Get Updates
Get notified of breaking news, exclusive insights, and must-see stories!

Jamun Fruit: ಬೇಸಿಗೆಯಲ್ಲಿ ಆರೋಗ್ಯ ಕಾಪಾಡುವ ನೇರಳೆ ಹಣ್ಣು, ಮಾಹಿತಿ ತಿಳಿಯಿರಿ

ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಸರ್ಗದಲ್ಲಿಯೇ ತರಕಾರಿ, ಸೊಪ್ಪು ಮತ್ತು ಹಣ್ಣುಗಳ ಮೂಲಕ ಔಷಧಿಗಳನ್ನು ದೇವರು ನಮಗೆ ದಯಪಾಲಿಸಿದ್ದಾನೆ. ಆದರೆ ಅದನ್ನು ಯಾವಾಗ? ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕೆನ್ನುವುದು ನಮ್ಮ ಜಾಣತನವಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ನೇರಳೆ ಹಣ್ಣು ಮಾರುಕಟ್ಟೆಗೆ ಬರಲಿದೆ. ಅದನ್ನು ನೇರವಾಗಿ ಅಥವಾ ಜ್ಯೂಸ್ ಮೂಲಕ ಸೇವಿಸಬಹುದಾಗಿದೆ. ಉಳಿದಂತೆ ನೇರಳೆ ಹಣ್ಣಿನ ಜ್ಯೂಸ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಹೈಬ್ರೀಡ್ ಮತ್ತು ನಾಟಿ ನೇರಳೆ ಹಣ್ಣುಗಳು ಲಭ್ಯವಿದ್ದು, ಮಲೆನಾಡಿನ ಕಾಡುಗಳಲ್ಲಿ ನೇರಳೆ ಹಣ್ಣು ಹೇರಳವಾಗಿ ಸಿಗುತ್ತದೆ. ಉಳಿದಂತೆ ಪಟ್ಟಣಗಳಲ್ಲಿ ಹೈಬ್ರೀಡ್ ನೇರಳೆಹಣ್ಣುಗಳು ದೊರೆಯುತ್ತವೆ. ಇವುಗಳನ್ನು ಬಳಸಿಕೊಂಡು ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು.

What Are The Benefits Of Jamun Fruit In Summer Days

ನಿಸರ್ಗದಲ್ಲಿಯೇ ನಮ್ಮ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಿದೆ. ಅದರನ್ನರಿತು ನಾವು ಅವುಗಳ ಉಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕು. ನಮ್ಮ ಮನೆಯ ಬಳಿ ನೇರಳೆ ಮರವಿದ್ದರೆ ಅದರಲ್ಲಿ ಹಣ್ಣುಗಳಿದ್ದರೆ ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೇವಿಸಿ. ಏಕೆಂದರೆ ಈ ನೇರಳೆ ಹಣ್ಣುಗಳು ಸಾಮಾನ್ಯವಲ್ಲ. ಇವುಗಳಲ್ಲಿಯೂ ಆರೋಗ್ಯದಾಯಕ ಪೋಷಕಾಂಶಗಳು ಬಹಳಷ್ಟು ಇವೆ.

ನೇರಳೆ ಹಣ್ಣಿನಲ್ಲಿರುವ ಔಷಧೀಯ ಗುಣಗಳು

ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಮಾಡುತ್ತಿದ್ದವರು ತಮ್ಮ ಸುತ್ತ ಸಿಗುತ್ತಿದ್ದ ಕಾಡುಹಣ್ಣುಗಳನ್ನೇ ತಿನ್ನುತ್ತಿದ್ದರು. ಅದರಲ್ಲಿರುವ ಪೋಷಕಾಂಶಗಳು ಅವರ ಆರೋಗ್ಯವನ್ನು ಕಾಪಾಡುತ್ತಿತ್ತು. ಇವತ್ತು ನೇರಳೆ ಹಣ್ಣಿನ ಸುಧಾರಿತ ತಳಿಗಳು ಬಂದಿದ್ದು ರೈತರು ತಮ್ಮ ಜಮೀನುಗಳಲ್ಲಿ ಬೆಳೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿಗೆ ಹೆಚ್ಚಿನ ಬೆಲೆಯಿರುವುದನ್ನು ನಾವು ಕಾಣಬಹುದಾಗಿದೆ.

