ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಎಳ್ಳು ಬೆಲ್ಲ ಮತ್ತು ಅಂಬರ ಚುಂಬನ

By Staff
|
Google Oneindia Kannada News

Sun Godಮತ್ತೊಂದು ಪ್ರಯಾಣಕ್ಕೆ ಅಲ್ಲಿ ಸೂರ್ಯ ಅಣಿಯಾಗುತ್ತಿರುವ ಹೊತ್ತಿನಲ್ಲಿ ಭುವಿಯ ಮೇಲೆ ಏನೆಲ್ಲ ಸಂಭ್ರಮ. ರೈತನಿಗೆ ಹೊಸಕಾಳಿನ ಹಿಗ್ಗು, ಹೆಂಗೆಳೆಯರಿಗೆ ಅಂಗಳದಲ್ಲಿ ರಂಗೋಲಿ ಬಿಡಿಸುವ ಸೊಗಸು, ಹಿರಿಯರಿಗೆ ಎಳ್ಳು ಬೆಲ್ಲ ಬೀರಿದ ನೆನಪು, ಮಕ್ಕಳಿಗೆ ಇದೆಲ್ಲ ಹೊಸತು ಹೊಸತು. ಹೀಗಿರುವಾಗ, ಕತ್ತೆತ್ತಿ ನೋಡಿದರೆ ಖಗೋಳದಲ್ಲಿ ಏನೆಲ್ಲ ಕೌತುಕ. ಓದಿ ಮತ್ತು ನೋಡಿ : ರಥವೇರಿ ಹೊರಟ ತೇಜೋಮಯಿ ಚಲನವಲನ ಗಮನ.

  • ಹಂಸಾನಂದಿ, ಉತ್ತರಕ್ಯಾಲಿಫೋರ್ನಿಯ
ಹೊಸ ವರ್ಷ ಶುರುವಾಗಿ, ಕೆಲವು ದಿವಸಗಳಾಯ್ತು ಆಗ್ಲೇ. 2008ರಲ್ಲಿ ಮೊದಮೊದಲಿಗೆ ನಾವು ಆಚರಿಸೋ ಹಬ್ಬ ಅಂದ್ರೆ, ಸಂಕ್ರಾಂತಿ – ಅಥವಾ ಮಕರ ಸಂಕ್ರಮಣ. ನಮ್ಮ ಹಬ್ಬಗಳೆಲ್ಲ ಭಾರತೀಯ ಪಂಚಾಂಗದ ಮೇಲೆ ಆಧಾರಿತವಾದ್ದು ಅಂತ ಎಲ್ರಿಗೂ ಗೊತ್ತು. ಹಾಗೇ, ರಾಮನವಮಿ ಅಂದ್ರೆ, ರಾಮನ ಹುಟ್ಟುಹಬ್ಬ ಅಂತಲೂ, ಕೃಷ್ಣಾಷ್ಟಮಿ ಅಂದ್ರೆ, ಕೃಷ್ಣ ಹುಟ್ಟಿದ ದಿನ ಅಂತ್ಲೂ ಎಲ್ರಿಗೂ ಗೊತ್ತಿರತ್ತೆ. ಆದ್ರೆ, ಈ ಸಂಕ್ರಾಂತಿ, ಅಥವ ಸಂಕ್ರಮಣ ಅಂದ್ರೇನು ಅನ್ನೋದು ಬಹಳ ಜನಕ್ಕೆ ಗೊತ್ತಿರೋದಿಲ್ಲ. ಅದಕ್ಕೇ,Someಕ್ರಮಣದ ಬಗ್ಗೆ ಸ್ವಲ್ಪ Someಗೀತ ಹಾಡೋಣ ಎನ್ನಿಸಿತು.

ಅಂದಹಾಗೆ, ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ ಅಂತ ಗಾದೆ ಇರೋದನ್ನ ಮರೀಬೇಡಿ. ಹಾಗಾಗಿ ಓದಿದ್ದು ಹಿಡೀದಿದ್ರೆ, ಇನ್ನೊಂದು ಸಲ ಓದಿ. ಇನ್ನೂ ಸರಿ ಇಲ್ಲ ಅಂದ್ರೆ ಮತ್ತೊಂದು ಸಲ ಓದಿ. ಆಗ, ಸರಾಗವಾಗಿ ಬಿಡತ್ತೆ. ರಾಗದ ರುಚಿ ತಾನಾಗಿಯೇ ತಿಳಿಯತ್ತೆ.

Hamsanandiನಮಗೆಲ್ಲ ಗೊತ್ತಿರೋ ಹಾಗೆ, ಮುಕ್ಕಾಲುವಾಸಿ ಹಬ್ಬಗಳು ಪ್ರತೀ ವರ್ಷ ಬಂದ ದಿನವೇ ಬರೋಲ್ಲ. ಯುಗಾದಿ ದೀಪಾವಳಿ ಗೌರಿ ಗಣೇಶ ಇವೆಲ್ಲ ಹಾಗೆ. ಒಂದು ಹಬ್ಬ ಮಾತ್ರ ತಪ್ಪದೇ ಸುಮಾರಾಗಿ ಒಂದೇ ದಿನ ಬರುತ್ತೆ. ಅದು ಜನವರಿ 14ರ ದಿನ (ಒಂದೊಂದ್ಸಲ 15ಕ್ಕೋ 16ಕ್ಕೋ ಬಂದ್ರೆ, ನನ್ನ ಕ್ಷಮಿಸಿಬಿಡಿ ಸ್ವಾಮೀ ,ನನ್ ತಪ್ಪಲ್ಲ ಅದು! ಈ ಬಾರಿ 15ಕ್ಕೆ ಬಂದಿದೆ)ಇದರ ಜೊತೆಗೆ ಕರಾವಳಿಯವ್ರು ಯುಗಾದಿನೂ ಹೀಗೇ ಏಪ್ರಿಲ್ ಹದ್ನಾಕರ ದಿನವೇ ಮಾಡ್ತಾರೆ. ಆದ್ರೆ, ನಮ್ಮ ಹಳೇ ಮೈಸೂರಲ್ಲಿ ಯುಗಾದಿ ಅಂದ್ರೆ ಚಾಂದ್ರಮಾನದ್ದೇ. ಮತ್ತೆ ಘಟ್ಟದ ಕೆಳಗ್ನೋರು ಬೇಜಾರು ಮಾಡ್ಕೋಬೇಡಿ ನೋಡಿ ಮತ್ತೆ.

ಸರಿ. ಎಲ್ಲೆಲ್ಲೋ ಹೋಗೋದು ಬಿಟ್ಟು ವಿಷ್ಯಕ್ಕೆ ಬರ್ತೀನಿ. ಈಗ ಈ ಜನವರಿಯಲ್ಲಿ ಆಚರಿಸೋ ಸಂಕ್ರಾಂತಿ, ಮಕರ ಸಂಕ್ರಾಂತಿ ಅಂತ ಮಕ್ಕಳಿಗೂ ಗೊತ್ತು. ಹಾಗಾದ್ರೆ, ಬೇರೆ ಸಂಕ್ರಾಂತಿಗಳು ಇವೆಯೆ? ಖಂಡಿತ. ಇದೊಂದು ಸೂರ್ಯ ಸಂಬಂಧಿ ಘಟನೆ- ಆದ್ರೆ, ನಮ್ಮ ಕಣ್ಣಿಗೆ ಕಾಣೋದನ್ನ, ನಾವು, ನಮ್ಮನುಕೂಲಕ್ಕೆ ಮಾಡಿಕೊಂಡಿರೋದು. ಸೂರ್ಯ, ಮಕರ ಸಂಕ್ರಾಂತಿ ಆಗ್ಲೀ, ಅಥವಾ ತುಲಾ ಸಂಕ್ರಾಂತಿ ಆಗ್ಲಿ, ಏನೂ ಹೆಚ್ಚುವರಿ ಕೆಲ್ಸ ಮಾಡೋನಲ್ಲ. ಆದರೆ, ನಾವು ಆಕಾಶದಲ್ಲಿ ಹನ್ನೆರಡು ರಾಶಿ ಇರೋ ಅಂಥಾ ರಾಶಿಚಕ್ರ ಮಾಡ್ಕೊಂಡಿದೀವಲ್ಲ, ಹಾಗಾಗಿ, ವರ್ಷಕ್ಕೆ ಹನ್ನೆರಡು ಸಂಕ್ರಾಂತಿ ಇರುತ್ವೆ. ವಿವರಣೆ ಸ್ವಲ್ಪ ಸುಲಭ ಆಗ್ಲಿ ಅಂತ ಒಂದು ಚಿತ್ರ ಹಾಕಿದೀನಿ ಮುಂದೆ ನೋಡಿ.

ಮುಂದಿನ ಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X