ಫಕ್ಕನೊಮ್ಮೆ ನಕ್ಕುಬಿಡು ಚಿಂತೆ ತೊಲಗಲಿ
ಕೆಲಸದ ಭರಾಟೆಯಲ್ಲಿ ನಗುವುದಕ್ಕೂ ಪುರುಸೊತ್ತಿಲ್ವಾ?
ಬೆಂಗಳೂರಿಗರಲ್ಲಿ ಇಂಥಾ ಪ್ರಶ್ನೆ ಅಚ್ಚರಿಯನ್ನೇನೂ ಮೂಡಿಸದು. ದುಡ್ಡು ಮಾಡುವ ಜಂಜಡ ಅಷ್ಟು ಜೋರಾಗಿದೆ ಸ್ವಾಮಿ. ಸದ್ಯಕ್ಕೆ ಪಾ.ಪ.ಪಾಂಡುವನ್ನು ನೋಡಿ ಜನ ಅಷ್ಟೋ ಇಷ್ಟೋ ನಗುತ್ತಿದ್ದಾರೆ. ಅಲ್ಲೋ ಇಲ್ಲೋ ಕಾಣುವ ಹನಿಗವನಗಳಲ್ಲೂ ಪನ್‌ತನ, ಹಾಸ್ಯ ಲೇಪ ಮಾಸುತ್ತಿದೆ. ಎಷ್ಟೋ ಕಡೆ ಹಾಸ್ಯಕ್ಕಿಂದ ಅಪಹಾಸ್ಯವೇ ಹೆಚ್ಚು. ಈ ರಾಜ್ಯೋತ್ಸವದಲ್ಲಿ ಏನೆಲ್ಲಾ ಕಾರ್ಯಕ್ರಮಗಳು... ಹಾಗೆಂದ ತಕ್ಷಣ ಮತ್ತೆ ಆರ್ಕೆಸ್ಟ್ರಾ ನೆನಪಿಸಿಕೊಳ್ಳಬೇಡಿ. ಹೇಗಿದ್ರೂ ನವೆಂಬರ್ 17ನೇ ತಾರೀಕು ಭಾನುವಾರ ಪುರುಸೊತ್ತು ಮಾಡಿಕೊಂಡು, ಜಯನಗರದ ಎಚ್.ಎನ್.ಕಲಾಕ್ಷೇತ್ರಕ್ಕೆ ಹೋಗುವಂಥವರಾಗಿ. ಯಾಕೆಂದರೆ. ಅಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಬಹುದು.
ಬರೀ ಭಾನುವಾರವಷ್ಟೇ ಅಲ್ಲ, ಸೋಮವಾರ ಹಾಗೂ ಮಂಗಳವಾರ (ನ.18 ಮತ್ತು 19) ಸಂಜೆ ಕೂಡ ನಗೆ ನಾಟಕಗಳುಂಟು. ಮೂರು ದಿನಗಳ ಕಾಲದ ಈ ಕಚಗುಳಿ ಕಾರ್ಯಕ್ರಮದ ಶೀರ್ಷಿಕೆ- ‘ನಗುವಿಗೇಕೆ ರೇಷನ್?’.
ಟೈಂ ಟೇಬಲ್ಲನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ...
ನವೆಂಬರ್ 17
ಬೆಳಗ್ಗೆ 10 ಗಂಟೆಗೆ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರಿಂದ ಕಾರ್ಯಕ್ರಮ ಉದ್ಘಾಟನೆ. ಹಾಸ್ಯ ನಟ ಶರಪಂಜರ ಶಿವರಾಂ ಮುಖ್ಯ ಅತಿಥಿ.
ನಂತರ ನಗೆ ಚಾವಡಿಯಲ್ಲಿ ಎಂ.ಎಸ್.ನರಸಿಂಹ ಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್, ಜಿ.ಬಿ.ಕೋಟೆ ಅನಂತ್, ಪ್ರೊ.ಕೃಷ್ಣೇಗೌಡ, ಡಾ.ಕೆ.ಎಚ್.ಶ್ರೀಕಂಠಯ್ಯ, ರಾಜೇಂದ್ರ ಕಾರಂತ್, ಕೃಷ್ಣ ಸುಬ್ಬರಾವ್- ಇವರೆಲ್ಲರಿಂದ ವಿನೋದ ವಿಚಾರ.
ಆಮೇಲೆ ರಿಚರ್ಡ್ ಲೂಯಿಸ್, ಶ್ರೀನಿವಾಸ ಜಿ. ಕಪ್ಪಣ್ಣ, ಸಿ.ಆರ್.ಸಿಂಹ ರಂಗಭೂಮಿಯ ಹಾಸ್ಯ ಪ್ರಕರಣಗಳನ್ನು ಮೆಲುಕು ಹಾಕುವ ಮೂಲಕ ಕಚಗುಳಿ ಇಡುತ್ತಾರೆ. ಯಕ್ಷಗಾನದಲ್ಲಿ ಹಾಸ್ಯವನ್ನು ಉಣ ಬಡಿಸಲಿದ್ದಾರೆ ರಾಧಾಕೃಷ್ಣ ಉರಾಳ.
