ಹುಡುಗಿಯರೇ ಗಮನಿಸಿ..! ಬಾಯ್‌ಫ್ರೆಂಡ್ ನಿಮ್ಮಿಂದ ದೂರವಾಗುತ್ತಿರುವ ಸಂಕೇತಗಳಿವು
ಪ್ರೀತಿ ಎನ್ನುವುದು ಎರಡು ಜೀವಗಳನ್ನು ಬೆಸೆಯುತ್ತದೆ. ಕೆಲವರಿಗೆ ಪ್ರೀತಿಯೆನ್ನುವುದು ಪ್ರಪಂಚವಾದರೆ, ಇನ್ನೂ ಕೆಲವರು ಪ್ರೀತಿ ಎನ್ನುವ ಹೆಸರಿನಲ್ಲಿ ಮತ್ತೊಂದು ಜೀವದ ಭಾವನೆಗಳ ಜೊತೆ ಆಟವಾಡುತ್ತಾರೆ. ಇದು ಇತ್ತೀಚಿಗೆ ಸಾಮಾನ್ಯವಾಗಿದೆ. ಪ್ರೀತಿಯಲ್ಲಿ ಗಂಡು-ಹೆಣ್ಣು ಎರಡೂ ಕಡೆಗಳಿಂದ ಸಮಾನ ಭಾವನೆಗಳಿದ್ದರೆ ಮಾತ್ರ ಆ ಸಂಬಂಧ ಉತ್ತಮವಾಗಿರುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಆಸಕ್ತಿ ಕಡಿಮೆಯಾದರೆ, ಆ ಸಂಬಂಧದ ಅಂತ್ಯ ಅಂದು ಆರಂಭವಾಯಿತು ಎಂದರ್ಥ.
ಸಂಬಂಧದಲ್ಲಿ ಯಾವುದೇ ಬದಲಾವಣೆಯಾದರೂ ಹೆಣ್ಣು ಮಕ್ಕಳಿಗೆ ಬೇಗ ತಿಳಿಯುತ್ತದೆ ಎನ್ನುತ್ತಾರೆ. ಪ್ರೀತಿಯಲ್ಲಿ ಪ್ರಾಮಾಣಿಕವಾಗಿರುವ ಹುಡುಗಿಯರಿಗೆ ಅವರ ಪ್ರಿಯತಮ ಮಾಡುವ ಮೋಸಗಳು ತಿಳಿಯುದಿಲ್ಲ. ಆದರೆ ಆತನ ನಡವಳಿಕೆಯಲ್ಲಿ ಬದಲಾವಣೆಯಾದರೆ ಆತನಿಗೆ ಈ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದರ್ಥವಾಗಿರುತ್ತದೆ. ಹೀಗಾಗಿ ಹುಡುಗಿಯರೇ ಸಂಗಾತಿಗೆ ನಿಮ್ಮ ಜೊತೆಗಿನ ಸಂಬಂಧದಲ್ಲಿ ಆಸಕ್ತಿ ಇಲ್ಲ ಎನ್ನುವುದನ್ನು ಹೇಗೆ ತಿಳಿದುಕೊಳ್ಳುತ್ತೀರಿ.

ನಿಮ್ಮ ಬಾಯ್‌ಫ್ರೆಂಡ್ ನಿಮಗೆ ಮೋಸ ಮಾಡುತ್ತಿದ್ದಾರೆ. ನಿಮ್ಮ ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಲು ಸಿದ್ಧರಾಗುತ್ತಿದ್ದಾರೆ ಹುಡುಗಿಯರು ಹೇಗೆ ತಿಳಿದುಕೊಳ್ಳಬಹುದು ಎಂದು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಈ ಕೆಳಗಿನ ವರ್ತನೆಗಳನ್ನು ಆತ ತೋರ್ಪಡಿಸಿದಲ್ಲಿ ಒಮ್ಮೆ ನೀವು ನಿಮ್ಮ ಸಂಬಂಧದ ಬಗ್ಗೆ ಎರಡನೇ ಬಾರಿಗೆ ಯೋಚಿಸಿ ಮುಂದುವರಿಯುವುದು ಉತ್ತಮ.
1. ಮಾತಿನಲ್ಲಿ ಬದಲಾವಣೆ
ಯಾವುದೇ ವ್ಯಕ್ತಿ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ತಮ್ಮ ಸಂಗಾತಿಯೊಡನೆ ಸಮಯ ಕಳೆಯಲು ಬಯಸುತ್ತಾರೆ. ಆದರೆ ಸಂಬಂಧದಲ್ಲಿ ಆಸಕ್ತಿ ಕಳೆದುಕೊಂಡ ವ್ಯಕ್ತಿ ಸಂಗಾತಿಯಿಂದ ದೂರ ಇರಲು ಬಯುಸುತ್ತಾನೆ. ಗಂಟೆ ಗಟ್ಟಲೆ ಮಾತನಾಡುತ್ತಿದ್ದ ಆತ ನಿಮ್ಮ ಒಂದು ಮಾತಿಗೆ ಕಿರಿಕಿರಿ ಅನುಭವಿಸುತ್ತಾರೆ. ನಿಮ್ಮಿಂದ ಮಾತನಾಡದೇ ದೂರ ಇರಲು ಬಯಸುತ್ತಾರೆ. ಅಲ್ಲದೇ ಮೊಬೈಲ್, ಟಿವಿನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನೀವು ಜೊತೆಯಲ್ಲಿದ್ದರೂ ಬೇರೆ ವಸ್ತುಗಳ ಮೇಲೆ, ಬೇರೆ ವ್ಯಕ್ತಿಗಳ ಮೇಲೆ ಹೆಚ್ಚು ಆಸಕ್ತಿ ತೋರುತ್ತಾರೆ.
2. ನಿಮ್ಮ ಮೇಲಿನ ಆಸಕ್ತಿ ಕಡಿಮೆ
ಪ್ರೀತಿಯು ನಿಮ್ಮ ಜೀವನದಲ್ಲಿ ಹೊಸ ಮಾರ್ಗವನ್ನು ಕಲ್ಪಿಸುತ್ತದೆ. ನಿಮ್ಮದೇ ಚೌಕಟ್ಟಿನಲ್ಲಿ ನೀವು ಬದುಕುತ್ತಿರುತ್ತೀರಿ. ಆದರೆ ನಿಮ್ಮ ಸಂಬಂಧದ ಮೇಲೆ ಆಸಕ್ತಿ ಕಳೆದುಕೊಂಡ ಬಾಯ್‌ಫ್ರೆಂಡ್ ಅದನ್ನು ನಿಮ್ಮ ಮುಂದೆಯೇ ತೋರ್ಪಡಿಸುತ್ತಾರೆ. ನಿಮ್ಮನ್ನು ಕಡೆಗಣಿಸುವುದು, ನಿಮ್ಮ ಮಾತಿಗಳನ್ನು ನಿರ್ಲಕ್ಷಿಸುವುದು, ನೀಮ್ಮನ್ನು ಹೊರಗಿನವರಂತೆ ನಡೆಸಿಕೊಳ್ಳುವುದನ್ನು ಮಾಡಲು ಆರಂಭಿಸುತ್ತಾರೆ. ಇಂತಹ ವರ್ತನೆಯನ್ನು ನೀವು ಗುರುತಿಸಬೇಕು.

3. ಆತನ ದಿನಚರಿ ಬದಲಾವಣೆ
ನಿಮ್ಮ ಬಾಯ್‌ಫ್ರೆಂಡ್‌ಗೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾದಂತೆ ಆತನ ದಿನಚರಿಯೂ ಬದಲಾಗುತ್ತದೆ. ಅದರಲ್ಲಿ ನಿಮಗಾಗಿ ಮೀಸಲಿಡುತ್ತಿದ್ದ ಸಮಯ ಸಂಪೂರ್ಣವಾಗಿ ರದ್ದಾಗುತ್ತದೆ. ನೀವು ಕರೆ ಮಾಡುವುದು, ಮೆಸೇಜ್ ಮಾಡುವುದು ಆತನಿಗೆ ಕಿರಿಕಿರಿಯಾಗುತ್ತದೆ. ಹೀಗಾಗಿ ಅವರು ನಿಮ್ಮ ಕರೆಗಳನ್ನು ಅವಾಯ್ಡ್ ಮಾಡಿ ಬೇರೆಯೇ ದಿನಚರಿಯನ್ನು ಆರಂಭಿಸಿರುತ್ತಾರೆ. ಜೊತೆಗೆ ಆತನ ಅಭ್ಯಾಸಗಳು ಕೂಡ ಬದಲಾಗುತ್ತದೆ. ನಿಮಗೆ ಇಷ್ಟವಿರದ ವಿಚಾರಗಳತ್ತ ಆತನ ಗಮನ ಹೆಚ್ಚಾಗುತ್ತದೆ.
4. ನಿಮ್ಮ ಬಗ್ಗೆ ವಿಮರ್ಶೆ ಹೆಚ್ಚಾಗುತ್ತದೆ
ನೀನು ಹೇಗಿದ್ದರೂ ನನಗಿಷ್ಟ ಎನ್ನುತ್ತಿದ್ದ ನಿಮ್ಮ ಬಾಯ್‌ಫ್ರೆಂಡ್‌ಗೆ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದಂತೆ ನಿಮ್ಮನ್ನು ವಿಮರ್ಶಿಸಲು ಆರಂಭಿಸುತ್ತಾರೆ. ನಿಮ್ಮ ವರ್ತನೆ, ನಿಮ್ಮ ಡ್ರೆಸ್, ನಿಮ್ಮ ಮೇಕಪ್, ನಿಮ್ಮ ಆಯ್ಕೆ ಹೀಗೆ ಪ್ರತಿಯೊಂದಕ್ಕೂ ನೆಗೆಟಿವ್ ಕಮೆಂಟ್ ಮಾಡಲು ಆರಂಭಿಸುತ್ತಾರೆ. ಬೇರೆಯವರ ಮುಂದೆ ನಿಮ್ಮನ್ನು ನೆಗೆಟಿವ್ ಆಗಿ ವಿಮರ್ಷೆ ಮಾಡಲಾರಂಭಿಸುತ್ತಾರೆ.
5. ರಹಸ್ಯಗಳನ್ನು ಕಾಪಾಡುವುದು
ನಿಮ್ಮ ಮುಂದೆ ತೆರೆದ ಪುಸ್ತಕದಂತಿದ್ದ ನಿಮ್ಮ ಬಾಯ್‌ಫ್ರೆಂಡ್ ಬರಬರುತ್ತಾ ಯಾವುದೇ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಪ್ರತಿಯೊಂದನ್ನು ತಾನೇ ನಿಭಾಯಿಸುತ್ತಾರೆ. ಮುಖ್ಯವಾದ ಕೆಲವು ವಿಚಾರಗಳನ್ನು ನಿಮಗೆ ತಿಳಿಸದೇ ರಹಸ್ಯವಾಗಿಡುತ್ತಾರೆ. ಏನೋ ಖರೀಸುವುದು, ಎಲ್ಲಿಗೋ ಭೇಟಿ ನೀಡುವುದು ಎಲ್ಲವನ್ನೂ ಸಹ ನಿಮ್ಮಿಂದ ಮುಚ್ಚಿಡಲು ಪ್ರಾರಂಭಿಸುತ್ತಾರೆ.
ನೀವು ಪ್ರಶ್ನೆ ಮಾಡುವುದನ್ನು ಖಂಡಿಸುತ್ತಾರೆ ಹಾಗೂ ನಿಮಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸುತ್ತಾರೆ. ನಿಮಗೆ ಇಷ್ಟವಿರದ ವ್ಯಕ್ತಿಗಳ ಜೊತೆ ಹೆಚ್ಚು ಸೇರುವುದು, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದು, ಬೇರೆಯವರ ಮುಂದೆ ನಿಮ್ಮನ್ನು ಕೆಳಮಟ್ಟಕ್ಕಿಳಿಸುವ ಮೂಲಕ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾದ ಸೂಚನೆಗಳಾಗಿರುತ್ತದೆ.












Click it and Unblock the Notifications