ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ7)

By Staff
|
Google Oneindia Kannada News

ಚಿತ್ರ -7

ಈಗ ನೋಡಿ. ಸೂರ್ಯನ ಪಥ ಆಕಾಶಮಧ್ಯರೇಖೆಯನ್ನ ದಕ್ಷಿಣದಿಂದ ಉತ್ತರಕ್ಕೆ ದಾಟೋದು ಸುಮಾರು ಹನ್ನೆರಡನೇ ಮೀನ ರಾಶಿಯ ಆರಂಭದಲ್ಲೇ ಆಗಿಹೋಗುತ್ತೆ. ಇದು ನಡೆಯೋದು ಪ್ರತಿ ವರ್ಷ ಮಾರ್ಚ್ 21ರ ಸುಮಾರಿಗೆ. ಹಾಗೇ, ಸೂರ್ಯ ತನ್ನ ಅತೀ ದಕ್ಷಿಣದ ತುದಿಯಿಂದ ಉತ್ತರಕ್ಕೆ ಬರೋದು ಸೂರ್ಯ ೯ನೆಯ ರಾಶಿಯಲ್ಲಿರೋವಾಗ್ಲೆ ಆಗಿಹೋಗುತ್ತೆ. ಇದೇ ನಿಜವಾದ ಉತ್ತರಾಯಣ ಪುಣ್ಯಕಾಲ. ಇದು ಈಗ ಡಿಸೆಂಬರ್ 21ಕ್ಕೆ ಜರುಗತ್ತೆ ಪ್ರತೀ ವರ್ಷ.

ಪಾಶ್ಚಾತ್ಯರು ಏನು ಮಾಡ್ಕೊಂಡಿದಾರೆ ಅಂದ್ರೆ, ಪ್ರತಿ ವರ್ಷ ಆರಂಭವಾಗೋದು ಮೇಷಾದಿ ಬಿಂದುವಿನಿಂದ (First point of Aries) ಅಂತ ಹೇಳ್ತಾ, ಈ ಬಿಂದುವೇ ವರ್ಷೇ ವರ್ಷೆ ಹಿಂದಕ್ಕೆ ಹೋಗ್ತಿದೆ ಅಂತಾರೆ. ಅಂದ್ರೆ, ಮೇಷಾದಿ ಬಿಂದುಗೂ, ನಿಜವಾದ ಮೇಷರಾಶಿಗೂ ಸಂಬಂಧವನ್ನ ಅವರು ಕಡಿದು ಹಾಕಿಬಿಟ್ಟಿದಾರೆ. ಇದಕ್ಕೆ ಸಾಯನ ಪಂಚಾಂಗ ಅಂತ ಹೆಸರು. ಈಗ ಮೇಷಾದಿ ಬಿಂದು ಮೀನ ರಾಶಿಯಲ್ಲಿದೆ. ಇನ್ನು ಕೆಲವು ನೂರು ವರ್ಷಗಳಾದ್ಮೇಲೆ ಅದು ಕುಂಭ ರಾಶಿಗೆ ಹೋಗುತ್ತೆ. ಆದ್ರೆ, ಆಗ್ಲೂ ಅದನ್ನ ಮೇಷಾದಿ ಬಿಂದು ಅಂತ್ಲೇ ಕರ್ಯೋದು.

