ಕುವೆಂಪು ಜಯಂತಿ: ಪೇಪರ್ ರಾಕೆಟ್‌ಗೆ ಗುರಿಯಾದ ಎಚ್ಚೆಸ್ಕೆ,ದೇಜಗೌ
ಮೈಸೂರು: ವಿದ್ಯಾರ್ಥಿಗಳ ಪುಂಡಾಟದಿಂದ ಬೇಸತ್ತು ಹಿರಿಯ ಸಾಹಿತಿ ದೇ.ಜವರೇಗೌಡ ಹಾಗೂ ಎಚ್ಚೆಸ್ಕೆ ಎಂದೇ ಪ್ರಸಿದ್ಧರಾದ ಅಂಕಣಕಾರ ಎಚ್.ಎಸ್. ಕೃಷ್ಣಯ್ಯಂಗಾರ್ ಅವರು ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಅಹಿತಕರ ಘಟನೆಗೆ ಮಹಾರಾಜ ಕಾಲೇಜು ಸಾಕ್ಷಿಯಾಯಿತು.
ಮೈಸೂರಿನ ವಿಶ್ವ ಮಾನವ ವಿದ್ಯಾರ್ಥಿ ವೇದಿಕೆಯು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶನಿವಾರ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಏರ್ಪಡಿಸಿತ್ತು .
ಸಭಾಂಗಣದ ತುಂಬ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳು, ಅತಿಥಿಗಳ ಎದುರಲ್ಲೇ ಮುಂದಿನ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯರ ಮೇಲೆ ಪೇಪರ್ ರಾಕೆಟ್‌ಗಳನ್ನು ಎಸೆದು ಗೊಂದಲ ಸೃಷ್ಟಿಸಿದರು. ಕೆಲವು ರಾಕೆಟ್‌ಗಳಿಗೆ ಅಂಕಣಕಾರ ಎಚ್ಚೆಸ್ಕೆ ಅವರು ಕೂಡ ಗುರಿಯಾಗಬೇಕಾಯಿತು. ಇದೇ ಸಂದರ್ಭದಲ್ಲಿ ಪೊಲೀಸರು ಶಾಂತಿ ಕಾಪಾಡಲು ಪ್ರಯತ್ನಿಸಿದರಾದರೂ, ಪೊಲೀಸರೊಂದಿಗೆ ವಿದ್ಯಾರ್ಥಿಗಳು ವಾಗ್ವಾದಕ್ಕಿಳಿದು ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಯಿತು.
ವಿದ್ಯಾರ್ಥಿಗಳ ದುಂಡಾವೃತ್ತಿಯಿಂದ ಬೇಸತ್ತ ಎಚ್ಚೆಸ್ಕೆ ವೇದಿಕೆಯಿಂದ ನಿರ್ಗಮಿಸಿದರು. ಕೆಲ ಸಮಯದಲ್ಲಿಯೇ ದೇ. ಜವರೇಗೌಡ ಅವರು ಕೂಡ ಎಚ್ಚೆಸ್ಕೆ ಅವರನ್ನು ಅನುಸರಿಸಿದರು. ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು, ಎಚ್ಚೆಸ್ಕೆ ಹಾಗೂ ಜವರೇಗೌಡರ ಮನವೊಲಿಸುವ ವಿಫಲ ಪ್ರಯತ್ನ ನಡೆಸಿದರು. ಆನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಪ್ರಸಾದ್ ಭಾಗವಹಿಸಿದ್ದರೂ, ಕಾರ್ಯಕ್ರಮದ ಕಳೆ ಸಂಪೂರ್ಣ ಮಾಯವಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications