ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಕಾರ್ನಾಡ್ ಕೊರಳಿಗೆ ತಮಿಳು ಮಾಲೆ

By Staff
|
Google Oneindia Kannada News

Girish Karnad Bags Karunanidhi Award
ಚೆನ್ನೈ, ಜ. 8 : ತಮಿಳುನಾಡು ಪ್ರಕಾಶಕರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಕನ್ನಡ ಸಾಹಿತಿ, ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಹೆಸರಲ್ಲಿ ನೀಡಲಾಗುವ "ಕರುಣಾನಿಧಿ ಪ್ರಶಸ್ತಿ" ಒಂದು ಲಕ್ಷ ರುಪಾಯಿ ನಗದು, ಶಾಲು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ ಎಂದು ತಮಿಳುನಾಡು ಪ್ರಕಾಶಕರ ಸಂಘ ಹೇಳಿದೆ.

ಕಾರ್ನಾಡ್ ಜೊತೆ ತಮಿಳು ನಾಟಕಕಾರ ಎನ್.ಮುತ್ತುಸ್ವಾಮಿ, ಇತಿಹಾಸಕಾರ ಎಸ್.ಮುತ್ತಯ್ಯ, ತಮಿಳು ಲೇಖಕ ಸಿ.ಮಣಿ, ಸಣ್ಣ ಕಥೆಗಾರ ಆರ್.ಚುಡಾಮಣಿ ಮುಂತಾದವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಜನವರಿ 8ರ ಗುರುವಾರ ಸಂಜೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಸಮಾರಂಭವು ಪೊನ್ನಮಲೀ ಹೆದ್ದಾರಿಯಲ್ಲಿರುವ ಸೆಂಟ್ ಜಾರ್ಜ್ ಆಂಗ್ಲೋ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ನಡೆಯುತ್ತದೆ.

ಸಾಹಿತ್ಯ, ಕಲೆ, ಕಾದಂಬರಿ, ಚಿತ್ರಶಿಲ್ಪ ಮುಂತಾದ ಪ್ರಕಾರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಪ್ರಕಾಶಕರ ಸಂಘ ಹೊಂದಿದೆ. ಎರಡು ವರ್ಷಗಳ ಹಿಂದೆ ಸ್ಥಾಪನೆ ಆದ ಈ ಪ್ರಶಸ್ತಿಗೆ ಕರುಣಾನಿಧಿ ಒಂದು ಕೋಟಿ ರೂ ದೇಣಿಗೆ ನೀಡಿದ್ದರು. ಈ ಸಂಪನ್ಮೂಲದಿಂದ ಉತ್ಪತ್ತಿಯಾಗುವ ಹಣದಿಂದ ಪ್ರತೀ ವರ್ಷ ಆರು ಮಂದಿ ಸಾಧಕರಿಗೆ ನಗದು ಪ್ರಶಸ್ತಿಗಳನ್ನು ನೀಡುವುದು ಸಾಧ್ಯವಾಗಿದೆ.

(ದಟ್ಸ್ ಕನ್ನಡ ಸಾಹಿತ್ಯ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X