• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರೆಂಬ ವಲಸಿಗರ ಸ್ವರ್ಗವೂ, ವಲಸೆ ನಿಯಂತ್ರಣದ ಅಗತ್ಯವೂ...

By Staff
|

Sampige Srinivasಕ. ಪು. ಸಂಪಿಗೆ ಶ್ರೀನಿವಾಸ

ಬನವಾಸಿ ಬಳಗ

sampiges@hotmail.com

We need a Migration Policy between Statesಪೀಠಿಕೆ :

ಭಾರತದ ಸಂವಿಧಾನ ಈ ದೇಶದ ಪ್ರಜೆಗೆ ತಾನು ಬಯಸಿದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ನೆಲೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ವಿವರವಾಗಿ ಹೇಳಬೇಕೆಂದರೆ ಭಾರತದ ಪ್ರಜೆ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ, ಅಥವಾ ಇನ್ನಾವುದೇ ಕಾರಣಕ್ಕಾಗಿ ತಾನು ಹುಟ್ಟಿದ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಬಹುದು. ತಾನು ವಲಸೆ ಹೋದ ಸ್ಥಳದಲ್ಲಿ ಸ್ಥಿರಾಸ್ತಿಯನ್ನು (ಜಮೀನು, ನಿವೇಶನ, ಮನೆ ಇತ್ಯಾದಿಯನ್ನು) ಹೊಂದಬಹುದು. ಇದಕ್ಕೆ ಒಂದೇ ಒಂದು ಅಪವಾದವೆಂದರೆ ಜಮ್ಮು ಮತ್ತು ಕಾಶ್ಮೀರ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭಾರತದ ಬೇರೆ ಭಾಗದ ಪ್ರಜೆಗಳು ಅಲ್ಲಿ ಉದ್ಯೋಗವನ್ನು ಮಾಡಬಹುದು, ಬಾಡಿಗೆ ಮನೆಯಲ್ಲಿ ಇರಬಹುದು, ಆದರೆ ಆ ರಾಜ್ಯದ ಯಾವುದೇ ಸ್ಥಳದಲ್ಲಿ ಸ್ಥಿರಾಸ್ತಿಯನ್ನು ಹೊಂದುವ ಅಧಿಕಾರ ಅವನಿ/ಅವಳಿಗೆ ಇರುವುದಿಲ್ಲ!

ಅಂತರ್‌ ರಾಜ್ಯ ವಲಸೆ ಮತ್ತು ಕರ್ನಾಟಕದ ಜನಸಂಖ್ಯೆ

ಕರ್ನಾಟಕ ರಾಜ್ಯ ಭಾರತ ದೇಶದಲ್ಲಿ ಔದ್ಯೋಗಿಕವಾಗಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದೆನಿಸಿದೆ. ಅದರಲ್ಲೂ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ಮಹಾನಗರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿ ಪಡೆದಿದೆ. ಏಷಿಯಾ ಖಂಡದಲ್ಲೇ ಅತಿ ಶೀಘ್ರವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಮೊದಲನೆ ಸ್ಥಾನದಲ್ಲಿದೆ.

1991ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 4 ಕೋಟಿ. ಕರ್ನಾಟಕದಲ್ಲಿ ಕಳೆದ ನಾಲ್ಕು ದಶಕಗಳಲ್ಲಿನ ಬೇರೆ ಬೇರೆ ಭಾಷಿಕರ ಜನಸಂಖ್ಯೆಯ ಪಟ್ಟಿಯಲ್ಲಿನ ಶೇಕಡಾವಾರು ಬದಲಾವಣೆಗಳನ್ನು ನೋಡಿ.

1961197119811991ಏರಿಕೆ/ ಇಳಿಕೆ ಕನ್ನಡ65.1765.9465.6966.2+ 1.03ಉರ್ದು8.64 9.009.53 9.96+ 1.32ತೆಲುಗು8.688.178.127.39 1.29ಮರಾಠಿ4.554.05 3.77 3.64 0.91ತಮಿಳು3.643.36 3.763.84 + 0.20ತುಳು3.61 3.563.303.06 0.55ಹಿಂದಿ0.350.441.781.96+ 1.61ಕೊಂಕಣಿ2.08 1.96 1.74 1.57 0.51ಮಲಯಾಳಂ1.301.41 1.60 1.68+ 0.38ಕೊಡಗು0.330.24 0.21 0.12ಗುಜರಾತಿ0.120.09 0.01

