ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಿ, ಹಂಗಿಲ್ಲದ ದೇಶ ಕಟ್ಟೋಣ !

By Staff
|
Google Oneindia Kannada News

ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯೋತ್ಸವ ಆಚರಿಸುವ ಸಮಯ ಬಂದಿದೆ. ಈ ಸಂದರ್ಭದಲ್ಲಿ ‘ಭಾರತ ಮಾತೆಯ ಕರೆ’ ಎಂಬ ಒಂದು ವಿಶೇಷ ಪರೀಕ್ಷೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಜಾದೀ ಬಚಾವೋ ಆಂದೋಲನದ ಸಂಘಟಕರು ಆಯೋಜಿಸಿದ್ದಾರೆ.

ಹೆಚ್ಚು ಹೆಚ್ಚು ಜನರಿಗೆ ಆಂದೋಲನದ ವಿಚಾರಧಾರೆ, ರಾಷ್ಟ್ರೀಯ ಹಾಗೂ ವಿಶೇಷ ವಿಚಾರಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪರೀಕ್ಷೆಯು ಆಜಾದೀ ಬಚಾವೋ ಆಂದೋಲನದ ಹೆಮ್ಮೆಯ ಪ್ರಕಟಣೆಯಾದ ‘ಭಾರತ ಮಾತೆಯ ಕರೆ’ ಪುಸ್ತಕವನ್ನು ಆಧರಿಸಿದೆ.

ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳೂ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಯೋಜನೆಯ ಲಾಭವನ್ನು ಕರ್ನಾಟಕದಾದ್ಯಂತ ಕನಿಷ್ಠ 10,000 ವಿದ್ಯಾರ್ಥಿಗಳು ಪಡೆದುಕೊಳ್ಳುವ ನಿರೀಕ್ಷೆ ಇದೆ.

ಕೆಲವು ನಿಯಮಗಳಿವೆ, ದಯವಿಟ್ಟು ಗಮನಿಸಿ :

  • ವಿದ್ಯಾರ್ಥಿಗಳು ರೂ.10 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು
  • ನೋಂದಾಯಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ‘ಭಾರತ ಮಾತೆಯ ಕರೆ’ ಎಂಬ ಇಪ್ಪತ್ತು ರೂಪಾಯಿ ಬೆಲೆಯುಳ್ಳ ಪುಸ್ತಕವನ್ನು (ಪ್ರೌಢಶಾಲಾ ವಿದ್ಯಾರ್ಥಿಗಳ ವಿಶೇಷ ಸಂಚಿಕೆ) ಕೊಡಲಾಗುತ್ತದೆ.
  • ಪ್ರತಿ ಶಾಲೆಯಲ್ಲೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ. ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನಗಳನ್ನು ಕೊಡಲಾಗುತ್ತದೆ.
  • ಪರೀಕ್ಷೆ ತೆಗೆದುಕೊಳ್ಳುವ ಪ್ರತಿ ವಿದ್ಯಾರ್ಥಿಗೂ ಆಂದೋಲನದ ರಾಷ್ಟ್ರೀಯ ನಾಯಕರಾದ ರಾಜೀವ್‌ ದೀಕ್ಷಿತರ ಹಸ್ತಾಕ್ಷರವಿರುವ ಪ್ರಶಸ್ತಿ ಪತ್ರ ಕೊಡಲಾಗುತ್ತದೆ.
  • ಭಾಗವಹಿಸಿದ ಪ್ರತಿ ಶಾಲೆಗೂ ಅಭಿನಂದನಾ ಪ್ರಶಸ್ತಿಪತ್ರ ಕೊಡಲಾಗುವುದು.
ಕಾರ್ಯಕರ್ತರಿಗೆ ಕೆಲವು ಸೂಚನೆಗಳು :
  • ಕಾರ್ಯಕರ್ತರು ಅಥವಾ ಯಾವುದೇ ದೇಶಾಭಿಮಾನಿಗಳು ತಮ್ಮ ಪ್ರದೇಶಗಳ ಅಥವಾ ಪರಿಚಿತರ ಶಾಲೆಗಳಿಗೆ ಭೇಟಿ ನೀಡಿ, ಈ ಯೋಜನೆಯ ಬಗ್ಗೆ ತಿಳಿಸ ಬೇಕು. ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದಾದ ವಿದ್ಯಾರ್ಥಿಗಳ ಸಂಖ್ಯೆಯ ಅಂದಾಜು ಮಾಡಿಕೊಂಡು, ಬೇಕಾಗಿರುವ ಪುಸ್ತಕಗಳ ಸಂಖ್ಯೆಯನ್ನು ಬೆಂಗಳೂರು ಕಚೇರಿಗೆ ಪತ್ರ ಬರೆಯುವುದು ಅಥವಾ ಫೋನ್‌ ಮೂಲಕ ತಿಳಿಸುವುದು. ಅಥವಾ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು.
  • ಕಾರ್ಯಕರ್ತರಿಗೆ ಪುಸ್ತಕವನ್ನು ಕಳುಹಿಸಲಾಗುವುದು. ಕಾರ್ಯಕರ್ತರು ವಿದ್ಯಾರ್ಥಿಗಳಿಂದ ಪರೀಕ್ಷೆ ಶುಲ್ಕ ರೂ 10ನ್ನು ಸಂಗ್ರಹಿಸಿ ತಕ್ಷಣವೇ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಕೊಡುವುದು. ಜುಲೈ 10-15ರೊಳಗೆ ವಿದ್ಯಾರ್ಥಿಗಳಿಗೆ ಪುಸ್ತಕ ದೊರಕಿಸಿಕೊಟ್ಟರೆ ವಿದ್ಯಾರ್ಥಿಗಳು ಅಧ್ಯಯನ ಮಾಡುವುದಕ್ಕೆ ಹೆಚ್ಚಿನ ಸಮಯ ಸಿಗುತ್ತದೆ.
  • ಈ ಪರೀಕ್ಷೆಯು ಇತರೆ ಪರೀಕ್ಷೆಗಳಂತಿರದೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಮನೆಯಲ್ಲೇ ಬರೆದು ತಂದುಕೊಡಬಹುದು. ಪ್ರಶ್ನೆ ಪತ್ರಿಕೆಗಳನ್ನು ಶಾಲೆಗೆ ಕಾರ್ಯಕರ್ತರು ಆಗಸ್ಟ್‌ 4-5ರಂದು ತಲುಪಿಸತಕ್ಕದ್ದು.
  • ಪ್ರಶ್ನೆ ಪತ್ರಿಕೆಗಳನ್ನು ಆಗಸ್ಟ್‌ 6ರಂದು ವಿದ್ಯಾರ್ಥಿಗಳಿಗೆ ವಿತರಿಸುವುದು. ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರ ಬರೆದುಕೊಂಡು ವಿದ್ಯಾರ್ಥಿಗಳು ಆಗಸ್ಟ್‌ 8 (ಸೋಮವಾರ) ರಂದು ಶಾಲೆಗೆ ಹಿಂತಿರುಗಿಸಬೇಕು.
  • ಪರೀಕ್ಷೆ, ಮೌಲ್ಯಮಾಪನ ಮತ್ತು ಬಹುಮಾನಗಳು ಶಾಲಾ ಮಟ್ಟದಲ್ಲಿರುತ್ತದೆ. ಪ್ರತಿ ಶಾಲೆಯಲ್ಲಿ ಕನಿಷ್ಟ 30ರಿಂದ 40ವಿದ್ಯಾರ್ಥಿಗಳು ಭಾಗವಹಿಸಬೇಕು
  • ಪ್ರತಿ ಶಾಲೆಯಲ್ಲೂ ಬಹುಮಾನ ವಿತರಿಸಲು ರೂ.250(ಇನ್ನೂರ ಐವತ್ತು ರೂಪಾಯಿಗಳು) ಅಗತ್ಯ. ಈ ಮೊತ್ತವನ್ನು ಕಾರ್ಯಕರ್ತರು ತಮ್ಮ ಪರಿಚಿತರನ್ನೋ, ಇಂತಹ ವಿಷಯಗಳ ಬಗ್ಗೆ ಕಳಕಳಿಯುಳ್ಳ ಯಾರನ್ನಾದರೂ ಸಂಪರ್ಕಿಸಿ ಕಾರ್ಯಕ್ರಮದ ಹಿನ್ನಲೆ, ಉದ್ದೇಶ ತಿಳಿಸಿಕೊಟ್ಟು ಅವರನ್ನು ಬಹುಮಾನಕ್ಕೆ ಪ್ರಾಯೋಜಿಸಬೇಕೆಂದು ವಿನಂತಿಸಿಕೊಳ್ಳುವುದು. ಸಾಮಾನ್ಯವಾಗಿ ಭಾರತದಲ್ಲಿ ಇಂತಹ ವಿಷಯಗಳಿಗೆ ಯಾರೂ ನಾವು ಸಹಾಯ ಮಾಡುವುದಿಲ್ಲ ಎಂದು ಹೇಳುವುದಿಲ್ಲ.
  • ಪ್ರತಿ ವಿದ್ಯಾರ್ಥಿಗೆ 10ರೂ.ಗಳಂತೆ ನೋಂದಣಿ ಶುಲ್ಕ ಹಾಗೂ 250 ರೂ.ಬಹುಮಾನದ ಹಣವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ಕೊಟ್ಟ ಕೂಡಲೇ ಬೆಂಗಳೂರು ಕಚೇರಿಗೆ ಎಂ.ಓ/ಡಿ.ಡಿ. (ಆಜಾದೀ ಬಚಾವೋ ಆಂದೋಲನ, ಬೆಂಗಳೂರು - ಹೆಸರಿನಲ್ಲಿ) ಮೂಲಕ ರವಾನಿಸುವುದು. ಈ ಹಣ ತಲುಪಿದ ನಂತರ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗುವುದು.
  • ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಒಬ್ಬರು, ಇಬ್ಬರು ಅಥವಾ ಮೂರು (ಅವಶ್ಯಕವೆನಿಸಿದಲ್ಲಿ ಇನ್ನೂ ಹೆಚ್ಚು) ಶಿಕ್ಷಕರ ಸಹಾಯ ಪಡೆದು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಸುವುದು, ಹಾಗೂ ಬಹುಮಾನ ಪಡೆಯುವ ವಿದ್ಯಾರ್ಥಿಗಳ ಹೆಸರುಗಳನ್ನು ನಿರ್ಣಯಿಸುವುದು. ಶಾಲೆಯ ಮುಖ್ಯೋಪಾದ್ಯಾಯರೊಂದಿಗೆ ಚರ್ಚಿಸಿ ಇದಕ್ಕೆ ಪೂರ್ವಭಾವಿ ವ್ಯವಸ್ಥೆ ಮಾಡಿಕೊಳ್ಳುವುದು. ವಿದ್ಯಾರ್ಥಿಗಳು ಪಡೆದಿರುವ ಅಂಕಿಗಳ ವಿವರ ಮುಖ್ಯೋಪಾಧ್ಯಾಯರು/ಕಾರ್ಯಕರ್ತರ ಬಳಿ ಇರಿಸಿಕೊಂಡು ಎಲ್ಲಾ ಉತ್ತರ ಪತ್ರಿಕೆಗಳನ್ನು ಬೆಂಗಳೂರಿನ ಕಾರ್ಯಾಲಯಕ್ಕೆ ರವಾನಿಸುವುದು. ಬಹುಮಾನಗಳು ಹಾಗೂ ಪ್ರಶಸ್ತಿಪತ್ರಗಳನ್ನು ಬೆಂಗಳೂರಿನ ಕಚೇರಿಯಿಂದಲೇ ರವಾನಿಸಲಾಗುವುದು.
  • ಆಗಸ್ಟ್‌ 15ರಂದು ಶಾಲೆಗಳಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದಲ್ಲೇ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆಯನ್ನು ಮಾಡಲಾಗುವುದು. ಕಾರ್ಯಕರ್ತರು ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡಿಕೊಳ್ಳಬೇಕು. ಬಹುಮಾನವನ್ನು ಪ್ರಾಯೋಜಿಸಿದವರ ಹೆಸರನ್ನೂ ಸಮಾರಂಭದಲ್ಲಿ ಘೋಷಿಸುವುದು. ಪ್ರತಿ ಶಾಲೆಗೂ ಕನಿಷ್ಟ ಪಕ್ಷ ಒಬ್ಬ ಕಾರ್ಯಕರ್ತ ಮೇಲ್ವಿಚಾರಕರಾಗಿ ಇರಬೇಕು.
ಈ ಪರೀಕ್ಷೆಯ ಯೋಜನೆಯು ಹೆಚ್ಚು ಹೆಚ್ಚು ಮಕ್ಕಳಿಗೆ ಆಂದೋಲನದ ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸುವುದಾಗಿದ್ದು, ಈ ಯೋಜನೆಯ ಯಶಸ್ಸು ಸಂಪೂರ್ಣವಾಗಿ ಕಾರ್ಯಕರ್ತರ ಉತ್ಸಾಹ ಶ್ರದ್ಧೆ ಹಾಗೂ ಶ್ರಮಗಳ ಮೇಲೆ ಅವಲಂಭಿತವಾಗಿದೆ. ಆಂದೋಲನದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಪರೀಕ್ಷೆಯಲ್ಲಿ ಹೆಚ್ಚು ಮಕ್ಕಳು/ಶಾಲೆಗಳು ಭಾಗವಹಿಸುವಂತೆ ಮಾಡಿ ಮುಂದಿನ ಪೀಳಿಗೆಗೆ ದೇಶವನ್ನು ಕಟ್ಟುವ ಹಾಗೂ ಕಟ್ಟಿದ್ದನ್ನು ಕಾಪಾಡುವ ಅರಿವನ್ನು ಮೂಡಿಸಲು ಶ್ರಮಿಸಬೇಕಾಗಿ ವಿನಂತಿ.

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿ ಬೇಕಾದ ವಿಳಾಸ :

ಆಜಾದೀ ಬಚಾವೋ ಆಂದೋಲನ,
www.freedomindia.com
22-23, ಪೊಲೀಸ್‌ ರಸ್ತೆ,
ರಾಣಾಸಿಂಗ್‌ಪೇಟೆ,
ಬೆಂಗಳೂರು - 560 053.
ದೂರವಾಣಿ: 26701078.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X