ಪಂಡಿತ ಪುಣಿಂಚತ್ತಾಯರಿಗೆ ಮುಳಿಯ ಪ್ರಶಸ್ತಿ
ವಿಟ್ಲ : ಜನಪದ ಸಂಶೋಧಕ, ಬಹುಭಾಷಾ ವಿದ್ವಾಂಸ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಡನೀರಿನ ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರು ಮುಳಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪುಣಿಂಚತ್ತಾಯರು ನಿಮಗೆ ಗೊತ್ತೆ?
ಎಡನೀರಿನ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೈಸ್ಕೂಲಿನಲ್ಲಿ ಮೂರೂವರೆ ದಶಕಗಳ ಕಾಲ ಒಳ್ಳೆ ಮೇಷ್ಟ್ರು ಎನಿಸಿಕೊಂಡಿರುವ ಪುಣಿಂಚತ್ತಾಯರು ಕನ್ನಡ ಪಂಡಿತರು. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಗೆಳೆದಿರುವ ಇವರು ಸಂಪಾದಿಸಿದ ತುಂಗ ಕವಿ ವಿರಚಿತ ಶ್ರೀ ಭಾಗವತೋ ತುಳು ಮಹಾಕಾವ್ಯಕ್ಕೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಭಾಗವತೋ ಮಹಾಕಾವ್ಯದ ಲಿಪಿ ತುಳುವಿನಲ್ಲಿತ್ತು. ಅದನ್ನು ಹುಡುಕಿ, ಸಂಶೋಧಿಸಿ ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆ ಎಂಬುದನ್ನು ಪುಣಿಂಚತ್ತಾಯರು ತೋರಿಸಿಕೊಟ್ಟಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಸಾಧಕನ ಹಿರಿಮೆಯ ಕಿರೀಟಕ್ಕೆ ಈಗ ಮುಳಿಯ ಪ್ರಶಸ್ತಿಯ ಗರಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications