ಏಕಾಂಗಿ ಯಾನ : ಕಪ್ಪನಹಳ್ಳಿಯಿಂದ ವಾಘಾ ಗಡಿ ತನಕ

Posted By:
Subscribe to Oneindia Kannada

ತಿರುಗಾಟ ಯಾರಿಗಿಷ್ಟವಿಲ್ಲ ಹೇಳಿ, ಆದರೆ, ಏಕಾಂಗಿಯಾಗಿ ತಿರುಗುವುದು, ಯಾವುದೇ ಪ್ಲ್ಯಾನ್ ಇಲ್ಲದೆ, ಬ್ಯಾಗು ಹಿಡಿ ಊರಿಗೆ ನಡಿ ಎಂದು ಹೊರಡುವುದೆಂದರೆ, ಹಲವಾರು ಮಂದಿ ಹಿಂದೆ ಸರಿಯುತ್ತಾರೆ. ಆದರೆ, ಪತ್ರಕರ್ತರೆಂದರೆ ಕೆಲಸದ ನಡುವೆ ಸ್ವಲ್ಪ ಬಿಡುವು ಸಿಕ್ಕರೂ ಸಾಕು ಟ್ರೆಕ್ಕಿಂಗ್, ಟ್ರಿಪ್, ಟೂರ್ ಎಂದು ಹೊರಡುವ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳುವುದಿಲ್ಲ. ಹೀಗೆ ಸಿಕ್ಕ ಸಮಯದಲ್ಲಿ ಪತ್ರಕರ್ತ ಶರತ್ ಅವರು ತಮ್ಮ ಊರು ಕಪ್ಪನಹಳ್ಳಿಯಿಂದ ವಾಘಾ ಗಡಿಗೆ ಹೋಗಿ ಬಂದಿದ್ದಾರೆ. ವಾಘಾ ಗಡಿಗೆ ಏಕೆ ಹೋಗಿದ್ದು, ಈ ಬಗ್ಗೆ ಮುಂದೆ ಅವರೇ ಹೇಳಿಕೊಂಡಿದ್ದಾರೆ.

ತಿರುಗಾಟದ ಹುಚ್ಚು ಹೇಗಿದೆ ಅಂದ್ರೆ ಇಡೀ ನಮ್ಮ ದೇಶ ಸುತ್ತಾಡಬೇಕು ಎಂಬ ಕೆಟ್ಟ ಹುಚ್ಚು ನನ್ನದು..ಎಲ್ಲಿಗಾದ್ರು ಹೋಗ್ತಿರಬೇಕು ಬ್ಯಾಗು ಹಿಡಿ ಸೀದಾ ನಡಿ ಅನ್ನೋ ಹಾಗೇ ಯಾವಾಗ ಸಾಧ್ಯವಾಗುತ್ತೋ ಅವಾಗ ಹೋಗ್ತಿರಬೇಕು.. ನನ್ನ‌ ಪ್ರೊಫೆಷನಲ್ ನಲ್ಲಿ ಒಂದಿಷ್ಟು ಬದಲಾವಣೆ ಆಗ್ತಿದ್ದ ಹಾಗೇ ಒಂದು ಸಣ್ಣ ಗ್ಯಾಪ್ ತಗೊಂಡು ಉತ್ತರ ಭಾರತದ ಕಡೆ ಬ್ಯಾಗು ಹಿಡಿದು ಸೀದಾ ನಡೆದೆ...

ಮೊದಲು ದೆಹಲಿ ಹೋಗುವ ಆಮೇಲೆ ದೇಶದ ಯಾವುದಾದರೂ ಗಡಿ ಭಾಗಕ್ಕೆ ಹೋಗಿ ಬರುವ ಪ್ಲಾನ್ ಹಾಕಿಕೊಂಡೆ..ಹಾಗೇ ಬೆಂಗಳೂರಿನಿಂದ ಕರ್ನಾಟಕ ಎಕ್ಸಪ್ರೆಸ್ ರೈಲಿನಲ್ಲಿ ಸೀದಾ ದೆಹಲಿಗೆ ಬಂದಿಳಿದೆ..

