• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರ್ಜಾಲದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಿ

By Staff
|
ಇಂದಿನ ಆಧುನಿಕ ಜೀವನದಲ್ಲಿ ಕರ್ಚೀಫು ಕೊಳ್ಳುವುದರಿಂದ ಹಿಡಿದು ರೈಲು ಮುಂಗಡ ಕಾಯ್ದಿರಿಸುವಿಕೆ, ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಿಕೆ ಮೊದಲಾದ ಕ್ರಿಯೆಗಳು ಇಂಟರ್ನೆಟ್ ಮುಖಾಂತರವೇ ಜರುಗುತ್ತವೆ. ಇಲ್ಲಿ ವ್ಯವಹರಿಸುವಾಗ ನಮಗರಿವಿಲ್ಲದಂತೆಯೇ ಅನೇಕ ರಹಸ್ಯ ಮಾಹಿತಿಗಳನ್ನು ನಾವು ವರ್ಗಾಯಿಸಿರುತ್ತೇವೆ. ಇಂಟರ್ನೆಟ್ಟಿನಲ್ಲಿ ಜನ ಹೇಗೆ ಮೋಸ ಹೋಗುತ್ತಾರೆ, ಮೋಸ ಹೋದರೆ ಜರುಗಿಸಬಹುದಾದ ಕಾನೂನು ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಪ್ರಶಾಂತ್ ಮಿರ್ಲೆ ಇಂಟರ್ನೆಟ್ ಕುರಿತಂತೆ ಕೆಲ ಅಗತ್ಯ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಾರೆ.

ನಿರ್ದಿಷ್ಟ ವಿಷಯಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿರುವಾಗ ನಮಗೆ ಹಲವು ವೆಬ್ ಪರದೆಗಳು ಚುಟುಕಾಗಿ ಸ್ವಾಗತ ಬಯಸುತ್ತಿರುತ್ತವೆ ಅಲ್ಲವೇ! ಅಂತೆಯೇ ಒಂದು ಪರದೆಯನ್ನು ತೆರೆದರೆ ಇನ್ನೂ ಕೆಲವು ಪರದೆಗಳು ಆಕರ್ಷಕಮಯವಾಗಿ ನಮ್ಮ ಐಚ್ಛಿಕತೆಗೆ ಅಣಿಯಿಟ್ಟಂತೆ ಸ್ವಾಗತಿಸುತ್ತಿರುತ್ತವೆ, ಉದಾ: www.google.com ವೆಬ್ ಪರದೆಯನ್ನೇ ನೋಡಬಹುದು. ಇದರಲ್ಲಿ ಬಳಕೆದಾರನಿಗೆ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡುವುದನ್ನು ಗಮನಿಸಬಹುದು. ಹಾಗೆಯೇ ನಿಮ್ಮ ಅಂತರ್ಜಾಲದ ಬಳಕೆಯಲ್ಲಿ ಇನ್ನೂ ಕೆಲವು ವೆಬ್ ತಾಣಗಳಲ್ಲಿ ಹುಡುಕಾಟ ನಡೆಸುವಾಗ ಸ್ವರ್ಧಾತ್ಮಕವಾಗಿ ಮತ್ತು ಆಕರ್ಷಿಣಿಯವಾಗಿ ಚುಟುಕು ಮಾಹಿತಿಗಳೊಂದಿಗೆ ತಮ್ಮ ವೆಬ್ ತಾಣಗಳಿಗೆ ಸ್ವಾಗತ ಬಯಸುತ್ತಿರುವುದನ್ನು ಕಾಣಬಹುದು.

ಹಾಗಾದರೆ ಸ್ವಾಗತ ಬಯಸುವ ಎಲ್ಲಾ ವೆಬ್ ತಾಣಗಳ ಮಾಹಿತಿಯನ್ನು ಎಷ್ಟು ಸ್ತುತ್ಯಾರ್ಹ, ಇವುಗಳ ಬಳಕೆಯಲ್ಲಿ ಮೋಸಕ್ಕೆ ಒಳಪಡುವ ಸಾಧ್ಯತೆ ಇದೆಯೇ? ಹೀಗೆ ಇನ್ನೂ ಹಲವು ಪ್ರಶ್ನೆಗಳು ನಮ್ಮ ಮುಂದೆ ಎದುರಾಗುವುದು ಸಹಜ. ಆದರೆ ಸಾಮಾನ್ಯ ಬಳಕೆದಾರನು ಈ ವೆಬ್‌ತಾಣಗಳ ರಚನೆ ಮತ್ತು ಇವುಗಳನ್ನು ಸಾರ್ವಜನಿಕ/ ಖಾಸಗಿಯಾಗಿ ಬಳಸುವಂತೆ ವ್ಯವಸ್ಥೆಗೊಳಿಸುವುದು ಮತ್ತು ಇವುಗಳ ಮೇಲಿನ ಕಾನೂನುಬದ್ದತೆಯ ಹಿನ್ನೆಲೆಯನ್ನು ಪ್ರಾಥಮಿಕವಾಗಿ ಅರ್ಥೈಸಿಕೊಳ್ಳುವುದು ಒಳಿತು.

