ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ6)

By Staff
|
Google Oneindia Kannada News

ಚಿತ್ರ -6

ಚಿತ್ರ-6ನ್ನ ಗಮನಿಸಿ. ನಾವು ಯಾವ್ದನ್ನ ಉತ್ತರ-ದಕ್ಷಿಣ ರೇಖೆ ಅಂದ್ಕೊಂಡಿದೀವೋ, ಅದೇ ಒಂದೇ ಕಡೆ ಇರಲ್ಲ. ನಿದಾನ ವಾಗಿ ಬದಲಾಗ್ತಿದೆ. ಆದ್ರೆ ಯಾವಾಗ್ಲೂ ಅದು, ಭೂಮಿ ಸೂರ್ಯನ್ನ ಸುತ್ತೋ ಪಾತಳಿಗೆ ಅರವತ್ತಾರೂವರೆ (66.5) ಡಿಗ್ರಿ ಕೋನದಲ್ಲಿರುತ್ತೆ ಅಷ್ಟೆ. ಈ ಚಲನೆಯನ್ನೆ ಅಯನಾಂಶ (precision) ಅಂತಾರೆ. ಇದು ಬಹಳ ನಿದಾನವಾದ ಚಲನೆ. ಭೂಮಿಯ ಅಕ್ಷ (axis, ಉತ್ತರ-ದಕ್ಷಿಣ ರೇಖೆ) ಈ ತರಹ ಒಂದು ಸುತ್ತು ಬರಕ್ಕೆ ಸುಮಾರು ಇಪ್ಪತ್ತಾರು ಸಾವಿರ ವರ್ಷ ಆಗತ್ತೆ.

ಈಗ ಅಯನಾಂಶದ ಪರಿಣಾಮ ಸೂರ್ಯನ ಚಲನೆಯ ಮೇಲೆ ಹೇಗಾಗುತ್ತೆ ಅನ್ನೋದನ್ನ ನೋಡೋಣ. ಈ ಉತ್ತರ ದಿಕ್ಕು ಅನ್ನೋದೇ ಬದ್ಲಾಗೋದ್ರಿಂದ, ಸೂರ್ಯ ನಮಗೆ ಉತ್ತರಕ್ಕೆ ತಿರುಗೋದು ಬೇರೆ ಸಮಯದಲ್ಲಿ ಅಂತ ಭಾಸವಾಗುತ್ತೆ. ವರ್ಷಾನುಗಟ್ಟಲೆ, ನೋಡಿ ಆದ್ಮೇಲೆ, ಅದ್ರಿಂದ ಏನು ಗೊತ್ತಾಯ್ತು ಅಂದ್ರೆ, ವಸಂತ ವಿಷುವದ ದಿನ ಸೂರ್ಯ ಮೇಷರಾಶಿಯ ಆರಂಭದಲ್ಲಿ (First point of Aries, ಮೇಷಾದಿ ಬಿಂದು) ಇಲ್ವೇ ಇಲ್ಲ! ಅದರ ಬದಲು ಮೀನ ರಾಶಿಯಲ್ಲೇ ಇದು ಆಗಿ ಬಿಡುತ್ತೆ. ಇದನ್ನ ಕೆಳಗಿನ ಚಿತ್ರದಲ್ಲಿ ತೋರ್ಸಿದೀನಿ. ಎರಡು ಸಾವಿರ ವರ್ಷದ ಹಿಂದೆ ಇದ್ದ ಸೂರ್ಯನ ಹಾದಿ ಹಳದಿ ಬಣ್ಣದಲ್ಲಿದೆ. ಇವತ್ತಿನ ಸೂರ್ಯನ ದಾರಿ ಕೇಸರಿ ಬಣ್ಣದಲ್ಲಿದೆ.

ಹಿಂದಿನ ಪುಟ ಮುಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X