ದೆಹಲಿಯಲ್ಲಿ ಗೆಳೆಯ ನನ್ನ ಹಳೇ ಕೊಲಿಗ್ ಪಬ್ಲಿಕ್ ಟಿವಿಯ ದೆಹಲಿ ವರದಿಗಾರ ಶಬ್ಬೀರ್ ನನ್ನ ಪಿಕ್ ಮಾಡಿದ ಅವನ ಜೊತೆ ಎಲ್ಲಿ ಹೋಗೋದು ಅಂತ ಒಂದಷ್ಟು ಸಮಾಲೋಚನೆ ಮಾಡಿಕೊಂಡು ಅವನ ಜೊತೆ ಒಂದಿಷ್ಟು ಸುತ್ತಾಡಿ..ನಂತರ ನನ್ನ ಬಹು ದಿನದ ಕನಸಿನ ತಾಣಕ್ಕೆ ಭೇಟಿ ನೀಡಲು ಅಣಿಯಾದೆ. ನಾನು ಭೇಟಿ ನೀಡಿದ ವಾಘಾ ಗಡಿಯ ಬಗ್ಗೆ..ಈಗ ಹೇಳ್ತೀನಿ..

ಒಂದು ಬಾರ್ಡರ್ ಗೆ ಹೋಗಿ ಬರಲೇಬೇಕು

ಒಂದು ಬಾರ್ಡರ್ ಗೆ ಹೋಗಿ ಬರಲೇಬೇಕು

ಹೌದು, ಭಾರತ ಪಾಕಿಸ್ತಾನದ ಗಡಿಭಾಗ ವಾಘಾ ಬಾರ್ಡರ್ ಗೆ ವಿಸಿಟ್ ಕೊಟ್ಟ ಬಗ್ಗೆ ಹೇಳ್ತೀದಿನಿ. ಯಾವುದಾದರೂ ಒಂದು ಬಾರ್ಡರ್ ಗೆ ಹೋಗಿ ಬರಲೇಬೇಕು ಎಂಬ ಬಯಕೆಯಂತೆ ವಾಘಾ ಗಡಿಗೆ ನಾ ಭೇಟಿ ಕೊಟ್ಟೆ. ಮೊದಲು ಪಂಜಾಬ್ ಅಮೃತಸರ್ ಗೆ ಭೇಟಿ ಅಲ್ಲಿ ಗೋಲ್ಡನ್ ಟೆಂಪಲ್ ಮತ್ತು ಜಲಿಯನ್ ವಾಲಾ ಭಾಗ್ ದರ್ಶನ ಮಾಡಿದೆ.

ಗೋಲ್ಡನ್ ಟೆಂಪಲ್ ತುಂಬಾ ಇಷ್ಟವಾಯ್ತು ಅದ್ರಲ್ಲೂ ಅಲ್ಲಿ ವರ್ಕ್ ಮಾಡೋರನ್ನ ಕಂಡು ನಿಜಕ್ಕೂ ನಿಬ್ಬೆರಗಾದೆ ಯಾಕೆಂದರೆ ಗೋಲ್ಡನ್ ಟೆಂಪಲ್ ಪ್ರವೇಶಕ್ಕೂ ಮುನ್ನ ಚಪ್ಪಲಿ ಬಿಟ್ಟು ಒಳಗಡೆ ಪ್ರವೇಶ ಮಾಡಬೇಕಿತ್ತು.

ಅದಕ್ಕಾಗಿ ಚಪ್ಪಲಿ ಬಿಡೋಕೆ ಅಂತ ಹೋದಾಗ ಆ ಚಪ್ಪಲಿಯನ್ನ ಕಣ್ಣಿಗೆ ಒತ್ತಿಕೊಂಡು ಒಳಗಡೆ ಇಟ್ಟುಕೊಳ್ಳುತ್ತಿದ್ದರು.ಇಂಥ ಸಾಕಷ್ಟು ಉದಾಹರಣೆ ಗೋಲ್ಡನ್ ಟೆಂಪಲ್ ನಲ್ಲಿ ಕಾಣಸಿಗುತ್ತೆ ಅವರ ಸೇವಾ ಮನೋಭಾವಕ್ಕೆ ಒಂದು ನಮಸ್ಕಾರ ಹೇಳಲೇ ಬೇಕು ಅನ್ನಿಸ್ತು. ಅಂದ ಹಾಗೇ ಅಲ್ಲಿ ನಮ್ಮ ಧರ್ಮಸ್ಥಳ ಹೊರನಾಡು ರೀತಿ ಭಕ್ತಾದಿಗಳಿಗೆ ಪ್ರಸಾದ ಸೇವನೆ ಕೂಡ ಇರುತ್ತೆ.