ಇಂದು ಅಂತರ್ಜಾಲದಲ್ಲಿ ಯಾವುದೇ ವಿಷಯಗಳನ್ನು ಅದಕ್ಕೆ ಸಂಬಂಧಿಸಿದ ಶಿರೋನಾಮೆಗಳನ್ನು ಹೊರತುಪಡಿಸಿ ಹುಡುಕಾಟ ನಡೆಸುವುದು ಬರಿ ಸಮಯವ್ಯರ್ಥವಾಗುತ್ತದೆಯೇ ಹೊರತು ಸಂಬಂಧಿಸಿದ ವಿಷಯ ದೊರಕಿಸಿಕೊಳ್ಳುವುದು ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯನ್ನು ಡೊಮೇನ್ ಹೆಸರುಗಳ ಅಥವಾ ಏಕರೀತಿಯ ಸಂಪನ್ಮೂಲಗಳ ಇರುವಿಕೆಯನ್ನು ಕಂಡುಹಿಡಿಯುವ (Uniform Resource Locater-URL) ಸಾಧನಗಳ ಅನುಪಸ್ಥಿತಿಯಲ್ಲಿ ಎದುರಿಸಬೇಕಾಗುತ್ತದೆ. ಉದಾ: www.google.com ಅಥವಾ www.yahoo.com ಇತ್ಯಾದಿ.

ಈ ಡೊಮೇನ್ ಹೆಸರುಗಳು ಅಂತರ್ಜಾಲದ ಸೈಟ್‌ಗಳ ವಿಳಾಸವಾಗಿರುತ್ತದೆ. ಅಂದರೆ ವ್ಯಕ್ತಿಯ ಮೊಬೈಲ್ ಸಂಖ್ಯೆಯಿದ್ದಂತೆ. ಪ್ರತಿಯೊಂದು ಡೊಮೇನ್ ಹೆಸರುಗಳು ಅವುಗಳದೇ ಆದ ಪ್ರತ್ಯೇಕ ಅಂತರ್ಜಾಲದ ನಿಯಮಗಳ ನಿಯಂತ್ರಣ (Internet Protocol - IP) ಸಂಖ್ಯೆಯನ್ನು ಹೊಂದಿರುತ್ತವೆ (ಉದಾ: 88.93.948.40). ಇವುಗಳನ್ನು ಡೊಮೆನ್ ಹೆಸರುಗಳ ವ್ಯವಸ್ಥೆಗಳು (Domain Name Systems - DTS) ಭಾಷಾಂತರಿಸುತ್ತವೆ.

