Weight Loss: ಬೊಜ್ಜು ಕರಗಿಸಲು ವಾಮ ಮಾರ್ಗ ಬೇಡ: ಆರೋಗ್ಯಕರ ಮಾರ್ಗ ಬಳಸಿ
ವಿಶ್ವದಲ್ಲೇ ಈಗ ಬೊಜ್ಜು ಜನರ ನಿದ್ದೇ ಗೆಡಿಸಿದೆ. ಕರೆಯದೆ ಬರುವ ಅತಿಥಿಯನ್ನು ಕಳುಹಿಸಲು ಜನ ಹರಸಾಹಸ ಪಡುತ್ತಿದ್ದಾರೆ. ತಮ್ಮ ಬೊಜ್ಜನ್ನೇ ಹೆಚ್ಚಿನ ಜನ, ದೊಡ್ಡ ಸಮಸ್ಯೆಯನ್ನಾಗಿ ನೋಡುತ್ತಾರೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಬರುತ್ತವೆ. ಬೊಜ್ಜು ಅತಿಯಾಗಿದ್ದರೆ, ಮಧುಮೇಹ, ಥೈರಾಯ್ಡ್, ಅಧಿಕ ಬಿಪಿ, ಹೃದಯಾಘಾತದಂತಹ ಗಂಭೀರ ಕಾಯಿಲೆಗಳು ಬಿಗಿಯಾಗಿ ಅಪ್ಪಿಕೊಂಡು ಬಿಡುತ್ತವೆ. ಇದರಿಂದ ಜನರಲ್ಲಿ ಆತ್ಮವಿಶ್ವಾಸ ಕುಗ್ಗಲು ಆರಂಭಿಸಿದೆ.
ಬೊಜ್ಜನ್ನು ನಿಯಂತ್ರಿಸಲು ಜನ ಹಲವು ತರಹದ ಔಷಧಿಗಳು, ಡಯೇಟ್, ಜಿಮ್, ವ್ಯಾಯಮ, ಹೀಗೆ ತರಹೇವಾರಿ ಕಸರತ್ತು ಮಾಡಿ ತೂಕ ಕಡಿಮೆ ಮಾಡಿಕೊಳ್ಳಲು ಶ್ರಮಿಸುತ್ತಾರೆ. ಆದರೆ ಶಾರ್ಟ್ ಕರ್ಟ್‌ನಿಂದ ತೂಕ ಕಡಿಮೆ ಆದರೆ ಅದು ದೇಹಕ್ಕೆ ಅಪಾಯ ಎನ್ನುವದನ್ನು ಸಹ ಮರೆತರು ಬಿಡುತ್ತಾರೆ.

ಒಂದು ವಾರದಲ್ಲಿ ಎಷ್ಟು ತೂಕ ಇಳಿಸಿಕೊಳ್ಳುವುದು ಉತ್ತುಮ
ಹಾಗಿದ್ದರೆ, ಒಂದು ವಾರದಲ್ಲಿ ಎಷ್ಟು ಕೇಜಿ ತೂಕ ಇಳಿಸುವುದು ಒಳ್ಳೆಯದು ಎಂಬುದಕ್ಕೆ ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಉತ್ತರ ನೀಡಿದೆ. ಅಲ್ಲದೆ ಸ್ಥೂಲಕಾಯತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಒಂದು ವಾರದಲ್ಲಿ ಎಷ್ಟು ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಸುರಕ್ಷಿತವಾಗಿದೆ ಎಂದು ಹೇಳಿದೆ? ಇದಲ್ಲದೆ, ಕೆಲವು ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಸಹ ಸೂಚಿಸಿದೆ.
ಐಸಿಎಂಆರ್ ನೀಡಿರುವ ಸೂಚನೆಗಳು ಏನು?
