Valentines Day 2024: ಇವತ್ತು ಕಿಸ್ ಡೇ: ಕಿಸ್ ಮಾಡೋ ಮುನ್ನ ಇದನ್ನು ತಿಳಿಯಿರಿ...
ಇದು ಪ್ರೇಮಿಗಳು ಸಂತೋಷಪಡುವ, ಪ್ರೇಮವನ್ನು ಆಚರಿಸುವ, ಪ್ರೀತಿಯನ್ನು ವ್ಯಕ್ತಪಡಿಸುವ ತಿಂಗಳು. ಈ ಪ್ರೀತಿಯ ತಿಂಗಳಲ್ಲಿ ಬರುವ ಪ್ರೇಮಿಗಳ ದಿನಕ್ಕಾಗಿ ಪ್ರೇಮ ಜೀವಗಳು ಕಾತುರದಿಂದ ಕಾಯುತ್ತವೆ. ಅದಾಗಲೇ ಪ್ರೇಮಿಗಳ ವಾರ ಆರಂಭವಾಗಿದ್ದು ಇಂದು ಅಂದರೆ ಫೆಬ್ರವರಿ 13 ರಂದು ಪ್ರಪಂಚದಾದ್ಯಂತ 'ಕಿಸ್ ಡೇ' ಆಚರಿಸಲಾಗುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು ಕಿಸ್ ಅಥವ ಚುಂಬನ ಒಂದು ಉತ್ತಮ ಮಾರ್ಗವಾಗಿದೆ.
ನೀವು ಈ ದಿನ ನಿಮ್ಮ ಸಂಗಾತಿಯಿಂದ ದೂರವಿದ್ದರೆ ಅಥವಾ ಮುಂಜಾನೆ ನಿಮ್ಮ ವಿಶೇಷ ಸಂದೇಶದ ಮೂಲಕ ಅವರಿಗೆ ವಿಶೇಷ ಭಾವನೆ ಮೂಡಿಸಲು ಬಯಸಿದರೆ, ಈ ಸಂದೇಶಗಳು ನಿಮಗಾಗಿ. ಇಲ್ಲಿ ನೀವು 'ಕಿಸ್ ಡೇ' ನ ಕೆಲವು ಅತ್ಯುತ್ತಮ ಕವನಗಳು ಮತ್ತು ಉಲ್ಲೇಖಗಳನ್ನು ನೋಡಬಹುದು.

1. ಅವಳ ತುಟಿಗಳನ್ನು ಚುಂಬಿಸುವಾಗ,
ಅವಳು ತನ್ನ ಕಣ್ಣುಗಳನ್ನು ತಗ್ಗಿಸಿದಾಗ,
ನನ್ನ ಹೃದಯ ಆನಂದಿಸಿತು
ಅವಳ ಲಘು ನಗು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿತು...
ಚುಂಬನ ದಿನದ ಶುಭಾಶಯಗಳು 2024
2. ಆಲಂಗನೆ ಹಾಗೂ ಚುಂಬನ ಪ್ರೀತಿ ತೇರಿಗೆ ಎರಡು ಚಕ್ರಗಳಿದ್ದಂತೆ
ಈ ಚಕ್ರಗಳು ಸದಾ ಪ್ರೀತಿಯ ರಥವನ್ನು ಹೊತ್ತು ಚಲಿಸುತ್ತಲೇ ಇರಲಿ
ನಿನ್ನ ನನ್ನ ನಡುವಿನ ಪ್ರೀತಿ ಚಲಿಸುವ ತೇರಾಗಿರಲಿ
ಅದರ ಖುಷಿ, ಸಂತೋಷ, ಆನಂದವನ್ನು ನಾವಿಬ್ಬರೂ ಒಟ್ಟಿಗೆ ಸವಿಯೋಣ
ಜೀವನದ ಉದ್ದಕ್ಕೂ ನೀ ನನ್ನ ಪ್ರೀತಿಯ ರಥದಲ್ಲಿ ಸಾಗು
ಕಿಸ್ ಡೇ ಶುಭಾಶಯಗಳು 2024
3. ಕಿಸ್‌ಗೆ ಭಾಷೆಯಿಲ್ಲ,
ಕಿಸ್ ಗೆ ಜಾತಿ ಇಲ್ಲ
ಇಂದು ನೀನು ನನ್ನನ್ನು ಚುಂಬಿಸು ಏಕೆಂದರೆ,
ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ
ನಿನ್ನ ಪ್ರೀತಿ, ನಿನ್ನ ಚುಂಬನ ನನ್ನ ಜೀವದ ಉಸಿರು
ಕಿಸ್ ಡೇ ಶುಭಾಶಯಗಳು 2024
4. ಇದು ಪ್ರೀತಿಯ ಋತು,
ಹೀಗಾಗಿ ಸ್ವಲ್ಪ ಪ್ರೀತಿಸು ಪ್ರೀತಿ ಇದ್ದರೆ,
ಆಲಂಗಿಸು ಆಸೆ ಇದ್ದರೆ, ಚುಂಬಿಸು ಚೂರು ಸಂಕೋಚವಿದ್ದರೆ
ನನ್ನ ನಿನ್ನ ನಡುವೆ ಸಂಕೋಚ ಬೇಡ, ಯಾಕೆಂದರೆ ನಾವಿಬ್ಬರೂ ಒಂದೇ
ಪ್ರೀತಿ ಎಂಬ ಕನಸಿನ ಗೂಡಿನಲ್ಲಿ ನಾವಿಬ್ಬರು ಹಕ್ಕಿಗಳಂತೆ ವಾಸಿಸೋಣ
ಕಿಸ್ ಡೇ ಶುಭಾಶಯಗಳು 2024

5. ಇದು ಪ್ರೀತಿಯ ತಿಂಗಳು
ನಿನ್ನ ಒಂದು ಅಪ್ಪುಗೆ ನನ್ನ ತೋಳುಗಳಲ್ಲಿ ಕಾಪಾಡಿಕೊಳ್ಳುವೆ
ನಿನ್ನ ಚುಂಬನ ನನ್ನ ನಗುವಿನಲ್ಲಿ ಇಡುವೆ
ನಿನ್ನ ಪ್ರೀತಿ ನನ್ನ ಹೃದಯದಲ್ಲಿ ಬಚ್ಚಿಡುವೆ
ಕನಸಿನ ಲೋಕದಲ್ಲಿ ನನ್ನೊಂದಿಗೆ ತಿರುಗಾಡಿ ಬಾ,
ಚುಂಬನ ದಿನದ ಶುಭಾಶಯಗಳು 2024
6. ನಾನು ನಿನ್ನನ್ನು ನೆನಪಿಸಿಕೊಂಡಾಗ,
ಕಣ್ಣಿನ ರೆಪ್ಪೆ ಒಳಗೆ ಕಾಣಿಸುವೆ
ಪ್ರತಿದಿನ ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ನೆನಪುನಲ್ಲಿ ಕಾಡುವೆ
ನಿನ್ನ ಸ್ಪರ್ಶಿಸಲು ನನ್ನ ಕೈಗಳು ಕರೆಯುತ್ತಿವೆ,
ನಿನ್ನೊಂದಿಗೆ ಮಾತನಾಡಲು ನನ್ನ ಮನ ಕಾಯುತ್ತಿದೆ
ಚುಂಬನ ದಿನದ ಶುಭಾಶಯಗಳು 2024
7. ಈ ಪ್ರೇಮಿಗಳ ದಿನ ನಾನು ನಿನ್ನೊಂದಿಗೆ ಒಂದು ಮಾತು ಹಂಚಿಕೊಳ್ಳುವೆ
ಇದರಲ್ಲಿ ನಿನ್ನ ಹಾಗೂ ನನ್ನ ಒಳಿತು ಅಡಗಿದೆ
ನಾನು ನಿನ್ನ ಪ್ರೀತಿಯನ್ನು ಸ್ವೀಕರಿಸಲಾರೆ
ನೀನು ನನಗಿಂತಲೂ ಆತ್ಮೀಯ ಸಂಗಾತಿಯನ್ನು ಪಡೆಯುವ ದಿನ ದೂರವಿಲ್ಲ
ನನ್ನ ಕ್ಷಮಿಸು, ನಿನಗೆ ಶುಭವಾಗಲಿ
8. ಆಲಂಗಿಸುವುದು ಆಟ ಎಂದು ಅಂದುಕೊಳ್ಳಬೇಡ
ಮುತ್ತು ಕೊಡುವುದು ತಪ್ಪು ಎಂದು ಭಾವಿಸಬೇಡ
ಪ್ರೀತಿಸುವಾಗ ಇದೆಲ್ಲವೂ ಸಂಭವಿಸುತ್ತವೆ
ಇದು ಪ್ರೀತಿಗೆ ನಾವಿಬ್ಬರು ಹಾಕುವ ಅಡಿಪಾಯ
ಚುಂಬನ ದಿನದ ಶುಭಾಶಯಗಳು 2024

9. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ
ನೀನು ಕೂಡ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ
ನಾನು ನಿನ್ನಿಂದ ಈ ದಿನ ಚುಂಬಿಸುವುದನ್ನು ನಿರೀಕ್ಷಿಸುತ್ತೇನೆ
ಇದು ನೀನು ನನ್ನ ಪ್ರೀತಿಗೆ ಕೊಡುವ ಉತ್ತರ
ಇದನ್ನು ಸದಾ ನಾನು ಕಾಪಾಡಿಕೊಳ್ಳುತ್ತೇನೆ
ಚುಂಬನ ದಿನದ ಶುಭಾಶಯಗಳು 2024
10. ಸಾಗರದ ಅಲೆಗಳಂತೆ ನಿನ್ನ ಪ್ರೀತಿ
ಚಂದಿರನ ಬೆಳಕಿನಂತೆ ನಿನ್ನ ಕಾಳಜಿ
ಸಂಜೆಯ ತಂಪು ಗಾಳಿಯಂತೆ ನಿನ್ನ ಆರೈಕೆ
ತುಂತುರು ಮಳೆಯಂತೆ ನಿನ್ನ ತಾಳ್ಮೆ
ಇದೆಲ್ಲವನ್ನೂ ನಾನು ಕಾಪಾಡಿಕೊಳ್ಳುವೆ
ನಿನ್ನ ತುಟಿಗಳು ನನಗೆ ಹತ್ತಿರವಾಗಲಿ
ಚುಂಬನ ದಿನದ ಶುಭಾಶಯಗಳು 2024
11. ನಿನ್ನ ನಗು ಆಕಾಶದಲ್ಲಿರುವ ನಕ್ಷತ್ರದಂತೆ
ನಿನ್ನ ಮಾತು ಸಾಗರದಲ್ಲಿರುವ ಮುತ್ತಿನಂತೆ
ನಿನ್ನ ನೋಟ ಅರಳುವ ಹೂವುಗಳಂತೆ
ನಿನ್ನ ಪ್ರೀತಿ ನನ್ನಲ್ಲಿರುವ ಹೃದಯದ ಮಾತಿನಂತೆ
ನಾನು ನಿನ್ನನ್ನು ತುಂಬಾ ಪ್ರೀತಿ ಮಾಡುವೆ
ಚುಂಬನ ದಿನದ ಶುಭಾಶಯಗಳು 2024












Click it and Unblock the Notifications