Nita Ambani: ನೀತಾ ಅಂಬಾನಿ ಧರಿಸಿದ್ದ 500 ಕೋಟಿಯ ಪಚ್ಚೆ ಹಾರ ಈಗ 178 ರೂಪಾಯಿಗೆ!
ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪುತ್ರನ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಯಾರಿಗೆ ತಾನೆ ಗೊತ್ತಿಲ್ಲ. ಮೂರು ದಿನಗಳ ಆಚರಣೆಗಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡಲಾಗಿತ್ತು. ಬಾಲಿವುಡ್, ಹಾಲಿವುಡ್, ಪಾಪ್ ಗಾಯಕರು ಸೇರಿದಂತೆ ಸೆಲಬ್ರಿಟಿಗಳ ದಂಡು ಗುಜರಾತ್‌ನಲ್ಲಿ ಬೀಡು ಬಿಟ್ಟಿತ್ತು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಾಗಿ ಅವರ ತಾಯಿ ನೀತಾ ಅಂಬಾನಿ ಧರಿಸಿದ್ದ, 500 ಕೋಟಿ ರೂಪಾಯಿಗಳ ಪಚ್ಚೆ ಹಾರ ಎಲ್ಲರ ಗಮನ ಸೆಳೆದಿತ್ತು. ಈ ಪಚ್ಚೆ ಹಾರದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಈಗ ಇದೆ ಪಚ್ಚೆ ಹಾರ ನಿಮಗೆ ಕೇವಲ 178 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ!.

178 ರೂಗೆ ಸಿಗುತ್ತದೆ 500 ಕೋಟಿ ರೂಪಾಯಿಗಳ ಪಚ್ಚೆ ಹಾರ!
ಹೌದು... ನೀತಾ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಫಂಕ್ಷನ್‌ನಲ್ಲಿ ಧರಿಸಿದ್ದ ಪಚ್ಚೆ ಹಾರದ ಡೂಪ್ಲಿಕೇಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಈ ಅವರು ಈ ವಿಡಿಯೋವನ್ನು ಹಂಚಿಕೊಂಡು ಸಕತ್ ಕಾಮೆಂಟ್ ಮಾಡಿದ್ದಾರೆ. ಜಾಮ್‌ನಗರದಲ್ಲಿ ತಮ್ಮ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಾಗಿ ಧರಿಸಿದ್ದ ನೀತಾ ಅಂಬಾನಿ ಅವರ 500 ಕೋಟಿ ರೂಪಾಯಿಗಳ ಪಚ್ಚೆ ಹಾರದ ಸೇಮ್ ಟು ಸೇಮ್ ಕಾಪಿ ಕೇವಲ 178 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
ಜೈಪುರದ ಆಭರಣ ವ್ಯಾಪಾರಿಯೊಬ್ಬರು ಕೆಂಪು, ಹಸಿರು, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ವಜ್ರ ಮತ್ತು ಪಚ್ಚೆ ಹಾರದ ಡೂಪ್ಲಿಕೇಟ್ ಕಾಪಿಗಳನ್ನು ಮಾರಾಟ ಮಾಡುತ್ತಿರುವುದನ್ನು ವೈರಲ್ ವೀಡಿಯೊದಲ್ಲಿ ನೋಡಬಹುದು. "ನೀತಾ ಅಂಬಾನಿ ಅವರ ನೆಕ್ಲೇಸ್ ಕೇವಲ 178 ರೂಪಾಯಿಗೆ ಲಭ್ಯವಿದೆ" ಎಂದು ಹೇಳುತ್ತಾರೆ. ಜೊತೆಗೆ ಇವುಗಳನ್ನು ಹೋಲ್‌ಸೇಲ್ ಮಾರಾಟ ಮಾಡಲಾಗುತ್ತದೆ. ರಿಟೈಲ್ ಆಗಿ ಕೊಡುವುದಿಲ್ಲ ಎಂದೂ ಹೇಳುತ್ತಾರೆ.
"ನಾವು ಮಾರಾಟ ಮಾಡುವ ವಸ್ತುಗಳ ಬೆಲೆ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಬೇಕೆಂದು ನನಗೆ ಅನಿಸುತ್ತದೆ. ಈ ಉತ್ಪನ್ನಗಳ ಬೆಲೆಯನ್ನು ಬಹಿರಂಗಪಡಿಸಲು ಗ್ರಾಹಕರು ನಮ್ಮನ್ನು ಕೇಳುತ್ತಿದ್ದಾರೆ" ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಹಲವು ಮಂದಿ ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.
Ab kya boloon 🙈! #marketing pic.twitter.com/sGjYUPSeB1
— Harsh Goenka (@hvgoenka) May 28, 2024
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಆಚರಣೆಗಳು ಗುಜರಾತ್‌ನ ಜಾಮ್ ನಗರದಲ್ಲಿ ಮೂರು ದಿನಗಳು ನಡೆದಿದ್ದವು. ಇಡೀ ಹಿಂದಿ ಚಿತ್ರರಂಗವನ್ನೇ ಜಾಮ್ ನಗರದಲ್ಲಿ ಇಳಿಸಿದ್ದರು ಅಂಬಾನಿ ಕುಟುಂಬ, ಸ್ಟಾರ್ ನಟರು ಅಂಬಾನಿ ಕುಟುಂಬದ ತಾಳಗಳಿಗೆ ಹೆಜ್ಜೆಹಾಕಿದ್ದರು.
ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಕೂಡ ನೃತ್ಯ ಮಾಡಿದ್ದರು. ಸಕತ್ ಆಗಿ ಮಿಂಚಿದ್ದ ಅವರು ಐನೂರು ಕೋಟಿ ರೂಪಾಯಿ ಬೆಲೆ ಬಾಳುವ ವಜ್ರ ಮತ್ತು ಪಚ್ಚೆಯ ಹಾರ ಧರಿಸಿದ್ದರು. ಇದಲ್ಲದೆ ಮಿರರ್ ಆಫ್ ಪ್ಯಾರಡೈಸ್ ಎಂದು ಕರೆಯಲ್ಪಡುವ ಬೃಹತ್ ವಜ್ರದ ಉಂಗುರವನ್ನು ಧರಿಸಿದ್ದರು. ಡೈಲಿ ಮೇಲ್ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಈ ಪ್ರಿ ವೆಡ್ಡಿಂಗ್ ಅಂಬಾನಿ ಕುಟುಂಬ ಸುಮಾರು ಅಂದಾಜು 1,259 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.












Click it and Unblock the Notifications