ತೂಕ ಇಳಿಸಿಕೊಳ್ಳುವ ಬಗ್ಗೆ ಐಸಿಎಂಆರ್ ಕೆಲವು ಸೂಚನೆಗಳನ್ನು ನೀಡಿದೆ. ತರಾತುರಿಯಲ್ಲಿ ತೂಕ ಇಳಿಸಿಕೊಳ್ಳಲು ತೂಕ ಇಳಿಸುವ ಔಷಧಿಗಳನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಐಸಿಎಂಆರ್ ಹೇಳುವಂತೆ ಒಂದೇ ಬಾರಿಗೆ ಹೆಚ್ಚು ತೂಕವನ್ನು ಕಳೆದುಕೊಳ್ಳುವುದು ನಿಮ್ಮ ತೂಕವನ್ನು ಕಡಿಮೆ ಮಾಡಬಹುದು ಆದರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಒಂದು ವಾರದಲ್ಲಿ ಎಷ್ಟು ತೂಕ ಇಳಿಸಿಕೊಳ್ಳುವುದು ಬೆಸ್ಟ್ ಎನ್ನುವ ಪ್ರಶ್ನೆ,
ಐಸಿಎಂಆರ್ ಬಿಡುಗಡೆ ಮಾಡಿರುವ ವರದಿಯಲ್ಲಿ ಉತ್ತರವಿದೆ. ಜನರು ಒಂದು ವಾರದಲ್ಲಿ ಅರ್ಧ ಕಿಲೋಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಇದಕ್ಕಿಂತ ಹೆಚ್ಚಿನ ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಆರೋಗ್ಯದ ಮೇಲೆ ಒತ್ತಡ ಬೀಳುತ್ತದೆ.
ಅರ್ಧ ಕಿಲೋ ಗ್ರಾಮ್ ತೂಕವನ್ನು ಕಳೆದುಕೊಳ್ಳುವುದು ಸುರಕ್ಷಿತವಾಗಿದೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಆಹಾರಕ್ರಮವನ್ನು ಅನುಸರಿಸುತ್ತಿದ್ದರೆ, ಸಂಪೂರ್ಣವಾಗಿ ತಿನ್ನುವುದನ್ನು ನಿಲ್ಲಿಸಬೇಡಿ. ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬೇಡಿ.
1000 ಕ್ಯಾಲರಿ ಪ್ಲ್ಯಾನ್
ಅಧಿಕ ತೂಕ ಹೊಂದಿದ್ದರೂ ಸಹ ನಿಮ್ಮ ಆಹಾರದಲ್ಲಿ 1000 ಕ್ಯಾಲರಿ ತೆಗೆದುಕೊಳ್ಳಬಹುದು ಎಂದು ICMR ಸಲಹೆ ನೀಡಿದೆ. ದೇಹಕ್ಕೆ ಎಲ್ಲ ಪೋಷಕಾಂಶಗಳೂ ಬೇಕು. ಹೀಗೆ ಮಾಡುವುದುರಿಂದ ನಿಮಗೆ ತೊಂದರೆ ಆಗದು. ಅಲ್ಲದೆ ಆರೋಗ್ಯಕರ ರೀತಿಯಲ್ಲಿ ತೂಕ ಕಡಿಮೆ ಆಗುತ್ತದೆ. ತೂಕ ಕಡಿಮೆ ಮಾಡಲು ಸಮತೋಲಿತ ಆಹಾರವೇ ಸುಲಭ ಉಪಾಯವಾಗಿದೆ.
ಆಹಾರದಲ್ಲಿ ಹಸಿರು ತರಕಾರಿಗಳು, ಕಾಳುಗಳು ಮತ್ತು ಹಣ್ಣುಗಳನ್ನು ಸೇರಿಸಲು ICMR ಸೂಚಿಸಿದೆ. ಇದೇ ಸಮಯದಲ್ಲಿ, ದೈಹಿಕ ಚಟುವಟಿಕೆಯಲ್ಲಿ ಯೋಗ ಮತ್ತು ವ್ಯಾಯಾಮ ಮಾಡಲು ಸಲಹೆ ನೀಡಿದೆ.
ICMR ನೀಡಿರುವ ಮಾರ್ಗಸೂಚಿಗಳ ಪ್ರಕಾರ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾದ ಬದುಕು ಕಟ್ಟಿಕೊಳ್ಳುವುದು ಉತ್ತಮ. ಇನ್ನು ನಿಮ್ಮಲ್ಲಿ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ನಿಮ್ಮ ವೈದ್ಯರನ್ನು ಒಮ್ಮೆ ಭೇಟಿ ಮಾಡಿ ನಂತರ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.












Click it and Unblock the Notifications