ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಣಗಣನೆ ಆರಂಭ! : ಅಕ್ಷರ ಜಾತ್ರೆಗೆ ಶಿವಮೊಗ್ಗ ಸಜ್ಜು

By Staff
|
Google Oneindia Kannada News


ಶಿವಮೊಗ್ಗ : ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಎಲ್ಲಾ ರಸ್ತೆಗಳು ರೋಮ್‌ ನಗರವನ್ನೇ ಸೇರುತ್ತವೆ ಎಂಬಂತೆ ಕನ್ನಡ ಪ್ರೇಮಿಗಳು ಶಿವಮೊಗ್ಗದತ್ತ ತೆರಳಲು ಲಗೇಜ್‌ ಪ್ಯಾಕ್‌ ಮಾಡಿಕೊಳ್ಳುತ್ತಿದ್ದಾರೆ.

73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಹಿನ್ನೆಲೆಯಲ್ಲಿ ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಮಲೆನಾಡಿನ ಸೆರಗಿನಲ್ಲಿರುವ ಶಿವಮೊಗ್ಗ ನೆಲಕ್ಕಿದು ಮೂರನೇ ಪುಳಕ. ಈ ಮೂರನೇ ಕನ್ನಡ ಜಾತ್ರೆಯನ್ನು ಯಶಸ್ವಿಗೊಳಿಸಲು, ಕಾರ್ಯಕರ್ತರು ಟೊಂಕಕಟ್ಟಿ ನಿಂತಿದ್ದಾರೆ. ಹಣಕಾಸಿನ ಸಮಸ್ಯೆ ನಿವಾರಣೆಯಾಗಿದ್ದು, ಎಲ್ಲವೂ ನಿರ್ವಿಘ್ನ ಎನ್ನುವಂತಹ ವಾತಾವರಣ.

ಬೇಕಾದ ಪುಸ್ತಕವನ್ನು ಖರೀದಿ ಮಾಡಲು, ನೆಚ್ಚಿನ ಕವಿ ಮತ್ತು ಸಾಹಿತಿಗಳನ್ನು ಭೇಟಿ ಮಾಡಲು ಇದು ಸಕಾಲ. ಡಿ.20, 21 ಮತ್ತು 22ರಂದು ಮೂರು ದಿನಗಳ ಕಾಲ, ಒಂದೇ ವೇದಿಕೆಯಲ್ಲಿ ಲಕ್ಷಾಂತರ ಕನ್ನಡಿಗರ ಸಮ್ಮಿಲನ. ನಾಡು-ನುಡಿ ಬಗ್ಗೆ ಚರ್ಚೆ, ಸಂವಾದ ಇನ್ನು ಏನೇನೋ...

ಈ ಸಲದ ವಿಶೇಷ :

  • 30ಕ್ಕೂ ಅಧಿಕ ಗೋಷ್ಠಿಗಳು.
  • ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌ ಅವರ ಅಧ್ಯಕ್ಷತೆ.
  • ಕೆ.ವಿ.ತಿರುಮಲೇಶ್‌, ವಿ.ಗ.ನಾಯಕ, ಪಂಚಾಕ್ಷರಿ ಹಿರೇಮಠ, ಶಿವಮೊಗ್ಗ ಸುಬ್ಬಣ್ಣ ಅಧ್ಯಕ್ಷತೆಯಲ್ಲಿ ನಾಲ್ಕು ಕವಿಗೋಷ್ಠಿಗಳು.
  • ವೇದಿಕೆಯಲ್ಲಿ 72 ಗಣ್ಯರಿಗೆ ಸನ್ಮಾನ.
  • ‘ವಸುದೇವ ಭೂಪಾಳಂ’ ಸಮಗ್ರ ಕೃತಿ ಸೇರಿದಂತೆ 73 ಪುಸ್ತಕಗಳು ಸಮ್ಮೇಳನದಲ್ಲಿ ಬಿಡುಗಡೆ.
  • ಸಮ್ಮೇಳನದ ಮುಖ್ಯ ವೇದಿಕೆಗೆ ನಟ ‘ರಾಜ್‌ಕುಮಾರ್‌’ ಹೆಸರು.
  • ಸಮ್ಮೇಳನದ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ. ಅಂಬರೀಷ್‌ ಅವರಿಂದ ಲೋಕಾರ್ಪಣೆ. ಲಕೋಟೆಯಲ್ಲಿ ಶಿವಪ್ಪನಾಯಕನ ಭಾವಚಿತ್ರ ಮತ್ತು ಜೋಗ ಜಪಲಾತದ ಚಿತ್ರ.
  • 73 ಗಾಯಕರಿಂದ ನಾಡಗೀತೆ ಮತ್ತು ‘ಹಚ್ಚೇವು ಕನ್ನಡದ ದೀಪ’ ... ಗಾಯನ.
(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X