ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೇಗಿದ್ದೀರಿ ಅಟಲ್, ಹೌ ಆರ್ ಯು?

By * ಬಾಲರಾಜ್ ತಂತ್ರಿ, ಉಡುಪಿ
|
Google Oneindia Kannada News

Atal Bihari Vajpayee Birthday wishes
ಇಡೀ ದೇಶ ಕಂಡ ಮಹಾನ್ ಮುತ್ಸದ್ದಿ, ಪ್ರಚಂಡ ವಾಗ್ಮಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಇದೇ ಕ್ರಿಸ್ಮಸ್ (ಡಿ 25, 2010) ದಿನದಂದು 87 ವರ್ಷ ತುಂಬಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅಟಲ್ ಸದ್ಯ ಸಕ್ರಿಯ ರಾಜಕಾರಣದಿಂದ ಬಲುದೂರ ಉಳಿದಿದ್ದಾರೆ. ಸದಾ ಒಂದಲ್ಲೊಂದು ಸುದ್ದಿಯಲ್ಲಿರುತ್ತಿದ್ದ ಅಪ್ರತಿಮ ದೇಶಭಕ್ತ ಅಟಲ್ ಅವರ ರಾಜಕೀಯದ ಅದ್ಯಾಯ ಮುಗಿದಂತೆಯೇ.

ತಮ್ಮ ಅಧಿಕಾರದ ಅವಧಿಯಲ್ಲಿ ದೇಶವನ್ನು ಹೊಸದಿಸೆಯತ್ತ ಸಾಗಿಸಿದ್ದ ಅಟಲ್ ಅವರನ್ನು "ದಿ ಫೇಸ್ ಆಫ್ ಬಿಜೆಪಿ" ಎಂದೇ ಬಣ್ಣಿಸಲಾಗುತ್ತಿದ್ದರೆ ಇತರ ದೇಶಗಳಲ್ಲಿ "ದಿ ಇಂಡಿಯನ್ ಸ್ಟೇಟ್ಸ್ ಮ್ಯಾನ್" ಎಂದು ಕರೆಯಲಾಗುತ್ತಿತ್ತು. ಅವರ ರಾಜತಾಂತ್ರಿಕ ನಿಲವುಗಳು, ಸಂಸದೀಯ ಗಾಂಭೀರ್ಯಕ್ಕೆ ರಾಜಕೀಯ ವಿರೋಧಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುವುದು ಈ ದೇಶದ ಅಪರೂಪ ವಿದ್ಯಮಾನಗಳಲ್ಲೊಂದು.

ಕಾರ್ಯಕರ್ತರಿಂದ ಮತ್ತು ಪಕ್ಷಾತೀತವಾಗಿ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ "ಅಟಲ್ ಜಿ' 25.12.1924 ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಹುಟ್ಟಿದರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು.

ಬಿಜೆಪಿಯ ತಂದೆ : 1977ರಲ್ಲಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ 'ದಿ ಮೋಸ್ಟ್ ಅನ್ ಫಾರ್ಗೆಟಬಲ್' ಖ್ಯಾತಿಯ ಭಾಷಣ ನೀಡಿದ ವಾಜಪೇಯಿ ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಮಾರ್ಚ್ 1977ರಿಂದ ಜುಲೈ 1979ರವರೆಗೆ ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1980ರಿಂದ 1984 ಹಾಗೂ 1986ರಿಂದ 1993 ಮತ್ತು 1996ರಲ್ಲಿ ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ, 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಕೂಡ ಇವರು ಸೇವೆ ಸಲ್ಲಿಸಿದರು.

1996ರಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾದ ಇವರು 13 ದಿನಗಳ ಕಾಲ ಆಡಳಿತ ನಡೆಸಿದರೆ, ಅಕ್ಟೋಬರ್ 13, 1998ರಲ್ಲಿ ಎರಡನೆಯ ಬಾರಿಗೆ ಪ್ರಧಾನ ಮಂತ್ರಿಯಾದರು. ತಮ್ಮ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಪೋಖ್ರಾನ್ ಅಣು ಪರೀಕ್ಷೆ, ಭಾರತ ಪಾಕ್ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭ ತನ್ನ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು.

ತಮ್ಮ ಆಡಳಿತದ ಅವಧಿಯಲ್ಲಿ ನಡೆದ ಐಸಿ 814 ವಿಮಾನ ಅಪಹರಣ, ಉಗ್ರ ಮೌಲಾನ ಮಸೂದ್ ಅಜರ್ ಬಿಡುಗಡೆಗೆ ಖುದ್ದು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಪಯಣ, ಅಪಹರಣಗೊಂಡಿದ್ದ ಈ ವಿಮಾನ ಲಾಹೋರ್ ನಲ್ಲಿ ತೈಲ ತುಂಬಿಸಲು ಅವಕಾಶ ನೀಡಿದ ನಂತರ ಹದೆಗೆಟ್ಟ ಭಾರತ ಪಾಕ್ ಸಂಬಂಧ, 13.12.2001 ರಲ್ಲಿ ಪಾರ್ಲಿಮೆಂಟ್ ಮೇಲೆ ನಡೆದ ಆಕ್ರಮಣ ಮುಂತಾದ ಕಪ್ಪುಚುಕ್ಕೆಗಳನ್ನು ಕೂಡ ಅಟಲ್ ಎದುರಿಸಬೇಕಾಯಿತು.

ರಾಜಕಾರಣ ಮಾತ್ರವಲ್ಲದೆ ಕವಿಯೂ ಆಗಿರುವ ವಾಜಪೇಯಿ ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ. ಭಾರತದ ಹಿರಿಯಪ್ರಜೆ, ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ಧಿ ವಾಜಪೇಯಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ದಟ್ಸ್ ಕನ್ನಡ ಅಂತರ್ ಜಾಲ ತಾಣದ ಮೂಲಕ ತಲುಪಿಸಿ. [ಹುಟ್ಟುಹಬ್ಬ]

English summary
Greet former prime minister, seasoned politician, the Indian Statesman, " The face of BJP", "The most unforgettable" and most revered senior citizen Atal Bihari Vajpayee on his 87th birth day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X