(ಅಂಕಿ ಅಂಶ : http://www.languageinindia.com/dec2002/karnatakaeducationpolicy.html)

ಇದನ್ನು ವಿಶ್ಲೇಷಿಸಿದರೆ ನಮಗೆ ಅಚ್ಚರಿಯ ಮಾಹಿತಿಗಳು ತಿಳಿದು ಬರುತ್ತವೆ. ಉರ್ದು, ತಮಿಳು, ಹಿಂದಿ ಹಾಗೂ ಮಲಯಾಳಿ ಭಾಷಿಕರ ಜನಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದು 1991ರ ಜನಗಣತಿಯ ಅಂಕಿಅಂಶಗಳು ಮಾತ್ರ. 2001 ರ ಜನಗಣತಿಯ ಅಂಕಿಆಂಶಗಳು ದೊರೆತ ಮೇಲೆ ಕರ್ನಾಟಕದಲ್ಲಿ ಪರಭಾಷಿಕರ ಜನಸಂಖ್ಯೆಯ ನಿಜವಾದ ಚಿತ್ರ ಗೋಚರವಾಗುತ್ತದೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಪರಭಾಷಿಕರ ಸಂಖ್ಯೆಬಹಳ ಹೆಚ್ಚಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ತಮಿಳು, ಹಿಂದಿ, ತೆಲುಗು ಹಾಗು ಮಲಯಾಳಿ ಭಾಷಿಕರ ಜನಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಮುಖ್ಯವಾದ ಕಾರಣ, ಆಯಾ ಭಾಷೆ ಮಾತನಾಡುವ ಜನರು ತಮ್ಮ ಮೂಲ ರಾಜ್ಯಗಳಿಂದ ಉದ್ಯೋಗ, ವ್ಯಾಪಾರ ಹಾಗು ಇನ್ನಿತರ ಕಾರಣಗಳಿಗಾಗಿ ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿರುವುದು!

ಅಂತರ್‌ ರಾಜ್ಯ ವಲಸೆ ಮತ್ತು ಬೆಂಗಳೂರು

ಒಂದು ಕಾಲದಲ್ಲಿ ಬೆಂಗಳೂರನ್ನು ಉದ್ಯಾನ ನಗರಿ, ನಿವೃತ್ತರ ಸ್ವರ್ಗ ಎಂದೆಲ್ಲ ಕರೆಯುತ್ತಿದ್ದರು. ಆದರೆ ಈಗಿನ ಬೆಂಗಳೂರಿನ ಪರಿಸ್ಥಿತಿಯನ್ನು ನೋಡಿದ ಬೆಂಗಳೂರಿನ ಮೂಲನಿವಾಸಿಗಳಿಗೆ ಹಳೆಯ ಬೆಂಗಳೂರು ಒಂದು ಸುಂದರ ನೆನಪು ಮಾತ್ರ.

ಯಾವಾಗ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಾಗಿ, ಇಲ್ಲಿ ಸಾವಿರಾರು ಐಟಿ ಕಂಪನಿಗಳು ತಮ್ಮ ಕಛೇರಿಯನ್ನು ನೆಲೆಗೊಳಿಸಿದರೋ, ಅಂದಿನಿಂದ ಬೆಂಗಳೂರಿಗೆ ಪರಭಾಷಿಕರ ವಲಸೆ ಹೆಚ್ಚಾಗತೊಡಗಿತು. ಇಲ್ಲಿನ ಹಿತವಾದ ಹವಾಮಾನ, ಕುಡಿಯಲು ಕಾವೇರಿ ನೀರಿನ ಉಪಲಬ್ಧತೆ, ವಿಶಾಲ ಮನೋಭಾವದ ಕನ್ನಡಿಗರು, ಇಲ್ಲಿನ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳು, ಈ ಎಲ್ಲ ಕಾರಣಗಳಿಂದ ಬೆಂಗಳೂರು ಪರರಾಜ್ಯಗಳ ಜನರನ್ನು ಆಕರ್ಷಿಸುತ್ತಿದೆ, ಬೆಂಗಳೂರಿಗೆ ಉದ್ಯೋಗ ಹಾಗೂ ವ್ಯಾಪಾರದ ಸಲುವಾಗಿ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತಗಳಿಂದ ಹಿಂದಿ ಮತ್ತು ಇತರೆ ಭಾಷಿಕರ ವಲಸೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಳೆದ ಒಂದು ದಶಕದಲ್ಲಿ ಪರಭಾಷಾ ವಲಸಿಗರ ದಾಳಿಗೆ ತುತ್ತಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಮಿತಿಮೀರಿ ಬೆಳೆದಿದೆ. 2001ರ ಜನಗಣತಿಯ ಆಧಾರದಲ್ಲಿ ಬೆಂಗಳೂರಿನ ಜನಸಂಖ್ಯೆ 80 ರಿಂದ 90 ಲಕ್ಷ. ಒಂದು ಮಾಹಿತಿಯ ಪ್ರಕಾರ ಪ್ರತಿದಿನ ಬೆಂಗಳೂರು ನಗರದಲ್ಲಿ 5000 ಜನ ಪರರಾಜ್ಯಗಳಿಂದ ವಲಸೆ ಬಂದು ನೆಲೆಸುತ್ತಿದ್ದಾರೆ.

