• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಲ್ಲಗೇ ಗಟ್ಟಿ ಮಾತಾಡುವ ಡಾ। ಕಮಲಾ ಹಂಪನಾ

By Super
|

ಅಂತರ್ಜಾತೀಯ ವಿವಾಹದ ಹೊಸದರಲ್ಲಿ ಎರಡೂ ಕುಟುಂಬಗಳವರ ವಿರೋಧವಿದ್ದರೂ ಕ್ರಮೇಣ ಕಮಲಾ ಎರಡೂ ಕುಟುಂಬಗಳ ಅಸೀಮ ಪ್ರೀತಿಯನ್ನು ಪಡೆದರು. ಅವರ ಮಾವನವರಿಗಂತೂ ಅಚ್ಚುಮೆಚ್ಚಾದರು. ಒಬ್ಬ ಗಂಡುಮಗ ಮತ್ತು ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿ ಗೃಹಿಣಿಯ ಸ್ಥಾನದಲ್ಲೂ ಸಾಫಲ್ಯತೆ ಪಡೆದಿರುವ ಕಮಲಾ ಮನೆಯಾಳಗೆ ಮತ್ತು ಹೊರಗೆ ಎರಡು ಕಡೆಗಳಲ್ಲೂ ತಮ್ಮತನವನ್ನು ವಿಶಿಷ್ಟವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಉದ್ಯೋಗ, ಸಾಹಿತ್ಯಾಸಕ್ತಿ, ಕುಟುಂಬ ಎಲ್ಲ ಆಸಕ್ತಿಗಳನ್ನೂ ಸಮಾನವಾಗಿ ಕಂಡು ಪ್ರೀತಿಸಿ ಗೌರವಿಸುತ್ತಾ ಬಂದಿರುವ ಡಾ । ಕಮಲಾ ಹಂಪನಾ ಅವರದು ಸಾರ್ಥಕ ದಾಂಪತ್ಯ ಜೀವನ. ಹಂಪನಾ ಹಾಗೂ ಕಮಲಾ ಹೇಳಿ ಮಾಡಿಸಿದ ಜೋಡಿ.

ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನವನ್ನು ಆರಂಭಿಸಿ ಪ್ರಾಂಶುಪಾಲರಾಗಿ ನಿವೃತ್ತರಾದ ನಂತರವೂ ಮೈಸೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸುವ ಅವಕಾಶ ಡಾ । ಕಮಲಾ ಹಂಪನಾ ಅವರಿಗೆ ತಾವೇ ತಾವಾಗಿ ಬಂದಿವೆ. ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಕರ್ನಾಟಕ ಗೆಜೆಟಿಯರ್‌ನ ಸಲಹಾ ಸಮಿತಿಯ ಸದಸ್ಯೆಯಾಗಿ ಮಾತ್ರವಲ್ಲದೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸದಸ್ಯೆಯಾಗಿ ಅವರು ಸಲ್ಲಿಸಿರುವ ರಚನಾತ್ಮಕ ಕಾರ್ಯ ಮೌಲ್ಯಾತ್ಮಕವಾದದ್ದು.

ನಾಲ್ಕು ಕಥಾ ಸಂಕಲನಗಳನ್ನೂ (ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ ಮತ್ತು ಬಣವೆ), ಏಳು ಶಿಶುಸಾಹಿತ್ಯ ಕೃತಿಗಳನ್ನೂ (ಹೆಳವನಕಟ್ಟೆ ಗಿರಿಯಮ್ಮ, ಅಕ್ಕಮಹಾದೇವಿ, ವೀರವನಿತೆ ಓಬವ್ವೆ, ಮುಳಬಾಗಿಲು, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ ಮತ್ತು ಡಾ।। ಬಿ.ಆರ್‌. ಅಂಬೇಡ್ಕರ್‌), ನಾಲ್ಕು ಅನುವಾದ ಕೃತಿಗಳನ್ನೂ (ಬೀೕಜಾಕ್ಷರಮಾಲೆ, ಜಾತಿನಿರ್ಮೂಲನೆ, ಭಾರತದಲ್ಲಿ ಜಾತಿಗಳು, ಏಷ್ಯಾದ ಹಣತೆಗಳು), ಎರಡು ವ್ಯಕ್ತಿ ಚಿತ್ರಗಳನ್ನೂ (ಮುಡಿಮಲ್ಲಿಗೆ ಮತ್ತು ಆಮುಖ), ಎರಡು ಆಧುನಿಕ ವಚನ ಸಂಗ್ರಹಗಳನ್ನೂ (ಬಿಂದಲಿ ಮತ್ತು ಬುಗುಡಿ), ಮೂರು ವಿಮರ್ಶೆ- ವೈಚಾರಿಕ ಕೃತಿಗಳನ್ನೂ (ಬಾಸಿಂಗ, ಬಾಂದಳ ಮತ್ತು ಬಡಬಾಗ್ನಿ), ಮೂರು ಆಕಾಶವಾಣಿ ನಾಟಕ ರೂಪಗಳನ್ನೂ (ಬಕುಳ, ಬಾನಾಡಿ ಮತ್ತು ಬೆಳ್ಳಕ್ಕಿ), ಮಹಾವೀರನನ್ನು ಕುರಿತ ಜೀವನಚರಿತ್ರೆಯನ್ನೂ ಬರೆದಿರುವ ಡಾ। ಕಮಲಾ ಹಂಪನಾ ಅವರು ಹನ್ನೆರಡು ಕೃತಿಗಳನ್ನು ಸಂಪಾದಿಸಿದ್ದಾರೆ. ಮಾತ್ರವಲ್ಲದೆ ಅವರ ಒಂಬತ್ತು ಸಂಶೋಧನ ಗ್ರಂಥಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಅವರ ಪಿಎಚ್‌.ಡಿ. ಮಹಾಪ್ರಬಂಧ ‘ತುರಂಗಭಾರತ- ಒಂದು ಅಧ್ಯಯನ' ವೂ ಸೇರಿದೆ. ದಾನಚಿಂತಾಮಣಿ ಅತ್ತಿಮಬ್ಬೆಯನ್ನು ಕುರಿತು ವಿಶೇಷ ಗೌರವ ಹೊಂದಿರುವ ಕಮಲಾ ಆಕೆಯನ್ನು ಕುರಿತಂತೆಯೂ ಎರಡು ಗ್ರಂಥಗಳನ್ನು ರಚಿಸಿದ್ದಾರೆ. ಅವರಿಗೆ ನಾಲ್ಕು ಅಭಿನಂದನ ಗ್ರಂಥಗಳೂ ಅರ್ಪಿತವಾಗಿವೆ (ಕಮಲಾಭಿನಂದನ, ಕಮಲಾ ಹಂಪನಾ- ಬದುಕು ಬರಹ, ಕಮಲಾಕೃತಿ ವಿಮರ್ಶೆ ಮತ್ತು ಹೊಂದಾವರೆ).

ಅನೇಕ ಪ್ರಮುಖ ವಿಚಾರ ಸಂಕಿರಣ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನೂ ಮಂಡಿಸಿರುವ ಡಾ । ಕಮಲಾ ಹಂಪನಾ ಹಲವು ಸಾಹಿತ್ಯ ಸಮ್ಮೇಳನಗಳ ಸಾಹಿತ್ಯ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ.

ಹಲವಾರು ಪ್ರತಿಷ್ಠಿತ ಸಂಘ- ಸಂಸ್ಥೆಗಳಿಂದ ಸನ್ಮಾನದ ಗೌರವ ಅವರಿಗೆ ಸಂದಿದೆ. ್ಫರಾಜ್ಯೋತ್ಸವ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಐ.ಐ.ಟಿ. (ಮದ್ರಾಸು) ಕನ್ನಡಸಂಘದ ರಜತೋತ್ಸವ ಪುರಸ್ಕಾರ, ಶ್ರವಣಬೆಳ್ಗೊಳ ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಪುರಸ್ಕಾರ, ‘ಸಾಹಿತ್ಯ ವಿಶಾರದೆ' ಪ್ರಶಸ್ತಿ, ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ರನ್ನ ಪ್ರಶಸ್ತಿ , ಅತ್ತಿಮಬ್ಬೆ ಪ್ರಶಸ್ತಿ ಹೆಸರಿಸಬಹುದಾದ ಪ್ರಮುಖ ಪ್ರಶಸ್ತಿಗಳಾಗಿವೆ. ಗುಜರಾತಿನ ಬರೋಡಾದಲ್ಲಿ 1996ರ ಅಕ್ಟೋಬರ್‌ನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನೂ, ಪ್ರಸ್ತುತ ಮೂಡಬಿದಿರೆಯಲ್ಲಿ ನಡೆಯುತ್ತಿರುವ 71ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವವನ್ನೂ ಪಡೆದಿರುವ ಕಮಲಾ ಅವರ ಬಗೆಗೆ ನಾಡಿನ ಅನೇಕ ಹಿರಿಯರು ಪ್ರೀತಿಯಿಂದ ಮಾತನಾಡಿದ್ದಾರೆ.

