ಬಾಯಿಗೆ ರುಚಿ, ದೇಹಕ್ಕೆ ಹಿತ: ತೂಕ ಇಳಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ
ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದವರು ತಮ್ಮ ಆಹಾರದ ದಿನಚರಿಯ ಮೇಲೆ ಹೆಚ್ಚಿನ ಗಮನ ವಹಿಸಬೇಕು. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಪ್ರಮುಖವಾಗಿ ಕ್ಯಾಲೋರಿಗಳ ಬಗ್ಗೆ ಗಮನವಹಿಸಬೇಕು. ಹೀಗಾಗಿ ತೂಕ ಇಳಿಸುವ ಸಮಯದಲ್ಲಿ ಸಕ್ಕರೆ ಇರುವ ಹಾಗೂ ಹೆಚ್ಚಿನ ಕ್ಯಾಲೋರಿ ಇರುವ ತಂಪು ಪಾನೀಯಗಳನ್ನು ಸೇವಿಸಬಾರದು.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಕೆಲವು ಪಾನೀಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇವುಗಳು ದೇಹಕ್ಕೆ ಹಿತವಾಗಿದ್ದು, ನಾಲಿಗೆಗೆ ರುಚಿಯಾಗಿದ್ದು, ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀರಿನೊಂದಿಗೆ ಅಡುಗೆ ಮನೆಯಲ್ಲೇ ಬಳಸುವ ಇತರ ವಸ್ತುಗಳಿಂದ ತೂಕ ಇಳಿಸುವ ಪಾನೀಯಗಳನ್ನು ತಯಾರಿಸಬಹುದಾಗಿದೆ.

ಶುಂಠಿ ಮತ್ತು ನಿಂಬೆ ಪಾನೀಯ
ಶುಂಠಿಯು ಉರಿಯೂತ ನಿವಾರಕ ಮತ್ತು ಉಷ್ಣ ನಿರೋಧಕ ಗುಣಗಳನ್ನು ಹೊಂದಿದೆ. ಕೆಲವು ಸಂಶೋಧನೆಗಳ ಪ್ರಕಾರ ಶುಂಠಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ತೂಕವನ್ನು ಸಹ ಕಡಿಮೆ ಮಾಡುತ್ತದೆ. ಶುಂಠಿ ಮತ್ತು ನೀರನ್ನು ಬ್ಲೆಂಡರ್‌ನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ಲೋಟಕ್ಕೆ ಸುರಿದು ನಿಂಬೆ ರಸವನ್ನು ಸೇರಿಸಿ. ಬಳಿಕ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಚಿಟಿಕೆ ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿದರೆ ಶುಂಠಿ ನಿಂಬೆ ಪಾನೀಯ ಕುಡಿಯಲು ಸಿದ್ಧವಾಗಿರುತ್ತದೆ.
ಜೀರಿಗೆ ಪಾನೀಯ
ಜೀರಿಗೆಯಲ್ಲಿ ಥೈಮೋಕ್ವಿನೋನ್ ಎಂಬ ವಿಶಿಷ್ಟ ಅಂಶವಿದ್ದು, ಇದು ತೂಕ ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಜೀರಿಗೆ ಅತಿ ಹೆಚ್ಚು ಉಷ್ಣ ನಿರೋಧಕ ಗುಣಗಳನ್ನು ಹೊಂದಿದೆ. ಜೀರಿಗೆಯು ತುಂಬಾ ಕ್ಯಾಲರಿ ಕಡಿಮೆ ಮಾಡುತ್ತದೆ. ಅಲ್ಲದೇ ಚಯಾಪಚಯವನ್ನು ಹೆಚ್ಚಿಸಲು ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನೀವು ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ರಾತ್ರಿ ಇಡಿ. ಬೆಳಗ್ಗೆ ಇದನ್ನು ಸೋಯಿಸಿ ಕುಡಿಯಬಹುದು. ಅಲ್ಲದೇ ಜೀರಿಯನ್ನು ನೀರಿನೊಂದಿಗೆ ಕುದಿದಿ ಆರಿಸಿ ಕುಡಿಯಬಹುದು ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ದಾಲ್ಚಿನ್ನಿ ಪಾನೀಯ
ದಾಲ್ಚಿನ್ನಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀರನ್ನು ಬಿಸಿ ಮಾಡಿ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಕುಡಿದ ನಂತರ ಆರಿಸಿ ಉಗುರು ಬೆಚ್ಚಗಾದ ಬಳಿಕ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ದೇಹಕ್ಕೆ ಶಕ್ತಿ ನೀಡುತ್ತದೆ ಅಲ್ಲದೇ ತೂಕವನ್ನು ಕಡಿಮೆ ಮಾಡುತ್ತದೆ.
ಪುದೀನ ಮತ್ತು ನಿಂಬೆ
ತೂಕವನ್ನು ಕಳೆದುಕೊಳ್ಳುವಲ್ಲಿ ಪುದೀನಾ ಬಹಳ ಪರಿಣಾಮಕಾರಿಯಾದ ಆಹಾರವಾಗಿದೆ. ಪುದೀನಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದರಿಂದ ಮಾಡಿದ ಪಾನೀಯವು ತೂಕ ಇಳಿಸುವಲ್ಲಿ ಪ್ರಯೋಜನವಾಗುತ್ತದೆ. ಒಂದು ಪಾತ್ರೆಯಲ್ಲಿ ನೀರು ಮತ್ತು ಪುದೀನ ಎಲೆಗಳನ್ನು ಸೇರಿಸಿ ಮತ್ತು ಅವುಗಳನ್ನು ಕುದಿಯಲು ಬಿಡಿ. ಅದು ಕುದಿ ಬಂದ ನಂತರ ಅದನ್ನು ಆರಿಸಿ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಬೇಯಿಸಿದ ಪುದೀನ ಎಲೆಗಳನ್ನು ಸಹ ನೀವು ತಿನ್ನಬಹುದು.

ಸಬ್ಜಾ ನೀರು
ಸಬ್ಜಾ ಅಥವಾ ಚಿಯಾ ಬೀಜಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತವೆ. ಅತಿ ಕಡಿಮೆ ಬೆಲೆಗೆ ಸಿಗುವ ಅತಿ ಉಪಯುಕ್ತವಾದ ಆಹಾರ ಸಬ್ಜಾ ಬೀಜಗಳು. ತೂಕ ಕಡಿಮೆ ಮಾಡಲು ಸಬ್ಜಾ ನೀರು ಪ್ರಮುಖ ಪಾತ್ರವಹಿಸುತ್ತದೆ. ಸಬ್ಜಾ ಬೀಜಗಳನ್ನು ನೆನೆಸಿ ಕುಡಿಯುವುದು. ಅಥವಾ ಅದಕ್ಕೆ ನಿಂಬೆ ರಸ ಸೇರಿಸಿ ನಿಯಮಿತವಾಗಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ.
ದಾಲ್ಚೀನಿ ಮತ್ತು ಕರಿಮೆಣಸಿನ ಚಹಾ
ದಾಲ್ಚೀನಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಅಲ್ಲದೇ ದೇಹದಲ್ಲಿ ಕೊಬ್ಬಿನ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಿಮೆಣಸು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇದರ ಸೇವನೆಯಿಂದ ಚಯಾಪಚಯವು ಉತ್ತಮವಾಗಿರುತ್ತದೆ. ದಾಲ್ಚಿನ್ನಿಯ ಕಡ್ಡಿಗಳನ್ನು ನೀರಿನೊಂದಿಗೆ ಕುದಿಸಿ ಉಗುರು ಬೆಚ್ಚಗಾಗುವರೆಗೆ ತಣ್ಣಗಾಗಲು ಬಿಡಬೇಕು. ಬಳಿಕ ಕರಿಮೆಣಸು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬೇಕು.

ಮೆಂತ್ಯ ನೀರು
ಮೆಂತ್ಯ ಬೀಜಗಳು ಪುರಾತನ ಭಾರತೀಯ ಪಾಕಪದ್ಧತಿಯ ಭಾಗವಾಗಿದೆ. ಸಾಂಬಾರು ಪದಾರ್ಥಗಳಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಇದರಲ್ಲಿ ನಿರೋಧಕ ಶಕ್ತಿ ಹೆಚ್ಚಿದೆ. ಅಲ್ಲದೇ ಇದು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುತ್ತದೆ. ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಸೇವಿಸಿ.
ನೆಲ್ಲಿಕಾಯಿ ಮತ್ತು ಶುಂಠಿ ರಸ
ನೆಲ್ಲಿಕಾಯಿಯಲ್ಲಿನ ಕಾರ್ಬೋಹೈಡ್ರೇಟ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 1/4 ಕಪ್ ನೀರು, ಕತ್ತರಿಸಿದ ಆಮ್ಲಾ ಮತ್ತು ಶುಂಠಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ, ಮಿಶ್ರಣವನ್ನು ಸೋಸಿಕೊಂಡು ಒಂದು ಲೋಟಕ್ಕೆ ಹಾಕಿ ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.
ನಿಂಬೆ ಜ್ಯೂಸ್
ನಿಂಬೆ ಹಣ್ಣಿನಿಂದ ತಯಾರಿಸಿದ ಪಾನೀಯದಿಂದ ಸಾಮಾನ್ಯವಾಗಿ ತೂಕ ಕಡಿಮೆಯಾಗುತ್ತದೆ. ನಿಂಬೆ ಹಣ್ಣಿನ ಜ್ಯೂಸ್‌ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಉಪ್ಪು ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಅಲ್ಲದೇ ಇತರ ಪಾನೀಯಗಳು ಔಷಧೀಯ ಗುಣಗಳ ವಸ್ತುಗಳ ಜೊತೆ ನಿಂಬೆ ರಸವನ್ನು ಸೇರಿಸಿ ಕುಡಿಯುವುದು ದೇಹಕ್ಕೆ ಉತ್ತಮ.












Click it and Unblock the Notifications