ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ2)

By Staff
|
Google Oneindia Kannada News

ಚಿತ್ರ 2

ಈಗ ಮೇಲಿನ ಚಿತ್ರ ನೋಡ್ದಾಗ, ಸೂರ್ಯನ ಕಿರಣ ತುಸು ಸಮಯ ದಕ್ಷಿಣದ ಅರ್ಧದ ಮೇಲೆ ಸ್ವಲ್ಪ ನೇರವಾಗಿ, ಉತ್ತರದ ಅರ್ಧದ ಮೇಲೆ ಓರೆಯಾಗಿ ಬೀಳೋದು ಕಾಣ್ತಿದೆ ಅಲ್ವ? ಅದೇ ತರಹ, (ಇನ್ನಾರು ತಿಂಗಳ ಮೇಲೆ) ಭೂಮಿ ಸೂರ್ಯನ ಆ ಕಡೆಗೆ ಹೋದಾಗ, ಕಿರಣಗಳು ಉತ್ತರದ ಅರ್ಧ ಭಾಗಕ್ಕೆ ನೇರವಾಗಿ ಬೀಳತ್ವೆ. ಇದೇ ನಮ್ಮಲ್ಲಿನ ಬೇಸಿಗೆ ಚಳಿಗಾಲಗಳಿಗೆ ಕಾರಣ. ಸೂರ್ಯನಿಂದ ಭೂಮಿ ಎಷ್ಟು ದೂರ ಇದೆ ಅನ್ನೋದು ಮುಖ್ಯ ಆಗೋದೇ ಇಲ್ಲ. ನಿಜ ಹೇಳ್ಬೇಕಂದ್ರೆ, ಉತ್ತರ ಅರ್ಧದಲ್ಲಿ ಚಳಿ ಇರುವ ಡಿಸೆಂಬರ್ ತಿಂಗಳಲ್ಲೇ ಭೂಮಿ ಸೂರ್ಯನಿಗೆ ಅತೀ ಹತ್ತಿರದಲ್ಲಿರೋದು!

ಸರಿ! ಎಲ್ಲಿಂದ ಎಲ್ಲೋ ಹೋಗ್ತಾ ಇದೀನಿ. ದಾರಿ ಪೂರ್ತಿ ತಪ್ಪೋ ಮೊದಲು ಮತ್ತೆ ಸರಿದಾರಿ ಸೇರಿದ್ರೆ ವಾಸಿ. ಈಗ ಭೂಮಿ ಸೂರ್ಯನ ಸುತ್ತ ಸ್ವಲ್ಪ ಮೊಟ್ಟೆ ಆಕಾರದಲ್ಲಿ ಸುತ್ತತಾ ಇದೆ ಅಂತ ಗೊತ್ತಲ್ಲ. ಈಗ ಭೂಮಿಯ ಮಧ್ಯದ ಭೂಮದ್ಯರೇಖೆಯನ್ನೇ ಆಕಾಶದ ವರೆಗೆ ಹಿಗ್ಗಿಸೋಣ. (ನಮ್ದೇನು ಖರ್ಚಾಗುತ್ತೆ ಹೇಳಿ? ಊಹೆ ಮಾಡ್ಕೊಳೋದಲ್ವಾ ಬರಿ ) ಆ ಪಾತಳಿಯನ್ನ , ಭೂಮಿ ಸುತ್ತೋ ದಾರಿ ಸರಿಯಾಗಿ ಎರಡು ಕಡೆ ಮುಟ್ಟುತ್ತೆ. ಯಾಕೆ? ನಾವು ಊಹೆ ಮಾಡ್ಕೊಂಡ ಪಾತಳಿ, ಅನಂತದ ವರೆಗೆ ಹೋಗ್ತಾ ಇರಬೋದು ಅಲ್ವಾ? ಎರಡು ಪಾತಳಿಗಳಿ ಸೇರೋ ಜಾಗ ಒಂದು ನೀಟಸಾಲು. (ಪುಸ್ತಕದ ಎರಡು ಪುಟ ಸೇರೋದನ್ನ ನೆನಸಿಕೊಳಿ). ಒಂದು ಪಾತಳಿ, ಮತ್ತೆ ಒಂದು ಕಕ್ಷೆ ( ಭೂಮಿಯ ಕಕ್ಷೆ) ಅಂದ್ರೆ, ಒಂದು ಕಾಗದದ ಪುಟದಲ್ಲಿ, ಒಂದು ತಂತಿಯನ್ನ ಎರಡು ಕಡೆ ತೂರಿಸಿ, ತಂತಿಯ ಎರಡೂ ಕಡೆಗಳನ್ನ ಸೇರಿಸಿದ ಹಾಗೆ ಅಂದ್ಕೊಳಿ. ತಂತಿ ಈಗ ಒಂದು ಗುಂಡಗೋ ಕೋಳಿ ಮೊಟ್ಟೆ ಆಕಾರದಲ್ಲೋ ಇರತ್ತಲ್ವಾ? ಇದು ಸುಮ್ನೆ ಉದಾಹರಣೆಗೆ ಹೇಳ್ದೆ ಅಷ್ಟೆ.

ಈಗ ಇನ್ನೊಂದು ಯೋಚಿಸೋಣ. ಆಕಾಶನ ಸುಲಿದು ಸಪಾಟಾಗಿ ಇಟ್ಟರೆ ಹೇಗೆ ಕಾಣತ್ತೆ ಅಂತ ನೋಡೋಣ. ನಮ್ಮ ತಲೆ ಮೇಲೆ ನೋಡ್ತಾ ಆಕಾಶದಲ್ಲಿ ಒಂದು ಪಟ್ಟಿ ಮಾಡ್ತಾ ಒಂದುಕಡೆ ಇಂದ ಇನ್ನೊಂದು ಕಡೇಗೆ ಹೋಗ್ತಾ ಇದ್ರೆ, ಮತ್ತೆ ಮೊದಲಿಗೆ ಹೊರಟ ಜಾಗಕ್ಕೇ ಬರ್ತೀವಲ್ವಾ? ಈ ಪಟ್ಟಿಯನ್ನೇ ಒಂದು ಹಾಳೆ ಮೇಲಿಟ್ರೆ, ಹೀಗೆ ಕಾಣತ್ತೆ ನೋಡಿ.

ಹಿಂದಿನ ಪುಟ ಮುಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X