ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ4)

By Staff
|
Google Oneindia Kannada News

ಚಿತ್ರ -4

ಅಂದ್ರೆ, ಒಟ್ಟಿನಲ್ಲಿ ಸೂರ್ಯ ಅರೆವರ್ಷ ಈ ಆಕಾಶಮಧ್ಯರೇಖೆಯ (ಇದನ್ನೇ ವಿಷುವದ್ ವೃತ್ತ ಅನ್ನೋದು) ಎಡ್ಗಡೆ, ಇನ್ನರೆ ವರ್ಷ, ಬಲ್ಗಡೆ ಇರ್ತಾನೆ ಅನ್ನೋದು ಚಿತ್ರದಿಂದ ಗೊತ್ತಾಯ್ತಲ್ಲ? ಮತ್ತೆ, ಎರಡು ದಿನ ಅಥವ ಇನ್ನೂ ಸರಿಯಾಗಿ ಹೇಳಬೇಕಾದ್ರೆ, ಸರಿಯಾಗಿ ಎರಡು ಕ್ಷಣ, ಅವನು ಈ ರೇಖೆಯಮೇಲೇ ಇರ್ತಾನೆ. ಇವುಗಳನ್ನೇ ವಿಷುವ ಬಿಂದು (equinox) ಅನ್ನೋದು. ಸೂರ್ಯ ಅಲ್ಲಿದ್ದ ದಿನ ಭೂಮಿ ಮೇಲೆ ನೀವು ಎಲ್ಲೇ ನಿಂತಿರಿ, ಅಥ್ವಾ ಕೂತಿರಿ, ಸರಿಯಾಗಿ ಅರ್ಧ ದಿನ ಹಗಲು, ಅರ್ಧ ರಾತ್ರಿ ಆಗಿರತ್ತೆ.

ನಮ್ಮ ದೇಶದಲ್ಲಿ ತುಂಬಾ ಮೊದಲು ಆಕಾಶಾನ ಹನ್ನೆರಡು ರಾಶಿಗಳಾಗಿ ವಿಂಗಡಿಸೋ ಪದ್ಧತಿ ಇರಲಿಲ್ಲ. ಅದರ ಬದಲು, ಆಕಾಶವನ್ನು ಇಪ್ಪತ್ತೇಳು ಅಥವಾ ಇಪ್ಪತ್ತೆಂಟು ನಕ್ಷತ್ರಗಳಾಗಿ ವಿಂಗಡಿಸಿದ್ರು. ಇದು ಚಂದ್ರ ಆಕಾಶದಲ್ಲಿ ಹೊರಟ ಸ್ಥಳಕ್ಕೇ ಮತ್ತೆ ಬರಲು ಸುಮಾರು ಇಪ್ಪತ್ತೇಳು ಚಿಲ್ಲರೆ ದಿವಸಗಳಾಗೋದ್ರಿಂದ. ಸೂರ್ಯ ಎಲ್ಲಿದೆ ಅಂತ ತೋರ್ಸಕ್ಕೂ ಇದೇ ನಕ್ಷತ್ರಗಳನ್ನೆ ಬಳಸ್ತಿದ್ರು. ಪ್ರತಿ ನಕ್ಷತ್ರವನ್ನು ನಾಕು ಭಾಗ ಮಾಡಿ, ಒಂದೊಂದಕ್ಕೂ ಒಂದು ಪಾದವೆಂದು ಕರ್ರೀತಿದ್ರು. ವಸಂತದ ಮೊದಲ ದಿನ - ಎಂದರೆ, ಚಳಿಗಾಲ ಮುಗಿಯುತ್ತಾ ಹಗಲು ಹೆಚ್ಚಲಾರಂಭಿಸಿದಾಗ ಹಗಲೂ ರಾತ್ರಿ ಸರಿಸಮಾನವಾಗಿ ಬರುವ ವಸಂತ ವಿಷುವ (vernal equinox)ದ ಸಮಯದಲ್ಲಿ ಸೂರ್ಯ ಮೃಗಶಿರಾ ನಕ್ಷತ್ರದಲ್ಲಿರುತ್ತಾನೆಂದು ಋಗ್ವೇದದಲ್ಲಿ ಬರುತ್ತೆ (ಇದು ಸುಮಾರು ಕ್ರಿ.ಪೂ. 4000 ರ ಸುಮಾರಿನ ಸಮಾಚಾರ. ನಂತರ ಬಂದ ಬ್ರಾಹ್ಮಣಗಳಲ್ಲ್ಲಿ ವಸಂತಾದಿ - ಇದೇ ವರ್ಷದಾದಿ - ಯುಗಾದಿಯ ದಿವ್ಸ ಸೂರ್ಯ ಕೃತ್ತಿಕಾ ನಕ್ಷತ್ರದಲ್ಲಿರ್ತಾನೆ ಅಂತ ಹೇಳಿದೆ. ಮತ್ತೆ ಸುಮಾರು ಕ್ರಿಸ್ತನ ಆಸುಪಾಸಿನ ಪುರಾಣಗಳು, ವಸಂತ ವಿಷುವದ ದಿನ ಸೂರ್ಯ ಅಶ್ವಿನಿ ನಕ್ಷತ್ರ ವನ್ನು ಪ್ರವೇಶಿಸ್ತಾನೆ ಅನ್ನತ್ವೆ. ಇದೇನಿದು? ಈ ರೀತಿ ನಂಬಲಾರದಂತ ಬೇರೆಬೇರೆ ಮಾತನ್ನ ಹೇಳ್ತಾರಲ್ಲ ಅಂತ ಅನ್ಕೋಬೇಡಿ. ಇದ್ಯಾಕೆ ಹೀಗೆ ಅನ್ನೋದನ್ನ ಮುಂದೆ ನೋಡೋಣ.

ಸುಮಾರು ಕ್ರಿಸ್ತನ ಹಿಂದಿನ ಕೆಲವು ಶತಕಗಳಲ್ಲಿ ರೋಮನ್ನರ ರಾಶಿಚಕ್ರ ಭಾರತೀಯರಿಗೆ ಅರಿವಾಯಿತು ಅನ್ನೋ ಹೇಳಿಕೆ ಇದೆ. (ಕೆಲವರು, ಇದು ಭಾರತದಿಂದಲೇ ಹೋಗಿದ್ದು ಪಶ್ಚಿಮಕ್ಕೆ ಅಂತಲೂ ಪ್ರತಿಪಾದಿಸಿದಾರೆ.ಇರಲಿ.) ಯವನರು(ಗ್ರೀಕರು) ಆಗ ವಸಂತ ವಿಷುವವಿದ್ದ Aries ರಾಶಿಯಿಂದ ವರ್ಷಾರಂಭ ಮಾಡ್ತಿದ್ರು. ಅವರು ವರ್ಷಕ್ಕೆ ಹನ್ನೆರಡು ತಿಂಗಳು ಮಾಡಿ, ಪ್ರತಿ ತಿಂಗಳು ಸೂರ್ಯ ಒಂದು ರಾಶಿಯಲ್ಲಿ ಇರೋದನ್ನು ಲೆಕ್ಕಿಸಿ, ಅದರ ಪ್ರಕಾರ ತಮ್ಮ ವಾರ್ಷಿಕ ಪಂಚಾಂಗ (calendar) ವನ್ನು ಮಾಡ್ಕೊಂಡಿದ್ರು. ಇದರಿಂದ ಪ್ರಭಾವಿತರಾದ ನಮ್ಮವರು, ಇದೇ ರಾಶಿ ಚಕ್ರವನ್ನ ನಮ್ಮ ಪಂಚಾಂಗಕ್ಕೂ ತಂದ್ಬಿಟ್ಟ್ರು! ಅದಕ್ಕೇ, Aries, Taurus, .. ಮೊದಲಾದ ಹೆಸರುಗಳೂ, ಮೇಷ, ವೃಷಭ ಅನ್ನೋ ಹೆಸರುಗಳೂ ಒಂದೇ ಅರ್ಥ ಬರೋ ತರಹ ಇರೋದು. ಹನ್ನೆರಡು ರಾಶಿಗಳಿಗೆ ಹಂಚೋದಕ್ಕೆ ನಾಕು ಪಾದಗಳಿರೋ ಇಪ್ಪತ್ತೆಂಟು ನಕ್ಷತ್ರಗಳಿಗಿಂತ, ಇಪ್ಪತ್ತೇಳೇ ಇದ್ದರೆ ಅನುಕೂಲ ಆದ್ದರಿಂದ, ಅಭಿಜಿತ್ ಎಂಬ ನಕ್ಷತ್ರವನ್ನ ಪಟ್ಟಿಯಿಂದ ತೆಗೆದು, ಇಪ್ಪತ್ತೇಳರ ಪಟ್ಟಿಯೇ ನೆಲೆ ನಿಂತ್ಕೋತು. ಹಾಗೆ ಮಾಡಿದ್ರಿಂದ, ಪ್ರತಿ ರಾಶಿಯೊಳಗೂ, ಎರಡೂಕಾಲು ನಕ್ಷತ್ರ ಅನ್ನೋ ಲೆಕ್ಕಾಚಾರಕ್ಕೆ ಅನುಕೂಲವಾಯಿತು
.
ಈಗ ಚಿತ್ರ -1 ರಲ್ಲಿ ಆಕಾಶವನ್ನು ಹನ್ನೆರಡು ತೊಳೆಗಳ ರೀತಿ ರಾಶಿಗಳಾಗಿ ವಿಂಗಡಿಸಿದ್ದನ್ನ ನೋಡಿದ್ವಿ. ಅದನ್ನೇ ಚಿತ್ರ-4 ರ ಆಕಾಶದ ನಡುವಿನ ಪಟ್ಟಿಗೂ ವರ್ಗಾಯಿಸಿದರೆ, ಹೇಗೆ ಕಾಣುತ್ತೆ ಅಂತ ನೋಡೋಣ.

ಹಿಂದಿನ ಪುಟ ಮುಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X