ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ಅಭಿನಂದನೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 11 : ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ವರ್ಷದ ಪುಸ್ತಕ ಬಹುಮಾನ ವಿಜೇತರು ಹಾಗೂ 2016ನೇ ವರ್ಷದ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದೆ.

ಮಂಗಳವಾರ ಸಾಹಿತ್ಯ ಭವನದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣ್ಣ ಶೆಟ್ಟಿ ಅವರು, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಆರು ತಿಂಗಳುಗಳ ಸಮಯವನ್ನು ತೆಗೆದುಕೊಳ್ಳಲಾಗಿದ್ದು, ಪ್ರತಿ ಪ್ರಕಾರಕ್ಕೆ ಮೂವರು ವಿಮರ್ಶಕರಿಂದ ವಿಮರ್ಶೆ ಪಡೆದುಕೊಳ್ಳುವ ಮೂಲಕ ಪ್ರಶಸ್ತಿ ವಿಜೇತರನ್ನು ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು. [ಕರ್ನಾಟಕ ಸಾಹಿತ್ಯ ಅಕಾಡೆಮಿ ಧ್ಯೇಯ ಮತ್ತು ಉದ್ದೇಶ]

Karnataka Sahitya Acacemy awards announced

ಇದೇ ಮೊದಲ ಬಾರಿಗೆ ಚಿ. ಶ್ರೀನಿವಾಸರಾಜು ದತ್ತಿ ನಿಧಿಯಡಿ ಹಸ್ತಪ್ರತಿಗೆ ದತ್ತಿನಿಧಿ ಬಹುಮಾನವನ್ನು ನೀಡಲಾಗುತ್ತಿದ್ದು, ಸಿದ್ದು ಎಂ. ಸತ್ಯಣ್ಣ ಅವರ ಕಾವ್ಯಾ ಹಸ್ತಪ್ರತಿಗೆ ಈ ಬಹುಮಾನ ದೊರಕಿದೆ. ಈಬಾರಿ ಬಹಳಷ್ಟು ಪುಸ್ತಕ ಬಹುಮಾನಗಳು ಹೊಸ ಲೇಖಕರಿಗೆ ಬಂದಿದ್ದು, ಅದರಲ್ಲೂ ಮಹಿಳಾ ಲೇಖಕಿಯರ ಪುಸ್ತಕಗಳು ಆಯ್ಕೆಯಾಗಿರುವುದು ತಮಗೆ ತುಂಬಾ ಸಂತಸವಾಗಿದೆ ಎಂದು ಅಭಿಮಾನದಿಂದ ಹೇಳಿದರು.

Karnataka Sahitya Acacemy awards announced

ಸಮಾರಂಭವನ್ನು ಫೆಬ್ರವರಿ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದ್ದು, ಅತಿಥಿಗಳಾಗಿ ಕನ್ನಡದ ಹಿರಿಯ ಸಾಹಿತಿ ಮತ್ತು ನೆರೆ ರಾಜ್ಯದ ಹಿರಿಯ ಸಾಹಿತಿಯೊಬ್ಬರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

"ರಂಗದ ಒಳ ಹೊರಗೆ" ಸಂಕೀರ್ಣಕ್ಕೆ ಪುಸ್ತಕ ಬಹುಮಾನ ದೊರೆತಿರುವ ಲೇಖಕ, ಸಾಹಿತಿ ಗೋಪಾಲ ವಾಜಪೇಯಿ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಅಗಲಿಕೆಯನ್ನು ಅಧ್ಯಕ್ಷರು ಸ್ಮರಿಸಿದರು.

