ಹದಿನೆಂಟು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು : ಡಾ. ಸಿ.ಎನ್‌. ರಾಮಚಂದ್ರನ್‌, ಕುಂ. ವೀರಭದ್ರಪ್ಪ (ಕುಂವೀ) ಸೇರಿದಂತೆ ಐವರು ಬರಹಗಾರರಿಗೆ 2000 ಸಾಲಿನ ಗೌರವ ಪ್ರಶಸ್ತಿಯನ್ನು ಹಾಗೂ 1999 ರ ಸಾಲಿನಲ್ಲಿ ಪ್ರಕಟವಾಗಿರುವ 18 ಪುಸ್ತಕಗಳಿಗೆ ಬಹುಮಾನಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

ಅಕಾಡೆಮಿ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಸರ್ವ ಸದಸ್ಯರ ಸಭೆ ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸಿತು ಎಂದು ಅಕಾಡೆಮಿಯ ರಿಜಿಸ್ಟ್ರಾರ್‌ ಟಿ. ದಕ್ಷಿಣಾಮೂರ್ತಿ ತಿಳಿಸಿದ್ದಾರೆ. ಬಿ.ಆರ್‌. ವಾಡಪ್ಪಿ , ಡಾ. ರಾಮೇಗೌಡ(ರಾಗೌ) ಹಾಗೂ ಮಾಲತಿ ಪಟ್ಟಣಶೆಟ್ಟಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಇತರ ಮೂವರು. 10 ಸಾವಿರ ರುಪಾಯಿ ನಗದು, ನಟರಾಜ ವಿಗ್ರಹ ಹಾಗೂ ಪ್ರಶಸ್ತಿ ಪತ್ರವನ್ನು ಗೌರವ ಪ್ರಶಸ್ತಿ ಒಳಗೊಂಡಿದೆ. ಫೆಬ್ರವರಿ 25 ರಂದು ಕಾರವಾರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು.

1999 ರ ಸಾಲಿನ ಪುಸ್ತಕ ಪ್ರಶಸ್ತಿಗಳು ( 5 ಸಾವಿರ ರು. ನಗದು ಮತ್ತು ಪ್ರಶಸ್ತಿ ಪತ್ರ)

  • ಕಾವ್ಯ : ಕೂಡಿಕೊಂಡ ಸಾಲ (ದೇಶ ಕುಲಕರ್ಣಿ)
  • ಕಾದಂಬರಿ : ಗಾಂಧಿ ಬಂದ (ಎಚ್‌. ನಾಗವೇಣಿ)
  • ಸಣ್ಣಕಥೆ : ಬೆಂಕಿಮಳೆ (ಬಾನು ಮುಷ್ತಾಕ್‌)
  • ನಾಟಕ : ವೈಶಂಪಾಯನ ತೀರ (ಎಲ್‌.ಎನ್‌. ಮುಕುಂದರಾಜ್‌)
  • ಲಲಿತ ಪ್ರಬಂಧ : ಶೇಷ ವಿಶೇಷ (ಆರ್‌.ವಿ. ಕುಲಕರ್ಣಿ)
  • ಜೀವನ ಚರಿತ್ರೆ : ಮೇಡಂ ಕ್ಯೂರಿ (ಬಿ.ವಿ. ರಾಧಾಕೃಷ್ಣ)
  • ವಿಮರ್ಶೆ : ನಕ್ಷೆ ನಕ್ಷತ್ರ (ಬಸವರಾಜ ಕಲ್ಗುಡಿ)
  • ಸಂಪಾದನೆ : ರಾಚಪ್ಪಯ್ಯನ ಕೃತಿ (ಶಿವಾನಂದ ಎಸ್‌.ವಿರಕ್ತ ಮಠ)
  • ಮಕ್ಕಳ ಸಾಹಿತ್ಯ : ಕತೆ ಹೇಳಜ್ಜಿ (ಪಳಕಳ ಸೀತಾರಾಮ ಭಟ್ಟ )
  • ವಿಜ್ಞಾನ : ಜೀವಜಾಲ (ಕೃಪಾಕರ ಸೇನಾನಿ)
  • ಸಂಶೋಧನೆ : ಪಾತರದವರು (ಶೈಲಜ ಹಿರೇಮಠ)
  • ಮಾನವಿಕ : ಚಹರೆ (ಎಚ್‌.ಎಸ್‌. ಶ್ರೀಮತಿ)
  • ಅನುವಾದ : ಅನುರೂಪ (ಕರೀಗೌಡ ಬೀಚನಹಳ್ಳಿ) ಮತ್ತು ಬಹುಮುಖ (ಎಲ್‌.ಜಿ. ಮೀರಾ)
  • ಸಂಕೀರ್ಣ : ಕಂಬಾಳು (ಸಿದ್ಧಲಿಂಗಯ್ಯ ಕಂಬಾಳು)
  • ಲೇಖಕರ ಮೊದಲ ಕೃತಿ : ಅಭಿವೃದ್ಧಿಯೋ ಅವಸಾನವೋ (ಕಾರ್ಗಲ್‌ ಭೋಗರಾಜ್‌)
  • ಅಮೇರಿಕಾ ಕನ್ನಡಿಗ ಪ್ರಶಸ್ತಿ : ಚಕೋರಿ (ಓ.ಎಲ್‌. ನಾಗಭೂಷಣ ಸ್ವಾಮಿ ಮತ್ತು ಪ್ರಣವ ಮಂಜರಿ)
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+