ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?

By Staff
|
Google Oneindia Kannada News

ಸಲಿಂಗ ಕಾಮ ಮತ್ತು ಅದರ ಕುರಿತು ದೆಹಲಿ ಹೈರ್ಕೋರ್ಟ್ ತೀರ್ಪು ಈಗ ದೇಶದಾದ್ಯಂತ ಚರ್ಚೆಯ ವಸ್ತುವಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಸಲಿಂಗ ಕಾಮ ಹಿಂದೆಯೂ ಇತ್ತು ಇಂದೂ ಇದೆ, ಮುಂದೆಯೂ ಇರುತ್ತದೆ. ಭಾರತದಲ್ಲಿ ಸಲಿಂಗಿಗಳು ತಮ್ಮ ಉತ್ತಮ, ಸಮಾನ ಗೌರವಯುತ ಬದುಕಿಗಾಗಿ ಹೋರಾಟಕ್ಕಿಳಿದಿದ್ದು ಇತ್ತೀಚಿನ ವರ್ಷಗಳಲ್ಲೆ. ಇಷ್ಟಕ್ಕೂ ಸಲಿಂಗಿಗಳು ಸಂಘಟಿತರಾಗಿ ಹೋರಾಡಲು ಕಾರಣ ಯಾವುದಿರಬಹುದು?

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು? ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?

ಎಚ್.ಐ.ವಿ/ಏಡ್ಸ್ ಸೋಂಕಿನ ಇತಿಹಾಸ ನೋಡಿದಾಗ ಈ ಸೋಂಕು ಸಲಿಂಗಿಗಳಲ್ಲಿ ಮೊದಲು ಕಾಣಿಸಿಕೊಂಡಿತ್ತು ಎಂದು ತಿಳಿದು ಬರುತ್ತದೆ. ಯಾವಾಗ ಜಗತ್ತಿನಾದ್ಯಂತ ಎಚ್.ಐ.ವಿ /ಏಡ್ಸ್ ತೀವ್ರತರ ಪರಿಣಾಮಗಳನ್ನು ಬೀರತೊಡಗಿತೋ ಅದರ ಪರಿಣಾಮ ಭಾರತದ ಮೇಲೆ ನೀರೀಕ್ಷೆಗೂ ಮೀರಿ ಉಂಟುಮಾಡಿತ್ತು. ಭಾರತದಲ್ಲಿ ಎಚ್ ಐ ವಿ /ಏಡ್ಸ್ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹೆಚ್ಚು ಅಪಾಯಕಾರಿ ಗುಂಪುಗಳಲ್ಲಿ ಸಲಿಂಗಿಗಳ ಗುಂಪು ಒಂದು. ಸಲಿಂಗಿಗಳು ನೈಸರ್ಗಿಕವಲ್ಲದ ಮಾರ್ಗದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವದರಿಂದ ಆ ಭಾಗಗಳಲ್ಲಿ ಗಾಯಗಳಾಗಿ ರಕ್ತಸ್ರಾವ ಸಾಧ್ಯತೆ ಜಾಸ್ತಿ ಇರುತ್ತದೆ. ಇದರಿಂದ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ಒಬ್ಬ ಸಂಗಾತಿಯಿಂದ ಇನ್ನೊಬ್ಬ ಸಂಗಾತಿಗೆ ಎಚ್ ಐ ವಿ /ಏಡ್ಸ್ ಸೋಂಕು ತಗಲುವ ಸಂಭವ ಹೆಚ್ಚು.

ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?