ಆ ಗೋಲ್ಡನ್ ಟೆಂಪಲ್ ನಲ್ಲಿ ಗೊಲ್ಡನ್ ಟೆಂಪೆಲ್ನಷ್ಟೇ ಮುದ್ದು ಮುಖದ ಚಿಕ್ಕ ಮಕ್ಕಳನ್ನ ನೋಡಿ ಸಖತ್ ಖುಷಿ ಆಯ್ತು. ನಂತರ ಅಲ್ಲೇ ಹತ್ತಿರದಲ್ಲಿ ಇರುವ ಜಲಿಯನ್ ವಾಲಾ ಬಾಗ್ ಗೆ ಭೇಟಿ ಕೊಟ್ಟೆ ಅದು ಒಂದು ಕರಾಳ ನೆನಪಿನ ಕಥೆ ಹೇಳುತ್ತೆ.

ಸ್ವತಂತ್ರ ಪೂರ್ವದಲ್ಲಿ ಸಾರ್ವಜನಿಕ ಉದ್ಯಾನದ ಸೇರಿದ್ದ ನಮ್ಮ ಜನರ ಮೇಲೆ ಬ್ರಿಟಿಷ್ರು ಮನಬಂದಂತೆ ಫೈರಿಂಗ್ ಮಾಡಿ‌ ಸಾವಿರಾರು ಜನರು ಅಲ್ಲಿ ಸಾವನ್ನಪ್ಪಿದರು. ಅಂದು ಫೈರಿಂಗ್ ಮಾಡಿದ ಕುರಹು ಮತ್ತು ಆ ಫೈರಿಂಗ್ ನಿಂದ ತಪ್ಪಿಸಿಕೊಳ್ಳಲು ಬಾವಿಗೆ ಹಾರಿದ ಆ ಬಾವಿಯನ್ನ ಅಲ್ಲಿ ಕಾಣಬಹುದು.

ಅಲ್ಲಿಂದ ಸೀದಾ ವಾಘಾ ಗಡಿಯತ್ತ ಪಯಣ

ಅಲ್ಲಿಂದ ಸೀದಾ ವಾಘಾ ಗಡಿಯತ್ತ ಪಯಣ

ಅಲ್ಲಿಂದ ಸೀದಾ ವಾಘಾ ಗಡಿಯತ್ತ ಪಯಣ..ಅಲ್ಲಿರೋ ಬಸ್ಸೂ ಅಟೋದವರು ವಾಘಾ ಗಡಿಗೆ ಬಿಡ್ತೀವಿ ಒಂದಿಷ್ಟು ಹಣ ಆಗುತ್ತೆ‌ ಹಾಗೇ ಹೀಗೆ ಅಂತ ಪುಸಲಾಯಿಸುತ್ತಾರೆ. ಆದ್ರೆ ಅದೇನೋ ಸಾರಿಗೆ ಇಲಾಖೆಯ ಬಸ್ ನಲ್ಲೇ ಹೋಗಬೇಕು ಅಂತ ಅಮೃತಸರದ ಬಸ್ ನಿಲ್ದಾಣದಿಂದ ವಾಘಾ ಕಡೆ ಹೊರಡುವ ಬಸ್ ಏರಿದೆ.

ಸಾಕಷ್ಟು ಕುತೂಹಲದಿಂದ ಬಾರ್ಡರ್ ನತ್ತ ಪ್ರಯಾಣ ಬೆಳಸಿದೆ. ಅಮೃತಸರದಿಂದ ಸುಮಾರು 28 ಕಿಮೀ ದೂರವಷ್ಟೇ ವಾಘಾ ಗಡಿಗೆ ಇರೋ ಅಂತರ. ಬಾರ್ಡರ್ ಅಂದ್ರೆ ಗೊತ್ತಿಲ್ಲ ಅದೇನೋ ಮನಸ್ಸಿನಲ್ಲಿ ತಳಮಳ‌ ಕುತೂಹಲ ಹೆಚ್ಚಿತ್ತು ಆ ಕುತೂಹಲದಿಂದಲೇ ಬಾರ್ಡರ್ ನತ್ತ ಪ್ರಯಾಣ.

ಅಂದ ಹಾಗೇ ಬಸ್ ಬಾರ್ಡರ್ ಅಂತ್ಯವರೆಗೂ ಬರೋದಿಲ್ಲ ಅದು ಅಟ್ಟಾರಿ ಭಾರತದ ಕೊನೆಯ ಹಳ್ಳಿ ಅಂತ ಹೇಳುತ್ತಾರೆ ಅಲ್ಲೇ ಸ್ಟಾಪ್ ಆಗುತ್ತೆ ಅಲ್ಲಿಂದ ಸೈಕಲ್ ಅಥವಾ ಆಟೋ ರಿಕ್ಷಾದಲ್ಲಿ ಪ್ರಯಾಣಿಸಬೇಕು.

ನಾನು ಸೈಕಲ್ ವಾಲ ಜೊತೆ ವಾಘಾ ನತ್ತ ಹೊರಟೆ ದಾರಿ ಮದ್ಯೆ ಒಂದು ಬೋರ್ಡ್ ಆ ಬೋರ್ಡ್ ಇನ್ನಷ್ಟು ಕ್ರೇಜ್ ಹೆಚ್ಚು ಮಾಡ್ತು.ಆದರಲ್ಲಿ ಲಾಹೋರ್ ಗೆ 23 ಕಿಮೀ, ವಾಘಾ ಬಾರ್ಡರ್ ಗೆ 2 ಕಿ.ಮೀ ಅಂತ ಇತ್ತು. ಕೂಡಲೇ ಅಲ್ಲಿ ಆ ಸೈಕಲ್ ವಾಲರನ್ನ ನಿಲ್ಲಿಸು ಬೈಯ ಅಂತ ಹೇಳಿ ಅಲ್ಲಿ ಹೋಗಿ ಒಂದು ಸೆಲ್ಫಿ ಮತ್ತು ಫೋಟೋ ಕ್ಲಿಕ್ಕಿಸಿಕೊಂಡೆ.

ರಾಷ್ಟ್ರೀಯ ಗಡಿಯಲ್ಲಿದೀನಿ ಅನ್ನೋದು ಆಕ್ಷಣ

ರಾಷ್ಟ್ರೀಯ ಗಡಿಯಲ್ಲಿದೀನಿ ಅನ್ನೋದು ಆಕ್ಷಣ

ಆ ಸೈಕಲ್ ವಾಲದವನು ಹೇಳಿದ್ದ ಬ್ಯಾಗು ಕವರ್ ಆ ರೀತಿ ವಸ್ತುಗಳನ್ನ ಒಳಗಡೆ ಬಿಡೋದಿಲ್ಲ ಅಂತ ಸೋ, ಅದನ್ನ ಅಲ್ಲೇ ಇರಿಸಿಕೊಳ್ಳೋಕೆ ಅಂತಾನೇ ಖಾಸಗಿಯಾಗಿ ಅಂಗಡಿಗಳನ್ನ ಹಾಕಿಕೊಂಡಿದ್ದಾರೆ. ಸೋ, ನನ್ನ ಬ್ಯಾಗುನ್ನಲ್ಲೇ ಇಟ್ಟು ಕ್ಯಾಮೆರಾ ಕೊರಳಿಗೆ ಹಾಕಿಕೊಂಡು ವಾಘಾ ಗಡಿ ಹತ್ತಿರ ಬಂದೆ.

ನನ್ನ ತರಹ ಅದೆಷ್ಟು ಜನಸಾಗರ ಅಲ್ಲಿ ಬರತೊಡಗಿತ್ತು.ಅಂತಿಮವಾಗಿ ವಾಘಾ ಗಡಿಗೆ ಬಂದೆ ಒಂದು ರೀತಿ ಏನೋ ಖುಷಿ ತಳಮಳ ಗಡಿ ಪ್ರದೇಶದಲ್ಲಿದೀನಿ ಅದು ಅಲ್ಲದೆ ನಾವು ಚಿಕ್ಕಂದಿನಿಂದ ದ್ವೇಷಿಸುವ ರಾಷ್ಟ್ರೀಯ ಗಡಿಯಲ್ಲಿದೀನಿ ಅನ್ನೋದು.

ಅಂದ ಹಾಗೇ, ವಾಘಾ ಗಡಿಯಲ್ಲಿ ಪ್ರತಿದಿನ ವಿಶಿಷ್ಟ ಬಗೆಯ ಬೀಟಿಂಗ್ ರಿಟ್ರೀಟ್ ಸೆರ್ಮನಿ ನಡೆಯುತ್ತೆ. ಹೀಗೆ ಅಂದ್ರೆ ಭಾರತದ ಬಿಎಸ್ ಎಫ್ ಯೋಧರು ಮತ್ತು ಪಾಕಿಸ್ತಾನದ ಯೋಧರು ಪ್ರತಿದಿನ ಗಡಿಯಲ್ಲಿರೋ ಗೇಟ್ಗಳನ್ನ ತೆರದು ದೇಶದ ಭಾವುಟ ಹಾರಿಸಿ ಕವಾಯತು ನಡೆಸುತ್ತಾರೆ.