ಬೆಂಗಳೂರು ಮಹಾನಗರಕ್ಕೆ ಪರಭಾಷಿಕರ ಅನಿಯಂತ್ರಿತ ವಲಸೆಯಿಂದ, ಇಲ್ಲಿನ ಮೂಲ ನಿವಾಸಿಗಳಾದ ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದಾರೆ ಹಾಗೂ ಬೆಂಗಳೂರು ನಗರ ನಾನಾ ತರದ ಸಮಸ್ಯೆಗಳ ಕೂಪವಾಗಿದೆ. ಬೆಂಗಳೂರಿನ ಮಿತಿಮೀರಿದ ಜನಸಂಖ್ಯೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಗರದ ಆಡಳಿತಗಾರರಿಗೆ ಬಹಳ ಕಷ್ಟಕರವಾಗಿ ಪರಿಣಮಿಸುತ್ತಿದೆ. ಜೊತೆಗೆ ನಗರದಲ್ಲಿ ಮಿತಿಮೀರಿದ ವಾಹನ ದಟ್ಟಣೆಯಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಇದರಿಂದ ಬೆಂಗಳೂರಿಗರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ.

ವಲಸೆ ಮತ್ತು ಕನ್ನಡ ಸಂಸ್ಕೃತಿಯ ಮೇಲಿನ ದುಷ್ಪರಿಣಾಮಗಳು

ಕನ್ನಡಿಗರು ಐತಿಹಾಸಿಕವಾಗಿ ವಿಶಾಲ ಮನೋಭಾವದವರು, ಸೌಜನ್ಯಶೀಲರು, ಶಾಂತಿಪ್ರಿಯರು. ಈ ಒಳ್ಳೆಯ ಗುಣಗಳೇ ಕನ್ನಡಿಗರಿಗೆ, ಕನ್ನಡ ಸಂಸ್ಕೃತಿಗೆ ಕಂಟಕಪ್ರಾಯವಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಕರುನಾಡಿಗೆ ನಾನಾ ಕಾರಣಗಳಿಂದ ವಲಸೆ ಬಂದ ಪರಭಾಷಿಕರು, ಕನ್ನಡಿಗರ ಈ ಸದ್ಗುಣಗಳನ್ನು ದೌರ್ಬಲ್ಯವೆಂದು ತಿಳಿದುಕೊಂಡು ಕನ್ನಡಿಗರ ಮೇಲೆ ಕನ್ನಡದ ನೆಲದಲ್ಲೇ ದಬ್ಬಾಳಿಕೆ ನಡೆಸುತ್ತಿದ್ದಾರೆ. ಬಹಳಷ್ಟು ಜನ ಕನ್ನಡಿಗರಲ್ಲಿನ ಸ್ವಾಭಿಮಾನದ ಕೊರತೆಯೇ ಕನ್ನಡಿಗರನ್ನು ಮತ್ತು ಕನ್ನಡ ಸಂಸ್ಕೃತಿಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ.