ಸಲಿಂಗಿಗಳು ಬಹುಜನರೊಡನೆ ಲೈಂಗಿಕ ಸಂಬಂಧ ಹೊಂದಿರುವುದರಿಂದ, ಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ ಮಾಡುವುದರಿಂದ ಲೈಂಗಿಕತೆಗೆ ಸಂಬಂಧಿಸಿದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಭಾರತದಲ್ಲಿ ಸಲಿಂಗಕಾಮಕ್ಕೆ ನಿಷೇಧವಿದ್ದುದರಿಂದ ಸಲಿಂಗಿಗಳಿಗೆ ಲೈಂಗಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸೇವೆಯನ್ನು ಆಸ್ಪತ್ರೆಗಳಲ್ಲಿ ಮುಕ್ತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅವರಲ್ಲಿ ಎಚ್ ಐ ವಿ /ಏಡ್ಸ್ ಹರಡುವದನ್ನು ತಡೆಗಟ್ಟುವ ಪ್ರಯತ್ನಕ್ಕೆ ಸಾಕಷ್ಟು ತೊಡಕುಗಳಾಗುತ್ತಿತ್ತು.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

ಭಾರತಕ್ಕೆ ಏಡ್ಸ್ ತಡೆಗಟ್ಟುವ ಹೆಸರಿನಲ್ಲಿ ಕೋಟ್ಯಂತರ ಡಾಲರ್ ಗಳು ಸರ್ಕಾರೇತರ ಸಂಸ್ಥೆಗಳಿಗೆ ಹರಿದುಬರುತ್ತಿದೆ. ಹಣ ಕೊಡುವ ವಿದೇಶಿ ಏಜನ್ಸಿಗಳು ಭಾರತದಲ್ಲಿ ಹೆಚ್ಚು ಅಪಾಯಕಾರಿ ಗುಂಪು ಎಂದು ಲೈಂಗಿಕ ವೃತ್ತಿ ನಿರತರು ಮತ್ತು ಸಲಿಂಗಿಗಳ ಗುಂಪುಗಳ ಸಂಘಟನೆಗೆ ಯಥೇಚ್ಚ ಹಣ ವ್ಯಯ ಮಾಡತೊಡಗಿವೆ. ಇದರ ಪರಿಣಾಮ ದೇಶದ ಪ್ರಮುಖ ನಗರಗಳಲ್ಲಿ ಸಲಿಂಗಿಗಳ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ಸಲಿಂಗ ಕಾಮವನ್ನು ಮಾನ್ಯ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾರಂಬಿಸಿದವು. ಭಾರತಕ್ಕೆ ಎಚ್.ಐ.ವಿ/ ಏಡ್ಸ್ ಚಿಕಿತ್ಸೆಗೆ ವಿದೇಶದಿಂದ ಹಣ ಹರಿದು ಬರುವ ಪೂರ್ವದಲ್ಲಿ ಈ ಸಂಘಟನೆಗಳ ಬಗ್ಗೆಯಾಗಲಿ ಈ ಗುಂಪಿನ ಬಗ್ಗೆಯಾಗಲಿ ಸಾರ್ವಜನಿಕವಾಗಿ ಪ್ರಚಾರ ಅಥವಾ ತಿಳಿವಳಿಕೆಗಳು ಅಷ್ಟಕಷ್ಟೆಯಿತ್ತು. ನಂತರದ ವರ್ಷಗಳಲ್ಲಿ ದೇಶದಾದ್ಯಂತ ಸಲಿಂಗಿಗಳು ಮೆರವಣಿಗೆ ನಡೆಸುವದರ ಮೂಲಕ ಸರಕಾರದ, ಸಾರ್ವಜನಿಕರ ಗಮನ ಸೆಳೆಯತೊಡಗಿದವು. ಸುದೀರ್ಘ ಕಾನೂನಿನ ಹೋರಾಟ ಸಹ ನಡೆಸಿದವು. ಇದರ ಪರಿಣಾಮವೇ ಮೊನ್ನೆ ದೆಹಲಿ ಹೈಕೋರ್ಟ್ ನೀಡಿದ ತೀರ್ಪು.

ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

ಭಾರತ ಸಾಮಾಜ ಸಲಿಂಗ ಕಾಮವನ್ನು ಒಪ್ಪಿಕೊಳ್ಳುತ್ತದೆ ಎಂದು ನಿರೀಕ್ಷಿಸಿಸುವುದು ತಪ್ಪಾದೀತು. ಒಂದು ರೀತಿ ಸಲಿಂಗಿಗಳು ಬಹಿಷ್ಕ್ರತರಾಗಿ ಜೀವನ ನಡೆಸಿರುವುದೇ ಜಾಸ್ತಿ. ಭಾರತೀಯ ಮಡಿವಂತಿಕೆಯ (ಆರೋಗ್ಯಕರ) ಮನಸ್ಸುಗಳು ಇನ್ನೂ ಇದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಹಾಗಾಗಿ ಒಬ್ಬ ಸಲಿಂಗಕಾಮಿ ಅವನ ಅಥವಾ ಅವಳ ಕುಟುಂಬದ ಪ್ರೀತಿ ವಾತ್ಸಲ್ಯಗಳ ನಡುವೆ ಬೆಳೆಯುವ ಸಾಧ್ಯತೆ ತೀರ ಕಡಿಮೆ. ಆದ್ದರಿಂದ ಅವರು ನಡತೆಯಲ್ಲಿ ಒರಟರಂತೆ ಕಂಡು ಬಂದರೆ ಆಶ್ಚರ್ಯ ಪಡೆಯಬೇಕಾಗಿಲ್ಲ. ಸಾಮಾಜಿಕ ಬಹಿಷ್ಕಾರದ ಮತ್ತು ಕಾನೂನಿನ ಹೆದರಿಕೆಯಿಂದ ಬಹುಸಂಖ್ಯೆಯಲ್ಲಿ ಸಲಿಂಗಿಗಳು ತಮ್ಮ ಸ್ಥಿತಿಯನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇದರ ಪರಿಣಾಮ ಎಚ್. ಐ.ವಿ /ಏಡ್ಸ ತಡೆಗಟ್ಟುವ ಕಾರ್ಯಕ್ರಮಕ್ಕೆ ಹಿನ್ನೆಡೆ ಉಂಟಾಗಿರುವುದು.

ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ

ಇಂದು ದೇಶದಾದ್ಯಂತ ಸಲಿಂಗಿಗಳ ಅನೇಕ ಸಂಘಟನೆಗಳು ಹುಟ್ಟಿಕೊಂಡವಷ್ಟೇ ಅಲ್ಲ ಹಕ್ಕುಗಳಿಗಾಗಿ ಹೋರಾಟ ಮಾಡತೊಡಗಿವೆ. ಎಚ್ ಐ.ವಿ /ಏಡ್ಸ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮವರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ, ಉತ್ತಮ ಲೈಂಗಿಕ ಆರೋಗ್ಯದ ಬಗ್ಗೆ, ಚಿಕಿತ್ಸೆ ಬಗ್ಗೆ ಪರಿಣಾಮಕಾರಿ ಕೆಲಸ ಮಾಡತೊಡಗಿವೆ. ಇದರಿಂದ ಸಾಕಷ್ಟು ಸಲಿಂಗಿಗಳು ಮುಂದೆ ಬಂದು ಚಿಕಿತ್ಸೆ , ಮಾಹಿತಿ ತೆಗೆದುಕೊಳ್ಳಲು ಧೈರ್ಯ ಮಾಡಿದ್ದಾರೆ. ಈ ಒಂದು ದಶಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ರಹತ್ ರ್‍ಯಾಲಿಗಳನ್ನು ನಡೆಸುವದರ ಮೂಲಕ ಸಾರ್ವಜನಿಕರ ಮತ್ತು ಸರಕಾರಗಳ ಗಮನಗಳನ್ನು ಸಹ ಸೆಳೆದಿವೆ. ಒಟ್ಟಿನಲ್ಲಿ ಎಚ್.ಐ.ವಿ /ಏಡ್ಸ್ ಸೋಂಕೇ ಈ ಗುಂಪನ್ನು ಸಂಘಟಿತವಾಗಲು ನೆರವಾಯಿತು. ಅಂದ ಹಾಗೇ ನನಗೆ ತಿಳಿದಂತೆ ಸಲಿಂಗಿಗಳು ತಮ್ಮನ್ನು ಸಲಿಂಗಿಗಳು ಎಂದು ಕರೆಯಿಸಿಕೊಳ್ಳಲು ಇಷ್ಟಪಡುವದಿಲ್ಲ ಎಂದು ಕೇಳಿದ್ದೇನೆ. ಹಾಗಾಗಿ ಅವರನ್ನು ಲೈಂಗಿಕ ಅಲ್ಪಸಂಖ್ಯಾತರು ಎಂದು ಕರೆಯುತ್ತಿದ್ದಾರೆ.

ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?

*ಸಲಿಂಗ ಕಾಮ ಮಾನ್ಯತೆಯ ಅನುಕೂಲಗಳು:
ಸಲಿಂಗಿಗಳು ಸಮಾಜದಲ್ಲಿ ಮುಕ್ತವಾಗಿ ಇತರರಂತೆ ಜೀವಿಸಬಹುದು. ಆರೋಗ್ಯ ಸಂಬಂಧಿ ಸೇವೆಗಳನ್ನು ಪಡೆಯಲು ಅವರಿಗೆ ಯಾವುದೇ ರೀತಿಯ ಹಿಂಜರಿಕೆ ಇರಲಾರದು. ಸಲಿಂಗಿಗಳನ್ನು ಗುರುತಿಸುವಿಕೆ, ಎಚ್.ಐ.ವಿ/ಏಡ್ಸ್ ಸಂಬಂಧ ಮಾಹಿತಿಗಳನ್ನು, ಆರೋಗ್ಯ ಸೇವೆಗಳನ್ನು ಒದಗಿಸಲು ಯಾವುದೇ ಅಡೆ ತಡೆಗಳು ಸರ್ಕಾರೇತರ ಸಂಸ್ಥೆಗಳಿಗೆ ಉಂಟಾಗಲಾರದು. ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ, ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

*ಸಲಿಂಗ ಕಾಮ ಮಾನ್ಯತೆಯ ಅನಾನುಕೂಲಗಳು:
ಮುಕ್ತ ಲೈಂಗಿಕತೆ ಹೆಚ್ಚಾಗಬಹುದು. ಲೈಂಗಿಕ ಆರೋಗ್ಯದಲ್ಲಿ ಏರು ಪೇರುಗಳಾಗಬಹುದು. ಹೆಚ್ಚಿನ ಜನ ಸಲಿಂಗ ಕಾಮದ ಕಡೆ ಆಕರ್ಷಿತರಾಗಬಹುದು. ಒಂದೇ ಲಿಂಗದವರೂ ಒಟ್ಟಿಗೆ ಇದ್ದರೂ ಸಂಶಯ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ಹೆಚ್ಚಾಗಬಹುದು. ಇನ್ನು ಏನೇನು ಕಾದಿದೆಯೋ, ಕಾದು ನೊಡಬೇಕು.

English summary
ಸಲಿಂಗ ಕಾಮ ಮತ್ತು ಅದರ ಕುರಿತು ದೆಹಲಿ ಹೈರ್ಕೋರ್ಟ್ ತೀರ್ಪು ಈಗ ದೇಶದಾದ್ಯಂತ ಚರ್ಚೆಯ ವಸ್ತುವಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಸಲಿಂಗ ಕಾಮ ಹಿಂದೆಯೂ ಇತ್ತು ಇಂದೂ ಇದೆ, ಮುಂದೆಯೂ ಇರುತ್ತದೆ. ಭಾರತದಲ್ಲಿ ಸಲಿಂಗಿಗಳು ತಮ್ಮ ಉತ್ತಮ, ಸಮಾನ ಗೌರವಯುತ ಬದುಕಿಗಾಗಿ ಹೋರಾಟಕ್ಕಿಳಿದಿದ್ದು ಇತ್ತೀಚಿನ ವರ್ಷಗಳಲ್ಲೆ. ಇಷ್ಟಕ್ಕೂ ಸಲಿಂಗಿಗಳು ಸಂಘಟಿತರಾಗಿ ಹೋರಾಡಲು ಕಾರಣ ಯಾವುದಿರಬಹುದು?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X