ಕೊನೆಗೆ ಭಾವುಟಗಳನ್ನ ಇಳಿಸಿ ಎರಡು ದೇಶಗಳ ಗೇಟ್ ಗಳನ್ನು ಮುಚ್ಚುತ್ತಾರೆ. ಈ ಪ್ರಕ್ರಿಯೆ ಪ್ರತಿದಿನ ವಾಘಾ ಗಡಿಯಲ್ಲಿ ನಡೆಯುತ್ತೆ. ಇದನ್ನ ನೋಡೀಕೆ ಪ್ರತಿದಿನ ಅಲ್ಲಿ ಸಾವಿರಾರು ಜನರು ಸೇರ್ತಾರೆ ಎರಡು ದೇಶದ ಜನರು ಸೇರ್ತಾರೆ ಅದ್ರೆ ಪಾಕಿಸ್ತಾನಕ್ಕಿಂತ ನಮ್ಮ ದೇಶದ ಜನರೇ ಹೆಚ್ಚು ಸೇರ್ತಾರಂತೆ ನಾ ಹೋದ ದಿನವು ನಮ್ಮ ಭಾರತದ ಜನರೇ ಹೆಚ್ಚು ಜನರು ಕಂಡು ಬಂದ್ರು.

ಆ ಕಾರ್ಯಕ್ರಮ ನೋಡೋದೆ ಒಂದು ಸಂಭ್ರಮ

ಆ ಕಾರ್ಯಕ್ರಮ ನೋಡೋದೆ ಒಂದು ಸಂಭ್ರಮ

ಆ ಕಾರ್ಯಕ್ರಮ ನೋಡೋದೆ ಒಂದು ಸಂಭ್ರಮ ಒಂದು ರೀತಿ ಹಬ್ಬದ ವಾತಾವರಣವಿರುತ್ತೆ ಸಂಜೆ 5 ಗಂಟೆ ಬಿಎಸ್ ಎಫ್ ಯೋಧರ ಕವಾಯುತು ನಡೆಯುತ್ತೆ. ಅದೇ ಸಮಯದಲ್ಲಿ ಪಾಕಿಸ್ತಾನದ ಯೋಧರಿಂದ ಕವಾಯತು ನಡೆಯುತ್ತೆ. ಅಷ್ಟರೊಳಗೆ ಯಾರು ಆ ರೀಟ್ರಿಟ್ ಸೆರ್ಮೆನಿ ನೋಡಬೇಕು ಎಂದುಕೊಂಡಿರ್ತಾರೋ ಅವರು ಅಲ್ಲಿಗೆ ಹೋಗಿರಬೇಕು ನಾನು ಒಂದೂವರೆ ಗಂಟೆ ಮುಂಚೆಯ ಹೋಗಿದ್ದೆ.

ನಾ ಹೋಗುವಷ್ಟರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನಸ್ತೋಮವೇ ಆಗ್ಲೇ ಅಲ್ಲಿ ಸೇರಿಯಾಗಿತ್ತು. ಎಲ್ಲರಲ್ಲೂ ಅದೇನೋ ಕುತುಹಲ ಟಿವಿಯಲ್ಲಿ ನೋಡಿದ್ದಕ್ಕೂ ಆಲ್ಲಿ ಕೂತು ನೋಡದ್ದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಕವಾಯತು ಆರಂಭಕ್ಕೂ ಮುನ್ನ ದೇಶ ಪ್ರೇಮದ ಹಾಡುಗಳು ರಿಂಗಣಿಸುತ್ತೆ. ಚೆಕ್ ದೆ ಇಂಡಿಯಾ, ಜೈ ಹೋ ಸೇರಿದಂತೆ ಸಾಕಷ್ಟು ದೇಶ ಪ್ರೇಮದ ಹಾಡುಗಳು ಕೇಳಿ ಬರುತ್ತೆ. ಆ ಹಾಡಿಗೆ ತಕ್ಕಂತೆ ನೆರದಿದ್ದ ಜನರು ಕೂಗೂ ಹೆಚ್ಚಾಗಿರುತ್ತೆ.

