ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮ್‌ಸೇನ್‌ ಜೋಶಿಗೆ ಗೌರವ ಡಾಕ್ಟರೇಟ್‌ ಪ್ರದಾನ

By Staff
|
Google Oneindia Kannada News

Pandit Bhimsen Joshiಧಾರವಾಡ : ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಭೀಮ್‌ಸೇನ್‌ ಜೋಶಿಯವರಿಗೆ ಕರ್ನಾಟಕ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್‌ ಪದವಿ ನೀಡಿದೆ.

ಮಂಗಳವಾರ ನಡೆದ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಭೀಮ್‌ಸೇನ್‌ ಜೋಶಿಯವರ ಪರವಾಗಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಖಾಜಾ ಪೀರ ಅವರು ಗೌರವ ಡಾಕ್ಟರೇಟ್‌ ಪದವಿ ಸ್ವೀಕರಿಸಿದರು. ವಿವಿಗಳ ಕುಲಾಧಿಪತಿ ಟಿ.ಎನ್‌. ಚತುರ್ವೇದಿ ಅವರು ಪದವಿ ಪ್ರದಾನ ಮಾಡಿದರು. ಅನಾರೋಗ್ಯದ ಕಾರಣ ಜೋಶಿಯವರಿಗೆ ಸಮಾರಂಭಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.

ಪಂಡಿತ್‌ ಭೀಮ್‌ಸೇನ್‌ ಜೋಶಿಯವರಿಗೆ ಕೇಂದ್ರ ಸರಕಾರ ಪದ್ಮಶ್ರೀ, ಪದ್ಮಭೂಷಣ, ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X