ಗೋಹತ್ಯೆ ನಿಷೇಧಕ್ಕೆ ಮುಸ್ಲಿಮರ ಚಳವಳಿ

ಜೂನ್ 7ರಂದು ರಾಯ್‌ಪುರದಲ್ಲಿ ನಡೆದ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ತರಬೇತಿ ಶಿಬಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಸರಸಂಘಚಾಲಕರಾದ ಕು.ಸೀ.ಸುದರ್ಶನ್‌, ಛತ್ತೀಸ್‌ಘಡ್‌ನ ಮುಖ್ಯಮಂತ್ರಿ ಡಾ||ರಮಣ್ ಸಿಂಘ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಭಾಗವಹಿಸಿದ್ದರು.

ದೇಶದ ಸುಮಾರು 15 ರಾಜ್ಯಗಳಿಂದ ಬಂದಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಸುದರ್ಶನ್‌, ಬ್ರಿಟಿಷರು ತಮ್ಮ ಸ್ವಾರ್ಥಕ್ಕೋಸ್ಕರ ಹಿಂದೂಗಳು ಹಾಗು ಮುಸ್ಲಿಮರ ನಡುವೆ ವೈಷಮ್ಯ ತಂದರು. ಆದರೆ ನಾವು ಒಂದಾದರೆ ಯಾರ ಸ್ವಾರ್ಥ ಪ್ರೇರಿತ ಕುತಂತ್ರವೂ ನಡೆಯುವುದಿಲ್ಲ. ನಾವೆಲ್ಲರೂ ಸಮಾಜದಲ್ಲಿ ಶಾಂತಿ ಹಾಗೂ ಪರಸ್ಪರ ಪ್ರೀತಿಯನ್ನು ಬೆಳೆಸುವತ್ತ ಕಾರ್ಯೋನ್ಮುಖರಾಗಬೇಕು. ನಾವು ಉತ್ತಮ ಸಂಸ್ಕೃತಿಯ ಹಿನ್ನೆಲೆಯುಳ್ಳವರಿದ್ದೇವೆ. ನಮ್ಮ ನಿಮ್ಮೆಲ್ಲರ ಪೂರ್ವಜರು ಒಬ್ಬರೇ. ನಾವೆಲ್ಲರೂ ಒಂದಾಗಿ ವಿವಿಧತೆಯಲ್ಲಿ ಏಕತೆಯನ್ನು ಸಾಬೀತುಮಾಡೋಣ ಎಂದು ಕರೆ ನೀಡಿದರು.

ಈ ದೇಶದ ಮುಸ್ಲಿಮರು ಹೊರಗಿನಿಂದ ಬಂದವರಲ್ಲ. ಈ ದೇಶದ ಆಸ್ತಿಯೇ ಅವರೂ. ಪೂಜಾಪದ್ದತಿಯು ಭಿನ್ನತೆಯನ್ನು ಪಡೆದಿರಬಹುದು. ಶಾಂತಿಯನ್ನು ಸಾರುವ ಇಸ್ಲಾಂ ಧರ್ಮ ಹಿಂಸೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ. ಆದರೆ ಯಾವ ಧರ್ಮ ಸರ್ವಾಧಿಕಾರಿ ಧೋರಣೆ ತಳೆಯುತ್ತದೋ ಅದು ಹಿಂಸೆಗೆ ಕಾರಣವಾಗುತ್ತದೆ. ಕ್ರಮೇಣ ಅದು ತನ್ನ ತಿರುಳನ್ನು ಕಳೆದುಕೊಳ್ಳುತ್ತದೆ ಎಂದರು.

ಕೃಷಿ ಆಧಾರಿತ ಭಾರತದ ಬೆನ್ನೆಲುಬಾದ ಗೋವಿನ ಹತ್ಯೆಯನ್ನು ನಿಷೇಧಿಸಬೇಕು ಹಾಗೂ ಉಗ್ರವಾದ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ರಾಷ್ಟ್ರೀಯ ಮುಸ್ಲಿಂ ಮಂಚ್‌ನ ಉದ್ದೇಶ ಹಾಗೂ ಮುಂದಿನ ಯೋಜನೆಗಳನ್ನು ನಂತರ ಮಾತಾಡಿದ ಇಂದ್ರೇಶ್ ಕುಮಾರ್, ಮುಂದಿನ ದಿನಗಳಲ್ಲಿ ಮಂಚ್ ಭಯೋತ್ಪಾದನೆ ವಿರುದ್ಧದ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವತ್ತ ಕೆಲಸ ಮಾಡಲಿದೆ ಹಾಗೂ ಇನ್ನೂ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಮಹಿಳೆ ಹಾಗೂ ವಿದ್ಯಾರ್ಥಿಗಳ ರ್‍ಯಾಲಿಗಳನ್ನು ಯೋಜಿಸಲಿದೆ ಎಂದರು. ಈಗಾಗಲೇ 15 ಪೂರ್ಣಾವಧಿ ಕಾರ್ಯಕರ್ತರು ಹಗಲು-ರಾತ್ರಿ ಇದಕ್ಕೋಸ್ಕರ ಶ್ರಮಿಸುತ್ತಿದ್ದಾರೆ ಎಂದರು.

ಮಂಚ್‌ನ ಕಾರ್ಯಕರ್ತರು ಗೋಹತ್ಯೆ ನಿಷೇಧದ ಕಾನೂನನ್ನು ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ 5 ಲಕ್ಷ ಮುಸ್ಲಿಮರ ಸಹಿ ಸಂಗ್ರಹಿಸಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಗೆ ಸಲ್ಲಿಸಿದರು. ಅನ್ಸಾರಿಯವರ ಸಲಹೆಯ ಮೇರೆಗೆ ಇನ್ನೂ 10 ಲಕ್ಷ ಹೆಚ್ಚಿನ ಮುಸ್ಲಿಮರ ಸಹಿ ಸಂಗ್ರಹಿಸಿ ಕೊಡುವುದಾಗಿ ಪ್ರಮಾಣ ಮಾಡಿದರು.

ಇದೇ ಸಮಯದಲ್ಲಿ ಡಿಯೋಬ್ಯಾಂಡ್ ಮದರಸಾ, ಮುಸ್ಲಿಮರು ಗೋವನ್ನು ಹಾಗೂ ಎತ್ತನ್ನು ಕೊಲ್ಲುವುದರ ವಿರುದ್ಧ ಫತ್ವಾ ಹೊರಡಿಸಿದೆ. ದರುಲ್ ಉಲ್ಲಮ್ ಸಹ ಫತ್ವಾ ಹೊರಡಿಸುವುದರ ಜತೆಗೆ ದೇವರನ್ನು ನಂಬುವ ಹಿಂದುಗಳು ಕಾಫಿರರಲ್ಲ ಎಂಬುದನ್ನು ಸಾರಿ ಹೇಳಿದೆ. ತನ್ವೀರ್ ಅಹಮದ್, ಮೊಹಮ್ಮದ್ ಅಫ್ಜಲ್, ಸಲಬತ್ ಖಾನ್ ಹಾಗು ಇನ್ನಿತರರನ್ನು ಮಂಚ್‌ನ ವಿವಿಧ ಹುದ್ದೆಗಳಿಗೆ ಮುಖಂಡರನ್ನಾಗಿ ಆಯ್ಕೆ ಮಾಡಲಾಯಿತು.

(ಮೂಲ : ದಿ ಆರ್ಗನೈಜರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+