General Knowldge: ಹೈವೇ ಸೈನ್‌ಬೋರ್ಡ್ ಹಸಿರು ಬಣ್ಣದಲ್ಲೇ ಏಕಿರುತ್ತೆ? ಕೆಂಪೋ, ನೀಲಿಯೋ ಏಕಿರೋಲ್ಲ?
ಹೈವೇಯಲ್ಲಿ ನೀವು ಪ್ರಯಾಣ ಮಾಡುವಾಗ ಗಮನಿಸಿರಬಹುದು, ದಿಕ್ಕುಗಳನ್ನು ಸೂಚಿಸುವ ಬಹುತೇಕ ಸೈನ್‌ಬೋರ್ಡಗಳು ಹಸಿರು ಬಣ್ಣದಲ್ಲಿ ಕಾಣುತ್ತವೆ. ಇದು ಕೇವಲ ಹೈವೇ ಅಲಂಕಾರಕ್ಕಾಗಿ ಅಲ್ಲ. ಇದರ ಹಿಂದೆ ರಸ್ತೆ ಸುರಕ್ಷತೆ ನಿಯಮಗಳ ದೊಡ್ಡ ಪಾತ್ರವಿದೆ ಅಂದರೆ ಮಾನವನ ದೃಷ್ಟಿಯ ಸಾಮರ್ಥ್ಯ, ವಿಜ್ಞಾನ ಹೀಗೆ ಹಲವಾರು ನಿಯಮಗಳ ರಸ್ತೆ ಸುರಕ್ಷತೆಗಾಗಿ ಸೈನ್‌ಬೋರ್ಡ ಹಾಕಲಾಗಿರುತ್ತದೆ.
ಹೈವೇಗಳಲ್ಲಿ ವಾಹನಗಳು ಅತಿವೇದಲ್ಲಿ ಸಾಗುವುದರಿಂದ ಚಾಲಕರು ಕ್ಷಣಾರ್ಧದಲ್ಲೇ ಮಾಹಿತಿಯನ್ನು ಗ್ರಹಿಸಬೇಕಾಗುತ್ತದೆ. ಆದ್ದರಿಂದ ಹಸಿರು ಬಣ್ಣವು ಇರುವುದರಿಂದ ಸವಾರರಿಗೆ ಬೇಗನೆ ಓದಲು ಅನುಕೂಲಕರ ಆಗಿರುತ್ತದೆ.

ಹಸಿರು ಬಣ್ಣವೇ ಯಾಕೆ ಆಯ್ಕೆ?
ರಸ್ತೆ ಸುರಕ್ಷತಾ ತಜ್ಞರ ಪ್ರಕಾರ, ಹಸಿರು ಬಣ್ಣದ ಮೇಲೆ ಬಿಳಿ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇದರಿಂದ ವಾಹನ ಚಾಲಕರು ಹಗಲಿನಲ್ಲಿ ಮತ್ತು ರಾತ್ರಿ ಕೂಡ ಸುಲಭವಾಗಿ ಓದಲು ಸಾಧ್ಯವಾಗುತ್ತದೆ. ಜೊತೆಗೆ ಇದು ಕಣ್ಣುಗಳಿಗೆ ಹೆಚ್ಚು ಒತ್ತಡ ನೀಡುವುದಿಲ್ಲ.
ಹಸಿರು ಬಣ್ಣವನ್ನು ಪ್ರಶಾಂತತೆ ಮತ್ತು ನ್ಯೂಟ್ರಲ್ ಬಣ್ಣವೆಂದು ಪರಿಗಣಿಸಲಾಗುತ್ತದೆ. ಕೆಂಪು ಅಥವಾ ಹಳದಿ ಬಣ್ಣಗಳು ಸಾಮಾನ್ಯವಾಗಿ ಎಚ್ಚರಿಕೆ ಮತ್ತು ಅಪಾಯ ಸೂಚನೆಗಳಿಗೆ ಬಳಸಲಾಗುತ್ತದೆ. ಆದರೆ ಹಸಿರು ಬಣ್ಣ ಮಾರ್ಗದರ್ಶನ ನೀಡುತ್ತದೆ, ಒತ್ತಡ ಅಥವಾ ಆತಂಕ ಉಂಟುಮಾಡುವುದಿಲ್ಲ.
