ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ (ಚಿತ್ರ1)

ಚಿತ್ರ 1:

ಮೇಲಿರೋ ಚಕ್ರದ ನಡು ಬಿಂದುವಿನಲ್ಲಿ ಭೂಮಿ ಇದೆ ಅಂತಿಟ್ಕೊಳಿ. ಹೊರಗಡೆ ಇರೋ ಚಕ್ರವೇ ಆಕಾಶ. ಆಕಾಶವನ್ನ ಸಮವಾಗಿ ಹನ್ನೆರಡು ಪಾಲು ಮಾಡಿ, ಒಂದೊಂದರಲ್ಲೂ ಸೂರ್ಯನ ಹಾದೀಲಿ ಕಾಣೊ ಒಂದೊಂದು ನಕ್ಷತ್ರದ ಗುಂಪಿಗೆ ಮೇಷ, ವೃಷಭ ಮೊದಲಾಗಿ ಹೆಸ್ರು ಕೊಟ್ಟಿದಾರೆ ಹಿಂದಿನೋವ್ರು. ಆದ್ರೆ, ಮೇಷ ಟಗರಿನ ತರಹಾನೂ, ಕನ್ಯಾ ಹುಡುಗಿ ತರಹನೂ ಕಾಣ್ಬೇಕಾದ್ರೆ, ನಿಮ್ಮ ಕಣ್ಣಲ್ಲಿ ಭಾಳ ಕಲ್ಪನಾಶಕ್ತಿ ಇರ್ಬೇಕು ಅಷ್ಟೇ!

ಈಗ, ಮೇಲಿರೋ ಚಕ್ರವನ್ನ, ಸಪಾಟಾದ ಕಾಗದದ ಮೇಲಿದೆ ಅನ್ನೋದನ್ನ ಮರೆತು, ಒಂದು ಚೆಂಡಿನ ತರಹ ಇದೆ ಅಂತ ಭಾವಿಸ್ಕೋಳಿ. ಈ ಚೆಂಡೇ ಆಕಾಶದ ಪ್ರತಿರೂಪ. ಯಥಾ ಪ್ರಕಾರ, ಚೆಂಡಿನ ಕೇಂದ್ರ ಬಿಂದುವಿನಲ್ಲಿ ನಾವು. ಅಂದ್ರೆ, ನಮ್ಮ ಭೂಮಿ. ಭೂಮಿ ಮೂಲಕ ಹೋಗೋ ಹಾಗೆ, ಈ ಚೆಂಡಿನಲ್ಲಿ ಒಂದು ದಬ್ಬಳ ತೂರಿಸೋಣ. ಅದನ್ನೇ ಉತ್ತರ- ದಕ್ಷಿಣ ಅನ್ನೋಣ. ಈಗ, ಈ ದಬ್ಬಳ ಚೆಂಡಿನೊಳಗಿದೆ.ನಮಗೆ ಕಾಣ್ತಿಲ್ಲ. ಆದ್ರೆ, ಚೆಂಡಿನ ಮೇಲೂ ನಾವು ಉತ್ತರಧ್ರುವದಿಂದ ದಕ್ಷಿಣ ಧ್ರುವಕ್ಕೆ (ಇವು ಎಲ್ಲಿವೆ? ದಬ್ಬಳ ಚೆಂಡಿನೊಳಕ್ಕೆ ಹೋಗಿ, ಹೊರಕ್ಕೆ ಬರ್ತಿದೆಯಲ್ಲ, ಅವೇ), ಗೆರೆಗಳನ್ನ ಎಳೆದು ಚೆಂಡಿನ ಮೇಲೆ ಹನ್ನೆರಡು ತೊಳೆಗಳ ರೀತಿ ಸಮಾನ ಭಾಗಗಳನ್ನ ಮಾಡಬಹುದು. ಅಲ್ವಾ? ಹೀಗೇನೇ ಆಕಾಶದಲ್ಲಿ ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಯಾಗಿ ವಿಂಗಡಿಸಿರೋದು. ಇಷ್ಟು ಸರಳವಾಗಿ ತಿಳೀತು ಅಂದ್ಕೋತೀನಿ.

ಈಗ, ಇನ್ನೊಂದು ವಿಷಯ ಹೇಳ್ಬೇಕು. ಭೂಮಿ, ಸೂರ್ಯನ ಸುತ್ತ ಸುತ್ತೋವಾಗ, ಈ ಉತ್ತರ ದಕ್ಷಿಣದ 'ದಬ್ಬಳ' ಅದು ಸುತ್ತೋ ಸಮತಳಕ್ಕೆ ಲಂಬವಾಗಿರದೆ, ಓರೆಯಾಗಿದೆ. ಚಿಕ್ಕವರಿದ್ದಾಗ ನೀವು ಬುಗುರಿ ಆಡಿದ್ದನ್ನ ನೆನಪಿಸ್ಕೊಳ್ಳಿ. ಮೊದಮೊದಲು ಬುಗುರಿಯ ಮೊಳೆ, ನೇರವಾಗಿ ತಿರುಗ್ತಿರತ್ತೆ. ಸ್ವಲ್ಪ ತಿರ್ಗೋದು ನಿಧಾನವಾದಾಗ, ಬುಗುರಿ ಮೊಳೆ, ನೆಲಕ್ಕೆ ಸ್ವಲ್ಪ ಓರೆಯಾಗತ್ತೆ. ಅಲ್ವಾ? ಅದೇ ತರಹ. ಅದ್ನ್ನೇ ಇಲ್ಲಿ ಚಿತ್ರದಲ್ಲಿ ತೋರ್ಸಿದೀನಿ.

ಹಿಂದಿನ ಪುಟ ಮುಂದಿನ ಪುಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+