Viral Video: ಕಾರು ಶೆಡ್ಡಿಗೆ ದೆವ್ವದ ಚಿತ್ರ ಬಿಡಿಸಿದ ಮಾಲೀಕ- ಚಪ್ಪಾಳೆಗೆ ಅರಳುವ ಹೂವು!
ಅನೇಕ ಜನರು ತಮ್ಮ ಕಾರನ್ನು ನಿಲ್ಲಿಸಲು ಸ್ಥಳವಿಲ್ಲ ಎಂದು ಒದ್ದಾಡುತ್ತಾರೆ. ಎಲ್ಲಂದರಲ್ಲಿ ಕಾರು ನಿಲ್ಲಿಸಿದರೆ ಅದಕ್ಕೆ ಯಾರಾದು ಏನಾದ್ರೂ ಮಾಡಿ ಬಿಡ್ತಾರೆ ಎಂದು ಭಯ ಪಡುತ್ತಾರೆ. ಇದೆಲ್ಲರ ಸಮಸ್ಯೆ ಬೇಡ್ವೇ ಬೇಡ ಅಂತ ಕೆಲವರು ಕಾರಿಗಾಗಿ ಶೆಡ್ಡು ಮಾಡಿಸುವುದು ಇಂದಿಗೆ ಸರ್ವೇ ಸಾಮಾನ್ಯ. ಅದರಲ್ಲೂ ಇಲ್ಲೊಬ್ಬ ವ್ಯಕ್ತಿ ತನ್ನ ಕಾರು ಸೇಫ್ ಆಗಿರಲು ಬುದ್ಧವಂತಿಕೆ ತೋರಿದ್ದಾನೆ. ಈತನ ಜಾಣ್ಮೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆ ವ್ಯಕ್ತ ತನ್ನ ಕಾರು ಸೇಫ್ಟಿಗಾಗಿ ಮಾಡಿದ ಪ್ಲ್ಯಾನ್ ಏನು ಗೊತ್ತಾ? ಮುಂದೆ ಓದಿ....
ಶೆಡ್ಡಿನಲ್ಲಿ ಕಾರು ಸೇಫ್ ಆಗಿರಲು ಬಯಸಿದ ಮಾಲೀಕನೊಬ್ಬ ಶೆಡ್ಡಿನ ಬಾಗಿಲಿಗೆ ಯಾರೂ ಬಾರದಂತಹ ಪೇಟಿಂಗ್ ಮಾಡಿಸಿದ್ದಾನೆ. ಈ ಚಿತ್ರವನ್ನು ನೋಡಿದರೆ ನಿಜಕ್ಕೂ ಇದು ಬಾಗಿಲಾ? ಅಥವಾ ಭೂತದ ಮನೆನಾ ಎನ್ನುವ ಅನುಮಾನ ಮೂಡುವುದರಲ್ಲಿ ಸಂಶಯವೇ ಇಲ್ಲ.

ಹೌದು.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬನ ಗ್ಯಾರೇಜ್‌ನಲ್ಲಿ ಅತ್ಯಂತ ದುಬಾರಿ ಕಾರೊಂದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರ ನಂತರ ವ್ಯಕ್ತಿಯು ತನ್ನ ಗ್ಯಾರೇಜ್ ಬಾಗಿಲನ್ನು ಮುಚ್ಚುತ್ತಾನೆ. ಬಾಗಿಲು ಮುಚ್ಚಿದ ತಕ್ಷಣ ಬಾಗಿಲ ಮೇಲೆ ಏನು ಕಾಣುತ್ತದೆ ಎಂದು ನೀವ್ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಅದನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಗ್ಯಾರೇಜ್ ಬಾಗಿಲಿನ ಮೇಲೆ ತುಂಬಾ ಭಯಾನಕ ಚಿತ್ರವನ್ನು ನೋಡಬಹುದು.