ಈ ಡೊಮೇನ್ ಹೆಸರುಗಳು ಯಾವಾಗಲು ಯೂ.ಆರ್.ಎಲ್ ಗಳ ಒಂದು ಭಾಗವಾಗಿರುತ್ತವೆ, ಹಾಗಾಗಿಯೇ ಈ ಯೂ.ಆರ್.ಎಲ್ ಗಳು ಯಾವ ವೆಬ್ ತಾಣಗಳಿಗೆ ಯಾರನ್ನು ಕೇಳಿಕೊಳ್ಳಬೇಕು, ಹೇಗೆ ಕೇಳಿಕೊಳ್ಳಬೇಕು ಎಂಬುದನ್ನು ತೋರಿಸುತ್ತದೆ. ಇದರಿಂದಲೇ ಯಾವುದೇ ಡೊಮೇನ್ ಗಳ ಹೆಸರು ಇಲ್ಲದೆ ಯಾವುದೇ ಮಾಹಿತಿಯನ್ನು ಪಡೆಯುವುದಾಗಲಿ ಅಥವಾ ಇ-ಮೇಲ್ ವರ್ಗಾವಣೆಯಾಗಲಿ ಸಾಧ್ಯವಿಲ್ಲ. ವಿವಿಧ ಮಾದರಿಯ ಡೊಮೇನ್ ಹೆಸರುಗಳು: ಸಾಮಾನ್ಯವಾಗಿ ಈ ಡೊಮೇನ್ ಹಸರುಗಳಲ್ಲಿ ಉನ್ನತ ಹಂತದ ಶ್ರೇಣಿಯವು ಮತ್ತು ಎರಡನೇ ಹಂತದ ಶ್ರೇಣಿಯವು ಎಂಬ ಎರಡು ರೀತಿಯದ್ದಾಗಿರುತ್ತವೆ. ಮೊದಲನೇಯದು ಉನ್ನತ ಹಂತದ ಶ್ರೇಣಿಯ ಡೊಮೇನ್ ಹೆಸರುಗಳು. ಇವುಗಳು ಯಾವಾಗಲು ಚುಕ್ಕಿಯ (.") ನಂತರ ಕಾಣಿಸಿಕೊಳ್ಳುತ್ತವೆ ಮತ್ತು ಈ ಡೊಮೇನ್ ಹೆಸರುಗಳನ್ನು ವಿವಿಧ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಉದಾ: .com (ಹೆಚ್ಚು ಬಳಕೆಯಲ್ಲಿರುವ ಸಾಮಾನ್ಯ ಡೊಮೆನ್ ಹೆಸರು), .org (ಸರ್ಕಾರೇತರ ಸ್ವಾಯತ್ತತ ಸಂಸ್ಥೆಗಳಿಗಿರುವ ಡೊಮೇನ್ ಹೆಸರು), .org (ನಾಲ್ಕು ವರ್ಷಗಳಿಗಿಂತ ಮೇಲ್ಪಟ್ಟ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗಿರುವ ಡೊಮೇನ್ ಹೆಸರು) .net (ಅಂತರ್ಜಾಲ ಸಂಬಂಧಿಸಿದ ಸಂಸ್ಥೆಗಳ ಸಂಪರ್ಕಗಳಿಗೊಸ್ಕರ ಇರುವ ಡೊಮೇನ್ ಹೆಸರು), .gov (ಸರ್ಕಾರಿ ಸಂಸ್ಥೆಗಳಿಗಿರುವ ಡೊಮೇನ್ ಹೆಸರು) ಮತ್ತು .bizz, .info ಇತ್ತಿಚೇಗೆ ಬಳಕೆಗೆ ಬಂದಿರುವ ಡೊಮೇನ್ ಹೆಸರುಗಳು. ಇಷ್ಟಲ್ಲದೇ, ಪ್ರತಿಯೊಂದು ರಾಷ್ಟ್ರಗಳಿಗೆ ಉನ್ನತ ಹಂತದ ಶ್ರೇಣಿಯ ಡೊಮೇನ್ ಹೆಸರುಗಳನ್ನು ಬಳಸಲಾಗುತ್ತದೆ. ಉದಾ: ಭಾರತವನ್ನು ಸೂಚಿಸಲು '.in" ಪಾಕಿಸ್ತಾನವನ್ನು ಸೂಚಿಸಲು '.pak " ಇತ್ಯಾದಿ.

ಎರಡನೇ ಹಂತದ ಶ್ರೇಣಿಯ ಡೊಮೇನ್ ಹೆಸರುಗಳು ಉನ್ನತ ಹಂತದ ಶ್ರೇಣಿಯ ಡೊಮೇನ್ ಹೆಸರುಗಳು ಐ.ಪಿ ಸಂಖ್ಯೆಯನ್ನು ಬಳಸಬಹುದಾಗಿದೆ, ಇವುಗಳನ್ನು ಸಾಮಾನ್ಯವಾಗಿ ಸಂಸ್ಥೆಗಳು ತಮ್ಮ ಇತರೇ ವ್ಯವಹಾರಗಳ ಅಥವಾ ವಿಳಾಸಗಳ ಅಥವಾ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತದೆ ಮತ್ತು ಇವುಗಳ ಸರ್ವರ್ ಸಂಪರ್ಕ ಒಂದೇ ಆಗಿರುತ್ತದೆ. ಉದಾ: ನಮ್ಮ 'kannada.oneindia.com", 'hindi.oneindia.com" ವೆಬ್ ತಾಣಗಳ ಹೆಸರು ಎರಡನೇ ಹಂತದ ಶ್ರೇಣಿಯ ಡೊಮೆನ್ ಹೆಸರುಗಳಾದರೆ 'www.oneindia.com" ಉನ್ನತ ಹಂತದ ಶ್ರೇಣಿಯ ಡೊಮೆನ್ ಹೆಸರಾಗಿರುತ್ತದೆ.