ಬಿಎಸ್ಎಫ್ ಯೋಧರ ಪೈಕಿ ಒರ್ವ ವ್ಯಕ್ತಿ ಬಿಳಿ ಬಟ್ಟೆ ಧರಿಸಿದವ ಮೂರು ನಾಲ್ಕು ಘೋಷಣೆಗಳನ್ನ ಹೇಳಿ ಕೊಡ್ತಾನೆ. ಆ ಘೋಷಣೆ ಎಂಥ ಮೌನಿಯನ್ನು ಮಾತನಾಡಿಸುತ್ತೆ ಎದ್ದು ಕೂಗುವಂತೆ ಮಾಡುತ್ತೆ. ಹೌದು, ಅದು ಒಂದೇ ಮಾತರಂ, ಭಾರತ್ ಮತಾಕಿ ಜೈ, ಹಿಂದುಸ್ತಾನ್ ಜಿಂದಾಬಾದ್ ಅಂತ ಹೇಳುತ್ತಿದ್ದರೆ, ಈ ಧ್ವನಿ ಪಕ್ಕದಲ್ಲಿರುವ ಪಾಕಿಸ್ತಾನಕ್ಕೆ ಕೇಳಬೇಕು ಎಂದು ಹೇಳುತ್ತಿದ್ದ ಆವನು ಹಾಗೇ ಹೇಳುತ್ತಿದ್ದರೆ, ನಾವು ಗಳ ಸಹ ಜೋರಾಗಿ ಕೂಗುತ್ತಿದ್ದೆವು.

ಇಂಡಿಯಾ ಪಾಕಿಸ್ತಾನ ಮ್ಯಾಚ್ ನೋಡಬೇಕಾದ್ರೆ

ಇಂಡಿಯಾ ಪಾಕಿಸ್ತಾನ ಮ್ಯಾಚ್ ನೋಡಬೇಕಾದ್ರೆ

ಇಂಡಿಯಾ ಪಾಕಿಸ್ತಾನ ಮ್ಯಾಚ್ ನೋಡಬೇಕಾದ್ರೆನೆ ಹೆಚ್ಚು ಕೂಗುವ ಜನ ನಾವು, ಇನ್ನೂ ಗಡಿಯಲ್ಲಿ ಕೇಳಬೇಕೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಆ ಘೊಷಣೆಗಳನ್ನ ಕೂಗಿದಾಗಿತ್ತು. ಇನ್ನೂ ಆ ಕಡೆ ಪಾಕಿಸ್ತಾನದಲ್ಲಿ ಸಹ ಇದೇ ಪ್ರಕ್ರಿಯೆ ನಡೆಯುತ್ತಿದ್ದರೂ, ನಮ್ಮ ಭಾರತದ ಹೆಚ್ಚು ಜನ ಸಂಖ್ಯೆ ಮತ್ತು ಪ್ರಬಲ್ಯ ಹೆಚ್ಚಿತ್ತು ಅನ್ನಿಸ್ತು.

ಮೊದಲೇ ಯಾರಾದ್ರು ಗೈಡ್ ಮಾಡಿದ್ರೆ ಸರಿಯಾದ ಸ್ಥಳ ನೋಡಿ ಕೂರಬಹುದಾಗಿತ್ತು. ಅಷ್ಟರಲ್ಲಿ ಎಲ್ಲಾ ಕಡೆ ಜನರು ಸೇರಿ ತಮ್ಮ ತಮ್ಮ ಸೀಟುಗಳನ್ನ‌ ಕಾಯ್ದಿರಿಸಿಕೊಂಡಿದ್ದರು. ಮೊಬೈಲ್ ಮತ್ತು ಕ್ಯಾಮರಾದಲ್ಲಿ ಬ್ಯಾಟರಿ ಬೇರೆ ಕಡಿಮೆ ಇತ್ತು ಅದೂ ಅಲ್ಲದೆ ನಾ ಕೂತ ಸ್ಥಳದಿಂದ ಸೆರೆ ಹಿಡಿಯೋದು ತುಸು ಕಷ್ಟವಾಗ್ತಿತ್ತು.

