ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ3)

By Staff
|
Google Oneindia Kannada News

ಚಿತ್ರ 3

ಚಿತ್ರ 3ರಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಒಂದು ಗೀಟು ಎಳೆದಿದ್ದೀನಿ ನೋಡಿ. ಅದು ಏನಂದ್ರೆ, ಭೂಮಿನ ಎರಡು ಭಾಗ ಮಾಡೋ ರೇಖೆಯನ್ನ ಆಕಾಶದವರೆಗೂ ತೊಗೊಂಡು ಹೋದ್ರೆ, ಅದು ಆಕಾಶವನ್ನೇ ಎರಡು ಹೋಳಾಗಿ ಮಾಡತ್ತಲ್ವ? ಅದೇ ಆ ಗೀಟು. ಮತ್ತೆ, ಮೊದಲೇ ಹೇಳಿದ ಹಾಗೆ ಇದು ಆಕಾಶದ ಸುತ್ತ 360 ಡಿಗ್ರಿಯನ್ನು ಬಿಚ್ಚಿಟ್ಟಿರೋ ರೀತಿ. ಅಂದ್ರೆ, ನಿಜವಾಗಿ ಈ ನಡುವಿನ ಗೀಟಿನ ಬಲತುದಿ ಮತ್ತೆ ಎಡತುದಿ ಎರಡೂ ಒಂದೇ ಜಾಗ. ಅವೆರಡನ್ನೂ ಮನಸ್ನಲ್ಲೇ ಸೇರಿಸಿದ್ರೆ, ನಿಮಗೆ ಅದು ಆಕಾಶದ ಸುತ್ತ, ಆಕಾಶವನ್ನ ಉತ್ತರ-ದಕ್ಷಿಣವಾಗಿ ವಿಂಗಡಿಸೋ ಗೆರೆಯ ಸುತ್ತ ಇರೋ ಒಂದು ಪಟ್ಟಿ ಅಂತ ಗೊತ್ತಾಗತ್ತೆ. ಅಲ್ವಾ?

ಈಗ ಈ ಪಟ್ಟಿಯ ಮೇಲೆ ಸೂರ್ಯ ನಮಗೆ ಹೇಗೆಕಾಣ್ತಾನೆ ಅನ್ನೋದನ್ನ ನೋಡೋಣ. ಚಿತ್ರ 2ನ್ನ ನೋಡಿದ್ರೆ, ನಿಮಗೆ ಸೂರ್ಯ ಅರ್ಧ ಸಮಯ ಭೂಮಿ ಭೂಮದ್ಯ ರೇಖೆಯ ಸಮತಳದ ಒಂದು ಬದಿಯಲ್ಲೂ, ಇನ್ನರ್ಧ ಕಾಲ ಅದರ ಇನ್ನೊಂದು ಬದಿಯಲ್ಲೂ ಇರ್ತಾನೆ ಅನ್ನೋದು ಗೊತ್ತಾಗತ್ತೆ. ಅಲ್ವಾ? ಇನ್ನು ಭೂಮಧ್ಯರೇಖೆಯ ಸಮತಳ ಆಕಾಶದಲ್ಲಿ ಯಾವುದು? ಅದೇ ಚಿತ್ರ 3ರಲ್ಲಿರುವ ಮಧ್ಯದ ಪೂರ್ವ-ಪಶ್ಚಿಮದ ಗೀಟು. ಹಾಗಾದ್ರೆ, ಸೂರ್ಯ ಎಲ್ಲಿ ಕಾಣ್ತಾನೆ ಈ ಪಟ್ಟಿಯಲ್ಲಿ? ಅದನ್ನೆ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದಲ್ಲಿ ತೋರ್ಸಿದೀನಿ ನೋಡಿ.

ಹಿಂದಿನ ಪುಟ ಮುಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X