2016ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು

1) ಡಾ. ನಾಗೇಶ ಹೆಗಡೆ - ವಿಜ್ಞಾನ ಸಾಹಿತ್ಯ
2) ಡಾ. ಎಚ್.ಎಸ್. ಶ್ರೀಮತಿ - ವಿಮರ್ಶಕರು, ಅನುವಾದಕರು
3) ಪ್ರೊ. ಓ.ಎಲ್. ನಾಗಭೂಷಣಸ್ವಾಮಿ - ವಿಮರ್ಶಕರು
4) ಡಾ. ಬಾಳಾಸಾಹೇಬ ಲೋಕಾಪುರ - ಕಾದಂಬರಿ, ಕಥೆಗಾರ
5) ಬಸವರಾಜು ಕುಕ್ಕರಹಳ್ಳಿ - ಕಥೆಗಾರ

Karnataka Sahitya Acacemy awards announced

2015ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

1) ಕಾವ್ಯ : ಯಾರ ಹಂಗಿಲ್ಲ ಬೀಸುವ ಗಾಳಿಗೆ - ಸತ್ಯಮಂಗಲ ಮಹದೇವ
2) ಕಾದಂಬರಿ : ಕರಿನೀರು - ಡಾ. ಲತಾ ಗುತ್ತಿ
3) ಸಣ್ಣಕತೆ : ಜೋಗತಿ ಜೋಳಿಗೆ - ಅನುಪಮಾ ಪ್ರಸಾದ್
4) ನಾಟಕ : ಕರುಳ ತೆಪ್ಪದ ಮೇಲೆ - ಚಿದಾನಂದ ಸಾಲಿ
5) ಲಲಿತ ಪ್ರಬಂಧ : ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು - ಎಚ್.ಶಾಂತರಾಜ ಐತಾಳ್
6) ಪ್ರವಾಸ ಸಾಹಿತ್ಯ : ಆಸುಪಾಸು - ಡಾ. ಬಿ.ಎಸ್. ಪ್ರಣತಾರ್ತಿಹರನ್
7) ಜೀವನಚರಿತ್ರೆ : ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ - ಜೀವನ, ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ - ಚಲನಚಿತ್ರ - ದೊಡ್ಡ ಹುಲ್ಲೂರು ರುಕ್ಕೋಜಿ
8) ಸಾಹಿತ್ಯ ವಿಮರ್ಶೆ : ಸ್ತ್ರೀ ಎಂದರೆ ಅಷ್ಟೇ ಸಾಕೆ - ಡಾ. ಎಚ್.ಎಲ್. ಪುಷ್ಪ
9) ಮಕ್ಕಳ ಸಾಹಿತ್ಯ : ಪಪ್ಪು ನಾಯಿಯ ಪೀಪಿ - ವಿಜಯಶ್ರೀ ಹಾಲಾಡಿ
10) ವಿಜ್ಞಾನ ಸಾಹಿತ್ಯ : ಕಲಿಯುಗದ ಸಂಜೀವಿನಿ ಹೊಕ್ಕಳುಬಳ್ಳಿ - ಡಾ. ನಾ.ಸೋಮೇಶ್ವರ
11) ಮಾನವಿಕ : ಬಹುವಚನ ಭಾರತ - ಜಿ. ರಾಜಶೇಖರ
12) ಸಂಶೋಧನೆ : ಸಾಹಿತ್ಯ ಶೋಧ - ಪ್ರೊ. ಎ.ವಿ. ನಾವಡ
13) ಅನುವಾದ-1 (ಸೃಜನಶೀಲ) : ಕಾನ್ರಾಡ್ ಕಥೆಗಳು - ಶೈಲಜ (ಮೂಲ: ಜೋಸೆಫ್ ಕಾನ್ರಾಡ್)
14) ಅನುವಾದ-2 (ಸೃಜನೇತರ) : ಕದಡಿದ ಕಣಿವೆ - ಬಿ. ಎಸ್. ಜಯಪ್ರಕಾಶ ನಾರಾಯಣ (ಮೂಲ : Our Moon Has Blood Clots - The Exodus of the Kashmiri Pandits) [ಕಾಶ್ಮೀರಿ ಪಂಡಿತರ ನೋವು ನರಳಾಟ ಕುರಿತ ಪುಸ್ತಕ]
15) ಸಂಕೀರ್ಣ : ರಂಗದ ಒಳ-ಹೊರಗೆ - ಗೋಪಾಲ ವಾಜಪೇಯಿ
16) ಲೇಖಕರ ಮೊದಲ ಕೃತಿ : ಅಸ್ಮಿತಾ (ಕವನ) - ದೀಪಾ ಗಿರೀಶ್

Karnataka Sahitya Acacemy awards announced

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.

