Ginger: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ತಿಂದರೆ ಏನು ಪ್ರಯೋಜನ? ಯಾರು ತಿಂದರೆ ಹೆಚ್ಚಿನ ಲಾಭ
ಬೆಳಗ್ಗೆ ಸಾಮಾನ್ಯವಾಗಿ ಜನರು ಎದ್ದು, ಮುಖ ತೊಳೆದು ಒಂದು ಗ್ಲಾಸ್ ತಣ್ಣೀರು ಅಥವಾ ಬಿಸಿ ನೀರಿನಿಂದ ತಮ್ಮ ದಿನ ಚರಿಯನ್ನು ಆರಂಭಿಸುತ್ತಾರೆ. ಕ್ರಮೇಣ ಒಂದು ಕಪ್ ಚಹಾ ಅದರಲ್ಲಿ ಕೊಂಚ ಶುಂಠಿ ಬೆರಸಿ ಸೇವಿಸುತ್ತಾರೆ. ಇದರಿಂದ ಮನಸ್ಸು ಆನಂದವಾಗಿರುತ್ತದೆ. ಇನ್ನು ಕೆಲವರು ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ, ಇನ್ನು ಕೆಲವರು ಸೊಂಪು ನೀರು ಹೀಗೆ ಹಲವು ಬಗೆಯ ದಿನಚರಿಯನ್ನು ರೂಢಿಸಿಕೊಂಡಿರುತ್ತಾರೆ. ಇನ್ನು ಕೆಲವರು ಬೆಳಗ್ಗೆ ಎದ್ದ ತಕ್ಷಣ ಶುಂಠಿ ಸೇವನೆ ಮಾಡುತ್ತಾರೆ.
ಶುಂಠಿಯು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ನೀವು ಕಾಣುವ ಮಸಾಲೆಯಾಗಿದೆ. ಚಹಾವನ್ನು ಬಲವಾಗಿ ಮಾಡಲು ಮತ್ತು ತರಕಾರಿಗಳ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಇದರ ಪೋಷಕಾಂಶಗಳು ರುಚಿಯ ಜೊತೆಗೆ ಆರೋಗ್ಯವನ್ನೂ ನೀಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಶುಂಠಿ ಸೇವನೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸದೇ ಇರದು. ಶುಂಠಿಯಲ್ಲಿ ಹಲವು ಔಷಧಿಯ ಗುಣಗಳಿದ್ದು ಇದು ನಮ್ಮನ್ನು ಸದೃಢವಾಗಿಡಲು ಸಹಾಯಕ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ತಿಂದರೆ ಆಗುವ ಲಾಭ ಮತ್ತು ಅನಾನುಕೂಲಗಳು ಆಗುತ್ತವೆ ಇಲ್ಲಿದೆ ವರದಿ.

ಶುಂಠಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಬೆಸ್ಟ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಉತ್ತಮ, ಅಲ್ಲದೆ ಇದರಲ್ಲಿ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಕ. ಇದರಲ್ಲಿ ಉರಿಯೂತ ನಿವಾರಕ ಅಂಶಗಳಿವೆ. ಇದನ್ನು ತಿನ್ನುವುದರಿಂದ ರಕ್ತ ಸಂಚಾರಕ್ಕೂ ಸಹಾಯಕ.
ಇದನ್ನು ತಿನ್ನುವದರಿಂದ ಲಾಭ ಏನು?
- ನಿಯಮಿತವಾಗಿ ಶುಂಠಿ ಸೇವನೆಯಿಂದ ಉರಿಯೂತ ಕಡಿಮೆ ಆಗುತ್ತದೆ.
- ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
- ಉಬ್ಬುವುದು, ಗ್ಯಾಸ್ ಜಠರಗರುಳಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
- ಹೆಚ್ಚಿನ ಪೋಷಾಕಾಂಶ ಹೀರಿಕೊಳ್ಳಲು ಸಹಾಯಕ.
- ಅನೇಕ ದೀರ್ಘಕಾಲದ ಕಾಯಿಲೆಗಳನ್ನು ತೊಡೆದುಹಾಕಲು ಸಹಾಯ
- ಶುಂಠಿಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ನೆಗಡಿ ಮತ್ತು ಜ್ವರದಂತಹ ಸೋಂಕುಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬೆಳಗ್ಗೆ ತಿಂದರೆ ಆಗುವ ಸಮಸ್ಯೆ ಏನು?
ಎಲ್ಲರಿಗೂ ಶುಂಠಿ ತಿಂದರೆ ಆಗುತ್ತದೆ ಎಂದು ಹೇಳಲು ಆಗದು. ಅವರ ದೇಹ ಸ್ಥಿತಿಗೆ ಅನುಗಣವಾಗಿ ಇದು ಕಾರ್ಯ ನಿರ್ವಹಿಸುತ್ತದೆ. ಕೆಲವರು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಹಾನಿಗೆ ಒಳಗಾಗಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇದೆ. ಇಂತಹ ತೊಂದರೆಗಳನ್ನು ತಪ್ಪಿಸಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ ನಂತರ ಇದರ ಸೇವನೆ ಆರಂಭಿಸಿದ.
ಯಾರಿಗೆಲ್ಲಾ ಸಮಸ್ಯೆ?
ಕೆಲವರಿಗೆ ಬೆಳಗ್ಗೆ ಶುಂಠಿ, ಶುಂಠಿ ನೀರು, ನಿಂಬೆ ನೀರನ್ನು ಸೇವಿಸುವುದರಿಂದ ಹಾನಿಯಾಗುತ್ತದೆ. ಒಂದು ವೇಳೆ ನಿಮಗೆ ಆಸಿಡಿಟಿ ಸಮಸ್ಯೆ ಇದ್ದಲ್ಲಿ ಬೆಳಗ್ಗೆ ಶುಂಠಿಯನ್ನು ಸೇವಿಸ ಬೇಡಿ. ಬೆಳಗ್ಗೆ ನೀರು ಕುಡಿದ ಬಳಿಕ ಬೇಕಿದ್ದರೆ, ಶುಂಠಿ ಚಹಾವನ್ನು ಕುಡಿಯುವುದು ಉತ್ತಮ. ಇದರಿಂದ ಸಮಸ್ಯೆ ಕಡಿಮೆಯಾಗುತ್ತದೆ.












Click it and Unblock the Notifications