ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆಯ ಸಾಹಿತಿಗಳ ಸಂಭ್ರಮಾಚರಣೆಗೊಂದು ವೇದಿಕೆ!

|
Google Oneindia Kannada News

ಬೆಂಗಳೂರು, ಸೆ. 15: ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಉದ್ದೇಶದಿಂದ ಸೆ.18ರಂದು ಪೊಲೀಸ್‌ ಸಾಹಿತ್ಯ ಸಂಭ್ರಮ-2022 ಆಯೋಜಿಸಲಾಗಿದೆ. ಬುಕ್‌ ಬ್ರಹ್ಮ ಸಂಸ್ಥೆ ಮತ್ತು ಆರಕ್ಷಕ ಲಹರಿ ಮಾಸಪತ್ರಿಕೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಭ್ರಮವು ನಿಮ್ಹಾನ್ಸ್‌ ಕನ್ವೆನ್ಷನ್‌ ಸಭಾಂಗಣದಲ್ಲಿ ಇಡೀ ದಿನ ನಡೆಯಲಿದೆ.

ಕರ್ನಾಟಕ ಸರ್ಕಾರದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಂಶೋಧಕ-ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ನಿರ್ದೇಶಕ-ಕತೆಗಾರ ನಾಗತೀಹಳ್ಳಿ ಚಂದ್ರಶೇಖರ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರಾದ ಪ್ರವೀಣ್ ಸೂದ್, ಐಪಿಎಸ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸಿ.ಹೆಚ್.ಪ್ರತಾಪ್ ರೆಡ್ಡಿ, ಐಪಿಎಸ್ ಅವರು ಭಾಗವಹಿಸಲಿದ್ದಾರೆ.

ಪೊಲೀಸ್‌ ಸಾಹಿತ್ಯ ನಡೆದು ಬಂದ ದಾರಿ, ಮಹಿಳಾ ಪೊಲೀಸ್‌ ಮತ್ತು ಸಾಹಿತ್ಯ, ಪೊಲೀಸ್‌ ರಸಪ್ರಸಂಗ, ಕವಿಗೋಷ್ಠಿ ನಡೆಯಲಿವೆ. ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ನಿರ್ವಹಿಸಿ ನಿವೃತ್ತರಾಗಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ಜೊತೆಗೆ ಕನ್ನಡದ ಪ್ರಮುಖ ಹಿರಿಯ ಸಾಹಿತಿ-ಕವಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

Karnataka Police Literature Festival 2022 at Nimhans auditorium

ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಬರೆದ ಗುಲ್ವಾಡಿ ವೆಂಕಟರಾವ್‌ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸೃಜನ ಮತ್ತು ಸೃಜನೇತರ ಬರವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ್ದ ಸಿಬ್ಬಂದಿಗಳ ಆಯ್ದ ಕೃತಿಗಳಿಗೆ ಪ್ರಶಸ್ತಿಯ ಮನ್ನಣೆ ದೊರೆಯಲಿದೆ.

ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೆಶಕರು ಹಾಗೂ ಪೊಲೀಸ್ ಮಹಾನಿರೀಕ್ಷರಾದ ಶಂಕರ್ ಬಿದರಿ, ಐಪಿಎಸ್ ಹಾಗೂ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ) ಅಲೋಕ್ ಕುಮಾರ್, ಐಪಿಎಸ್‌ ಮತ್ತು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ವಿವರ: ಪೊಲೀಸ್ ಸಾಹಿತ್ಯ ಸಂಭ್ರಮ 2022
ದಿನಾಂಕ: ಸೆಪ್ಟೆಂಬರ್ 18,2022
ಸಮಯ: ಬೆಳಗ್ಗೆ 10 ರಿಂದ ಸಂಜೆ 6 ವರೆಗೆ
ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಂಗಳೂರು

ಉದ್ಘಾಟನೆ: ಬೆಳಗ್ಗೆ 10ಗಂಟೆಗೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ

ಮುಖ್ಯ ಅತಿಥಿಗಳು: ನಾಗತಿಹಳ್ಳಿ ಚಂದ್ರಶೇಖರ್
ಪ್ರವೀಣ್ ಸೂದ್ ಐಪಿಎಸ್
ಸಿ.ಎಚ್ ಪ್ರತಾಪ್ ರೆಡ್ಡಿ ಐಪಿಎಸ್
ಅಧ್ಯಕ್ಷ: ಹಂಪ ನಾಗರಾಜಯ್ಯ, ಖ್ಯಾತ ಸಾಹಿತಿ

ಸಾಹಿತ್ಯ ಗೋಷ್ಠಿಗಳು: ಪೊಲೀಸ್ ಸಾಹಿತ್ಯ ಒಂದು ಹಿನ್ನೋಟ, ಪೊಲೀಸ್ ಮಹಿಳೆಯರು ಮತ್ತು ಸಾಹಿತ್ಯ, ಪೊಲೀಸ್ ರಸಪ್ರಸಂಗ

ಹಿರಿಯ ಕವಿ ಬಿ.ಆರ್ ಲಕ್ಷ್ಮಣ್ ರಾವ್ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ

ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಪ್ರದಾನ ಸಮಾರಂಭ

ಮತ್ತೊಂದು ಸುದ್ದಿ:

'ಜಂಗಮ ಕಲೆಕ್ಟಿವ್‌' ಸಹಯೋಗದೊಂದಿಗೆ 'ಅಲೆ ಕ್ರಿಯೇಟಿವ್ಸ್' ಆಯೋಜಿಸಿರುವ ಒಂದು ದಿನದ ಕಥಾ ಕಮ್ಮಟ
ದಿನಾಂಕ: 24, ಸೆಪ್ಟೆಂಬರ್, 2022, ಶನಿವಾರ
* ಮೊದಲು ರಿಜಿಸ್ಟರ್ ಆದ 20 ಜನರಿಗೆ ಅವಕಾಶ.
* ಪ್ರವೇಶ ಶುಲ್ಕ ಕನಿಷ್ಠ ₹500, ಗರಿಷ್ಠ ₹1000.
* ಆನ್‌ಲೈನ್‌ ಮೂಲಕ ಕಮ್ಮಟ ನಡೆಯಲಿದೆ.
* ಆನ್‌ಲೈನ್‌ನ ಸೀಮಿತ ಮಿತಿಯಲ್ಲೇ ನೀವು ಇದ್ದಲ್ಲಿಂದಲೇ ಸಾಕಷ್ಟು ಚಟುವಟಿಕೆ ನಡೆಸಲು ಪೂರಕವಾಗುವಂತೆ ಕಮ್ಮಟ ರೂಪಿಸಲಾಗಿದೆ.
* ಆಸಕ್ತರು ನಿಮ್ಮ ಕಿರು ಪರಿಚಯವನ್ನು ವಾಟ್ಸ್‌ಆಪ್ ಮಾಡಿ: 9972200370

English summary
Karnataka Police Literature Festival 2022: Book Brahma has organised Sahithya Sambhrama 2022 to celebrate writers in Police department. The event is scheduled on Sept 18 at Nimhans, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X