ಕರ್ನಾಟಕ ರಾಜ್ಯಕ್ಕೆ ಎಲ್ಲ ದಿಕ್ಕುಗಳಿಂದಲೂ ಪರಭಾಷಿಕರ ವಲಸೆ ಹರಿದು ಬರುತ್ತಿದೆ. ಉತ್ತರದ ಉತ್ತರ ಕನ್ನಡ, ಬೆಳಗಾವಿ, ವಿಜಾಪುರ, ಕಲ್ಬುರ್ಗಿ(ಗುಲ್ಬರ್ಗ), ಬೀದರ್‌ ಜಿಲ್ಲೆಗಳಲ್ಲಿ ಮರಾಠಿ ಭಾಷಿಕರು, ಪೂರ್ವದ ರಾಯಚೂರು, ಬಳ್ಳಾರಿ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ತೆಲುಗರು, ದಕ್ಷಿಣ ಪೂರ್ವ ದಿಕ್ಕಿನ ಬೆಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಮಿಳರು, ನೈರುತ್ಯ ದಿಕ್ಕಿನ ಕೊಡಗು ಹಾಗು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದು ನೆಲಸಿದ್ದಾರೆ.

ಹೀಗೆ ವಲಸೆ ಬಂದ ಪರಭಾಷಿಕರು ತಾವು ಬಂದು ನೆಲಸಿದ ನೆಲದ ಭಾಷೆಯನ್ನು, ಸಂಸ್ಕೃತಿಯನ್ನು ಸ್ವೀಕರಿಸದೆ, ಗೌರವಿಸದೆ, ತಮ್ಮ ಮೂಲ ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಕನ್ನಡ ಸಂಸ್ಕೃತಿಯ ಮೇಲಿನ ಪರಭಾಷಿಕರ ದಾಳಿ ಎಂದರೆ ತಪ್ಪಾಗಲಾರದು. ಇದೇ ರೀತಿ ಕರ್ನಾಟಕ ರಾಜ್ಯಕ್ಕೆ ಪರಭಾಷಿಕರ ವಲಸೆ ಮುಂದುವರಿದರೆ ಕನ್ನಡಿಗರು ಕರ್ನಾಟಕದಲ್ಲೇ ಅಲ್ಪಸಂಖ್ಯಾತರಾಗಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಕನ್ನಡಿಗರು ಶೀಘ್ರಜಾಗೃತರಾಗಿ, ಸ್ವಾಭಿಮಾನಿಗಳಾಗಿ, ಪರಭಾಷಿಕರ ವಲಸೆಯನ್ನು, ಪಿತೂರಿಯನ್ನು ನಿಯಂತ್ರಿಸದಿದ್ದರೆ ಕನ್ನಡಿಗರು ತಮ್ಮ ನೆಲದಲ್ಲೆ ಪರದೇಶಿಗಳಾಗಿ ಬದುಕಬೇಕಾದ ಸಂದರ್ಭ ಬರುವುದರಲ್ಲಿ ಅನುಮಾನವಿಲ್ಲ.

ಈಗಾಗಲೆ ಕರ್ನಾಟಕದ ಗಡಿ ಪ್ರದೇಶಗಳಾದ ಬೆಳಗಾವಿ, ಬಳ್ಳಾರಿ, ರಾಯಚೂರು, ಕೋಲಾರ, ಕೊಡಗು, ಹಾಗು ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಕರ ವಲಸೆಯ ದುಷ್ಪರಿಣಾಮಗಳನ್ನು ನೋಡಬಹುದು. ಪರಭಾಷಿಕರ ವಲಸೆಯಿಂದ ಈ ಜಿಲ್ಲೆಗಳಲ್ಲಿ -

1. ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಕನ್ನಡ ಭಾಷೆ ಮಾಯವಾಗುತ್ತಿದೆ.

2. ಕನ್ನಡಿಗರಿಗೆ ಉದ್ಯೋಗ ಸಿಗುವುದು ಬಹಳ ಕಷ್ಟವಾಗುತ್ತಿದೆ. ಉದ್ಯೋಗವೆಲ್ಲ ಪರಭಾಷಿಕರ ಪಾಲಾಗುತ್ತಿವೆ.

3. ಕನ್ನಡ ಚಿತ್ರಗಳಿಗೆ ತನ್ನ ನೆಲದಲ್ಲೇ ಮಾರುಕಟ್ಟೆ ಇಲ್ಲದಂತಾಗಿ, ಪರಭಾಷಾ ಚಿತ್ರಗಳು ಭರ್ಜರಿಯಾಗಿ ಪ್ರದರ್ಶಿತವಾಗುತ್ತಿವೆ.

4. ಕನ್ನಡದ ನಾಮಫಲಕಗಳು ಕಡಿಮೆಯಾಗಿ ಎಲ್ಲಿ ನೋಡಿದರು ಆಂಗ್ಲ ಭಾಷೆ ರಾರಾಜಿಸುತ್ತಿದೆ. ಕನ್ನಡದ ಸುಂದರ ನುಡಿಮುತ್ತುಗಳನ್ನು ಪರಭಾಷಾ ಲಿಪಿಗಳು ಆಕ್ರಮಿಸಿಕೊಂಡಿವೆ.

5. ಕನ್ನಡಿಗರು ಅದರಲ್ಲೂ ಕನ್ನಡದ ಕಂದಮ್ಮಗಳು ರಾಷ್ಟ್ರಭಾಷೆಯ ಸುಳ್ಳೇ ನೆಪದಲ್ಲಿ ಹಿಂದಿಯನ್ನು ಮತ್ತು ಇತರ ಭಾಷೆಗಳನ್ನು ಕಲಿತು ತಮ್ಮ ಭಾಷೆಯನ್ನು ಮರೆಯುತ್ತಿದ್ದಾರೆ. ಕನ್ನಡ ಭಾಷೆ ಅಡಿಗೆ ಮನೆಯಲ್ಲೇ ಉಳಿಯುವಂತಾಗಿದೆ. ಇನ್ನು ಕೆಲವು ಕನ್ನಡಿಗರು ತಮ್ಮ ಮನೆಗಳಲ್ಲೂ ಆಂಗ್ಲ ಭಾಷೆ ಅಥವಾ ಹಿಂದಿ ಭಾಷೆಯನ್ನು ಉಪಯೋಗಿಸುತ್ತ ಕನ್ನಡವನ್ನು ಕಡೆಗಣಿಸಿದ್ದಾರೆ.

6. ಇಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದ ಪತ್ರಿಗೆಗಳ, ನಿಯತಕಾಲಿಕೆಗಳ, ಪುಸ್ತಕಗಳ ಜಾಗದಲ್ಲಿ ಪರಭಾಷೆಗಳ ಪತ್ರಿಕೆಗಳು, ನಿಯತಕಾಲಿಕೆಗಳು ಮಾರಾಟವಾಗುತ್ತಿವೆ.

7. ಗಣೇಶೋತ್ಸವ ಹಾಗೂ ಇತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕನ್ನಡದ ಚಿತ್ರಗೀತೆಗಳು, ಭಕ್ತಿ ಗೀತೆಗಳ ಸ್ಥಾನದಲ್ಲಿ ಪರಭಾಷಾ ಗೀತೆಗಳು ಮೆರೆಯುತ್ತಿವೆ.

8. ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಇಲ್ಲಿನ ಪರಭಾಷಾ ವಲಸಿಗರು ರಾಜಕೀಯ ವೋಟ್‌ ಬ್ಯಾಂಕುಗಳಾಗಿ ಕರ್ನಾಟಕದ ರಾಜಕೀಯದ ಮೇಲೂ ತಮ್ಮ ಹಿಡಿತವನ್ನು ಸಾದಿಸುತ್ತಿದ್ದಾರೆ. ಉದಾಹರಣೆಗೆ, ಬೆಳಗಾವಿಯಲ್ಲಿ ಮರಾಠಿಗರು ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು, ಕೆ.ಜಿ.ಎಫ್‌ ಹಾಗೂ ಬೆಂಗಳೂರಿನಲ್ಲಿ ತಮಿಳರು ದ್ರಾವಿಡ ಪಕ್ಷಗಳನ್ನು ಪೋಷಿಸುತ್ತಿದ್ದಾರೆ.

9. ಕನ್ನಡದ ನೆಲವನ್ನು ಪರಭಾಷಾ ನೆಲಗಳ್ಳರು ಆಕ್ರಮಿಸಿಕೊಂಡು ಪರಭಾಷಿಕರಿಗೆ ಮಾರಿಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಈ ನಗರಗಳಲ್ಲಿ ಸ್ವಂತ ನಿವೇಶನ ಸಿಗದಂತಾಗಿದೆ, ಸಿಕ್ಕರೂ ದುಬಾರಿ ಬೆಲೆ ತೆರಬೇಕಾಗಿದೆ.