ಭಾರತದಲ್ಲಿ ನಾವು ನಿರಯನ ಪಂಚಾಂಗವನ್ನ ಉಪಯೋಗಿಸ್ತಿದೀವಿ. ಇದರಲ್ಲಿ ಮೇಷಾದಿ ಬಿಂದುವನ್ನ ನಾವು ಬದ್ಲಾಯಿಸ್ತಾ ಇಲ್ಲ. ಅದರ ಬದಲು ಸೂರ್ಯ ಇಂತಹ ನಕ್ಷತ್ರಕ್ಕೆ ಬಂದಾಗ ವರ್ಷದ ಆದಿ ಅಂತ ಹೇಳ್ತಾ ಇದೀವಿ. ಅದಕ್ಕೇ ವೇದಗಳಲ್ಲಿ ಅದು ಮೃಗಶಿರಾ ಆಗಿತ್ತು. ಬ್ರಾಹ್ಮಣಗಳಲ್ಲಿ ಕೃತ್ತಿಕಾ ಆಗಿತ್ತು. ಪುರಾಣಗಳಲ್ಲಿ ಅಶ್ವಿನಿ ಆಗಿತ್ತು. ಮತ್ತೆ ಈಗ ಇಪ್ಪತ್ತೊಂದನೆ ಶತಮಾನದಲ್ಲಿ ಅದು ಪೂರ್ವಾಭಾದ್ರ ಆಗಿದೆ! ರಾಶಿಗಳು ಮಾತ್ರ ಎಲ್ಲಿದ್ದವೋ ಅಲ್ಲೇ ಇವೆ. ಅದಕ್ಕೇ, ಸೂರ್ಯ ಈಗಲೂ ಮೇಷ ರಾಶಿಯನ್ನ ಏಪ್ರಿಲ್ ಹದಿನಾಕಕ್ಕೇ ಸೇರ್ತಾನೆ. ಮಕರ ರಾಶಿಯನ್ನ ಜನವರಿ ಹದ್ನಾಕಕ್ಕೇ ಸೇರ್ತಾನೆ. ಅವೇ ಸಂಕ್ರಮಣಗಳು. ಅದಕ್ಕೇ ಮಕರ ಸಂಕ್ರಮಣ ಜನವರಿ ಹದಿನಾಕಕ್ಕೆ.

ಆದ್ರೆ, ಹೀಗೆ ಮಾಡಿರೋದ್ರಿಂದ ಏನಾಯ್ತಪ್ಪ ಅಂದ್ರೆ, ಮೊದಲಿಗೆ ಆ ಹಬ್ಬವನ್ನ ಆಚರಿಸ್ತಿದ್ದ ಕಾರಣವೇ ಮರೆತುಹೋಗೋ ಸಾಧ್ಯತೆ ಇದೆ! ಉತ್ತರಾಯಣ ಪ್ರಾರಂಭವಾಗುತ್ತೆ ಅಂತ ಮಕರ ಸಂಕ್ರಮಣವನ್ನ ಆಚರಿಸ್ತಿದ್ವಿ. ಈಗ ಜನವರಿ 14ರ ಬದಲು ಡಿಸೆಂಬರ್ 21ಕ್ಕೆ ನಿಜವಾದ ಉತ್ತರಾಯಣ ಶುರುವಾಗಿ ಹೋಗಿರತ್ತೆ. ಇದೊಂದೇ ತೊಂದ್ರೆ. ಜನವರಿ ಹದ್ನಾಕರ ದಿವಸ ನಾವು ಹಬ್ಬ ಆಚರಿಸಿದರೆ, ಅದು ಮಕರ ಸಂಕ್ರಮಣ ಆಗುತ್ತೆ- ಉತ್ತರಾಯಣ ಪುಣ್ಯಕಾಲ ಆಗಲ್ಲ ಅಷ್ಟೇ.

ಆದ್ರೆ, ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಕ್ಕೆ, ಯಾವ ದಿನ ಆದ್ರೇನು? ಪರ್ವಾಗಿಲ್ಲ ಅಂತೀರಾ? ಅದು ನಿಜವೇ! ಉತ್ತರಾಯಣವೇ ಆಗ್ಲಿ, ಮಕರ ಸಂಕ್ರಮಣವೇ ಆಗ್ಲಿ ; ಎಳ್ಳುತಿನ್ನಲಿ ಅಥವಾ ತಿನ್ನದೇ ಇರ್ಲಿ. ಒಳ್ಳೇ ಮಾತಂತೂ, ಮರೀದೇ, ಆಡ್ತಾ ಇರೋಣ!

ಹಿಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X