಹುಡುಗಿಯ ತಾಯಿ ಕರೆ ಮಾಡಿದರು

ಹುಡುಗಿಯ ತಾಯಿ ಕರೆ ಮಾಡಿದರು

ಆದರೆ, ಆ ದಿನ ಆ ಹೆಣ್ಣುಮಗಳು ಫೋನೇ ಮಾಡಿಲ್ಲ. ಆ ನಂತರ ಫೋನ್ ಮಾಡಿದವರು ಹುಡುಗಿಯ ತಾಯಿ. "ನೀವು ತುಂಬಾ ಸಂಪ್ರದಾಯಸ್ಥರು. ನಿಮ್ಮ ಕುಟುಂಬದ ಜತೆಗೆ ಮುಂದುವರಿಯುವುದು ನಮ್ಮ ಹುಡುಗಿಗೆ ಕಷ್ಟವಾಗುತ್ತದೆ. ಆದ್ದರಿಂದ ಈ ಮದುವೆ ಪ್ರಸ್ತಾವವನ್ನು ಈ ಹಂತದಲ್ಲೇ ರದ್ದು ಮಾಡುತ್ತಿದ್ದೇವೆ" ಅಂತ ಹುಡುಗನ ಪೋಷಕರಿಗೆ ತಿಳಿಸಿದ್ದಾರೆ.

ಸಮುದಾಯದಲ್ಲಿರುವ ಧೋರಣೆ

ಸಮುದಾಯದಲ್ಲಿರುವ ಧೋರಣೆ

ಎಂಥ ಕ್ಷುಲ್ಲಕ ಕಾರಣ! ಸಂಧ್ಯಾವಂದನೆ ಅಥವಾ ನಿತ್ಯ ಕರ್ಮ ಯಾವುದರಲ್ಲೇ ಆಗಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇರಲ್ಲ. ಇದು ಸಂಪ್ರದಾಯವೋ ಅಥವಾ ಸಂಸ್ಕೃತಿ ಮೇಲಿನ ಆಕ್ಷೇಪ ಅಲ್ಲ. ಇದು ನಮ್ಮ ಸಮುದಾಯದಲ್ಲಿರುವ ಧೋರಣೆ. ಇದು ಬದಲಾಗಬೇಕು. ಈ ಮದುವೆ ಒಪ್ಪಿದ್ದಿದ್ದರೆ ಆ ಹುಡುಗಿಯ ಭವಿಷ್ಯ ಚೆನ್ನಾಗಿ ಇರುವ ಸಾಧ್ಯತೆಯೂ ಇತ್ತು.

ನಿರ್ಧಾರ ಬದಲಿಸಲು ಪೋಷಕರು ಯತ್ನಿಸಬಹುದಿತ್ತು

ನಿರ್ಧಾರ ಬದಲಿಸಲು ಪೋಷಕರು ಯತ್ನಿಸಬಹುದಿತ್ತು

ಕನಿಷ್ಠ ಪಕ್ಷ ಆಕೆಯ ಪೋಷಕರು ಅಥವಾ ಹಿತೈಶಿಗಳು ಆಕೆಯ ನಿರ್ಧಾರ ಬದಲಿಸುವುದಕ್ಕೆ ಪ್ರಯತ್ನಿಸಬಹುದಿತ್ತು. ನಮ್ಮ ಸಮುದಾಯದಲ್ಲಿ ಕ್ಷುಲ್ಲಕ ಕಾರಣಗಳಿಗೆ ಮದುವೆ ಮುರಿದುಕೊಳ್ಳುವುದು ಸಾಮಾನ್ಯವಾಗಿದೆ. ಮದುವೆ ಬಗ್ಗೆ ನಮಗಿರುವ ಧೋರಣೆ ಬದಲಿಸಿಕೊಳ್ಳುವುದಕ್ಕೆ ಸಮಯ ಬಂದಿದೆ. ಮದುವೆಗೆ ಮುಂಚೆ ಸಲಹೆಗಳನ್ನು ಪಡೆಯುವುದು ಅಗತ್ಯವಾಗಿದೆ.

English summary
How the marriage of Brahmin family broken in Chennai, what is the reason for it? Here is an article of Brahmin community attitude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X