ಹಸಿರು ಬಣ್ಣಕ್ಕೆ ಮಾನವನ ಕಣ್ಣು ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಎಂಬುದೂ ಮತ್ತೊಂದು ಪ್ರಮುಖ ಕಾರಣವಾಗಿದೆ. ಇದು ಚಾಲಕರಿಗೆ ದಾರಿ ಸೂಚಕಗಳನ್ನು ಬೇಗನೆ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.
| ಕಾರಣ | ಹೇಗೆ ಸಹಾಯ ಮಾಡುತ್ತದೆ? |
|---|---|
| ಹೆಚ್ಚಿನ ಗೋಚರತೆ | ಹಸಿರು ಹಿನ್ನೆಲೆಯ ಮೇಲೆ ಬಿಳಿ ಬಣ್ಣದ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುತ್ತವೆ. |
| ಕಣ್ಣಿನ ಒತ್ತಡ ಕಡಿಮೆ | ದೀರ್ಘ ಪ್ರಯಾಣದ ವೇಳೆ ಹಸಿರು ಬಣ್ಣವನ್ನು ಕಣ್ಣುಗಳು ಸುಲಭವಾಗಿ ಗ್ರಹಿಸುತ್ತವೆ. |
| ಪ್ರಶಾಂತ ಭಾವನೆ | ಅಪಾಯ ಅಥವಾ ಅವಸರದ ಭಾವನೆಯನ್ನು ಉಂಟುಮಾಡದೆ ಮಾಹಿತಿ ನೀಡುತ್ತದೆ. |
| ಕಡಿಮೆ ಹೊಳಪು | ಪ್ರಕಾಶಮಾನ ಬಣ್ಣಗಳಿಗೆ ಹೋಲಿಸಿದರೆ ಹಸಿರು ಬಣ್ಣ ಕಡಿಮೆ ಹೊಳಪು ಉಂಟುಮಾಡುತ್ತದೆ. |
| ತ್ವರಿತ ನಿರ್ಧಾರ | ಚಾಲಕರು ನಿರ್ಗಮನ, ಗಮ್ಯಸ್ಥಾನ ಮತ್ತು ದೂರದ ಮಾಹಿತಿಯನ್ನು ಬೇಗನೆ ಗುರುತಿಸಬಹುದು. |
ಹಸಿರು ಬಣ್ಣದ ಸೈನ್‌ಬೋರ್ಡ್ ಲಾಭ
ಹಸಿರು ಬಣ್ಣದ ಸೈನ್‌ಬೋರ್ಡ್‌ಗಳು ಕೇವಲ ಚೆನ್ನಾಗಿ ಕಾಣಿಸುವುದಷ್ಟೇ ಅಲ್ಲ, ಇದು ಚಾಲಕರ ಸುರಕ್ಷತೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ.
ಸುದೀರ್ಘವಾದ ಪ್ರಯಾಣದಲ್ಲಿ ಕಣ್ಣಿಗೆ ಒತ್ತಡ ಕಡಿಮೆ ಮಾಡುತ್ತದೆ.
ಅಧಿಕ ವೇಗದಲ್ಲಿ ಸಾಗುವಾಗಲೂ ರಸ್ತೆಯ ಮಾಹಿತಿ ಸ್ಪಷ್ಟವಾಗಿ ಕಾಣುತ್ತದೆ.
ಚಾಲಕರು ತಕ್ಷಣ ನಿರ್ಧಾರ ತೆಗೆದುಕೊಳ್ಳಲು ತುಂಬಾ ಅನುಕೂಲಕರವಾಗಿದೆ.
ವಾಹನ ಸವಾರರಿಗೆ ಕಣ್ಣು ಕುಕ್ಕುವುದಿಲ್ಲ ಆದ್ದರಿಂದ ಇದನ್ನು ಓದಲು ಸುಲಭವಾಗುತ್ತದೆ.
ಕೆಂಪು, ಹಳದಿ ಅಥವಾ ನೀಲಿ ಯಾಕೆ ಅಲ್ಲ?
ಪ್ರತಿ ಬಣ್ಣಕ್ಕೂ ವಿಭಿನ್ನ ಅರ್ಥವಿದೆ. ಕೆಂಪು ಬಣ್ಣ ನಿಲ್ಲುವ ಸೂಚನೆ ಅಥವಾ ಅಪಾಯಕ್ಕೆ ಬಳಸಲಾಗುತ್ತದೆ. ಹಳದಿ ಎಚ್ಚರಿಕೆ ಸೂಚನೆ ನೀಡುತ್ತದೆ. ನೀಲಿ ಬಣ್ಣ ಸೇವೆ ಮತ್ತು ನಗರ ಮಾಹಿತಿ ನೀಡಲು ಬಳಸಲಾಗುತ್ತದೆ.
ಈ ಬಣ್ಣಗಳನ್ನು ಹೈವೇ ದಿಕ್ಕು ಸೂಚನೆಗೆ ಬಳಸಿದರೆ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಹಸಿರು ಬಣ್ಣವನ್ನು ವಿಶ್ವಾದ್ಯಂತ ಸ್ವೀಕರಿಸಲಾಗಿದೆ.
ಜಾಗತಿಕ ಮಾನದಂಡ
ಭಾರತ ಮಾತ್ರವಲ್ಲ, ಅಮೆರಿಕಾ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಹೈವೇ ಸೈನ್‌ಬೋರ್ಡ್‌ಗಳಿಗೆ ಹಸಿರು ಬಣ್ಣವನ್ನು ಬಳಸಲಾಗುತ್ತದೆ. ಇದು ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಮಾನದಂಡಗಳ ಒಂದು ಭಾಗವಾಗಿದೆ. ಅಪರಿಚಿತ ಪ್ರದೇಶಗಳಲ್ಲಿ ಪ್ರಯಾಣಿಸುವ ಚಾಲಕರಿಗೂ ಈ ಒಂದೇ ರೀತಿಯ ವ್ಯವಸ್ಥೆ ದಿಕ್ಕು ಗುರುತಿಸಲು ಸಹಾಯ ಮಾಡುತ್ತದೆ.
ಹೈವೇ ಸೈನ್‌ಬೋರ್ಡ್‌ಗಳ ಹಸಿರು ಬಣ್ಣ ಕೇವಲ ವಿನ್ಯಾಸ ಆಯ್ಕೆ ಅಲ್ಲ, ಅದು ರಸ್ತೆಯ ಸುರಕ್ಷತೆ ಮತ್ತು ಸುಲಭ ಪ್ರಯಾಣಕ್ಕಾಗಿ ರೂಪುಗೊಂಡ ವಿಜ್ಞಾನ ಆಧಾರಿತ ವ್ಯವಸ್ಥೆಯಾಗಿದೆ.
ಆಸ್ಪತ್ರೆಗಳಲ್ಲಿ ಹಸಿರು ಬಣ್ಣದ ಸೂಚನಾ ಫಲಕ
ಹೈವೇಗಳಲ್ಲಿ ಅಷ್ಟೆ ಅಲ್ಲ, ಆಸ್ಪತ್ರೆಗಳಲ್ಲಿಯೂ ಹಸಿರು ಬಣ್ಣದ ಸೂಚನಾ ಫಲಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕಾರಣ ಹಸಿರು ಬಣ್ಣವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಬಣ್ಣವೆಂದು ಪರಿಗಣಿಸಲಾಗಿದೆ. ಆದ್ದರಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳು ಮತ್ತು ಅವರ ಕುಟುಂಬದವರು ಸಾಮಾನ್ಯವಾಗಿ ಒತ್ತಡ ಅಥವಾ ಆತಂಕದಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಹಸಿರು ಬಣ್ಣವು ಮನಸ್ಸಿಗೆ ಸಮಾಧಾನ ತರಲು ಸಹಾಯ ಮಾಡುತ್ತದೆ. ಜೊತೆಗೆ, ತುರ್ತು ನಿರ್ಗಮನ (Emergency Exit), ಮಾರ್ಗದರ್ಶನ ಮತ್ತು ಪ್ರಮುಖ ವಿಭಾಗಗಳ ಸೂಚನೆಗಳನ್ನು ದೂರದಿಂದಲೇ ಸುಲಭವಾಗಿ ಗುರುತಿಸಲು ಹಸಿರು ಬಣ್ಣ ಪರಿಣಾಮಕಾರಿಯಾಗಿರುತ್ತದೆ. ಇದೇ ಕಾರಣಕ್ಕೆ ಅನೇಕ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಹಸಿರು ಬಣ್ಣದ ಸೂಚನಾ ಫಲಕಗಳನ್ನು ಬಳಸಲಾಗುತ್ತದೆ.














Click it and Unblock the Notifications