ಹಾಗೋ ಹೀಗೆ ತಕ್ಕ ಮಟ್ಟಿಗೆ ತಗೆದಿದ್ದಾಯ್ತು. ಇನ್ನು ಅಲ್ಲಿಗೆ ಬಂದ ಹೆಣ್ಣು ಮಕ್ಕಳಿಗೆ ವಿಶೇಷವಾದ ಒಂದು ಅವಕಾಶ ಸಿಗುತ್ತೆ ಅದು ಯೋಧರು ಕವಾಯತು ನಡೆಸುವ ಆ ಜಾಗದಲ್ಲಿ ನಮ್ಮ ಭಾರತದ ತ್ರಿವರ್ಣ ಧ್ವಜ ಹಿಡಿದು ಒಂದು‌ ರೌಂಡ್ ಹಾಕುವ ಅವಕಾಶ. ಆ ಅವಕಾಶಕ್ಕೆ ತಾಮುಂದು ನಾ ಮುಂದು ಅಂತ ಹೊಗ್ತಾರೆ.

ವಂದೇ ಮಾತರಂ, ಭಾರತ್ ಮಾತಾಕಿ‌ ಜೈ

ವಂದೇ ಮಾತರಂ, ಭಾರತ್ ಮಾತಾಕಿ‌ ಜೈ

ನಮ್ಗೂ ತ್ರಿವರ್ಣ ಧ್ವಜ ಹಿಡಿದು ರೌಂಡ್ ಹಾಕಿವ ಅವಕಾಶ ಇದ್ದಿದ್ದರೆ ಚನ್ನಾಗಿರ್ತಿತ್ತು ಅನ್ನಿಸ್ತು. ಅಷ್ಟರಲ್ಲಿ ಸೂರ್ಯಸ್ತವಾಗುತಿದ್ದಂತೆ ಗಡಿಯಲ್ಲಿ ಹಾಕಿರೋ ಗೇಟ್ ಗಳನ್ನ ಓಪನ್ ಮಾಡಿದ್ರು ಯೋಧರು ತಮ್ಮ ವಿಶಿಷ್ಟ ಶೈಲಿಯ ಕಾವಾಯತು ಮಾಡತೊಡಗಿದರು. ಎರಡು ದೇಶದ ಕವಾಯತು ನೋಡುತ್ತಿದ್ದರೆ ಒಂದು ರೀತಿ ಕೆಣುಕುತಿದ್ದಾರಯೇ ಅನ್ನಿಸ ತೊಡಗುತ್ತೆ.

ನಮ್ಮ ಯೋಧರು ಏನೂ ಮಾತನಾಡದೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುತ್ತಿದ್ದಾರೆನೋ ಅನ್ನಿಸ್ತು. ತುಂಬಾ ಬಿರುಸಾಗಿ ಹಾಗೇ ವಿಭಿನ್ನವಾಗಿರೋ ಆ ಕವಾಯತನಲ್ಲಿ ತಲೆಯವರೆಗೂ ಕಾಲು ಮೇಲೆತ್ತುವ ಶೈಲಿ ಸಖತ್ ಇಷ್ಟವಾಗುತ್ತೆ..ಅಂತಿಮವಾಗಿ ತಮ್ಮ ತಮ್ಮ ದೇಶದ ಧ್ವಜಗಳನ್ನ ಸಮಸಮಾಂತರವಾಗಿ ಕೆಳಗಿಳಿಸಿದರು.

ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದಕ್ಕೆ ನಂಗೆ ಸಖತ್ ಖುಷಿ ಆಯ್ತು. ಸರಿಯಾದ ಜಾಗದಲ್ಲಿ ಕೂತಿದ್ದರೆ ಫೋಟೋ ಗಳನ್ನು ಚನ್ನಾಗಿತಗೆಯಬಹುದಿತ್ತು ಅನ್ನಿಸ್ತು ಅದೇ ಏನೇ ಇರಲಿ ಗಾಡಿ ನೋಡಿದ ತೃಪ್ತಿ ಜೊತೆಗೆ ಸಂತೋಷ ಕೊಡ ಆಯ್ತು. ಸಾಧ್ಯವಾದ್ರೆ ಈ ವಾಘಾ ಗಡಿಯತ್ತ ಒಮ್ಮೆ ಹೋಗಿ ಬನ್ನಿ.ವಂದೇ ಮಾತರಂ, ಭಾರತ್ ಮಾತಾಕಿ‌ಜೈ.🙏

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kappanahalli to Wagah border- a travelogue by a Kannada reporter Sharath Kappannahalli. Solo trips and unplanned tours are gaining popularity now a days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