What Are The Benefits Of Jamun Fruit In Summer Days

ಈ ನೇರಳೆಹಣ್ಣಿನಿಂದ ಹತ್ತು ಹಲವು ಉಪಯೋಗವಿರುವ ಕಾರಣದಿಂದಾಗಿ ಜನ ಇದಕ್ಕೆ ಮುಗಿ ಬೀಳುತ್ತಿದ್ದಾರೆ. ಇಷ್ಟಕ್ಕೂ ನೇರಳೆ ಹಣ್ಣಿನಲ್ಲಿರುವ ಪೋಷಕಾಂಶಗಳು ಯಾವುವು ಎಂಬುದನ್ನು ನೋಡುವುದಾದರೆ ನೂರು ಗ್ರಾಂ ಹಣ್ಣಿನಲ್ಲಿ ತೇವಾಂಶ 83.7ಗ್ರಾಂ, ಸಸಾರಜನಕ 0.7, ಮೇದಸ್ಸು 0.3, ಖನಿಜಾಂಶ 0.3, ಕಾರ್ಬೋಹೈಡ್ರೇಟ್ 14, ಕ್ಯಾಲ್ಸಿಯಂ 15 ಮಿ.ಗ್ರಾಂ, ಫಾಸ್ಫರಸ್ 1.5, ಕಬ್ಬಿಣ 1.2, ಥಿಯಾಮಿನಾ 2.23, ರೈಬೋಫ್ಲಾವಿನ್ 0.01, ನಯಾಸಿನ್ 0.1, ಸಿ ಜೀವಸತ್ವ 18 ಮಿಲಿಗ್ರಾಂ ಇದೆ ಹೀಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯದ ವಿಚಾರದಲ್ಲಿ ಹಲವು ಉಪಯೋಗಗಳನ್ನು ಕಾಣಬಹುದಾಗಿದೆ.

ನೇರಳೆಯಿಂದ ಬಾಯಾರಿಕೆ ಉಪಶಮನ

ಬೇಸಿಗೆಯ ದಿನಗಳಲ್ಲಿ ನೇರಳೆಯು ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ಬಾಯಾರಿಕೆಯನ್ನು ಉಪಶಮನಗೊಳಿಸುವ ಶಕ್ತಿಯಿದ್ದು ಇದನ್ನು ಜ್ಯೂಸ್ ಮಾಡಿ ಕುಡಿದರೆ ದಾಹ ತಣಿಸಲು ಸಾಧ್ಯವಾಗುತ್ತದೆ. ನಿದ್ದೆಕೊರತೆ, ಅತಿಯಾದ ಟೀ ಸೇವನೆಯಿಂದ ಉಂಟಾಗುವ ಪಿತ್ತದ ತೊಂದರೆಯನ್ನು ನೇರಳೆ ಹಣ್ಣನ್ನು ಸೇವಿಸುವುದರಿಂದ ಶಮನ ಮಾಡಬಹುದಾಗಿದೆ.

What Are The Benefits Of Jamun Fruit In Summer Days

ಜೀರ್ಣವಾಗದೆ ತೊಂದರೆ ಪಡುವವರು ನೇರಳೆಹಣ್ಣನ್ನು ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಅಜೀರ್ಣದಿಂದಾಗುವ ಬೇಧಿಗೂ ನೇರಳೆ ಶರಬತ್ತು ಉತ್ತಮ ಔಷಧಿಯಾಗಿದೆ. ಇನ್ನು ಅರ್ಧ ಲೋಟದಷ್ಟು ನೇರಳೆ ಹಣ್ಣಿನ ಶರಬತ್ತಿಗೆ ಒಂದು ಚಮಚದಷ್ಟು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಅಂಗಾಲು, ಅಂಗೈ ಉರಿ ಕಡಿಮೆಯಾಗುವುದಲ್ಲದೆ ಒಳ್ಳೆಯ ನಿದ್ದೆಯೂ ಬರುತ್ತದೆ.

ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ

ನೇರಳೆಹಣ್ಣು ಮಾತ್ರವಲ್ಲದೆ ಎಲೆಗಳು ಕೂಡ ಉಪಯೋಗಕಾರಿಯಾಗಿದ್ದು, ಎಳೆಯ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗೆಯುವುದರಿಂದ ವಸಡು ಮತ್ತು ಹಲ್ಲುಗಳು ಗಟ್ಟಿಯಾಗುತ್ತವೆಯಂತೆ. ಅಷ್ಟೇ ಅಲ್ಲ ವಸಡಿನ ರಕ್ತಸ್ರಾವವೂ ನಿಯಂತ್ರಣಕ್ಕೆ ಬರುತ್ತದೆ. ಅತಿಸಾರ, ಆಮಶಂಕೆ, ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಎಳೆಯ ನೇರಳೆ ಎಲೆಗಳಿಂದ ಕಷಾಯ ತಯಾರಿಸಿ ಮೂರು ಹೊತ್ತು ಒಂದು ಚಮಚದಷ್ಟು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಒಟ್ಟಾರೆ ಹೇಳಬೇಕೆಂದರೆ ನೇರಳೆ ಹಣ್ಣು, ಎಲೆ, ತೊಗಟೆ ಎಲ್ಲವೂ ಉಪಯುಕ್ತವಾಗಿದ್ದು, ಅವುಗಳ ಉಪಯೋಗವನ್ನು ಅರಿತು ಉಪಯೋಗಿಸಿದರೆ ಆರೋಗ್ಯವಾಗಿರಲು ಸಾಧ್ಯವಿದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಬೇರೆಲ್ಲ ಜ್ಯೂಸ್ ಗಳಿಗಿಂತ ನೇರಳೆ ಜ್ಯೂಸ್ ಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+