ವಾರಕ್ಕೆ 70 - 80 ಗಂಟೆ ಕೆಲಸ ಮಾಡಿದರೆ ಕಾದಿದೆ ಆಪತ್ತು, ಹುಷಾರ್!
ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಈಗ ಕೆಲಸ ಅವಧಿಯ ವಿಚಾರದಲ್ಲೂ ಇದೇ ಚರ್ಚೆ ನಡೆದಿದೆ. ಸರ್ಕಾರ ಯಾವುದೇ ನಿಮಗಳನ್ನು ತಂದರೂ, ಸದ್ದಿಲ್ಲದೆ ಹಲವು ಕಂಪನಿಗಳು ಉದ್ಯೋಗಿಗಳಿಗಿಂತ ಮಿತಿ ಮೀರಿದ ಕೆಲಸವನ್ನು ಮಾಡಿಸಿಕೊಳ್ಳುತ್ತಿವೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70ರಿಂದ 80 ಗಂಟೆ ಕೆಲಸ ಮಾಡಬೇಕು ಅಂತ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ವಾರಕ್ಕೆ ಮಿತಿ ಮೀರಿ ಕೆಲಸ ಮಾಡಿದರೆ ಜೋಕೆ. ಕಾದಿದೆ ಆಪತ್ತು ಎಂದು ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾದರೆ ಜಾಸ್ತಿ ಕೆಲಸ ಹಾಗೂ ಕಡಿಮೆ ನಿದ್ದೆ ಮಾಡುವುದರಿಂದ ಆಗುತ್ತಿರುವ ಸಮಸ್ಯೆಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಯುವಕರು ಜಾಸ್ತಿ ಕೆಲಸ ಮಾಡಬೇಕು ಅಂತ ನಾರಾಯಣ ಮೂರ್ತಿ ಅವರು ಹೇಳಿದ್ದು. ಇದರ ನಡುವೆ ಕೆಲಸದ ಒತ್ತಡದಿಂದ ಯುವತಿಯೊಬ್ಬರು ಸಾವನ್ನಪ್ಪಿದ್ದು. ಈ ಎರಡೂ ವಿಚಾರಗಳು ದೇಶದಲ್ಲಿ ಕಳೆದ ಒಂದು ವರ್ಷದಿಂದ ಭಾರೀ ಚರ್ಚೆ ಆಗ್ತಿದೆ. ಈ ನಡುವೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರಿಗೆ ಸಣ್ಣ ಉದ್ಯಮಿಗಳು ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ. ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್‌ನ ನಡುವೆ ವ್ಯತ್ಯಾಸವಿರಬೇಕು. ಅಲ್ಲದೆ ಹೆಚ್ಚು ಒತ್ತಡದಿಂದ ಕೆಲಸ ಮಾಡುವುದರಿಂದ ಗಂಭೀರ ಸಮಸ್ಯೆಗಳು ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕೆಲಸದಲ್ಲಿನ ಅತಿಯಾದ ಒತ್ತಡ, ಕಡಿಮೆ ನಿದ್ದೆ ಮಾಡುವುದು ಹಾಗೂ ಜಂಕ್ ಫುಡ್ ಸೇವಿಸುವುದರಿಂದ ಅಕಾಲಿಕ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿ ಇದೆ. ಹೆಚ್ಚು ಸಮಯ ಕೆಲಸ ಮಾಡುವುದರಿಂದ ಸಹಜವಾಗಿಯೇ ಒತ್ತಡ ಹೆಚ್ಚಾಗುತ್ತದೆ ಇದರಿಂದ ಹೃದಯಾಘಾತ ಸಾಧ್ಯತೆಗಳು ಹೆಚ್ಚು ಎಂದು ವೈದ್ಯರು ಎಚ್ಚರಿಸಿರುವುದು ವರದಿಯಾಗಿದೆ.
ಕಡಿಮೆ ನಿದ್ದೆ ಹಾಗೂ ಯಾವ ಸಮಯದಲ್ಲಿ ಎಂದರೆ ಆ ಸಮಯದಲ್ಲಿ ಜಂಕ್ ಫುಡ್ ಸೇವಿಸುವುದು. ಅನಗತ್ಯ ಮಾನಸಿಕ ಮತ್ತು ದೈಹಿಕ ಆಯಾಸದಿಂದ ಹೃದಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಅಂತಿಮವಾಗಿ ಅಕಾಲಿಕ ಹೃದಯಾಘಾತಕ್ಕೆ ಕಾರಣವಾಗಬಹುದು.
ಅವರ ಮರಣದ ನಂತರ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ಹೃದಯಾಘಾತದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಎನ್ನುವ ಯುವತಿ ಅತಿಯಾದ ಕೆಲಸದ ಒತ್ತಡದಿಂದ ಮೃತಪಟ್ಟಿದ್ದರು. ಇದಾದ ನಂತರ ದೇಶದಲ್ಲಿ ಈ ಸಂಬಂಧ ಅಧ್ಯಯನಗಳು ನಡೆದಿವೆ. ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅತಿಯಾದ ಕೆಲಸದ ಒತ್ತಡದಿಂದ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರು.
ಬದಲಾಗುತ್ತಿರುವ ಜೀವನ ಶೈಲಿ, ಅತಿಯಾದ ಒತ್ತಡದ ಕೆಲಸ, ತೂಕ ಹೆಚ್ಚಾಗುವುದು, ವ್ಯಾಯಾಮದ ಕೊರತೆ ಹಾಗೂ ಜಂಕ್ ಫುಡ್ ಸೇವನೆ ಸೇರಿದಂತೆ ಹಲವು ಕಾರಣಗಳಿಂದ ಯುವಕ ಹಾಗೂ ಯುವತಿಯರಲ್ಲಿ ಹೃದಯಾಘಾತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ವರದಿ ಎಚ್ಚರಿಸಿದೆ.
ಇತ್ತೀಚಿನ ದಿನಗಳಲ್ಲಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಹೇಳಿಕೆ ಭಾರೀ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಇದರ ನಡುವೆ ಹೆಚ್ಚು ಕೆಲಸ ಮಾಡುವುದರಿಂದ ಯಾವೆಲ್ಲ ಆರೋಗ್ಯ ಸಮಸ್ಯೆ ಆಗಲಿದೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.












Click it and Unblock the Notifications