2015ನೇ ವರ್ಷದ ಅಕಾಡೆಮಿಯ 7 ದತ್ತಿನಿಧಿ ಬಹುಮಾನ ಪಡೆದವರು

1) ಕಾವ್ಯ - ಹಸ್ತಪ್ರತಿ ಕನಸ ಬೆನ್ಹತ್ತಿ ನಡಿಗೆ ಸಿದ್ದು ಎಂ ಸತ್ಯಣ್ಣವರ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ)
2) ಕಾದಂಬರಿ ಮಹಾ ಯಾನ ಜಾಣಗೆರೆ ವೆಂಕಟರಾಮಯ್ಯ (ಚದುರಂಗ ದತ್ತಿನಿಧಿ ಬಹುಮಾನ)
3) ಜೀವನ ಚರಿತ್ರೆ - ಕಾಡು ಕಣಿವೆಯ ಹಾಡು ಹಕ್ಕಿ - ಡಾ. ಗಜಾನನ ಶರ್ಮಾ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) ಗರ್ತಿಕೆರೆ ರಾಘಣ್ಣ
4) ಸಾಹಿತ್ಯ ವಿಮರ್ಶೆ - ತಿಳಿಯಲು ಎರಡೆಂಬುದಿಲ್ಲ ಡಾ. ಕವಿತಾ ರೈ (ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ)
5) ಅನುವಾದ-1 (ಸೃಜನಶೀಲ) - ವಾರ್ಸಾದಲ್ಲೊಬ್ಬ ಭಗವಂತ ಡಾ. ಜಯಲಲಿತಾ (ಎಲ್. ಗುಂಡಪ್ಪ ಮತ್ತು ಶಾರದಮ್ಮ (ಮೂಲ: ವಾರ್ಸಾವಿಲ್ ಒರು ಕಡವುಳ್
ದತ್ತಿನಿಧಿ ಬಹುಮಾನ) (ತಮಿಳು ಕಾದಂಬರಿ-ಡಾ. ಕಾರ್ಲೋಸ್)
6) ಲೇಖಕರ ಮೊದಲ ಸ್ವತಂತ್ರ ಕೃತಿ 21ನೇ ಕ್ರೋಮೋಜೋಮ್ ಮತ್ತು (ಮಧುರಚೆನ್ನ ದತ್ತಿನಿಧಿ ಬಹುಮಾನ) ಇತರೆ ಕಥನಗಳು - ಚಂಪ ಜೈಪ್ರಕಾಶ್
7) ಕನ್ನಡದಿಂದ ಇಂಗ್ಲಿಷಿಗೆ ಅನುವಾದ Ghachar Ghochar - ಶ್ರೀನಾಥ್ ಪೆರೂರ್ (ಅಮೆರಿಕನ್ನಡ ದತ್ತಿನಿಧಿ ಬಹುಮಾನ) (ಮೂಲ: ಘಾಚರ್ ಘೋಚರ್ (ಕಾದಂಬರಿ) - ವಿವೇಕ್ ಶಾನಭಾಗ

Karnataka Sahitya Acacemy awards announced

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ, ಸದಸ್ಯರಾದ ಮಹೇಶ್ ಹರವೆ, ಮೇಟಿ ಮುದಿಯಪ್ಪ, ಡಾ: ವಡ್ಗೆರೆ ನಾಗರಾಜರಯ್ಯ, ಪಟೇಲ್ ಪಾಂಡು, ವಿಜಯಕಾಂತ್ ಪಾಟೀಲ್ ಮತ್ತು ಕುಂಸಿ ಉಮೇಶ್ ಅವರು ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತರೆಲ್ಲರಿಗೆ ಅಭಿನಂದನೆಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Sahitya Academy awards for the year 2015 and honorary awards for the year 2016 have been announced by Malathi Pattanashetty on 10th January. Award presentation ceremony will be conducted on 7th February at Ravindra Kalakshetra, Bengaluru. Congratulations to all the winners.
Please Wait while comments are loading...