ನಾಟಿ ವರ್ಲ್ಡ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಗ್ಯಾರೇಜ್ ಬಾಗಿಲಿನ ಮೇಲೆ ಭೂತದ ಚಿತ್ರವು ಗೋಚರಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ರಾತ್ರಿಯಲ್ಲಿ ಯಾರಾದರೂ ಈ ಚಿತ್ರವನ್ನು ನೋಡಿದರೆ, ಅವರು ಬಾಗಿಲಿನ ಹತ್ತಿರ ಬರಲು ಸಾಧ್ಯವೇ ಇಲ್ಲ. ಗ್ಯಾರೇಜ್ ಬಾಗಿಲು ಕಂಡು ಭಯ ಪಡುವುದು ಗ್ಯಾರಂಟಿ. ಬಾಗಿಲ ಬಳಿ ಯಾವುದೋ ದೆವ್ವ ನಿಂತಿದೆ ಎಂದು ಕಾಣಿಸುತ್ತದೆ. ಹೀಗಾಗಿ ಕಳ್ಳರಿಂದ ಕಾರನ್ನು ರಕ್ಷಿಸಬಹುದು ಎನ್ನುವುದು ಮಾಲೀಕನ ಪ್ಲ್ಯಾನ್. ಈ ವಿಡಿಯೋಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಪ್ಪಾಳೆ ಸದ್ದು ಕೇಳಿದ ತಕ್ಷಣ ಅರಳುವ ಹೂವು
ನಿಮ್ಮ ಜೀವನದಲ್ಲಿ ನೀವು ನೂರಾರು ಜಾದೂಗಾರರನ್ನು ನೋಡಿದ್ದೀರಿ. ಅನೇಕ ಮಾಂತ್ರಿಕ ವಿಷಯಗಳನ್ನು ಸಹ ನೋಡಿದ್ದೀರಿ. ಚಪ್ಪಾಳೆ ತಟ್ಟಿದಾಗ ಜಾದೂಗಾರ ವಸ್ತುವಿನ ಬಣ್ಣ ಹಾಗೂ ಆಕಾರ ಬದಲಾಯಿಸುವುದನ್ನು ನೋಡಿರುತ್ತೀರಿ. ಆದರೆ ಇತ್ತೀಚಿಗೆ ಒಂದು ವಿಡಿಯೋ ವೈರಲ್ ಆಗಿದ್ದು ನಿಮಗೆ ಅಚ್ಚರಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಈ ವಿಡಿಯೋದಲ್ಲಿ ಕೆಲವರು ಮರದ ಬಳಿ ನಿಂತು ಅರಳದ ಹೂಗಳನ್ನು ನೋಡುತ್ತಿರುವುದನ್ನು ಕಾಣಬಹುದು. ಅವರು ಮರದ ಮುಂದೆ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರೆ ಆ ಮರದ ಹೂವುಗಳು ಅರಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.
ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್ 5.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 29,6000 ಇಷ್ಟಗಳನ್ನು ಸ್ವೀಕರಿಸಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮಾಡಿದ್ದಾರೆ ಮತ್ತು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ.
ಕಾಮೆಂಟ್ ಹೇಗಿದೆ?
ಒಬ್ಬ ಬಳಕೆದಾರನು 'ಮನುಷ್ಯರನ್ನು ಅದೇ ರೀತಿಯಲ್ಲಿ ಪ್ರಶಂಸಿಸಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. 'ಮನುಷ್ಯನಾಗಿರಲಿ ಅಥವಾ ಹೂವಾಗಲಿ, ಪ್ರೋತ್ಸಾಹದ ನಂತರ ಎಲ್ಲವೂ ಅರಳುತ್ತದೆ ಎಂಬುದನ್ನು ಈ ವೀಡಿಯೊ ಸಾಬೀತುಪಡಿಸಿದೆ' ಎಂದು ಹಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, 'ಈ ವೀಡಿಯೊ ಯಾರಾದರೂ ನೋಡಬಹುದಾದ ಮೋಹಕವಾದ ಸಂಗತಿಗಳಲ್ಲಿ ಒಂದಾಗಿದೆ.
ಸಂಜೆ ವೇಳೆ ಅರಳುವ ಈ ಹೂವಿನ ಹೆಸರು ಕಾಮನ್ ಈವ್ನಿಂಗ್ ಪ್ರಿಮ್ರೋಸ್ ಎಂದು ಹೇಳಲಾಗುತ್ತದೆ. ಮನುಷ್ಯನಿಗೆ ಸಮಯ ತಿಳಿದಿತ್ತು ಮತ್ತು ಆ ಹೂವುಗಳು ಅರಳುವ ನಿಖರವಾದ ಕ್ಷಣದಲ್ಲಿ ಚಪ್ಪಾಳೆ ತಟ್ಟಿ ಅವರು ಆ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ.












Click it and Unblock the Notifications