ಆಗುವುದಾದರೆ ದ್ವಿತೀಯ ಭಾಷೆ ಯಾವುದಾಗಬೇಕು?
*ಯು.ಎನ್.ಶೆಟ್ಟಿ , ಯುಎಸ್‌ಎ
ಕರ್ನಾಟಕದಲ್ಲಿ ತಮಿಳನ್ನು ದ್ವಿತೀಯ ಭಾಷೆಯಾಗಿ ಘೋಷಿಸಬೇಕೆಂದು ಕೆಲವರು ಆಗ್ರಹಪಡಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ದ್ವಿತೀಯ ಭಾಷೆ ಆಗುವುದಾದರೆ ನಿಜವಾಗಿ ಯಾವುದಾಗಬೇಕು?
ಕರ್ನಾಟಕದಲ್ಲಿ ಕೊಡವ, ತುಳು, ಕೊಂಕಣಿ, ಉರ್ದು ಇತ್ಯಾದಿ ಮನೆ ಮಾತಿನ ಕುಟುಂಬಗಳಿವೆ. ತೆಲುಗು ಮನೆ ಮಾತಿನ ಲಕ್ಷಾಂತರ ಕುಟುಂಬಗಳು ತಲೆ- ತಲೆಮಾರುಗಳಿಂದ ಕರ್ನಾಟಕದಲ್ಲಿ ನೆಲೆಸಿವೆ. ಹಿಂದಿನ ಜನಗಣತಿಯಾಂದರ ಪ್ರಕಾರ ಕರ್ನಾಟಕದಲ್ಲಿ ತೆಲುಗು ಮನೆಮಾತಿನವರ/ ಬಲ್ಲವರ ಸಂಖ್ಯೆ ಕನ್ನಡದ ನಂತರದ ಸ್ಥಾನದಲ್ಲಿದೆ ಅಂತ ಓದಿದ ನೆನಪು.
ತಮಿಳು ಮನೆಮಾತಿನವರ ಸಂಖ್ಯೆ ಭದ್ರಾವತಿ, ಕೆಜಿಎಫ್‌ನಂತಹ ಕೈಗಾರಿಕಾ ಪ್ರದೇಶಗಳಲ್ಲಿ , ತಮಿಳುನಾಡಿನ ಗಡಿಗಳಲ್ಲಿ , ಬೆಂಗಳೂರಿನಂಥ ನಗರಗಳಲ್ಲಿ ಹೆಚ್ಚು . ಹಾಗೆಯೆ ತಲೆಮಾರುಗಳಿಂದ ಇಲ್ಲಿ ನೆಲೆಸಿರುವ ತಮಿಳು ಮನೆಮಾತಿನ ಕುಟುಂಬಗಳೂ ಇವೆ. ಆದರೆ ರಾಜ್ಯಾದ್ಯಂತ ಜನಗಣತಿ ನಡೆಸಿದರೆ ತಮಿಳರ ಸಂಖ್ಯೆ ಕರ್ನಾಟಕದಲ್ಲಿ ಇತರ ಅನ್ಯ ಭಾಷಿಕರಿಗಿಂತ ಕಡಿಮೆಯಿರುವ ಅಂಶ ಬೆಳಕಿಗೆ ಬಂದೀತು.
ದ್ವಿತೀಯ ಭಾಷೆಯನ್ನು ಘೋಷಿಸುವ ಮೊದಲು ದ್ವಿತೀಯ ಭಾಷೆ ಯಾವುದು ಎಂದು ವೈಜ್ಞಾನಿಕವಾಗಿ ನಿರ್ಧರಿಸಬೇಕಾದ ಅವಶ್ಯಕತೆಯಿದೆ ಮತ್ತು ಕರ್ನಾಟಕದಲ್ಲಿರುವ ಈ ಜನರು ಅಂತಹ(ದ್ವಿತೀಯ ಭಾಷೆ) ಘೋಷಣೆಗಾಗಿ ಕಾದಿರುವರೆ? ಅನ್ನುವುದನ್ನೂ ತಿಳಿದುಕೊಳ್ಳಬೇಕಾಗಿದೆ. ಇಲ್ಲವಾದರೆ ವೀರಪ್ಪನ್ ಅಥವಾ ನೆಡುಮಾರನ್‌ಗೋಸ್ಕರ ಮಾಡುವ ಇಂತಹ ಘೋಷಣೆಗಳು ಯಾರಿಗೂ ಉಪಯೋಗವಿಲ್ಲ .
ವಿಳಾಸ : ಯು.ಎನ್.ಶೆಟ್ಟಿ , 2444, ವೆಸ್ಟ್ ಬ್ರಿಟ್ ಡೇವಿಡ್ ರೋಡ್, ನಂ. 909, ಕೊಲಂಬಸ್ ಜಿಎ- 31909, ಯು.ಎಸ್.ಎ
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications