Nellikai Chitranna: ನೆಲ್ಲಿಕಾಯಿ ಸ್ಟೀಲ್ ಪಾತ್ರೆಯಲ್ಲಿ ಬೇಯಿಸಿದಾಗ ಏನಾಗುತ್ತೆ? ಹೀಗಾದರೆ ಸೇವಿಸಬೇಡಿ
ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರ್ಯವೇದ ವಿಜ್ಞಾನದಲ್ಲಂತೂ ನೆಲ್ಲಿಕಾಯಿಗೆ ಬಹಳ ಮಹತ್ವವಿದೆ. ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡಂಟ್ ಗುಣಗಳೊಂದಿಗೆ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ನೆಲ್ಲಿಕಾಯಿ ಬಳಸುವ ವಿಧಾನದಿಂದ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು.
ಹೌದು... ನೆಲ್ಲಿಕಾಯಿಯನ್ನು ಕೆಲವರು ನೇರವಾಗಿ ಸೆವನೆ ಮಾಡಿದರೆ ಇನ್ನೂ ಕೆಲವರು ಅದನ್ನು ಆಹಾರದಲ್ಲಿ ಬಳಕೆ ಮಾಡಿ ಸೇವಿಸುತ್ತಾರೆ. ನೆಲ್ಲಿಕಾಯಿ ಉಪ್ಪಿನಕಾಯಿ, ನೆಲ್ಲಿಕಾಯಿ ಹುಳಿ, ನೆಲ್ಲಿಕಾಯಿ ಚಟ್ನಿ, ಜ್ಯೂಸ್ ಇತರ ಖಾದ್ಯಗಳನ್ನು ನೆಲ್ಲಿಕಾಯಿಯಿಂದ ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರು ನೆಲ್ಲಿಕಾಯಿ ಚಿತ್ರನ್ನವನ್ನು ತಯಾರಿಸಿದ್ದರೆ, ಗಾಬರಿಯಾಗುವಂತಹ ಅನುಭವ ನಿಮಗಾಗಿರಬಹುದು.

ನೆಲ್ಲಿಕಾಯಿ ಚಿತ್ರನ್ನ ತಯಾರಿಸಿದ ಕೆಲ ಹೊತ್ತಿನ ಬಳಿಕ ಅನ್ನ ಕಪ್ಪು ಬಣ್ಣಕ್ಕೆ ತಿರುತ್ತದೆ. ಈ ಅನ್ನ ಸೇವನೆಗೆ ಯೋಗ್ಯವಲ್ಲ. ಇದರಿಂದಾ ನಾನಾ ಅಡ್ಡ ಪರಿಣಾಮಗಳು ಉಂಟಾಗಬಹುದು. ನೆಲ್ಲಿಕಾಯಿಯನ್ನು ಬಿಸಿ ಆಹಾರದೊಂದಿಗೆ ಬೆರೆಸಿದಾಗ ಅಥವಾ ಸ್ಟೀಲ್ ಪಾತ್ರೆಯಲ್ಲಿ ಬೇಯಿಸಿದಾಗ ಅಥವಾ ಅದನ್ನು ಚಾಕುವಿನಿಂದ ಕಟ್ ಮಾಡಿದಾಗ ಅದು ಕೆಲ ಹೊತ್ತಿನ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಈ ರೀತಿಯಾದ ಅನ್ನವನ್ನು ಸೇವಿಸುವುದರಿಂದ ಕೆಲ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಜೀರ್ಣಕ್ರಿಯೆ ತೊಂದರೆ, ವಾಕರಿಗೆ, ತಲೆ ನೋವು, ಹೊಟ್ಟೆ ನೋವು, ಆಯಾಸದಂತಹ ವಿವಿಧ ಬದಲಾವಣೆಗಳು ಆಗಬಹುದು. ಹಾಗಾದರೆ ನೆಲ್ಲಿಕಾಯಿ ಚಿತ್ರನ್ನ ಸೇವನೆಗೆ ಯೋಗ್ಯವಲ್ಲವೇ?

ನೆಲ್ಲಿಕಾಯಿಯನ್ನ ಯಾವುದೇ ಆಹಾರ ತಯಾರಿಸಲು ಬಳಸಬಹುದು. ಆದರೆ ಅದನ್ನು ಆಗಲೇ ಸೇವಿಸುವುದು ಉತ್ತಮ. ತಯಾರಿಸಿ ಕೆಲ ಗಂಟೆಗಳನ್ನು ಬಿಟ್ಟು ಅಥವಾ ಕಪ್ಪು ಬಣ್ಣಕ್ಕೆ ತಿರುಗಿದ ನಂತರ ತಯಾರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರು ಇದನ್ನು ಅರಿಯದೇ ಕಪ್ಪಾಗಿರುವ ಆಹಾರವನ್ನು ಹಾಗೇ ಸೇವಿಸುತ್ತಾರೆ.
ಹೀಗಾಗಿ ನೆಲ್ಲಿಕಾಯಿ ಉಪಯೋಗ ಆರೋಗ್ಯಕ್ಕೆ ಒಳ್ಳೆಯದು, ಆದರೆ ಸರಿಯಾದ ಮಾರ್ಗದಲ್ಲಿ ಅದನ್ನು ಬಳಕೆ ಮಾಡಿಲ್ಲ ಅಂತಾದರೆ ಅದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಬಿಸಿ ಪದಾರ್ಥ, ಪಾನೀಯ ಅಥವಾ ಇನ್ನಿತರ ಯಾವುದೇ ಆಹಾರವನ್ನು ತಯಾರಿಸುವ ಮುನ್ನ ಈ ಒಂದು ವಿಚಾರ ತಿಳಿದಿರುವುದು ಉತ್ತಮ. ನೆಲ್ಲಿಕಾಯಿಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ. ಅದನ್ನು ಬಳಸುವ ಸುಲಭ ವಿಧಾನಗಳು ಇಲ್ಲಿವೆ-

ನೆಲ್ಲಿಕಾಯಿ ಬಳಸುವ ವಿಧಾನ:-
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಪಾತ್ರ ಮಹತ್ವದ್ದು, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಕೂಡ ನೆಲ್ಲಿಕಾಯಿಗೆ ಇದೆ. ನೆಲ್ಲಿಕಾಯಿಯ ಸಂಪೂರ್ಣ ಆರೋಗ್ಯ ಲಾಭವನ್ನು ಪಡೆದುಕೊಳ್ಳಲು ನಾವು ಖಾಲಿ ಹೊಟ್ಟೆಯಲ್ಲಿಯೇ ಅದನ್ನು ಸೇವನೆ ಮಾಡಬೇಕು.
ನೆಲ್ಲಿಕಾಯಿಯ ರುಚಿಯನ್ನು ಇಷ್ಟಪಡುವವರು ನೀವಲ್ಲವಾಗಿದ್ದರೆ ನೀವು ನೆಲ್ಲಿಕಾಯಿಯನ್ನು ಹೋಳು ಮಾಡಿ ಆ ಹೋಳುಗಳನ್ನು ಜೇನುತುಪ್ಪದೊಂದಿಗೆ ಅದ್ದಿ ತಿನ್ನಬಹುದು. ಅಲ್ಲದೆ ನೀವು ಹಸಿ ನೆಲ್ಲಿಕಾಯಿಯನ್ನು ಬಳಸಿ ಜ್ಯೂಸ್ ಕೂಡ ತಯಾರಿಸಬಹುದು. ಒಂದು ವೇಳೆ ನೆಲ್ಲಿಕಾಯಿಯ ಪುಡಿಯನ್ನು ನೀವು ಹೊಂದಿದ್ದರೆ ಒಂದು ಲೋಟಕ್ಕೆ ಒಂದರಿಂದ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕಿ, ನೀರನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರು ಒಳ್ಳೆಯದು.











Click it and Unblock the Notifications