‘ಕಮಲಾಪ್ರಿಯ' ಅಂಕಿತದಲ್ಲಿ ಡಾ । ಕಮಲಾ ಹಂಪನಾ ಅವರು ಬರೆದಿರುವ ವಚನಗಳು ಸಹೃದಯರಿಗೆ ಪ್ರಿಯವಾಗಿವೆ. ವಚನಕಾರ್ತಿ ತಮ್ಮ ವಚನಗಳಲ್ಲಿ ಸಮಾಜದ ಅನಿಷ್ಟಗಳನ್ನು ಕುರಿತಂತೆ ಅಭಿವ್ಯಕ್ತಿಗೊಳಿಸುವ ಸ್ತ್ರೀಪರ ಮತ್ತು ದಲಿತಪರ ಕಾಳಜಿಗಳಂತೂ ವಿಶಿಷ್ಟವಾದುವು. ಡಾ । ಕಮಲಾ ಹಂಪನಾ ಅವರ ಬಗೆಗೆ ಇಟಗಿ ಈರಣ್ಣ ಬರೆದಿರುವ ಕೆಲವು ಶಾಯಿರಿಗಳಲ್ಲಿ ಒಂದನ್ನು ಇಲ್ಲಿ ದಾಖಲಿಸುವುದು ಅರ್ಥಪೂರ್ಣ.

ಒಮ್ಯರ ನೀವು ಗುಟ್ಟಾಗಿ ಮಾತಾಡಿದ್ದು ನಾನೋಡೇ ಇಲ್ಲ !

ಅದೆಷ್ಟು ಮೆತ್‌ಗ ನೀವು, ಮಾತಾಡತೀರ್ಯಲ್ಲ !

ಆದರೂ, ಮೆಚಿಗೋಬೇಕು ನಿಮ್ನ !

ನಿಮ್ಮ ಒಂದೊಂದು ಮೆತ್ತನ್ನ ಮಾತೂ

ಅದೆಷ್ಟು ‘ಗಟ್ಟಿ' ಇರತಾವಲ್ಲ !!

ಹೌದು. ಅನ್ಯಾಯದ ವಿರುದ್ಧ, ಸಮಾನತೆಗಾಗಿ ಗಟ್ಟಿ ದನಿ ಎತ್ತುವ ಡಾ । ಕಮಲಾ ಹಂಪನಾ ಯಾವ ಜಾತಿ- ಮತಗಳಿಗೂ ಸೇರಿದವರಲ್ಲ. ಯಾವುದೇ ಒಂದು ನಿರ್ದಿಷ್ಟ ಪಂಥವನ್ನು ಪ್ರತಿನಿಧಿಸುವವರಲ್ಲ. ಅವರು ಸಮಸ್ತ ಕನ್ನಡಿಗರ ಪರವಾಗಿ, ತುಳಿತಕ್ಕೊಳಗಾದ ಎಲ್ಲರ ಪರವಾಗಿ ದನಿಯೆತ್ತುವವರು ಮತ್ತು ಗೆಲುವು ಪಡೆಯುವವರು. ಆ ಕಾರಣದಿಂದಲೇ ಡಾ। ಕಮಲಾ ಹಂಪನಾ ಹಿರಿಯರಿಗೆ ತಂಗಿಯಾಗಿ, ಕಿರಿಯರಿಗೆ ಅಕ್ಕನಾಗಿ ಗೌರವ ಪಡೆದಿದ್ದಾರೆ. ಅವರ ಸಮಚಿತ್ತದ ಬಾಳು ತರುಣ ಪೀಳಿಗೆಗೆ ಮಾರ್ಗದರ್ಶಿಯಾಗುವುದು ಅವಶ್ಯಕ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
She speaks daring things, she does not belongs to any cast.. that is Kamala Hampana.. writes Dr. H.S.Gopala Rao
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more