Vastu Food Rules: ತಟ್ಟೆಯಲ್ಲಿ ಕೈ ತೊಳೆಯುವುದು ದಾರಿದ್ರ್ಯನಾ? ವಾಸ್ತು ಶಾಸ್ತ್ರದ ಆಹಾರ ನಿಯಮಗಳು ಇಲ್ಲಿದೆ
ತಿಂದ ನಂತರ ತಟ್ಟೆಯಲ್ಲಿ ಕೈತೊಳೆದುಕೊಳ್ಳುವುದು ಸಾಮಾನ್ಯ. ಇದನ್ನ ಸೋಮಾರಿತ ಎಂದು ಕರೆಯಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ತಟ್ಟೆಯಲ್ಲಿ ಕೈ ತೊಳೆಯುವುದು ದಾರಿದ್ರ್ಯ ಎನ್ನಲಾಗುತ್ತದೆ.
ಇದನ್ನು ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲು ಪ್ರಾರಂಭಿಸುತ್ತದೆ. ಅಲ್ಲದೆ ಅನುಪಯುಕ್ತ ವಸ್ತುಗಳಿಗೆ ಹಣವನ್ನು ಹೆಚ್ಚು ಖರ್ಚು ಮಾಡುವ ಮೂಲಕ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಆಹಾರದ ನಿಯಮಗಳಿಗೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ.

ತಾಯಿ ಅನ್ನಪೂರ್ಣೆಗೆ ಕೋಪ ತರಿಸದೇ ಇರುವುದು ಹೇಗೆ....
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಊಟವಾದ ನಂತರ ಅದೇ ತಟ್ಟೆಯಲ್ಲಿ ಕೈ ತೊಳೆದರೆ ತಾಯಿ ಅನ್ನಪೂರ್ಣ ಕೋಪಗೊಳ್ಳುತ್ತಾಳೆ. ತಾಯಿ ಅನ್ನಪೂರ್ಣೆಶ್ವರಿಯ ಕೋಪಕ್ಕೆ ಗುರಿಯಾಗಿ ಕೆಲವು ರೋಗಗಳನ್ನು ಎದುರಿಸಬೇಕಾಗಬಹುದು. ಈ ಅಭ್ಯಾಸದಿಂದಾಗಿ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ಹೀಗಾಗಿ ತಿಂದ ನಂತರ ತಟ್ಟೆಯಲ್ಲಿ ನಿಮ್ಮ ಕೈಗಳನ್ನು ತೊಳೆಯಬೇಡಿ.
ಹಾಸಿಗೆಯಲ್ಲಿ ಕುಳಿತು ಊಟ ಮಾಡುವುದು ಸರಿನಾ?
ಹೆಚ್ಚಿನ ಜನರು ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ನೀವು ಸಹ ಅಂತಹ ಜನರಾಗಿದ್ದರೆ ಇಂದಿನಿಂದಲೇ ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಮಲಗುವ ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ನೀವು ಅನೇಕ ರೋಗಗಳಿಗೆ ಗುರಿಯಾಗಬಹುದು. ಇದಲ್ಲದೆ, ಇದು ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು.

ಮೂರು ರೊಟ್ಟಿಗಳನ್ನು ಒಟ್ಟಿಗೆ ಬಡಿಸುವುದು...
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಪ್ಲೇಟ್‌ನಲ್ಲಿ ಮೂರು ರೊಟ್ಟಿಗಳನ್ನು ಒಟ್ಟಿಗೆ ಬಡಿಸಬೇಡಿ. ಆಹಾರದ ನಿಯಮಗಳ ಪ್ರಕಾರ ಇದನ್ನು ಮಾಡುವುದನ್ನು ಸಹ ಸರಿಯೆಂದು ಪರಿಗಣಿಸಲಾಗುವುದಿಲ್ಲ. ತಟ್ಟೆಯಲ್ಲಿ ಅನೇಕ ಪದಾರ್ಥಗಳನ್ನು ಒಟ್ಟಿಗೆ ಬಡಿಸುವ ಅಭ್ಯಾಸವಿದ್ದರೆ ಎರಡು ರೊಟ್ಟಿಗಳನ್ನು ಮಾತ್ರ ಬಡಿಸಿ. ಅಲ್ಲದೆ ಅನ್ನದ ಮೇಲೆ ರೊಟ್ಟಿಗಳನ್ನು ಇರಿಸಿ. ಇದರಿಂದ ತಾಯಿ ಅನ್ನಪೂರ್ಣೆ ಸಂತಸಪಡುತ್ತಾಳೆ.
ತಟ್ಟೆಯ ಸ್ವಚ್ಛತೆ
ತಟ್ಟೆಯಲ್ಲಿ ಆಹಾರವನ್ನು ಬಡಿಸುವಾಗ ತಟ್ಟೆಯಲ್ಲಿ ಯಾವುದೇ ನೀರಿನ ಹನಿಗಳಿರಬಾರದು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಪ್ಲೇಟ್‌ನಲ್ಲಿ ಆಹಾರವನ್ನು ಬಡಿಸುವಾಗ, ನೀವು ತಟ್ಟೆಯನ್ನು ಬಟ್ಟೆಯಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ನಂರದಲ್ಲಿ ಆಹಾರವನ್ನು ಬಡಿಸಬೇಕು.

ತಟ್ಟೆಯಲ್ಲಿ ಆಹಾರವನ್ನು ಬಿಡುವುದು
ಹಲವರಿಗೆ ತಟ್ಟೆಯಲ್ಲಿ ಊಟ ಬಿಡುವ ಅಭ್ಯಾಸ ಇರುತ್ತದೆ. ಹೆಚ್ಚಾಗಿ ಹಾಕಿಕೊಂಡು ತಮಗೆ ಬೇಕಾದಷ್ಟು ಆಹಾರವನ್ನು ತಿಂದು ನಂತರ ಉಳಿದ ಆಹಾರವನ್ನು ತಟ್ಟೆಯಲ್ಲಿ ಬಿಡುವವರು ಅಧಿಕ ಜನ ಇದ್ದಾರೆ. ಈ ಆಹಾರದ ತಟ್ಟೆಯನ್ನು ಅಡುಗೆಮನೆಯ ಸಿಂಕ್‌ನಲ್ಲಿಯೂ ಇಡುತ್ತಾರೆ. ಅದರ ಮೇಲೆ ನೀರು ಮತ್ತೆ ಮತ್ತೆ ಬೀಳುತ್ತಲೇ ಇರುತ್ತದೆ.
ಈ ರೀತಿಯ ನಡೆ ಆಹಾರಕ್ಕೆ ಅವಮಾನ ಮಾಡಿದಂತೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸದಿಂದಾಗಿ ನೀವು ಅನೇಕ ರೋಗಗಳಿಗೆ ಗುರಿಯಾಗಬಹುದು. ಅಲ್ಲದೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳುವಳು. ಆಹಾರದ ನಿಯಮಗಳ ಪ್ರಕಾರ, ತಟ್ಟೆಯಲ್ಲಿ ಉಳಿದ ಆಹಾರ ಉಳಿದಿದ್ದರೆ, ನಂತರ ಅದನ್ನು ಪ್ರತ್ಯೇಕ ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೀಡಿ. ಹೀಗೆ ಮಾಡುವುದರಿಂದ ಪ್ರಾಣಿ ಪಕ್ಷಿಗಳು ಉಳಿಯುತ್ತವೆ. ಆಹಾರವನ್ನು ವ್ಯರ್ಥ ಮಾಡಿದಂತಾಗುವುದಿಲ್ಲ.












Click it and Unblock the Notifications