ವಾಟಾಳ್ ಹಾಗೂ ಸಂಗಡಿಗರಿಂದ ಪಾಪುಗೆ ಸನ್ಮಾನ
ಹುಬ್ಬಳ್ಳಿ : ಕಿಂಚಿತ್ತಾದರೂ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ಹೊಂದಿದ್ದರೆ- ಬರುವ ಹಣಕಾಸು ವರ್ಷದಿಂದಲೇ ಡಾ.ನಂಜುಂಡಪ್ಪ ವರದಿಯನ್ನು ಅನುಷ್ಠಾನಗೊಳಿಸುವಂತೆ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಅವರು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರನ್ನು ಒತ್ತಾಯಿಸಿದ್ದಾರೆ.
ಪ್ರಾದೇಶಿಕ ಅಸಮತೋಲನವನ್ನು ತೊಡೆದುಹಾಕಲು ಅನುಕೂಲವಾಗುವಂಥ ವರದಿಯನ್ನು ನಂಜುಂಡಪ್ಪ ಅವರು ನೀಡಿದ್ದಾರೆ. ಈ ವರದಿಯ ಅನುಸಾರ ಆಯವ್ಯಯದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿಧಿಯನ್ನು ಮೀಸಲಿಡಬೇಕು. ನೂತನ ವಿತ್ತ ವರ್ಷದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮೊದಲ ಕಂತಾಗಿ ಸರ್ಕಾರ 4 ಸಾವಿರ ಕೋಟಿ ರುಪಾಯಿ ಮೀಸಲಿಡಬೇಕು ಎಂದು ಪಾಟೀಲ ಪುಟ್ಟಪ್ಪ ಆಗ್ರಹಿಸಿದರು. ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಹಾಗೂ ಸಂಗಡಿಗರು (ಬುಧವಾರ, ಡಿ.25) ತಮ್ಮ ನಿವಾಸಕ್ಕೆ ಬಂದು ನೀಡಿದ ಸನ್ಮಾನವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಪಾಪು ಮಾತನಾಡುತ್ತಿದ್ದರು.
ಕನ್ನಡ ಮತ್ತು ತಮಿಳು ಭಾರತದ ಅತ್ಯಂತ ಭಾಷೆಗಳು. ಆದರೆ ಕನ್ನಡಿಗರ ಅನಾಸ್ಥೆಯಿಂದ ಕನ್ನಡ ಸಾಯುವ ಸ್ಥಿತಿ ತಲುಪಿದೆ ಎಂದು ಪಾಪು ವಿಷಾದಿಸಿದರು. ಕನ್ನಡ ಭಾಷೆಯನ್ನು ಕನ್ನಡಿಗರಾದ ನಾವೇ ಉಳಿಸಿಕೊಳ್ಳಬೇಕಾಗಿದೆ. ಕನ್ನಡ ಅಳಿದುಹೋದ ಭಾಷೆಗಳ ಸಾಲಿಗೆ ಸೇರದಿರಲಿ ಎಂದು ಪಾಪು ಆಶಿಸಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications