ನೆಮ್ಮದಿಯ ಬದುಕಿಗೆ ಏನೇನು ಬೇಕು..? ಮಾನಸಿಕ ಅನಾರೋಗ್ಯ ಉಂಟಾಗುವುದು ಹೇಗೆ..?
ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವೆಷ್ಟು ಕಾಳಜಿಯನ್ನು ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ಅಂತರ್ದೇಹದ (ಮನಸ್ಸಿನ) ಕಡೆಗೆ ನೀಡಬೇಕು. ಏಕೆಂದರೆ ಕಲುಷಿತ ಮನಸ್ಸು ನಮ್ಮದಾದರೆ ಅದರ ಪರಿಣಾಮ ಶರೀರದ ಮೇಲೆ ನೇರವಾಗಿ ಬೀರುತ್ತದೆ. ಆರೋಗ್ಯಕರ ಮನಸ್ಸನ್ನು ಹೊಂದದೆ ಹೋದರೆ ಸದಾ ವ್ಯಸನಿಯಾಗಿಯೋ ಅಥವಾ ಮಾನಸಿಕ ರೋಗಿಯಾಗಿಯೋ ಬಳಲಬೇಕಾದ ಅಪಾಯವಂತು ಇದ್ದೇ ಇದೆ.
ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಅಸೂಯೆ, ಅಹಂಕಾರದಂತಹ ರಜೋ ಗುಣಗಳು ತುಂಬಿದ್ದೇ ಆದರೆ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಕಾರಣ ಒಳಗೆ ಕಲ್ಮಶವನ್ನು ತುಂಬಿಕೊಂಡು ಹೊರಗಿನ ಶರೀರವನ್ನು ಎಷ್ಟೇ ಶುಭ್ರಗೊಳಿಸಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಮಾಡಿದ ತಪ್ಪು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದು ಛೇ! ಎಂಥ ತಪ್ಪು ಮಾಡಿಬಿಟ್ಟೆ? ನನ್ನಿಂದ ಎಂತಹ ಅನ್ಯಾಯವಾಯಿತು ಎಂಬ ಕೊರಗು ನಮ್ಮನ್ನು ಕಾಡತೊಡಗುತ್ತದೆ.

ಒಂದು ವೇಳೆ ಇಂತಹ ಗುಣಗಳು ನಮ್ಮಲ್ಲಿ ಕಂಡು ಬಂದರೆ ಮುಂದೆ ಅಂಥ ತಪ್ಪುಗಳಿಗೆ ನಾವು ಅವಕಾಶ ಕೊಡದೆ ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ನಮ್ಮಲ್ಲಿ ಒಳ್ಳೆತನ ಬೆಳೆಯಲು ಸಹಕಾರಿಯಾಗುತ್ತದೆ. ನಮ್ಮ ತಪ್ಪುಗಳು ನಮಗೆ ಅರಿವಾದರೆ ಖಂಡಿತಾ ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ತಪ್ಪುಗಳನ್ನು ಸತ್ಯ ಮಾಡುವ ಅಥವಾ ನಾವು ಮಾಡಿದ್ದೇ ಸರಿ ಎಂಬ ಮನೋಭಾವ ನಮ್ಮಿಂದ ದೂರವಾಗಿ ಬದುಕು ಸುಂದರವಾಗುತ್ತದೆ.
ಕ್ಷಮೆ ಕೇಳುವ ಮನೋಗುಣ ಬೆಳೆಸಿಕೊಳ್ಳಿ
ನಮ್ಮಲ್ಲಿ ಎಷ್ಟೇ ಸಂಪತ್ತು, ಅಧಿಕಾರವಿದ್ದರೂ ಮಾನವೀಯ ಗುಣವಿಲ್ಲದಿದ್ದರೆ ಬದುಕೇ ನಗಣ್ಯ. ಆದ್ದರಿಂದ ಮಾನವೀಯ, ಗುಣ, ಸಂಬಂಧಗಳ ಬಗ್ಗೆಯೂ ಗಮನಹರಿಸಬೇಕು. ಮೂರು ದಿನಗಳ ಬದುಕಿನಲ್ಲಿ ಕೇವಲ ನಮಗಾಗಿ ಬದುಕದೆ, ಇನ್ನೊಬ್ಬರ ಬದುಕಿಗಾಗಿ ಒಂದಷ್ಟು ಸಮಯಗಳನ್ನು ಮೀಸಲಿಡುವ, ಕಷ್ಟಸುಖಗಳಲ್ಲಿ ಭಾಗಿಯಾಗುವ ಅಷ್ಟೇ ಅಲ್ಲದೆ ನಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳುವ ಮನೋಗುಣವನ್ನು ಬೆಳೆಸಿಕೊಳ್ಳಬೇಕು.
ಒಂದು ವೇಳೆ ನಮ್ಮ ತಪ್ಪು ಅರಿವಿಗೆ ಬಂದರೂ ನಾನೇಕೆ ಅವನೊಂದಿಗೆ ಕ್ಷಮೆ ಕೇಳಬೇಕು? ನನ್ನ ಅಂತಸ್ತಿಗೆ ಇದು ಹೊಂದುವಂತದ್ದಲ್ಲ ಎಂಬ ಮನೋಭಾವದಿಂದ ತಪ್ಪನ್ನು ಸಮರ್ಥಿಸಿಕೊಂಡು ಮುನ್ನಡೆದರೆ ನಮಗರಿವಿಲ್ಲದೆಯೇ ಮತ್ತಷ್ಟು ತಪ್ಪನ್ನು ನಾವು ಮಾಡಬೇಕಾಗುತ್ತದೆ. ಇದು ಅರಿವಾಗುವಾಗ ಕಾಲ ಮಿಂಚಿ ಹೋಗಿರುತ್ತದೆ ಅಲ್ಲದೆ ಅದಕ್ಕೆ ತಕ್ಕ ಕಂದಾಯವನ್ನು ಕಟ್ಟಬೇಕಾಗುತ್ತದೆ. ತಪ್ಪುಗಳನ್ನೆಲ್ಲ ಸಮರ್ಥಿಸಿಕೊಳ್ಳುವವರು ಅದಕ್ಕೆ ಬೆಲೆ ತೆರಬೇಕಾಗುತ್ತದೆ.

ಶ್ರೀಮಾತೆ ಶಾರದಾದೇವಿಯವರು ಹೇಳಿದ್ದೇನು?
ಆಧ್ಯಾತ್ಮಿಕತೆಯ ಮೂಲಕ ಮನಸ್ಸನ್ನು ಶುಭ್ರಗೊಳಿಸುವ, ಮನಸ್ಸನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವ ಸಂದರ್ಭ ಮನಸ್ಸಿನಲ್ಲಿ ದುರ್ಭಾವನೆಗಳನ್ನು ಕುಂದುಕೊರತೆಗಳನ್ನು ಅಥವಾ ತಪ್ಪು ಆವೇಗಗಳನ್ನು ಸಂಚಯಿಸಿಕೊಳ್ಳಬಾರದು. ಶ್ರೀಮಾತೆ ಶಾರದಾದೇವಿಯವರು ಹೇಳಿರುವ 'ಕ್ಷಮಾಗುಣವೇ ತಪಸ್ಸು' ಎಂಬುದನ್ನು ಮರೆಯಬಾರದು.
ಕಲುಷಿತವಾದ ಅಥವಾ ಅನಾರೋಗ್ಯಕರವಾದ ಮನಸ್ಸನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳುವತ್ತ ಕಾರ್ಯಮಗ್ನರಾಗಬೇಕು. ಆರೋಗ್ಯಕರ ಮನಸ್ಸನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಸಹಕಾರಿಯಾಗುತ್ತದೆ. ಆರೋಗ್ಯಕರ ಮನಸ್ಸಿದ್ದರೆ ಮಾತ್ರ ನಮ್ಮಲ್ಲಿ ಕ್ಷಮಾ ಗುಣ ಬೆಳೆಯಲು ಸಾಧ್ಯ. ಇಂತಹ ಕ್ಷಮಾ ಗುಣಗಳು ನಮ್ಮ ಮನಸ್ಸನ್ನು ಸದಾ ಶುಭ್ರವಾಗಿಟ್ಟಿರುತ್ತದೆ.
ನಿಜ ಹೇಳಬೇಕೆಂದರೆ ಮನಸ್ಸು ಎನ್ನುವುದು ಹುಚ್ಚು ಕುದುರೆಯಂತೆ. ಅದನ್ನು ಶುಭ್ರವಾಗಿಟ್ಟು ಕೊಳ್ಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಅದನ್ನು ಪರಿಶುದ್ಧವಾಗಿಟ್ಟು ಕೊಳ್ಳುವತ್ತ ಗಮನಹರಿಸಬೇಕು. ಮನಸ್ಸು ಪರಿಶುದ್ಧವಾಗಿರ ಬೇಕಾದರೆ ನಾವು ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ನಾವು ಕೈಗೊಳ್ಳಬೇಕು. ಜತೆಗೆ ಕೆಲವು ಶಿಸ್ತುಗಳ ಪರಿಣಾಮಕಾರಿಯಾದ ಅನುಸರಣೆಯನ್ನು ಮಾಡಬೇಕಾಗುತ್ತದೆ. ಮನಸ್ಸನ್ನು ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅದು ಹಾದಿ ತಪ್ಪದಂತೆ ನೋಡಿಕೊಳ್ಳುವುದರಿಂದ ಮತ್ತು ನಿರಂತರ ಧ್ಯಾನದಿಂದ ಮನಸ್ಸನ್ನು ಶುದ್ಧೀಕರಣಗೊಳಿಸುತ್ತದೆ.

ಆದಷ್ಟು ದೇವರ ನಾಮ ಜಪ ಮಾಡುವುದು, ದೇಗುಲಗಳಿಗೆ ತೆರಳುವುದು ಹೀಗೆ ಭಗವಂತನಲ್ಲಿ ಶರಣು ಹೋಗುವುದರೊಂದಿಗೆ ಮನಸ್ಸಿನೊಳಗಿರುವ ಆಲೋಚನೆಗಳನ್ನು ಕ್ರಮಬದ್ಧವಾಗಿ ನಿಯಂತ್ರಣಕ್ಕೆ ತಂದುಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ಮನಸ್ಸು ಶುದ್ಧವಾಗಿಟ್ಟುಕೊಂಡಿದ್ದೇ ಆದರೆ ಕೆಟ್ಟದರ ಬಗೆಗಿನ ಆಲೋಚನೆಗಳು ದೂರವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ತಪ್ಪುದಾರಿಗೆ ಎಳೆಯುವ ದುಷ್ಪವೃತ್ತಿಗಳು ಹತ್ತಿರ ಸುಳಿಯುವುದಿಲ್ಲ. ನಾವೇನು ಮಾಡುತ್ತೇವೆಯೋ ಅದೆಲ್ಲವೂ ಒಳ್ಳೆಯ ಮತ್ತು ನ್ಯಾಯ ಮಾರ್ಗದ್ದಾದರೆ ಬದುಕು ಕೂಡ ನೆಮ್ಮದಿಯಾಗಿ, ಖುಷಿಯಾಗಿ ಸಾಗುವುದರಲ್ಲಿ ಎರಡು ಮಾತಿಲ್ಲ.
-
ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ












Click it and Unblock the Notifications