ಇನ್ನೊಂದು ಮುಖ್ಯ ಸಂಗತಿಯೆಂದರೆ ಒಂದೇ ಡೊಮೇನ್ ಹೆಸರು ಪುನರಾವರ್ತನೆಯಾಗಲು ಸಾಧ್ಯವಿಲ್ಲ. ಉದಾ: 'Lee Cooper Company" (ಶೂಗಳನ್ನು ತಯಾರಿಸಿ ಮಾರಾಟ ಮಾಡುವ ಸಂಸ್ಥೆಯಾಗಿರುತ್ತದೆ) 'Lee"(ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುವ ಸಂಸ್ಥೆಯಾಗಿರುತ್ತದೆ) ಈ ಎರಡೂ ಸಂಸ್ಥೆಗಳು 'lee.com" ಡೊಮೆನ್ ಹೆಸರನ್ನು ಹೊಂದಲು ಸಾಧ್ಯವಿಲ್ಲ ಇದರಲ್ಲಿ ಯಾವುದಾದರೊಂದು ಸಂಸ್ಥೆ ಇದನ್ನು ಬಳಸಬಹುದಾಗಿದೆ.

ಇಂತಹ ವ್ಯವಸ್ಥಿತ ವೆಬ್ ತಾಣಗಳ ಬಳಕೆಯಲ್ಲಿ ನಾವು ಹಲವು ರೀತಿಯಲ್ಲಿ ತಬ್ಬಿಬ್ಬಾಗಬಹುದು ಅಥವಾ ವಂಚನೆಗೆ ಒಳಗಾಗಬಹುದು ಅಥವಾ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು. ಅಂತಹವುಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಕಾಣುವಂತೆ ಸಿದ್ದಪಡಿಸಿದ ವೆಬ್‌ತಾಣಗಳ ವ್ಯತ್ಯಾಸವನ್ನು ಗುರುತಿಸಲಾಗದೆ ಬಳಕೆದಾರ ತನ್ನ ವೈಯಕ್ತಿಕ ಮಾಹಿತಿಗಳಾದ ಹೆಸರು, ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ, ಅಕೌಂಟ್ ಮಾಹಿತಿಗಳು ಇತ್ಯಾದಿಗಳನ್ನು ಒದಗಿಸಿಕೊಡುವುದು ಅಥವಾ ಕೆಲಸದ ಆಮಿಷವೊಡ್ಡುವ ಅಥವಾ ಲಾಟರಿ ವಿಜೇತರೆಂದು ಘೋಷಿಸಿ ಅಕ್ರಮ ರೀತಿಯಿಂದ ಹಣ ವಂಚಿಸಲು ವೆಬ್ ತಾಣಗಳು ಅನೇಕವಿವೆ. ಅವು ಕಳುಹಿಸುವ ಇ-ಮೇಲ್‌ಗಳಿಗೆ ಪ್ರತಿಕ್ರಿಯಿಸಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಒದಗಿಸಿ ವಂಚನೆಗೆ ಒಳಗಾಗಬಹುದು ಅಥವಾ ವೆಬ್ ತಾಣಕ್ಕೆ ದುರುದ್ದೇಶ ಪೂರಿತವಾಗಿ ಸೊಂಕುಗಳನ್ನು (ವೈರಸ್‌ಗಳನ್ನು) ಬರುವಂತೆ ಮಾಡುವುದು. ಒಟ್ಟಾರೆ ಇಂತಹ ಕೃತ್ಯಗಳು ಹಲವು ವೈವಿಧ್ಯತೆಯಿಂದ ಕೂಡಿರುವಂತಹವುಗಳಾಗಿರುತ್ತವೆ.

ಮುಂದಿನ ಲೇಖನದಲ್ಲಿ ಈ ಅಪರಾಧಗಳ ವೈವಿದ್ಯತೆ, ಇವುಗಳಿಗೆ ಸಂಬಂಧಿಸಿದ ಕಾನೂನುಗಳನ್ನು, ಕಾನೂನಿನ ವ್ಯಾಪ್ತಿಯಿಂದ ನುಣುಚಿಕೊಳ್ಳುತ್ತಿರುವ ಪ್ರಸಂಗಗಳು ಮತ್ತು ಇಂತಹ ಕೃತ್ಯಗಳ ಬಗ್ಗೆ ಬಳಕೆದಾರನು ವಹಿಸಬೇಕಾದ ಎಚ್ಚರಿಕೆಯ ಮಾಹಿತಿಗಳನ್ನು ಚರ್ಚಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more