ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ ಎಷ್ಟೊಂದು ಸುಂದರ!

By Staff
|
Google Oneindia Kannada News
  • ವರದಿ : ವೀರೇಶ ಹೊಗೆಸೊಪ್ಪಿನವರ
    ಚಿತ್ರಗಳು : ಗಗನ್‌, ಮೈಸೂರು.

    [email protected]
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಈಗ ದಸರಾ ಹಬ್ಬದ ಸಂಭ್ರಮ. ಎಲ್ಲೆಲ್ಲೂ ಕಣ್ಣು ಕೋರೈಸುವ ದೀಪಗಳ ಅಲಂಕಾರ. ರಾತ್ರಿ ವೇಳೆ ಮಿಣಮಿಣ ಮಿರುಗುವ ಮೈಸೂರು ಅರಮನೆಯನ್ನು ನೋಡುವುದೇ ಒಂದು ಅದ್ಭುತ.

ಪ್ರವಾಸಿಗರು ಮೈಸೂರಿನತ್ತ ಹೆಜ್ಜೆಹಾಕುತ್ತಿದ್ದಾರೆ. ಸದ್ದುಗದ್ದಲ ಅರಿಯದ ಮೈಸೂರು, ಈಗ ಗಿಜಿಗುಟ್ಟುತ್ತಿದೆ. ನಾನಾ ಸಾಂಸ್ಕೃತಿಕ ಚಟುವಟಿಕೆಗಳು ಜನಕ್ಕೆ ಮನರಂಜನೆ ನೀಡುತ್ತಿವೆ. ಹೋಟೆಲ್‌ಗಳಲ್ಲಿ ವಸತಿಗೆ ಈಗಾಗಲೇ ಬುಕ್ಕಿಂಗ್‌ ಶುರುವಾಗಿದೆ.

Famous Mysore Palace illuminated

Dr. Balamurali Krishna performing
People throng from all part of the world to witness
ದಸರಾಗೆ ಚಾಲನೆ ನೀಡಿದ ಬಂಡಾಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ತಾಯಿ ಚಾಮುಂಡಿಯ ಪೂಜಾವಿಧಿಗಳಲ್ಲಿ ಪಾಲ್ಗೊಳ್ಳದಿರುವುದು ವಿವಾದಕ್ಕೆ ಕಾರಣವಾಗಿದೆ. ದಸರಾ ಸಂಭ್ರಮ ವಿವಾದವನ್ನು ತುಸು ತಣ್ಣಗಾಗಿಸಿದೆ.

ಬರಗೂರರ ಬದಲು ಉಪಮುಖ್ಯಮಂತ್ರಿ ಎಂ. ಪಿ. ಪ್ರಕಾಶ್‌ ಅವರು, ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ, ದಸರಾವನ್ನು ಅಧಿಕೃತವಾಗಿ ಉದ್ಘಾಟಿಸಿದರು. ನಂತರ ನಡೆದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ದೀಪ ಬೆಳಗಿಸುವುದರ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡುವ ಶಾಸ್ತ್ರ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಬರಗೂರು, ದಸರಾ ಹಬ್ಬವು ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಉತ್ಸವವಾಗಿ ಬೆಳೆಯಲಿ ಎಂದು ಆಶಿಸಿದರು.

ಕಲಾಮಂದಿರದಲ್ಲಿ ಚಲನಚಿತ್ರೋತ್ಸವ, ಮೈಸೂರು ಅರಮನೆಯ ಆವರಣದಲ್ಲಿ ಸಂಗೀತೋತ್ಸವಗಳು ಈಗಾಗಲೇ ಆರಂಭಗೊಂಡಿವೆ. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ತಾರಾ ಮಾತನಾಡಿ, ನನ್ನ ತಾತಾ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ನನಗೆ ದಸರಾ ಬಗ್ಗೆ ಕಥೆ ಹೇಳುತ್ತಿದ್ದರು. ಈಗ ಅರಮನೆ ಎದುರು ನಿಲ್ಲುವ ಯೋಗ ನನಗೆ ಸಿಕ್ಕಿದೆ ಎಂದು ಧನ್ಯತೆ ವ್ಯಕ್ತಪಡಿಸಿದರು.

ಮತ್ತೊಂದೆಡೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರವೀಣ್‌ ಗೋಡ್ಕಿಂಡಿ ಮತ್ತು ತಂಡದವರು ತಮ್ಮ ಕೊಳಲು ವಾದನದಿಂದ ಒಂದು ಹಿಂದುಸ್ತಾನಿ ರಾಗವನ್ನು ನುಡಿಸಿದರು. ನಂತರ ಮಿಶ್ರ ಪಹಾಡಿ ರಾಗವನ್ನು ನುಡಿಸಿ, ಸಂಗೀತ ಪ್ರೇಮಿಗಳನ್ನು ರಂಜಿಸಿದರು. ಡಾ.ಬಾಲಮುರಳಿ ಕೃಷ್ಣ ಅವರು ಕರ್ನಾಟಕ ರಾಗಗಳ ವರ್ಣ, ಕೀರ್ತನೆಗಳನ್ನು ಹಾಡಿ ಪ್ರೇಕ್ಷಕರನ್ನು ಗಾನಲೋಕದಲ್ಲಿ ತೇಲಿಸಿದರು.

ಝಗಮಗಿಸುವ ಆರಮನೆಯ ಹಿನ್ನೆಲೆಯಲ್ಲಿ ಸಂಗೀತವನ್ನು ಆಸ್ವಾದಿಸುವುದೇ ಒಂದು ಅಮೋಘ ಅನುಭವವಾಗಿತ್ತು. ಹಲವಾರು ಜನ ಆಸನಗಳನ್ನು ಬಿಟ್ಟು ಆವರಣದಲ್ಲಿ ಓಡಾಡುತ್ತಿದ್ದುದು ಕಂಡು ಬಂತು. ಉತ್ತರ ಕರ್ನಾಟಕದಿಂದ ಬಂದಿದ್ದ ದಂಪತಿಗಳು ಚಂದ್ರಶೇಖರ ಕಂಬಾರರ ‘ಮೂಡಲ ಮನೆಯ’ ದೇಶ್‌ಮುಖ್‌ ಅವರನ್ನು ನೆನಪಿಸಿಕೊಂಡರು!

ನಾನು ದಸರಾ ಸಂದರ್ಭದ ಕೆಲವು ಮಿಂಚುಗಳನ್ನಷ್ಟೇ ಇಲ್ಲಿ ನೆನೆದಿದ್ದೇನೆ. ದಸರಾ ಸಂದರ್ಭದಲ್ಲಿ ಮೈಸೂರಿಗೆ ಮೈಸೂರು ರೋಮಾಂಚನ ಅನುಭವಿಸುತ್ತದೆ. ಪ್ರತಿದಿನವೂ ಒಂದೊಂದು ಸಂಭ್ರಮ, ಒಂದೊಂದು ಪುಳಕ!

ನಗರದ ವೈಭವ, ‘ಮೈಸೂರು ದಸರಾ ಎಷ್ಟೊಂದು ಸುಂದರ’ ಎಂಬ ಹಾಡನ್ನು ನೆನಪುಮಾಡುತ್ತದೆ.

ಬನ್ನಿ ಮೈಸೂರಿಗೆ ...


ಪೂರಕ ಓದಿಗೆ-
ಹಬ್ಬ ಮಾಡೋಣ ಬನ್ನಿರೋ, ಕೂಡಿ ನಲಿಯೋಣ ಬನ್ನಿರೋ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X