ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಬಾವುಟ ಹಾರಬೇಕು, ನಮ್ಮ ಭಾವನೆ ಹಾಡಬೇಕು

ಯಾವುದೇ ರಾಜ್ಯಕ್ಕೆ, ಆ ರಾಜ್ಯದ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಿಸುವ ಅಧಿಕಾರ ಇರಬೇಕು.

By ಲಕ್ಷ್ಮೀಕಾಂತ್.ವಿ (ಕಾಲವಿ)
|
Google Oneindia Kannada News

ರಾಜ್ಯೋತ್ಸವದ ಸಂದರ್ಭದಲ್ಲಿ ಅಥವಾ ಕರ್ನಾಟಕದ ಯಾವುದೇ ಗೆಲುವಿನ ಸಂಭ್ರಮಾಚರಣೆಗಳ ಸಮಯದಲ್ಲಿ ಕರ್ನಾಟಕದ (ಅಥವಾ ಕನ್ನಡದ) ಧ್ವಜವನ್ನು ಹಾರಿಸುವುದು ಅಪರಾಧವಲ್ಲ. ಈ ಹಿಂದೆ ಕರ್ನಾಟಕದ ಹೈಕೋರ್ಟ್ ಕರ್ನಾಟಕದ ಧ್ವಜವನ್ನು ಸರ್ಕಾರಿ ಕಚೇರಿಗಳಲ್ಲಿ ಹಾರಿಸುವುದು ಅಪರಾಧ ಎಂದು ತೀರ್ಮಾನ ನೀಡಿತ್ತು.

ಮತ್ತೆ ಕರ್ನಾಟಕ ಸರಕಾರ (ಅಥವಾ ಎಲ್ಲ ಶಾಸಕರು ಒಟ್ಟಾರೆಯಾಗಿ ಅನುಮೋದನೆ ಪಡೆದು), ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಹೋರಾಟ ಮಾಡಬಹುದಿತ್ತು. ಆದರೆ ನಮ್ಮ ಶಾಸಕರಿಂದ ಆ ರೀತಿಯ ಅಭಿಮಾನವನ್ನೆಲ್ಲ ನಿರೀಕ್ಷಿಸುವುದು ತಪ್ಪು. ಯಾವುದೇ ರಾಜ್ಯಕ್ಕೆ, ಆ ರಾಜ್ಯದ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಿಸುವ ಅಧಿಕಾರ ಇರಬೇಕು.

Kannada flag

ಒಂದು ರಾಜ್ಯ ಒಂದು ಧ್ವಜವನ್ನು ಹೊಂದುವುದು ಏನೂ ತಪ್ಪಲ್ಲ ಅಥವಾ ರಾಷ್ಟ್ರದ್ರೋಹದ ಕೆಲಸವೂ ಅಲ್ಲ. ಕರ್ನಾಟಕದಲ್ಲಿ ಕೆಲವು ಕಡೆ (ಸರ್ಕಾರೇತರ ಸ್ಥಳಗಳಲ್ಲೂ) ನಮ್ಮ ಧ್ವಜವನ್ನು ಹಾರಿಸಲು ಅನುಮತಿ ಸಿಗುವುದಿಲ್ಲ. ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ಕರ್ನಾಟಕದ ಧ್ವಜವನ್ನು ಹಾರಿಸುವುದಕ್ಕೆ ಅಪಾರ್ಟ್ ಮೆಂಟ್ ನ ನಿವಾಸಿಗಳೇ ಅನುಮತಿ ನೀಡುತ್ತಿಲ್ಲ. ಕೆಲವು ಸಂಸ್ಥೆಗಳಲ್ಲೂ ಇದೇ ರೀತಿ ಪರಿಸ್ಥಿತಿ ಇದೆ.

ನನ್ನ ಪರಿಮಿತಿಯಲ್ಲಿ ತಿಳಿದುಕೊಂಡಿರುವಂತೆ ಇವರಿಗೆಲ್ಲ ಸೃಷ್ಟೀಕರಿಸುವುದು ಏನೆಂದರೆ, ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಾಟ ಮಾಡುವುದು ತಪ್ಪಲ್ಲ. ಅಮೆರಿಕದಲ್ಲಿ 52 ರಾಜ್ಯಗಳಿಗೂ ಪ್ರತ್ಯೇಕ ಧ್ವಜವಿದೆ ಮತ್ತು ಆಯಾ ರಾಜ್ಯಗಳಿಗೆ ಧ್ವಜಗಳನ್ನು ರಾಷ್ಟ್ರಧ್ವಜಕ್ಕಿಂತ ಕೆಳಮಟ್ಟದಲ್ಲಿ ಹಾರಿಸುವ ಸ್ವಾತಂತ್ರ್ಯವಿದೆ.

ಅಮೆರಿಕ ದೇಶದ ಎಲ್ಲ ಉಡುಗೆ, ತೊಡುಗೆ, ಆಚಾರ, ವಿಚಾರಗಳನ್ನು ಚಾಚೂ ತಪ್ಪದೆ ಪಾಲಿಸುವ ನಮಗೆ, ಈ ರೀತಿಯ ಸರಳ ವಿಚಾರಗಳನ್ನು ಅಳವಡಿಸಿಕೊಳ್ಳಲು ಉತ್ಸಾಹ ಇಲ್ಲದಿರುವುದು ತೀವ್ರ ನೋವಿನ ಸಂಗತಿ. ಈ ನಿಟ್ಟಿನಲ್ಲಿ ನನ್ನ ವಿನಂತಿ, ಸರಕಾರಕ್ಕೆ ಈ ವಿಚಾರವಾಗಿ ನಾವೆಲ್ಲ ಒತ್ತಡ ಹೇರಬೇಕು ಮತ್ತು ಕೋರ್ಟ್ ನಲ್ಲಿ 'ನಮ್ಮ ಧ್ವಜ ಹಾರಿಸುವುದು ತಪ್ಪೇ?' ಎಂಬ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಕಬೇಕು.

ಯಾರಾದರೂ ಈ ವಿಚಾರದಲ್ಲಿ ಸ್ವಲ್ಪ ಮುಂದಾಳತ್ವ ವಹಿಸಿಕೊಳ್ಳುವಿರಾ? ದಯವಿಟ್ಟು....

ನಮ್ಮ ಬಾವುಟ ಹಾರಬೇಕು
ನಮ್ಮ ಭಾವನೆ ಹಾಡಬೇಕು.

English summary
Kannada flag hoist is not a wrong thing, V.Lakshmikanth (Kalavi), requests people to file a Public Interest Litigation against the decision of Karnataka high court about Kannada flag hoist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X