10. ಕರ್ನಾಟಕದ ಪಶ್ಚಿಮ ಘಟ್ಟದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ಅರಣ್ಯ ಸಂಪತ್ತನ್ನು ರಬ್ಬರ್‌, ಕಾಫಿ ಇತ್ಯಾದಿ ವಾಣಿಜ್ಯ ಬೆಳೆಗಳಿಗಾಗಿ ಕೇರಳದ ವಲಸಿಗರು ನಾಶಮಾಡುತ್ತಿದ್ದಾರೆ.

ಅಂತರ್‌ ರಾಜ್ಯ ವಲಸೆ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿಯ ಅವಶ್ಯಕತೆ

ವಲಸೆಯ ದುಷ್ಪರಿಣಾಮಗಳು ಬರಿ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿಲ್ಲ. ಭಾರತದ ಇತರ ರಾಜ್ಯಗಳಾದ ಅಸ್ಸಾಮ್‌, ಒರಿಸ್ಸಾ ಇತ್ಯಾದಿ ರಾಜ್ಯಗಳಲ್ಲೂ ಪರರಾಜ್ಯಗಳ ವಲಸಿಗರಿಂದ ಇದೇ ರೀತಿಯ ಸಮಸ್ಯೆಗಳಿವೆ. ಉದಾಹರಣೆಗೆ ಅಸ್ಸಾಮಿನಲ್ಲಿ ಬಿಹಾರಿಗಳು, ಬೆಂಗಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿ ನೆಲಸಿ ಅಲ್ಲಿನ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದ ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕರ್ನಾಟಕದಲ್ಲೂ ಇದೇ ರೀತಿಯಲ್ಲಿ ವಲಸಿಗರ ದಬ್ಬಾಳಿಕೆ ಮುಂದುವರೆದರೆ ಶಾಂತಿಪ್ರಿಯ ಕನ್ನಡಿಗರು ಸಿಡಿದೇಳುವ ದಿನಗಳು ದೂರವಿಲ್ಲ.

ಪರರಾಜ್ಯಗಳಿಂದ ಮತ್ತೊಂದು ರಾಜ್ಯಕ್ಕೆ ಈ ರೀತಿಯ ವಲಸೆ ನಡೆಯಲು ಮುಖ್ಯ ಕಾರಣ, ಆ ರಾಜ್ಯಗಳಲ್ಲಿನ ಮಿತಿಮೀರಿದ ಜನದಟ್ಟಣೆ, ಉದ್ಯೋಗ ಮತ್ತು ವ್ಯಾಪಾರದ ಅವಕಾಶಗಳ ಕೊರತೆ ಮತ್ತು ಆ ರಾಜ್ಯಗಳು ಔದ್ಯೋಗಿಕವಾಗಿ ಅಭಿವೃದ್ದಿ ಹೊಂದದೇ ಇರುವುದು.

ಅನಿಯಂತ್ರಿತ ವಲಸೆಯಿಂದ ರಾಜ್ಯಗಳ ನಡುವೆ ಭಾಷಾ ವೈಮನಸ್ಯ-ಕಲಹಗಳು ಸಂಭವಿಸಿ, ಭಾರತದ ಏಕತೆಗೆ ಧಕ್ಕೆ ಒದಗುವ ಸಾಧ್ಯತೆಗಳಿವೆ. ಆದ್ದರಿಂದ ಸಂವಿಧಾನಕ್ಕೆ ತಿದ್ದುಪಡಿ ಮಾಡಿಯಾದರೂ ಸರಿ, ಅಂತರ್‌ ರಾಜ್ಯ ವಲಸೆಯ ಮೇಲೆ ನಿಯಂತ್ರಣ ಹೇರಲು ಒಂದು ರಾಷ್ಟ್ರೀಯ ನೀತಿಯನ್ನು ಶೀಘ್ರವಾಗಿ ಜಾರಿ ಮಾಡುವ ಅವಶ್ಯಕತೆ ಇದೆ. ಇದರ ಬಗ್ಗೆ ಕನ್ನಡ ನಾಡಿನ ಪ್ರಜ್ಞಾವಂತ ಯುವಕರು, ಬುದ್ಧಿಜೀವಿಗಳು, ಸಾಹಿತಿಗಳು, ವಿಚಾರವಂತರು ಯೋಚಿಸಿ, ರಾಜಕಾರಣಿಗಳ ಮೇಲೆ ಒತ್ತಡ ಹೇರಬೇಕಾದ ಸಮಯ ಬಂದಿದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more