• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ5)

By Staff
|

ಚಿತ್ರ -5

ಚಿತ್ರ-5 ರಲ್ಲಿ, ಮೇಷ-ವೃಷಭ..ಅನ್ನೋ ಹೆಸರುಗಳ ಬದಲು, ಅನುಕೂಲಕ್ಕೆ 1-2-3 .. ಎಂಬ ಸಂಖ್ಯೆಗಳನ್ನು ಬಳಸಿದೀನಿ. 1=ಮೇಷ, 3= ವೃಷಭ... ಮುಂದಾಗಿ ಓದ್ಕೋಳಿ. ಈ ಚಿತ್ರದಲ್ಲಿ, ಸೂರ್ಯನ ಹಾದಿ, ದಕ್ಷಿಣದಿಂದ ಉತ್ತರಕ್ಕೆ (ಮಧ್ಯರೇಖೆಯನ್ನು ದಾಟುತ್ತಾ) ಹೋಗುವುದು ಹನ್ನೆರಡನೇ ಮೀನ ರಾಶಿಯನ್ನು ಮುಗಿಸಿ, ಒಂದನೇ ಮೇಷರಾಶಿಗೆ ಸೂರ್ಯ ಹೋಗುವಾಗ (ನಮ್ಮ ಕಣ್ಣಿಗೆ ಕಾಣೋ ಹಾಗೆ). ಆಲ್ವಾ? ಇದು ಸುಮಾರಾಗಿ ಎರಡು ಸಾವಿರ ವರ್ಷಗಳ ಹಿಂದೆ ಆಗ್ತಿದ್ದ ಮಾತು. ವಸಂತ ವಿಷುವ ಆಗ್ತಿದ್ದಿದ್ದು ಸೂರ್ಯ ಮೇಷರಾಶಿಯೊಳಗೆ ಹೋಗ್ತಿದ್ದ ದಿನವೇ. ಅದನ್ನೇ ಮೇಷ ಸಂಕ್ರಮಣ ಅಂತ ಕರ್ದ್ರು. ಹಾಗೇ, ಪ್ರತಿ ತಿಂಗಳಲ್ಲೂ ಒಂದು ಸಂಕ್ರಮಣ. ಅದರಲ್ಲಿ ವಿಶೇಷವಾದ್ದು ಅಂದ್ರೆ, ಸೂರ್ಯ ಧನುಸ್ ಇಂದ ಮಕರಕ್ಕೆ ಹೋಗೋ ದಿನ - ಅಂದ್ರೆ ಮೇಲಿನ ಚಿತ್ರದಲ್ಲಿ ಒಂಬತ್ತರಿಂದ ಹತ್ತಕ್ಕೆ ಹೋಗೋ ದಿವ್ಸ. ಚಿತ್ರ ನೋಡಿದ್ರೆ ನಿಮ್ಗೆ ತಿಳಿಯುತ್ತೆ ಅವತ್ತು ಸೂರ್ಯ ಉತ್ತರಕ್ಕೆ ಚಲಿಸಕ್ಕೆ ಶುರು ಮಾಡ್ತಾನೆ, ಹಗಲಿನ ಸಮಯ ಜಾಸ್ತಿ ಆಗ್ತಾ ಹೋಗತ್ತೆ ಅಂತ. ಇದೇ ಉತ್ತರಾಯಣ ಪುಣ್ಯಕಾಲ. ಅದು ಆವಾಗ ಮಕರ ಸಂಕ್ರಮಣದ ದಿವಸ ಆಗ್ತಿತ್ತು. ಹಾಗಾಗಿಯೇ, ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ ಅನ್ನೋವು ಒಂದರ ಬದಲು ಒಂದು ಉಪಯೋಗಿಸೋ ಪದಗಳಾಗಿಬಿಟ್ಟವು.

ಈಗ ಇನ್ನು ಮುಂದೆ ಒಂದು ಸ್ವಾರಸ್ಯ ಇದೆ. ವೇದಗಳಲ್ಲಿ ವಸಂತ ವಿಷುವ ಸೂರ್ಯ ಮೃಗಶಿರಾ ನಕ್ಷತ್ರದಲ್ಲಿದ್ದಾಗ ಅಂತಿದೆ ಅಂತ ಹೇಳಿದ್ದೆ ಅಲ್ವಾ? ಅದು ಹೇಗೆ ಅಶ್ವಿನಿ ನಕ್ಷತ್ರಕ್ಕೆ ಬದ್ಲಾಯ್ತು? ಸ್ವಲ್ಪ ನಿದಾನ್ವಾಗಿ ಓದಿ ಇದನ್ನ. ಭೂಮಿ ಒಂದು ಬುಗುರಿ ತರ್ಹ ತಿರುಗ್ತಿದೆ ಅಂತ ಹೇಳಿದ್ದೆ ಅಲ್ವ? ಬುಗುರಿ ಸುತ್ತೋವಾಗ, ಅದ್ರ ಮೊಳೆ, ಕೊನೆಕೊನೆಗೆ ನೆಲಕ್ಕೆ ಓರೆಯಾಗಿ ಸುತ್ತುತಾ ಇರುತ್ತೆ ಅಂತ ಹೇಳಿದ್ದೆ. ಆದ್ರೆ, ಭೂಮಿ ಮದ್ಯದಲ್ಲಿ ಇರುವ ಈ (ಕಾಲ್ಪನಿಕ) ಮೊಳೇನೆ ನಮಗೆ ಉತ್ತರ ದಕ್ಷಿಣ ದಿಕ್ಕನ್ನ ಸೂಚಿಸೋದು. ಈ ಮೊಳೇನೇ ದಿಕ್ಕು ಬದಲಾಯಿಸುತ್ತೆ ಅಂದ್ರೆ ಏನಾಗತ್ತೆ? ಅದನ್ನ ಕೆಳಗಿನ ಚಿತ್ರದಲ್ಲಿ ತೋರ್ಸಿದೀನಿ.

ಹಿಂದಿನ ಪುಟ ಮುಂದಿನ ಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more