ಸಂಜೆಯ ರಂಗಲ್ಲಿ ಹಾಸ್ಯದ ಗುಂಗು :
ರಂಗ ಹಾಗೂ ಚಿತ್ರ ಕರ್ಮಿಗಳಾದ ವೆಂಕಿ, ಕಾಶಿ, ಸುರೇಶ್ ಇವರಿಂದ ಸಂಜೆ 4 ಗಂಟೆಗೆ ಹಾಸ್ಯ ಪ್ರಸಂಗಗಳು.
5.30 ಗಂಟೆಗೆ ಸರಿಯಾಗಿ ವಿ.ಜಿ.ನರೇಂದ್ರ, ವಿ.ಗೋಪಾಲ್ ಮತ್ತು ಬಿ.ಜಿ.ಗುಜ್ಜಾರಪ್ಪ- ಇವರ ವ್ಯಂಗ್ಯ ಚಿತ್ರ ಪ್ರದರ್ಶನ.
ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಚಂದ್ರು ಅವರಿಗೆ ಸನ್ಮಾನ.
ಸಂಜೆ 7 ಗಂಟೆಗೆ ಪದ್ಮನಾಭ ನಗರ ಮಹಿಳಾ ಸಮಾಜದಿಂದ ಜಿ.ಪಿ.ರಾಜರತ್ನಂ ವಿರಚಿತ ನಾಟಕ ಕಂಬ್ಳಿಸೇವೆ ಪ್ರದರ್ಶನ. ನಿರ್ದೇಶನ- ಮಾಧವ ರಾವ್.
7.30 ಗಂಟೆಗೆ ಇನ್ನೊಂದು ನಾಟಕ ‘ಆರ್ಟಿಸ್ಟ್ ಕಾಲೋನಿ’. ರಚನೆ- ಕೆ.ಆರ್.ಸುಧೀಂದ್ರ ಶರ್ಮ. ಕಲಾ ಗಂಗೋತ್ರಿ ತಂಡ ಅಭಿನಯಿಸಲಿದೆ. ನಿರ್ದೇಶನ- ಬಿ.ವಿ.ರಾಜಾರಾಂ.
ನವೆಂಬರ್ 18
ಸಂಜೆ 6.15 ಗಂಟೆಗೆ ಡಾ.ಎಚ್.ಕೆ.ರಂಗನಾಥ್ ಮತ್ತು ಎ.ಎಸ್.ಮೂರ್ತಿ ಅವರನ್ನು ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರು ಗೌರವಿಸಲಿದ್ದಾರೆ.
ಸಂಜೆ 7 ಗಂಟೆಗೆ ಎಂ.ಎಸ್.ನರಸಿಂಹ ಮೂರ್ತಿ ವಿರಚಿತ ‘ದಶಮಿ’ ನಾಟಕ ಪ್ರದರ್ಶನ. ‘ಅಂತರಂಗ’ ತಂಡ ಈ ನಾಟಕವನ್ನು ಅಭಿನಯಿಸಲಿದೆ. ನಿರ್ದೇಶನ- ಮಾಧವ ರಾವ್.
7.30ಕ್ಕೆ ಇನ್ನೊಂದು ನಾಟಕ ‘ಮಿನಿ ಭಾರತ’. ರಚನೆ ಹಾಗೂ ನಿರ್ದೇಶನ - ಟಿ.ಎಸ್.ಜಗದೀಶ್. ಅಂತರಂಗದ ಯುವತಿಯರ ತಂಡ ಅಭಿನಯಿಸಲಿದೆ.
ನವೆಂಬರ್ 19
ಸಂಜೆ 6.15ಕ್ಕೆ ಸಮಾರೋಪ ಸಮಾರಂಭ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಸ್.ಜಿ.ಸೋಮಶೇಖರ್ ಕಾರ್ಯಕ್ರಮದ ಮುಖ್ಯ ಅತಿಥಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
7 ಗಂಟೆಗೆ ‘ಹೀಗೊಂದು ಪತ್ರ’ ನಾಟಕ. ರಚನೆ ಹಾಗೂ ನಿರ್ದೇಶನ- ಎನ್.ಸುರೇಶ್. ಅಭಿನಯಿಸುವ ತಂಡ- ಅಂತರಂಗ.
7.30 ಗಂಟೆಗೆ ಇನ್ನೊಂದು ನಾಟಕ ‘Linguist ಕೈಲಾಸಂ Sceನಾವಳಿ’. ರಂಗ ಅಳವಡಿಕೆ- ಗುಂಡೂ ರಾಜ್. ಅಭಿನಯಿಸುವ ತಂಡ ‘ಅಂತರಂಗ’.
ಇನ್ನೂ ಏನಾದರೂ ಡೌಟಿದ್ದಲ್ಲಿ 6671585 ನಂಬರಿಗೆ ಫೋನಾಯಿಸಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications