Summer Holidays: ಬೇಸಿಗೆಯಲ್ಲಿ ಮಕ್ಕಳಿಗೆ ಹೊಸ ಹವ್ಯಾಸ ಕಲಿಸಲು ಇದು ಸೂಕ್ತ ಸಮಯ
ಬೇಸಿಗೆ ರಜೆ ಇದು ಕೇವಲ ಮಕ್ಕಳಿಗೆ ವಿಶ್ರಾಂತಿ ಸಮಯ ಮಾತ್ರವಲ್ಲ, ಹೊಸ ವಿಷಯಗಳನ್ನು ಕಲಿಯಲು ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಇದು ಅತ್ಯುತ್ತಮವಾದ ಅವಕಾಶ ಎಂದು ಹೇಳಬಹುದು. ಹೊರಗಿನ ಬೇಸಿಗೆ ಶಿಬಿರಗಳಿಗೆ ಕಳಹಿಸಲು ಸಾಧ್ಯವಿಲ್ಲಾವಾದವರು, ಮನೆಯಲ್ಲೇ ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡಲು ಹಲವಾರು ಮಾರ್ಗಗಳಿವೆ.
ರಜೆಯ ಸಮಯದಲ್ಲಿ ಮಕ್ಕಳಿಗೆ ಹೊಸ ನೆನಪುಗಳು ಹುಟ್ಟಿಕೊಳ್ಳುತ್ತವೆ, ಆದ್ದರಿಂದ ಪೋಷಕರು ಇದರ ಬಗ್ಗೆ ಸರಿಯಾಗಿ ಯೋಜನೆ ಮಾಡಿದರೆ, ಬೇಸಿಗೆ ರಜೆಗಳು ಮಕ್ಕಳಿಗೆ ತುಂಬಾ ಅನುಕೂಲಕರ ಆಗುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಸಾಕು, ಇದರಿಂದ ಮಕ್ಕಳಿಗೆ ಉತ್ಸಾಹ ಹೆಚ್ಚುತ್ತದೆ.

ತೋಟಗಾರಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದರಿಂದ ಪ್ರಕೃತಿಯ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ನಾವು ಸೇವಿಸುವ ಆಹಾರ ಹೇಗೆ ಬೆಳೆಯುತ್ತದೆ ಎಂಬ ಅರಿವು ಅವರಲ್ಲಿ ಬರುತ್ತದೆ. ಇದು ಕೇವಲ ಕಲಿಕೆಯಲ್ಲ ಜೊತೆಗೆ ಮನರಂಜನೆಯನ್ನು ಕೂಡ ನೀಡುತ್ತದೆ.
ಕುಟುಂಬದೊಂದಿಗೆ ಸಮಯ
ವರ್ಷಪೂರ್ತಿ ಬ್ಯುಸಿಯಾಗಿರುವ ಮಕ್ಕಳು ಈ ಸಮಯದಲ್ಲಿ ಕುಟುಂಬದವರೊಂದಿಗೆ ಸಮಯ ಕಳೆಯಬಹುದು. ಅಜ್ಜಿಯ ಮನೆ ಅಥವಾ ಸಂಭಂದಿಕರ ಮನೆಗೆ 10-15 ಕಳಿಸುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಇದರಿಂದ ಬಾಂಧವ್ಯಗಳು ಗಟ್ಟಿಗೊಳುತ್ತವೆ.
ಈಜು ಕಲಿಕೆಗೆ ಸೂಕ್ತ ಸಮಯ
ಬೇಸಿಗೆಕಾಲದಲ್ಲಿ ಈಜು ಕಲಿಯಲು ಅತ್ಯುತ್ತಮ ಸಮಯ. ತರಬೇತುದಾರರ ಮಾರ್ಗದರ್ಶನದಲ್ಲಿ ಈಜು ಕಲಿಯುವುದರಿಂದ ಆರೋಗ್ಯವೂ ಉತ್ತಮವಾಗುತ್ತದೆ, ಜೊತೆಗೆ ಮೋಜೂ ಸಿಗುತ್ತದೆ.
ಕ್ರಿಕೆಟ್ ಕೋಚಿಂಗ್
ಆಟಗಳಲ್ಲಿ ಕ್ರಿಕೆಟ್‌ಗಿಂತ ಹೆಚ್ಚು ಜನಪ್ರಿಯ ಆಟ ಮಕ್ಕಳಲ್ಲಿ ಇನ್ನೊಂದಿಲ್ಲ ಎಂದೆ ಹೇಳಬಹುದು. ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಕ್ರಿಕೆಟ್ ಕೋಚಿಂಗ್ ಕ್ಲಾಸ್‌ಗಳಿಗೆ ಸೇರಿಸುವುದು ಉತ್ತಮ ಆಯ್ಕೆ ಕೂಡ ಆಗಿರುತ್ತದೆ. ಇದರಿಂದ ಫಿಟ್ನೆಸ್, ಟೀಮ್‌ವರ್ಕ್ ಮತ್ತು ಕ್ರೀಡಾ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬಹುದು.
ಕರಾಟೆ ತರಬೇತಿ
ಕರಾಟೆ ಅಥವಾ ಮಾರ್ಷಲ್ ಆರ್ಟ್ಸ್ ತರಬೇತಿ ಮಕ್ಕಳಿಗೆ ಆತ್ಮರಕ್ಷಣೆ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ಶಿಸ್ತು ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಬೇಸಿಗೆ ಸಮಯದಲ್ಲಿ ಇದನ್ನು ಕಲಿಸುವುದು ಒಳ್ಳೆಯದು.
ಅಡುಗೆ ಮಾಡುವುದು
ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ, ಅಡುಗೆಮನೆಯಲ್ಲಿ ಸರಳ ಹಾಗೂ ಇನ್ನಿತರ ಅಡುಗೆಗಳ ಮಾಡುವುದನ್ನು ಕಲಿಸಬಹುದು. ಇದರಿಂದ ಸ್ವಾವಲಂಬನೆ ಮತ್ತು ಆಹಾರದ ಮಹತ್ವದ ಅರಿವು ಮೂಡುತ್ತದೆ.
ಮಕ್ಕಳಲ್ಲಿ ಹವ್ಯಾಸಗಳನ್ನು ಪ್ರೊತ್ಸಾಹಿಸಿ
ಬೇಸಿಗೆ ರಜೆಯಲ್ಲಿ ಮಕ್ಕಳ ಆಸಕ್ತಿಗಳನ್ನು ಬೆಳೆಸಲು ಇದು ಒಳ್ಳೆ ಸಮಯವಾಗಿದೆ. ಚಿತ್ರಕಲೆ, ನೃತ್ಯ, ಗಿಟಾರ್, ಕರಾಟೆ, ಜೂಡೋ, ಸ್ಕೇಟಿಂಗ್ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಿ. ಇದು ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸುವಲ್ಲಿ ಸಹಾಯಮಾಡುತ್ತವೆ. ಸರಿಯಾದ ಯೋಜನೆಯನ್ನು ಮಾಡಿದರೆ ಮಕ್ಕಳಿಗೆ ಕೇವಲ ಆಟ ಮತ್ತು ಮನರಂಜನೆ ಮಾತ್ರವಲ್ಲ, ಜೀವನದ ಪಾಠಗಳನ್ನು ಕಲಿಸಲು ಇದು ಅತ್ಯುತ್ತಮ ಸಮಯವಾಗಿದೆ.














Click it and Unblock the Notifications