ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಧ್ವಜ ಹಾರಿಕೆ : ಒಂದು ಟಿಪ್ಪಣಿ

By Staff
|
Google Oneindia Kannada News

Flag Code of Indiaನಮ್ಮ ರಾಷ್ಟ್ರಧ್ವಜವು ನಮ್ಮ ಸ್ವಾತಂತ್ರ್ಯ ಮತ್ತು ಶ್ರೇಷ್ಠತೆಯ ಒಂದು ಸಂಕೇತ. ಸಾರ್ವಜನಿಕ, ಖಾಸಗಿ ಕಂಪನಿ ಅಥವಾ ಶಿಕ್ಷಣ ಸಂಸ್ಥೆಗಳು ನಮ್ಮ ರಾಷ್ಟ್ರಧ್ವಜವನ್ನು ಎಲ್ಲಾ ದಿನಗಳಲ್ಲೂ ಮತ್ತು ಸಂದರ್ಭಗಳಲ್ಲಿ ಅದರ ಗೌರವತ್ವದೊಡನೆ ಹಾರಿಸಬಹುದು / ಪ್ರದರ್ಶಿಸಬಹುದು.

ರಾಷ್ಟ್ರಧ್ವಜ ಹಾರಿಸುವವರು ಕೆಳಗಿನ ಅಂಶಗಳನ್ನು ಗಮನಿಸುವುದು :

  • ರಾಷ್ಟ್ರಧ್ವಜವು ಯಾವಾಗಲೂ ಗೌರವಾನ್ವಿತ ಹಾಗೂ ಸುಸ್ಪಷ್ಟವಾಗಿರುವ ಜಾಗದಲ್ಲಿರುತ್ತದೆ.
  • ಹರಿದ ಅಥವಾ ಅಸ್ತವ್ಯಸ್ತಗೊಂಡ ಧ್ವಜವನ್ನು ಪ್ರದರ್ಶಿಸಬಾರದು.
  • ಒಂದೇ ಕಂಬದಲ್ಲಿ ಇತರ ಧ್ವಜಗಳ ಜೊತೆ ಸೇರಿದಂತೆ ರಾಷ್ಟ್ರಧ್ವಜವನ್ನು ಹಾರಿಸಬಾರದು.
  • ಸಾಧ್ಯವಾದಷ್ಟು ಭಾರತ ಧ್ವಜ ಕೋಡ್‌, 2002 ಭಾಗ 1ರ ಅನುಸಾರ ರಾಷ್ಟ್ರಧ್ವಜದ ವಿಶೇಷತೆಗಳನ್ನೊಳಗೊಂಡಿರಬೇಕು.
  • ರಾಷ್ಟ್ರಧ್ವಜವನ್ನು ಯಾವುದೇ ಕಾರಣಕ್ಕೆ ತೋರಣ ಅಥವಾ ಅಲಂಕಾರ ಸಾಮಗ್ರಿಯನ್ನಾಗಿ ಉಪಯೋಗಿಸಬಾರದು.
  • ಮುಖ್ಯ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಕಾಗದದಲ್ಲಿ ತಯಾರಿಸಿದ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಆಡಿಸಬಹುದು. ಅದನ್ನು ಕಾರ್ಯಕ್ರಮ ಮುಗಿದ ನಂತರ ಹರಿಯುವುದಾಗಲಿ ಅಥವಾ ನೆಲದ ಮೇಲೆ ಎಸೆಯುವುದಾಗಲಿ ಮಾಡಬಾರದು.
  • ಬಹಿರಂಗ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಉದ್ದೇಶವಿದ್ದರೆ ಸಾಧ್ಯವಿದ್ದಲ್ಲಿ ಧ್ವಜವನ್ನು ಸೂರ್ಯೋದಯ ನಂತರ ಹಾಗೂ ಸೂರ್ಯಾಸ್ತಮ ಮುನ್ನ ವಾತಾವರಣಕ್ಕನುಗುಣವಾಗಿ ಹಾರಿಸಬೇಕು.
ಈ ಕೆಳಗಿನ ಅಂಶಗಳು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದಂತಾಗುವುದು ಮತ್ತು ಇಂತಹ ಅಂಶಗಳನ್ನು ತಡೆಗಟ್ಟಬೇಕು:
  • ಯಾವುದೇ ವ್ಯಕ್ತಿ ಅಥವಾ ವಸ್ತುವಿನ ವಂದನೆ ಸಮಯದಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಬಾರದು.
  • ರಾಷ್ಟ್ರಧ್ವಜವನ್ನು ಯಾವುದೇ ಕಟ್ಟಡಗಳಿಗೆ ಹೊದಿಕೆಯಾಗಿ ಉಪಯೋಗಿಸುವುದು ಅಥವಾ ಕಟ್ಟುವುದು ಸಲ್ಲ .
  • ರಾಷ್ಟ್ರಧ್ವಜ ಅಥವಾ ಅದರ ಭಾಗವನ್ನು ಉಡುಪು ಅಥವಾ ಸಮವಸ್ತ್ರ , ಕಸೂತಿ ಅಥವಾ ಪೀಠೋಪಕರಣ ಕರವಸ್ತ್ರ ಅಥವಾ ಯಾವುದೇ ಉಡುಪುಗಳ ಮೇಲೆ ಮುದ್ರಿಸಬಾರದು.
  • ರಾಷ್ಟ್ರಧ್ವಜವನ್ನು ಉದ್ದೇಶಪೂರ್ವಕ ಭೂಮಿ ಅಥವಾ ನೀರಿನಲ್ಲಿ ತಾಗುವ ಹಾಗೆ ಮಾಡಬಾರದು.
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X